ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Calling off the Hunger Strike: ನಿರಾಹಾರ ಉಪವಾಸ ಸತ್ಯಾಗ್ರಹ ನಿರತ ರೈತರ ಮನವೊಲಿಕೆ ಮಾಡಿದ ಜಿಲ್ಲಾಧಿಕಾರಿ

ಜಿಲ್ಲಾಡಳಿತ ಭವನದ ಎದುರು ಕೆಐಎಡಿಬಿಗೆ ಭೂಮಿ ಕೊಡಲು ಸಿದ್ಧವಿರುವ 13 ಹಳ್ಳಿಗಳ ರೈತರು ಕಳೆದ 77 ದಿನಗಳಿಂದ ಪ್ರತಿಭಟನೆ ನಡೆಸುತ್ತಾ ಸರಕಾರದ ನಡೆ ಕಾಯುತ್ತಾ ಕೂತಿದ್ದರು. ಜಿಲ್ಲಾಡಳಿತವು ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಬೇಸರಿಸಿ ಶುಕ್ರವಾರದಿಂದ ನಿರಾಹಾರ ಉಪವಾಸ ಕೈಗೊಂಡಿದ್ದರು.

ಹಾಲು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹ ವಾಪಸ್ಸು ಮಾಡುವಲ್ಲಿ ಸಫಲ

ಜಿಲ್ಲಾಡಳಿತ ಭವನದ ಮುಂದೆ ಕೆಐಎಡಿಬಿಗೆ ಭೂಮಿ ನೀಡುವ ರೈತರ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಿರತ ರೈತರಿಗೆ ಜಿಲ್ಲಾಧಿಕಾರಿ ಜಿ.ಪ್ರಭು ನಂದಿನಿ ಹಾಲು ನೀಡುವ ಮೂಲಕ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು -

Profile
Ashok Nayak Jun 6, 2026 8:27 PM

ಚಿಕ್ಕಬಳ್ಳಾಪುರ: ಕಳೆದೆರಡು ದಿನಗಳಿಂದ ನಿರಾಹಾರ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಕೆಐಎಡಿಬಿ ಪರವಾದ ರೈತರ ಹೋರಾಟದ ವೇದಿಕೆಗೆ ಬಂದ ಜಿಲ್ಲಾಧಿಕಾರಿ ಜಿ.ಪ್ರಭು( District Collector G. Prabhu) ಅವರು ರೈತರ ಅಹವಾಲು ಆಲಿಸಿದರು. ನಿಮ್ಮ ಬೇಡಿಕೆಗಳನ್ನು ಲಿಖಿತ ವಾಗಿ ನೀಡಿದಲ್ಲಿ ಕಾನೂನು ಪರಿಮಿತಿಯಲ್ಲಿ ಪರಿಹರಿಸಲಾಗುವುದು ಎಂದು ಮನವೊಲಿಸಿ ದರಲ್ಲದೆ ಹಾಲು ಕುಡಿಸುವ ಮೂಲಕ ನಿರಾಹಾರ ಸತ್ಯಾಗ್ರಹ ವಾಪಸ್ಸು(Calling off the Hunger Strike)ಮಾಡುವಲ್ಲಿ ಸಂಪೂರ್ಣ ಯಶಸ್ವಿಯಾದರು.

ಹೌದು. ಜಿಲ್ಲಾಡಳಿತ ಭವನದ ಎದುರು ಕೆಐಎಡಿಬಿಗೆ ಭೂಮಿ ಕೊಡಲು ಸಿದ್ಧವಿರುವ 13 ಹಳ್ಳಿಗಳ ರೈತರು ಕಳೆದ 77 ದಿನಗಳಿಂದ ಪ್ರತಿಭಟನೆ ನಡೆಸುತ್ತಾ ಸರಕಾರದ ನಡೆ ಕಾಯುತ್ತಾ ಕೂತಿದ್ದರು. ಜಿಲ್ಲಾಡಳಿತವು ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಬೇಸರಿಸಿ ಶುಕ್ರವಾರದಿಂದ ನಿರಾಹಾರ ಉಪವಾಸ ಕೈಗೊಂಡಿದ್ದರು.

