ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ನಾಯಿ ಮತ್ತು ಹಾವು ಕಡಿತದಿಂದಾಗುವ ಸಾವನ್ನು ಕಡಿಮೆ ಮಾಡಲು ಕ್ರಮ ವಹಿಸಿ: ಡಾ.ಎನ್.ಭಾಸ್ಕರ್

ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ಮತ್ತು ತಾಲೂಕು ಕೇಂದ್ರಗಳ ಚಿಕನ್ ಮತ್ತು ಮಟನ್ ಮಾರಾಟ ಮಾಡುವ ಮಳಿಗೆಗಳ ಬಳಿ ಮಾಂಸ ಕತ್ತರಿಸುವ ವೇಳೆ ಉತ್ಪತ್ತಿಯಾಗುವ ನಿರುಪ ಯುಕ್ತ ಮಾಂಸ ಮತ್ತು ತ್ಯಾಜ್ಯವನ್ನು ಮುಂಭಾಗದ ರಸ್ತೆಗೆ ಬಿಸಾಕುವುದನ್ನು ತಿನ್ನಲು ಬರುವ ಬೀದಿನಾಯಿಗಳಿಂದಲೇ ಹೆಚ್ಚಿನ ನಾಯಿ ಕಡಿತಗಳಾಗುತ್ತಿರುವುದು ಆತಂಕಕಾರಿಯಾದ ವಿಚಾರವಾಗಿದೆ

ನಾಯಿ, ಹಾವು ಕಡಿತದಿಂದಾಗುವ ಸಾವನ್ನು ಕಡಿಮೆ ಮಾಡಲು ಕ್ರಮ ವಹಿಸಿ

ನಾಯಿ ಮತ್ತು ಹಾವು ಕಡಿತ ಸಾವನ್ನು ಕಡಿಮೆ ಮಾಡಲು ಕ್ರಮ ವಹಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಕರೆ ನೀಡಿದರು -

Profile
Ashok Nayak May 25, 2026 8:35 PM

ಚಿಕ್ಕಬಳ್ಳಾಪುರ: ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸುವ ಭಾಗವಾಗಿ ನಗರದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೆ ಆಗುವಂತೆ ನಿಗಾ ವಹಿಸುವಂತೆ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್  ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸೋಮವಾರ ನಡೆದ “ಹಾವು ಮತ್ತು ನಾಯಿ ಕಡಿತ ನಿಯಂತ್ರಣ ಕುರಿತ ಅಂತರ್ ಇಲಾಖಾ ಮುಖ್ಯಸ್ಥರ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ಮತ್ತು ತಾಲೂಕು ಕೇಂದ್ರಗಳ ಚಿಕನ್ ಮತ್ತು ಮಟನ್ ಮಾರಾಟ ಮಾಡುವ ಮಳಿಗೆಗಳ ಬಳಿ ಮಾಂಸ ಕತ್ತರಿಸುವ ವೇಳೆ ಉತ್ಪತ್ತಿಯಾಗುವ ನಿರುಪ ಯುಕ್ತ ಮಾಂಸ ಮತ್ತು ತ್ಯಾಜ್ಯವನ್ನು ಮುಂಭಾಗದ ರಸ್ತೆಗೆ ಬಿಸಾಕುವುದನ್ನು ತಿನ್ನಲು ಬರುವ ಬೀದಿನಾಯಿಗಳಿಂದಲೇ ಹೆಚ್ಚಿನ ನಾಯಿ ಕಡಿತಗಳಾಗುತ್ತಿರುವುದು ಆತಂಕಕಾರಿ ಯಾದ ವಿಚಾರವಾಗಿದೆ ಎಂದರು.

