ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಿಯುಸಿ ಫಲಿತಾಂಶ ಜಿಲ್ಲೆಯ ಅಮೋಘ ಸಾಧನೆ : ಶೇ.90.24 ರೊಂದಿಗೆ 11 ರಿಂದ 8 ಸ್ಥಾನಕ್ಕೆ ಜಿಗಿದ ಜಿಲ್ಲೆ

ಬಾಲಕಿಯರು ಶೇ 86.89ರಷ್ಟು ಫಲಿತಾಂಶ ದಾಖಲಿಸಿದರೆ ಬಾಲಕರು ಶೇ 83.97 ಫಲಿತಾಂಶ ದಾಖಲಿಸಿದ್ದಾರೆ. 2026ರ ಫಲಿತಾಂಶದಲ್ಲಿಯೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿರುವುದು ಮಹಿಳಾ ಶಕ್ತಿಯನ್ನು ಅನಾವರಣಗೊಳಿಸಿದೆ. 2024-25ನೇ ಸಾಲಿನಲ್ಲಿ ಜಿಲ್ಲೆಯು 11ನೇ ಸ್ಥಾನ ದಲ್ಲಿತ್ತು. ಆದರೆ ಈಬಾರಿ ಉತ್ತಮ ಸಾಧನೆಯೊಂದಿಗೆ 8ನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಪಿಯುಸಿ ಫಲಿತಾಂಶ ಜಿಲ್ಲೆಯ ಅಮೋಘ ಸಾಧನೆ

ಜಿಲ್ಲೆಯು ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದು ಕಳೆದ ವರ್ಷದ 11 ಸ್ಥಾನದಿಂದ 8ನೇ ಸ್ಥಾನಕ್ಕೆ ಜಿಗಿದಿದೆ -

Profile
Ashok Nayak Apr 9, 2026 11:46 PM

ಚಿಕ್ಕಬಳ್ಳಾಪುರ: ದ್ವಿತೀಯ ಪಿಯುಸಿ ಫಲಿತಾಂಶ(Karnataka 2nd PUC Results News) ಪ್ರಕಟ ವಾಗಿದ್ದು, ಶೇಕಡವಾರು 90024 ಪ್ರತಿಶತದೊಂದಿಗೆ  ಜಿಲ್ಲೆಯು ರಾಜ್ಯದಲ್ಲಿ 8 ಸ್ಥಾನ ಪಡೆಯುವ ಮೂಲಕ ಪೋಷಕರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಲಾಗಿದೆ.

ಈ ಬಾರಿಯೂ ಕೂಡ ಬಿಜಿಎಸ್ ವಿದ್ಯಾರ್ಥಿಗಳೇ ಫಲಿತಾಂಶದಲ್ಲಿ ಪಾರಮ್ಯ ಮೆರೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಭುವನ. ಸಿ.ಎ." ಎಂಬ ವಿದ್ಯಾರ್ಥಿನಿಯು 600ಕ್ಕೆ 596 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ "ಸಮೀಕ್ಷ, ಎನ್. ಎಂಬ ವಿದ್ಯಾರ್ಥಿನಿ ಯು 600ಕ್ಕೆ 594 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಬಾಲಕಿಯರು ಶೇ 86.89ರಷ್ಟು ಫಲಿತಾಂಶ ದಾಖಲಿಸಿದರೆ ಬಾಲಕರು ಶೇ 83.97 ಫಲಿತಾಂಶ ದಾಖಲಿಸಿದ್ದಾರೆ. 2026ರ ಫಲಿತಾಂಶದಲ್ಲಿಯೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿರುವುದು ಮಹಿಳಾ ಶಕ್ತಿಯನ್ನು ಅನಾವರಣಗೊಳಿಸಿದೆ. 2024-25ನೇ ಸಾಲಿನಲ್ಲಿ ಜಿಲ್ಲೆಯು 11ನೇ ಸ್ಥಾನ ದಲ್ಲಿತ್ತು. ಆದರೆ ಈಬಾರಿ ಉತ್ತಮ ಸಾಧನೆಯೊಂದಿಗೆ 8ನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಈ ಬಾರಿ ಜಿಲ್ಲೆಯಾದ್ಯಂತ ಸರಿ ಸುಮಾರು 11904 ಪರೀಕ್ಷೆ ಬರೆದಿದ್ದು ಈ ಪೈಕಿ 10742 ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ. ಅವರಲ್ಲಿ 5663 ವಿದ್ಯಾರ್ಥಿಗಳು, 7153 ವಿದ್ಯಾರ್ಥಿನಿಯರು ಇದ್ದರು.

