ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gudibande News: ಶಿಕ್ಷಕರ ಸಂಘದ ಚುನಾವಣೆ: ಒಟ್ಟು 6 ಮಂದಿ ನಾಮಪತ್ರ ಸಲ್ಲಿಕೆ

ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆಯಲು ಏಪ್ರಿಲ್ 14ರವರೆಗೆ ಅವಕಾಶ ನೀಡಲಾ ಗಿದೆ. ನಂತರ ಅಂತಿಮವಾಗಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಏ.19ರಂದು ಮತದಾನ ನಡೆಯಲಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಶಿಕ್ಷಕರ ಸಂಘದ ಚುನಾವಣೆ: ಒಟ್ಟು 6 ಮಂದಿ ನಾಮಪತ್ರ ಸಲ್ಲಿಕೆ

-

Profile
Ashok Nayak Apr 12, 2026 8:45 PM

ಗುಡಿಬಂಡೆ: ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆಗೆ ಏ.12 ಕೊನೆಯದಿನವಾಗಿದ್ದು, ನಾಮಪತ್ರ ಸಲ್ಲಿಕೆಯ ಕೊನೆಯ ದಿನಕ್ಕೆ ಒಟ್ಟು 6 ಮಂದಿ ಶಿಕ್ಷಕರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಕೃಷ್ಣಕುಮಾರಿ ತಿಳಿಸಿದ್ದಾರೆ.

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-2031 ಅವಧಿಯ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. ಈ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದೊಳಗೆ ಒಟ್ಟು 6 ಮಂದಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ನಿರ್ದೇಶಕರ ಹುದ್ದೆಗೆ ಶಂಕರ್ ಎಂ.ವಿ, ಶ್ರೀರಾಮಪ್ಪ, ಕೆ. ಸುಬ್ಬಲಕ್ಷ್ಮಮ್ಮ, ಬಾಲಾಜಿ, ಶ್ರೀರಾಮರೆಡ್ಡಿ ಹಾಗೂ ಶ್ರೀಮತಿ ಶ್ವೇತ ರವರುಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಏ.13 ರಂದು  ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಬಳಿಕ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು.

ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆಯಲು ಏ.14ರವರೆಗೆ ಅವಕಾಶ ನೀಡಲಾಗಿದೆ. ನಂತರ ಅಂತಿಮವಾಗಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಏ.19 ರಂದು ಮತದಾನ ನಡೆಯಲಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಚುನಾವಣೆ ಶಾಂತಿಯುತವಾಗಿ ನಡೆಯಲು ಎಲ್ಲಾ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳ ಲಾಗಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಶ್ರೀ ಮುನಿಕೃಷ್ಣಪ್ಪ. ಜಿ ಎನ್ ಶ್ರೀನಿವಾಸ್. ಕೃಷ್ಣಪ್ಪ ಎ. ಅಶೋಕ ಸಿ. ವೈ ನರಸಿಂಹಪ್ಪ. ವೆಂಕಟ ಕೃಷ್ಣಪ್ಪ. ಗೋಪಾಲ್ ರೆಡ್ಡಿ. ಸರಸ್ವತಮ್ಮ, ಉಮಾದೇವಿ, ಶೈಲಜ, ಎಚ್ಎನ್ ನರಸಿಂಹಪ್ಪ. ಶಿವಣ್ಣ. ನಾರಾಯಣಸ್ವಾಮಿ. ಜಿ ವಿ ನಾಗರಾಜ್, ತ್ರಿವೇಣಿ, ನಾಗವೇಣಿ, ಪುಷ್ಪಲತಾ, ವನಜ, ಆರ್ ರಾಜಪ್ಪ, ಉಮಾಶಂಕರ್, ಕೆ ಎಂ ಗಂಗನಾರಾಯಣ, ಓಬಳೇಶಪ್ಪ, ವೆಂಕಟೇಶಪ್ಪ, ನಾರಾಯಣಸ್ವಾಮಿ ಕಿಡಿ, ನರಸಿಂಹಮೂರ್ತಿ, ಆದಿನಾರಾಯಣಪ್ಪ, ಅಶ್ವತಪ್ಪ, ರಾಮಾಂಜನೇಯ, ನರಸಿಂಹಮೂರ್ತಿ, ಗೋಪಾಲಕೃಷ್ಣ ಸಿಂಗ್, ನಾರಾಯಣಪ್ಪ, ಗಂಗಾಧರ, ಸುಬ್ರಮಣಿ, ನಾಗಲಿಂಗಪ್ಪ ಹಾಜರಿದ್ದರು.