ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತುರ್ತು ಚಿಕಿತ್ಸಾ ಘಟಕದಲ್ಲಿ ಸ್ಪರ್ಶ್‌ ಆಸ್ಪತ್ರೆಗೆ ಜಾಗತಿಕ ಮನ್ನಣೆ: ಐಎಫ್‌ಇಎಂ ಗೋಲ್ಡ್‌ ಲೆವಲ್‌ ಪ್ರಮಾಣ ಪತ್ರದ ಪಡೆದ ಹೆಗ್ಗಳಿಕೆ

ತುರ್ತು ಚಿಕಿತ್ಸಾ ಸಂದರ್ಭಗಳಲ್ಲಿ ವೇಗ, ನಿಖರತೆ ಮತ್ತು ನಿರಂತರ ಸಮನ್ವಯತೆಯು ಕ್ಲಿಷ್ಟಕರ ವಾದ ರೋಗ ಸ್ಥಿತಿಯಲ್ಲಿರುವ ರೋಗಿಯ ಚಿಕಿತ್ಸೆಯಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವಲ್ಲಿ ನಿರ್ಣಾಯಕವಾಗಿರುತ್ತದೆ. 10 ಅಧ್ಯಾಯಗಳು ಮತ್ತು 200ಕ್ಕೂ ಹೆಚ್ಚು ಪ್ರಮುಖ ಮಾನದಂಡ ಗಳನ್ನು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಜೋಡಿಸಲಾಗಿದ್ದ ಈ ಗೋಲ್ಡ್ ಪರ್ರಮಾಣೀ ಕರಣವು ಚಿಕಿತ್ಸೆಯಲ್ಲಿನ ಉತ್ಕೃಷ್ಟತೆ ಮತ್ತು ಮತ್ತು ರೋಗಿಗಳ ಸುರಕ್ಷತೆಯ ಮೇಲಿನ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತದೆ

ತುರ್ತು ಚಿಕಿತ್ಸಾ ಘಟಕದಲ್ಲಿ ಸ್ಪರ್ಶ್‌ ಆಸ್ಪತ್ರೆಗೆ ಜಾಗತಿಕ ಮನ್ನಣೆ

-

Profile
Ashok Nayak Jul 31, 2026 11:38 PM

ಬೆಂಗಳೂರು: ತುರ್ತು ಚಿಕಿತ್ಸಾ ವಿಭಾಗದಲ್ಲಿ ಜಾಗತಿಕ ಮಟ್ಟದ ಅತ್ಯನ್ನತ ಗುಣಮಟ್ಟಗಳ ಮಾನ ದಂಡ ಹೊಂದಿರುವ ಹಿನ್ನೆಲೆಯಲ್ಲಿ ಹೆಣ್ಣೂರು ಸ್ಪರ್ಶ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ವಿಶ್ವದಲ್ಲೇ ಮೊದಲ ಬಾರಿಗೆ ಪ್ರತಿಷ್ಠಿತ ಐಎಫ್‌ಇಎಂ ಗೋಲ್ಡ್‌ ಲೆವಲ್‌ ಪ್ರಮಾಣ ಪತ್ರದ ಗರಿ ಮುಡಿಗೇರಿಸಿಕೊಂಡಿದೆ. ಈ ಮೂಲಕ, ತುರ್ತು ಚಿಕಿತ್ಸಾ ವಿಭಾಗದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಿದೆ.