ಇದನ್ನೂ ಓದಿ: Chinthamani News: ಅಂಬೇಡ್ಕರ್ ಭವನದ ಇತಿಹಾಸ ನಿಮಗೇನು ಗೊತ್ತು? ಜೆ.ಕೆ.ಕೃಷ್ಣಾರೆಡ್ಡಿ ವಿರುದ್ಧ ಸಚಿವ ಡಾ.ಎಂ.ಸಿ.ಸುಧಾಕರ್ ಆಕ್ರೋಶ

ಇಂತಹ ಪ್ರಸಂಗಗಳನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ತಡೆಗಟ್ಟಲು ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಅಂತಹ ಮಾಂಸ ಮಾರಾಟಗಾರರಿಗೆ ಎಚ್ಚರಿಕೆ ನೀಡುವ ಜೊತೆಗೆ ಕಾನೂನು ಕ್ರಮಕ್ಕೆ ಒಳಪಡಿಸಿ ಸಮರ್ಪಕ ವಿಲೆವಾರಿಗೆ ಅರಿವು ಮೂಡಿಸಬೇಕು ಎಂದು ತಾಕೀತು ಮಾಡಿದರು. 

ಪರವಾನಗಿ ಪಡೆಯದೆ ಮಾಂಸ ಮಾರಾಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಇಲಾಖಾ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ದರು.

ನಾಯಿ ಕಚ್ಚುವಿಕೆಯು ರೇಬೀಸ್ ಸೋಂಕನ್ನು ಹರಡಬಹುದು, ಇದು ಮಾರಣಾಂತಿಕ ಕಾಯಿಲೆಯಾಗಿದ್ದು ಯಾವುದೇ ವ್ಯಕ್ತಿ ನಾಯಿ ಕಡಿತಕ್ಕೆ ಒಳಗಾದ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಅತ್ಯಗತ್ಯ, ವಿಶೇಷವಾಗಿ ಸಾಕು ಪ್ರಾಣಿಗಳಿಗೆ ವ್ಯಾಕ್ಸಿನೇಷನ್ ಮಾಡಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

2025 ನೇ ವರ್ಷದಲ್ಲಿ ಜಿಲ್ಲೆಯಲ್ಲಿ 12,663 ಮಂದಿಗೆ  ನಾಯಿ ಕಚ್ಚಿರುವುದು ದಾಖಲಾಗಿದೆ. ಈ ಪೈಕಿ 2 ಸಾವು ಪ್ರಕರಣಗಳು ದಾಖಲಾಗಿವೆ. ಅದೇ ಜಿಲ್ಲೆಯಲ್ಲಿ 2025 ನೇ ವರ್ಷದಲ್ಲಿ 944 ಹಾವು ಕಡಿತದ ಪ್ರಕರಣಗಳು ದಾಖಲಾಗಿದ್ದು, ಅದರ ಪೈಕಿ 7 ಜನ ನಿಧನರಾಗಿದ್ದಾರೆ.  2026ನೇ ವರ್ಷದ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ 5717 ನಾಯಿ ಕಡಿತಗಳಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ ಎಂದರು.

ಆದರೆ ಇದೇ ವರ್ಷದಲ್ಲಿ 292 ಮಂದಿ ಹಾವು ಕಡಿತಕ್ಕೆ ಒಳಗಾಗಿ 3 ಜನ ಈ ವರೆಗೆ ಸಾವನ್ನ ಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ನಾಯಿ ಮತ್ತು ಹಾವಿನ ಕಡಿತದಿಂದ ಸಾವು ಉಂಟಾಗ ದಂತೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿ ಗಳಿಗೆ ಸೂಚನೆಗಳನ್ನು ನೀಡಿದರು 

ಫ್ರೆಂಚ್ ಸೂಕ್ಷ್ಮ ಜೀವಶಾಸ್ತ್ರಜ್ಞ “ಲೂಯಿ ಪಾಶ್ಚರ್” ಅವರು ಮೊದಲ ರೇಬೀಸ್ ಲಸಿಕೆ ಯನ್ನು ಅಭಿವೃದ್ಧಿಪಡಿಸಿದರು. 1885 ರಲ್ಲಿ ರೇಬೀಸ್ ಅಧ್ಯಯನ ಮಾಡುವಾಗ, ಪಾಶ್ಚರ್ ತನ್ನ ಮೊದಲ ಮಾನವ ಲಸಿಕೆಯನ್ನು ಪರೀಕ್ಷಿಸಿದರು ಎಂದು ತಿಳಿಸಿದರು.

