ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಶಿಡ್ಲಘಟ್ಟ ಜೆಡಿಎಸ್ ಶಾಸಕ ರವಿಕುಮಾರ್ ಬೆಂಬಲಿಗರಿಂದ ಸಂಸದ ಡಾ.ಕೆ.ಸುಧಾಕರ್ ಟೀಕೆಗೆ ತೀವ್ರ ಆಕ್ಷೇಪ ದಾಖಲು

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಸ್ವಾಧೀನಪಡಿಸಿಕೊಳ್ಳುವ ವಿಚಾರದಲ್ಲಿ ಶಾಸಕರು ರೈತರ ಪರವಾಗಿ ನಿಂತು, ನೀರಾವರಿ ಜಮೀನು ಉಳಿಸಲು ಕ್ರಮ ಕೈಗೊಂಡಿದ್ದಾರೆ.ರೈತರು ಶಾಸಕರನ್ನು ಭೇಟಿ ಮಾಡಿದಾಗ ಅವರಿಗೆ ಬೆಂಬಲ ನೀಡಿದ್ದಾರೆ. ಆದರೆ, ಸಂಸದ ಡಾ.ಕೆ.ಸುಧಾಕರ್ ನಮ್ಮ ಶಾಸಕರ ಬಗ್ಗೆ ಹಗುರವಾಗಿ ಟೀಕೆ ಮಾಡಿರುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು

ಸಂಸದ ಡಾ.ಕೆ.ಸುಧಾಕರ್ ಟೀಕೆಗೆ ತೀವ್ರ ಆಕ್ಷೇಪ ದಾಖಲು

ಸುದ್ದಿಗೋಷ್ಟಿಯಲ್ಲಿ ಚಿಮುಲ್ ನಿರ್ದೇಶಕ ಹುಜಗೂರು ರಾಮಯ್ಯ ಮಾತನಾಡಿದರು. -

Profile
Ashok Nayak Apr 10, 2026 12:01 AM

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಕ್ಷೇತ್ರದ ಸರಳ ಶಾಸಕರು ಎಂದೇ ಪ್ರಸಿದ್ಧರಾದ ಬಿ.ಎನ್ ರವಿಕುಮಾರ್ ಕ್ಷೇತ್ರದ ಅಭಿವೃದ್ಧಿಗೆ ಆಧ್ಯತೆ ನೀಡುತ್ತಾ ರೈತರ ಪರ ನಿಲುವು ಹೊಂದಿದ್ದಾರೆ. ಇಂತಹ ಶಾಸಕರನ್ನು ಸಂಸದ ಡಾ.ಕೆ. ಸುಧಾಕರ್(MP Dr. K. Sudhakar) ಕಳ್ಳರಿಗೆ ಹೋಲಿಸಿರುವುದು ತಪ್ಪು, ಇದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಜೆಡಿಎಸ್(JDS) ಮುಖಂಡರು ಕಿಡಿ ಕಾರಿದರು.

ನಗರದ ಜಿಲ್ಲಾ ಕಾರ್ಯನಿರತ  ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಸ್ವಾಧೀನಪಡಿಸಿಕೊಳ್ಳುವ ವಿಚಾರದಲ್ಲಿ ಶಾಸಕರು ರೈತರ ಪರವಾಗಿ ನಿಂತು, ನೀರಾವರಿ ಜಮೀನು ಉಳಿಸಲು ಕ್ರಮ ಕೈಗೊಂಡಿದ್ದಾರೆ.ರೈತರು ಶಾಸಕರನ್ನು ಭೇಟಿ ಮಾಡಿದಾಗ ಅವರಿಗೆ ಬೆಂಬಲ ನೀಡಿದ್ದಾರೆ. ಆದರೆ, ಸಂಸದ ಡಾ.ಕೆ.ಸುಧಾಕರ್ ನಮ್ಮ ಶಾಸಕರ ಬಗ್ಗೆ ಹಗುರವಾಗಿ ಟೀಕೆ ಮಾಡಿರುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಚಿಮುಲ್ ನಿರ್ದೇಶಕ ಹುಜಗೂರು ರಾಮಯ್ಯ ಮಾತನಾಡಿ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಉದ್ದೇಶಿತ ಕೈಗಾರಿಕಾ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಚಿಕ್ಕಬಳ್ಳಾಪುರದ ಜಿಲ್ಲಾಧಿ ಕಾರಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಭಟನೆ ವೇಳೆ ಸಂಸದ ಡಾ.ಕೆ.ಸುಧಾಕರ್ ಶಾಸಕ ರವಿ ಕುಮಾರ್ ಬಗ್ಗೆ ಟೀಕಿಸಿರುವುದು ಸರಿಯಲ್ಲ. ರೈತರ ಪರ ನಿಲ್ಲದೇ ಉಸ್ತುವಾರಿ ಸಚಿವರಾದ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಮಾಡುವುದು ಸಮಂಜಸ ವಲ್ಲ ಎಂದರು.