ಇದನ್ನೂ ಓದಿ: 2nd PUC Results: ಇಂದು ಮಧ್ಯಾಹ್ನ 3 ಗಂಟೆಗೆ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಪ್ರಕಟ, ರಿಸಲ್ಟ್ ಈ ರೀತಿ ಚೆಕ್ ಮಾಡಿ

ಕಲಾ ವಿಭಾಗದಲ್ಲಿ 1156 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 789 ವಿಧ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 5165 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 4362 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 6495 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 5819 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯಾದ್ಯಂತ ಒಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಹೆಣ್ಣು ಮಕ್ಕಳ ಸಂಖ್ಯೆ-7153, ಈ ಪೈಕಿ ಉತ್ತೀರ್ಣರಾದವರು -6215 ಶೇ.-86.66 ದಾಖಲಿಸಿದ್ದಾರೆ.

ಇದರಂತೆ ಪರೀಕ್ಷೆ ತೆಗೆದುಕೊಂಡ ಗಂಡು ಮಕ್ಕಳು-5663, ಪಾಸಾದವರು 4755 ಶೇ, 83.97 ಫಲಿತಾಂಶ ದಾಖಲಿಸಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿಯ ಪರೀಕ್ಷೆಯಲ್ಲಿ 10982 ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆ ಬರೆದಿದ್ದು ಈ ಪೈಕಿ 9641 ಪಾಸಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೀಷ್ ಭಾಷಾ ಪತ್ರಿಕೆಯಲ್ಲಿ ಶೇಕಡವಾರು-87.79 ಫಲಿತಾಂಶ ಬಂದಿದೆ.

ಪರಿಶಿಷ್ಟ ಜಾತಿಯ ಪರೀಕ್ಷೆ ತೆಗೆದುಕೊಂಡ ಒಟ್ಟು ವಿದ್ಯಾರ್ಥಿಗಳು 2977 ಈ ಪೈಕಿ 2313 ಪಾಸಾ ಗಿದ್ದು ಶೇಕಡವಾರು-77.07ರಷ್ಟು ಸಾಧನೆ ಮಾಡಿದ್ದಾರೆ. ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು 1498 ಪರೀಕ್ಷೆ ಬರೆದಿದ್ದು ಈ ಪೈಕಿ 1215 ಉತ್ತೀರ್ಣರಾಗುವ ಮೂಲಕ ಶೇ. 81.11 ಸಾಧನೆ ದಾಖಲಿಸಿದ್ದಾರೆ.

ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು 4526 ಪರೀಕ್ಷೆ ಬರೆದಿದ್ದು 4212 ಮಂದಿ ಉತ್ತೀರ್ಣರಾಗುವ ಮೂಲಕ ಶೇ 93.06 ಫಲಿತಾಂಶ ಪಡೆದಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ-7378 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 6530 ಪಾಸಾಗುವ ಮೂಲಕ 88.51ರ ಸಾಧನೆ ಮಾಡಿದ್ದಾರೆ. ಈ ಬಾರಿ ನಗರಕ್ಕಿಂತ ಗ್ರಾಮೀಣರೇ ಮೇಲುಗೈ ಸಾಧಿಸಿದ್ದಾರೆ.

ಪುನರಾರ್ತಿತ ವಿದ್ಯಾರ್ಥಿಗಳು ೭೮೭ ಪರೀಕ್ಷೆ ಬರೆದಿದ್ದು ಈ ಪೈಕಿ ೧೮೦ ಮಂದಿ ಉತ್ತೀರ್ಣರಾಗಿ ೨೨.೫೮, ಫಲಿತಾಂಶ ಪಡೆದಿದ್ದಾರೆ. ಅಂತಮವಾಗಿ ಈ ಬಾರಿ ಖಾಸಗಿ ಅಭ್ಯರ್ಥಿಗಳಾಗಿ ೧೧೫ ಪರೀಕ್ಷೆ ಬರೆದರೆ ಆ ಪೈಕಿ ೪೮ ಪಾಸು ಪಾಸಾಗಿ ಶೇ ೪೧ ಸಾಧನೆ ಮಾಡಿದ್ದಾರೆ.
*