ತುರ್ತು ಚಿಕಿತ್ಸೆಯ ಅಂತಾರಾಷ್ಟ್ರೀಯ ಒಕ್ಕೂಟ (ಇಂಟರ್‌ನ್ಯಾಷನಲ್‌ ಫೆಡರೇಷನ್‌ ಫಾರ್‌ ಎಮರ್ಜೆನ್ಸಿ ಮೆಡಿಸಿನ್‌/ಐಎಫ್‌ಇಎಂ) ಈ ಪ್ರಮಾಣಪತ್ರವನ್ನು ನೀಡಿದ್ದು, ಜರ್ಮನಿಯಲ್ಲಿ ಇತ್ತೀಚೆಗೆ ನಡೆದ ತುರ್ತು ಚಿಕಿತ್ಸಾ ವಿಭಾಗದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ (ಐಸಿಇಎಂ) ಈ ಪ್ರಮಾಣಪತ್ರವನ್ನು ಪ್ರದಾನ ಮಾಡಲಾಯಿತು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ಶರಣ ಶಿವರಾಜ್ ಪಾಟೀಲ್, ತುರ್ತು ಚಿಕಿತ್ಸಾ ವಿಭಾಗದಲ್ಲಿ ಜಾಗತಿಕ ಮಟ್ಟದ ಅತ್ಯನ್ನತ ಗುಣಮಟ್ಟಗಳ ಮಾನದಂಡಗಳನ್ನು ಪೂರೈಸುವಲ್ಲಿ ಸ್ಪರ್ಶ್‌ ಆಸ್ಪತ್ರೆ ಹೆಣ್ಣೂರು ಘಟಕವು ಯಶಸ್ವಿಯಾಗಿದ್ದು ಈ ಸಾಧನೆಗಾಗಿ ಈ ಅಂತಾರಾಷ್ಟ್ರೀಯ ಪ್ರಮಾಣಪತ್ರ ನೀಡಲಾಗಿದೆ.

ಇದನ್ನೂ ಓದಿ: Health Tips: ಕೊತ್ತಂಬರಿ ನೀರಿನ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ?

ಐಎಫ್‌ಇಎಂ ಜಾಗತಿಕವಾಗಿ ಗುರುತಿಸಿದ ಮಾನದಂಡಗಳ ಅಡಿಯಲ್ಲಿ ಡಿಸೆಂಬರ್ 3ರಿಂದ ಡಿಸೆಂಬರ್‌ 5, 2025 ರವರೆಗೆ ಮಧ್ಯಪ್ರಾಚ್ಯದ ಪ್ರಮುಖ ವರ್ಗೀಕರಣ ಸೊಸೈಟಿ ಟಿಎಎಸ್‌ಎನ್‌ ಇಇಎಫ್‌ (TASNEEF) ಸಹಭಾಗಿತ್ವದಲ್ಲಿ ಮೂರು ದಿನಗಳ ಕಾಲ ನಡೆಸಿದ ಸಮಗ್ರ ಪರಿಶೋಧನೆಯ ಆಧಾರದಲ್ಲಿ ಪ್ರಮಾಣೀಕರಣವನ್ನು ನೀಡಲಾಗಿದೆ. ಈ ಮಾನದಂಡಗಳ ಪೈಕಿ, ತುರ್ತು ಚಿಕಿತ್ಸಾ ವಿಭಾಗದಲ್ಲಿನ ತುರ್ತು ಚಿಕಿತ್ಸಾ ಪ್ರಕ್ರಿಯೆಯ ವ್ಯವಸ್ಥೆ, ರೋಗಿಗಳ ರೋಗ ಸ್ಥಿತಿಯ ತೀವ್ರತೆಯನ್ನು ವಿಶ್ಲೇಷಿಸಿ ಆರೈಕೆ ಮಾಡಬೇಕಾದ ತುರ್ತುಸ್ಥಿತಿಯ ಆಧಾರದ ಮೇಲೆ ತ್ವರಿತವಾಗಿ ಮಾಡಲಾಗುವ ಮೌಲ್ಯಮಾಪನ ಮತ್ತು ನೀಡಬೇಕಾದ ಆದ್ಯತೆಯ ಮೇಲೆ ಬಳಸಲಾಗುವ ಪ್ರಮಾಣೀಕೃತ ವ್ಯವಸ್ಥೆ, ವೈದ್ಯಕೀಯ ಮೂಲ ಸೌಕರ್ಯ, ರೋಗಿಗಳ ಸುರಕ್ಷತಾ ವ್ಯವಸ್ಥಾ ಪದ್ಧತಿ, ಆಡಳಿತ ವ್ಯವಸ್ಥೆ ಹಾಗೂ ತ್ವರಿತ ಸ್ಪಂದನೆಯ ಕಟ್ಟುನಿಟ್ಟಾದ ಮೌಲ್ಯಮಾಪನವನ್ನು ಅನುಸರಿಸಿ, ಅತ್ಯುತ್ತಮ 99.6% ಅಂಕ ಗಳನ್ನು ಸ್ಪರ್ಶ್‌ ಆಸ್ಪತ್ರೆ ಹೆಣ್ಣೂರಿನ ತುರ್ತು ಚಿಕಿತ್ಸಾ ಘಟಕವು ಸಾಧಿಸಿದೆ ಎಂದರು.