ರೇಬೀಸ್ ಒಂದು ವೈರಾಣುವಿನಿಂದ ಹರಡುವ ಸೋಂಕು. ಸೋಂಕಿರುವ ಪ್ರಾಣಿಗಳ (ನಾಯಿ 97%, ಬೆಕ್ಕು 2%, ನರಿ, ಮಂಗೂಸ್, ಕುದುರೆ, ಹಸು, ಕುರಿ, ಟಗರು 1%) ಜೊಲ್ಲಿನ ಸಂಪರ್ಕದಿಂದ ಮತ್ತು ತೆರೆದ ಚರ್ಮ ಮೇಲೆ ನಾಕುವಿಕೆಯಿಂದ ಹಾಗೂ ಪರಚುವಿಕೆ ಯಿಂದ ಕಡಿತದಿಂದ ಹರಡುತ್ತದೆ ಎಂದರು.

ಈ ಸೋಂಕನ್ನು ತಡೆಯಲು ತಕ್ಷಣವೇ ಹತ್ತಿರದ ಆಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ನಿಗದಿತ ರೇಬೀಸ್ ವಿರುದ್ಧದ ಲಸಿಕೆ ಚುಚ್ಚು ಮದ್ದನ್ನು ತೆಗೆದುಕೊಳ್ಳಬೇಕು. ಗಾಯಗಳ ಒಳಗೆ ಮತ್ತು ಸುತ್ತಲೂ ರೇಬೀಸ್ ಇಮ್ಯುನೋಗ್ಲೋಬುಲಿನ್ ಅಥವಾ ಆ್ಯಂಟಿ ರೇಬೀಸ್ ಸೀರಂ ಚುಚ್ಚು ಮದ್ದುನ್ನು ತೆಗೆದುಕೊಳ್ಳಬೇಕು. ಸಾಕು ನಾಯಿಗಳಿಗೆ ತಪ್ಪದೇ ಲಸಿಕಾ ಚುಚ್ಚುಮದ್ದು ಹಾಕಿಸಿಬೇಕು ಎಂದು ತಿಳಿಸಿದರು.

ಹಾವುಗಳು ವಿಷಕಾರಿ ಮತ್ತು ವಿಷರಹಿತ ಎರಡೂ ಆಗಿರುತ್ತವೆ. ಹಾವು ಕಚ್ಚಿದ ಸಂದರ್ಭ ಗಳಲ್ಲಿ ಹೆದರದೆ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಡ್ ಆಭರಣಗಳು, ವಾಚ್, ಬಿಗಿಯಾದ ಬಟ್ಟೆಯನ್ನು ಕಳಚಿ ಅಂಬ್ಯುಲೆನ್ಸ್ ಅಥವಾ ಇನ್ನಿತರ ವಾಹನದಲ್ಲಿ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದರು. 

ಈ ಸೋಂಕಿನ ಬಗ್ಗೆ ಶಾಲಾ, ಕಾಲೇಜು, ಗ್ರಾಮ ಪಂಚಾಯತಿ, ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ನಾಯಿ ಮತ್ತು ಹಾವು ಕಡಿತ ಕಡಿಮೆ ಮಾಡಲು ಕ್ರಮ ವಹಿಸಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಕರಪತ್ರ ಹಾಗೂ ಬಿತ್ತಿ ಪತ್ರಗಳನ್ನು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಡಾ.ಕೃಷ್ಣಪ್ರಸಾದ್, ಡಾ.ಜಿ.ವಿ ಸಂತೋಷ್ ಬಾಬು, ಡಾ.ಪ್ರಕಾಶ್, ಡಾ.ಚಂದ್ರಶೇಖರ್ ರೆಡ್ಡಿ, ಎಲ್ಲಾ ತಾಲ್ಲೂಕುಗಳ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.