ಈ ಬಾರಿಯ ಫಲಿತಾಂಶ ಬಹಳ ಸಂತೋಷ ತಂದಿದೆ. ೧೧ ರಿಂದ ೮ ಹೀಗೆ ಜಿಲ್ಲೆಯನ್ನು ಫಲಿತಾಂಶ ದಲ್ಲಿ ಒಂದಕಿಂಗೆ ತಂದಿರುವ ಸಾಧನೆ ಕಡಿಮೆಯಲ್ಲ. ಕಾರಣ ಎಲ್ಲಾ ಬೋಧಕ ವರ್ಗ ಪ್ರಾಂಶುಪಾಲರು, ಆಡಳಿತ ಮಂಡಳಿ, ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯಿತಿ ಸಿಇಒ,ಅಪರ ಜಿಲ್ಲಾಧಿಕಾರಿಗಳು ಬಹಳ ಸಹಕಾರ ನೀಡಿದ್ದಾರೆ. ಮಾಧ್ಯಮದವರೂ ಹೆಚ್ಚಿನ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪಿಯು ಶಿಕ್ಷಣ ಇಲಾಖೆಯ ಉಪ ನಿರ್ಧೇಶಕ ಆದಿಶೇಷರಾವ್ ತಿಳಿಸಿದ್ದಾರೆ.

ಒಟ್ಟಾರೆ ಈ ಬಾರಿಯ ಪಿಯುಸಿ ಫಲಿತಾಂಶ ಜಿಲ್ಲೆಯ ಪಾಲಿಗೆ ಮಹತ್ವದ ಫಲಿತಾಂಶವಾಗಿದೆ ಎಂದೇ ಹೇಳಬಹುದು.

image

ಜಿಲ್ಲೆಯು ಶೇ.90.24 ರೊಂದಿಗೆ 11 ರಿಂದ 8 ಸ್ಥಾನಕ್ಕೆ ಜಿಗಿದಿರುವುದು ಸಂತೋಷ ತಂದಿದೆ. ಇದಕ್ಕೆ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸುತ್ತೇನೆ. ಉಳಿದಂತೆ ಇಂದಿನ ಫಲಿತಾಂಶವೇ ಕೊನೆಯಲ್ಲ. ಶೀಘ್ರದಲ್ಲಿಯೇ ಸರ್ಕಾರ ಪೂರಕ ಪರೀಕ್ಷೆ ನಡೆಸಲಿದ್ದು, ಈ ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮತ್ತೆ ಉತ್ತೀರ್ಣರಾಗಿ ತಮ್ಮ ಶೈಕ್ಷಣಿಕ ಜೀವನ ಮುಂದುವರಿಸಬಹುದಾಗಿದೆ. ಹಾಗಾಗಿ ಯಾವುದೇ ಮಕ್ಕಳು ದುಡುಕದೆ ಪೂರಕ ಪರೀಕ್ಷೆಗೆ ಸಿದ್ಧರಾಗಿ, ಅಲ್ಲದೆ ವಿಷಯಗಳು ಕಡಿಮೆ ಇರುವ ಕಾರಣ ಹೆಚ್ಚಿನ ಸಮಯ ವ್ಯಾಸಂಗಕ್ಕೆ ಮೀಸಲಿಟ್ಟು ಅಭ್ಯಾಸ ಮಾಡಿದರೆ ತಪ್ಪದೇ ನೀವು ಜಯಶೀಲ ರಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಯಾವುದೇ ವಿದ್ಯಾರ್ಥಿ ಇಂದಿನ ಫಲಿತಾಂಶದಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ದುಡುಕುವುದು ಬೇಡ. ಪೂರಕ ಪರೀಕ್ಷೆಗೆ ಸಿದ್ಧರಾಗಿ ಉತ್ತಮ ಫವಿಷ್ಯ ಕಟ್ಟಿಕೊಳ್ಳಿ.

ಜಿಲ್ಲಾಧಿಕಾರಿ ಜಿ. ಪ್ರಭು