ಸ್ಪರ್ಶ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಹಿರಿಯ ಸಲಹೆಗಾರ ಮತ್ತು ಸಮೂಹ ಮುಖ್ಯಸ್ಥ ಡಾ.ಟಿ.ಎಸ್.ಶ್ರೀನಾಥ್ ಕುಮಾರ್ ಮಾತನಾಡಿ, 99.6% ಅಸಾಧಾರಣ ಅಂಕಗಳೊಂದಿಗೆ ಐಎಫ್‌ಇ ಎಂನ ಗೋಲ್ಡ್ ಲೆವೆಲ್ ಪ್ರಮಾಣೀಕರಣದ ಸಾಧನೆಯು ಸ್ಪರ್ಶ್‌ ಆಸ್ಪತ್ರೆಗಳ ಜಾಗತಿಕ ಮಾನದಂಡ ಗಳ ಅನುಸರಣೆ, ರೋಗಿಗಳ ಸುರಕ್ಷತೆಯಲ್ಲಿ ಎಂದಿಗೂ ರಾಜಿಯಾಗದ ನೀತಿ ಮತ್ತು ನಿರಂತರ ಸುಧಾರಣೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ತುರ್ತು ಚಿಕಿತ್ಸಾ ಸಂದರ್ಭಗಳಲ್ಲಿ ವೇಗ, ನಿಖರತೆ ಮತ್ತು ನಿರಂತರ ಸಮನ್ವಯತೆಯು ಕ್ಲಿಷ್ಟಕರ ವಾದ ರೋಗ ಸ್ಥಿತಿಯಲ್ಲಿರುವ ರೋಗಿಯ ಚಿಕಿತ್ಸೆಯಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸು ವಲ್ಲಿ ನಿರ್ಣಾಯಕವಾಗಿರುತ್ತದೆ.

10 ಅಧ್ಯಾಯಗಳು ಮತ್ತು 200ಕ್ಕೂ ಹೆಚ್ಚು ಪ್ರಮುಖ ಮಾನದಂಡಗಳನ್ನು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಜೋಡಿಸಲಾಗಿದ್ದ ಈ ಗೋಲ್ಡ್ ಪ್ರಮಾಣೀಕರಣವು ಚಿಕಿತ್ಸೆಯಲ್ಲಿನ ಉತ್ಕೃಷ್ಟತೆ ಮತ್ತು ಮತ್ತು ರೋಗಿಗಳ ಸುರಕ್ಷತೆಯ ಮೇಲಿನ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಸ್ಪರ್ಶ್‌ ಆಸ್ಪತ್ರೆಯು ಈ ಅಂತಾರಾಷ್ಟ್ರೀಯ ಮನ್ನಣೆ ಪಡೆದ ದೇಶದ ಮೊಟ್ಟ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ನಮ್ಮದಾಗಿದೆ ಎಂದು ಅಭಿಪ್ರಾಯಪಟ್ಟರು.