ಇದನ್ನೂ ಓದಿ: Chinthamani News: ರಾಜೀವ್‌ ನಗರದಲ್ಲಿ ಮಧ್ಯರಾತ್ರಿ ಮಾರಕಾಯುಧಧಾರಿ ಕಳ್ಳರ ಅಟ್ಟಹಾಸ: ಭೀತಿಯ ನೆರಳಿನಲ್ಲಿ ಬಡಾವಣೆಯ ನಿವಾಸಿಗಳು

ಶಾಸಕರ ಬಗ್ಗೆ ವಿಷಯ ತಿಳಿಯದೆ ಮಾತನಾಡಬಾರದು. ಎನ್‌ಡಿಎ ಮೈತ್ರಿ ಧರ್ಮದಂತೆ ಜೆಡಿಎಸ್ ಮತ್ತು ಬಿಜೆಪಿ ಒಂದೇ ಮಾತಿನಂತೆ ಇರಬೇಕು. ಆದರೆ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ನಮ್ಮ ಸರಳ ಸಜ್ಜನಿಕೆ ಶಾಸಕ ಬಿ.ಏನ್.ರವಿಕುಮಾರ್ ವಿರುದ್ಧ ಕೆಐಎಡಿಬಿ ವಿಚಾರವನ್ನು ಮುಂದಿಟ್ಟುಕೊಂಡು ಅವರನ್ನು ನಿಂದಿಸಿರುವುದು ಸರಿಯಲ್ಲ ಎಂದು ದೂರಿದರು.

ನಮ್ಮ ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಕೆಲಸ ಮಾಡುತ್ತಾರೆ. ಯಾರನ್ನೋ ಮೆಚ್ಚಿಸಲು ಕೆಲಸ ಮಾಡುವವರಲ್ಲ. ತಮ್ಮ ಆಡಳಿತಾವಧಿಯಲ್ಲಿ ಶಿಡ್ಲಘಟ್ಟ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಕ್ಷೇತ್ರಕ್ಕೆ ಭೇಟಿ ನೀಡಿದಗದ ವೇಳೆ ಶಾಸಕರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ ಇದು ತಮಗೆ ತಿಳಿಯದಿರುವುದು ಬೇಸರದ ಸಂಗತಿಯಾಗಿದೆ ಎಂದರು.

೬೦೦ಕ್ಕೂ ಹೆಚ್ಚು ಎಕರೆ ನೀರಾವರಿ ಜಮೀನನ್ನು ಉಳಿಸಿರುವ ಸಾಧನೆ ಶಾಸಕರದ್ದು. ಅಂಕಿಅಂಶ ಗಳನ್ನು ಗಮನಿಸದೆ, ಕೇಳಿ ಬಂದ ಮಾತುಗಳನ್ನು ನಂಬಿ ಶಾಸಕರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ನಮ್ಮ ಶಾಸಕರ ಸೇವೆ ಕ್ಷೇತ್ರದ ಜನರಿಗೆ ಗೊತ್ತಿದೆ. ಅವರ ಬಗ್ಗೆ ನಿಮ್ಮ ಪ್ರಮಾಣಪತ್ರ ನಮಗೆ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಮುಖಂಡ ರಘು ಮಾತನಾಡಿ, ಶಾಸಕ ರವಿ ಕುಮಾರ್ ಅವರು ಸದಾ ಕಾರ್ಯಕರ್ತರನ್ನು ಬೆಳೆಸುವ ಹಾಗೂ ಪಕ್ಷ ನಿಷ್ಠೆ ಹೊಂದಿರುವ ನಾಯಕರು.ಆದರೆ ಸುಧಾಕರ್ ಅವರ ‘ಅಡ್ಜಸ್ಟ್ಮೆಂಟ್ ರಾಜಕಾರಣ’ ಎಲ್ಲರಿಗೂ ಗೊತ್ತಿದೆ. ದ್ವಂದ್ವ ನೀತಿ ಅನುಸರಿಸುವ ನೀವು ನಿಮ್ಮ ರಾಜಕಾರಣ ಮಾಡಿ ದರೆ ಚೆನ್ನ. ನಮ್ಮ ಶಾಸಕರ ಬಗ್ಗೆ ಮಾತನಾಡಬೇಡಿ ಎಂದು ತಿರುಗೇಟು ನೀಡಿದರು.

ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದಾರೆ.ಕೆಐಎಡಿಬಿ ವಿಷಯದಲ್ಲಿ ರೈತರೊಂದಿಗೆ ಸಂವಾದ ನಡೆಸಿ,ಸಾಧ್ಯವಾದಷ್ಟು ಸಹಕಾರ ನೀಡಿದ್ದಾರೆ.ಸಂಸದರು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ದೂರಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವೆಂಕಟೇಶ್,ಉಪಾಧ್ಯಕ್ಷ ಶ್ರೀನಿವಾಸ ಗೌಡ,ಮಾಜಿ ಅಧ್ಯಕ್ಷ ಧನಂಜಯ ರೆಡ್ಡಿ,ಶಿವಾರೆಡ್ಡಿ,ಗಂಜಿಗAಟೆ ಮೂರ್ತಿ, ಲಕ್ಷ್ಮೀನಾರಾಯಣ ರೆಡ್ಡಿ, ಚಂದ್ರಶೇಖರ್, ಚಂದ್ರೇಗೌಡ, ಗಂಜಿಗುಂಟೆ ಮೂರ್ತಿ,  ನಟರಾಜ್ ಬಿ.ಆರ್.ಮಂಜುನಾಥ್, ಮೇಲೂರು ಮಂಚುನಾಥ್, ಮತ್ತಿತರರು ಇದ್ದರು.