ಇದನ್ನೂ ಓದಿ: Chikkaballapur News: ಕೆ.ಹೆಚ್.ಮುನಿಯಪ್ಪಗೆ ಕಂದಾಯ ಇಲ್ಲವೆ ಸಮಾಜ ಕಲ್ಯಾಣ ಖಾತೆ ನೀಡಿ, ಆಹಾರ ಇಲಾಖೆ ಖಾತೆ ಬೇಡ : ಬಾಲಕುಂಟಹಳ್ಳಿ ಗಂಗಾಧರ್

ಜಿಲ್ಲಾಧಿಕಾರಿಗಳು ಶನಿವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಭೂ ಮಾಫಿಯಾ ಅಳಿಯಬೇಕು. ಜಂಗಮಕೋಟೆ ಹೋಬಳಿಯಲ್ಲೇ ಕೈಗಾರಿಕಾ ವಲಯ ಸ್ಥಾಪಿಸಿ ನಿರುದ್ಯೋಗ ನಿವಾರಣೆ ಮಾಡ ಬೇಕು. ಕೈಗಾರಿಕಾ ವಲಯ ಸ್ಥಾಪನೆಯಾದಲ್ಲಿ ಸಾವಿರಾರು ಮಂದಿ ನಿರುದ್ಯೋಗಿ ಯುವಕರಿಗೆ ಸ್ಥಳಿಯವಾಗಿ ಉದ್ಯೋಗ ದೊರೆಯಲಿದೆ. ಸರಕಾರಕ್ಕೆ ಭೂಮಿ ಕೊಡುವ ರೈತರ ಖಾತೆಗಳಿಗೆ ನೇರವಾಗಿ ಒಂದೇ ಕಂತಿನಲ್ಲಿ ಹಣ ಪಾವತಿ ಮಾಡಬೇಕು. ಭೂಮಿ ಕೊಡುವ ಮನೆಗೊಂದು ಉದ್ಯೋಗ ಕೊಡಬೇಕು. ಪರಿಹಾರದ ಹಣ ಬೇಡ ಎನ್ನುವವರಿಗೆ ಪರ್ಯಾಯ ಭೂಮಿ ನೀಡಬೇಕು ಎಂದು ಒತ್ತಾಯಿಸಿ ಪಹಣಿದಾರರು ಮಾತ್ರವೇ ಕಾನೂನು ಬದ್ಧವಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.

dc

ಕೆಐಎಡಿಬಿ(KIADB) ಪರವಾದ ರೈತರ ಹೋರಾಟದ ವೇದಿಕೆಗೆ ಜಿಲ್ಲಾಧಿಕಾರಿಗಳು ಬಂದು ಅಹವಾಲು ಸ್ವೀಕರಿಸಿಲ್ಲ. ಸರಕಾರಿ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿ ರೈತರ ಭೂಮಿಗೆ ದರ ನಿಗದಿ ಮಾಡಿದೆ. ಅದರಂತೆ ತುರ್ತಾಗಿ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಬೇಕು. ಇಲ್ಲವಾದಲ್ಲಿ ನಿರಾಹಾರ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಯಿತು. ಜೂ.5ರಂದೇ ಹೆಚ್ಚುವರಿ ಜಿಲ್ಲಾಧಿಕಾರಿಗಳು ಬಂದು ಮನವೊಲಿಸಲು ಮುಂದಾದರೂ ಜಿಲ್ಲಾಧಿಕಾರಿಗಳು ಬರುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದ್ದೆವು. ಹೀಗಾಗಿ ಶನಿವಾರ ಜಿಲ್ಲಾಧಿಕಾಗಳೇ ಬಂದು ನಮ್ಮ ಜತೆ ಮಾತನಾಡಿದ್ದು ಸಮಾಧಾನ ತಂದಿದೆ. ಅವರ ಭರವಸೆ ಮೇಲೆ ಸತ್ಯಾಗ್ರಹ ವಾಪಸ್ಸು ಪಡಿಸಿ ದ್ದೇವೆ ಎಂದರು.

ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ, ಸರಕಾರದೊಟ್ಟಿಗೆ ಮಾತನಾಡಿ ನಿಮ್ಮ ಬೇಡಿಕೆ ಪರಿಗಣನೆಗೂ ಅವಕಾಶ ನೀಡುತ್ತೇವೆ. ನನ್ನ ವ್ಯಾಪ್ತಿಗೆ ಬರುವ ಬೇಡಿಕೆಗಳನ್ನು ನಾನೇ ಈಡೇರಿಸುತ್ತೇನೆ. ಜಮೀನು ವಶಕ್ಕೆ ಪಡೆಯಲು  ಎರಡು ವಾರಗಳೊಳಗೆ ಕೆಐಎಡಿಬಿ ಅಧಿಕಾರಿಗಳೊಟ್ಟಿಗೆ ಮಾತನಾಡಿ ದಿನಾಂಕ ನಿಗದಿಗೊಳಿಸುತ್ತೇವೆ. ಅಲ್ಲಿ ಏನು ತೀರ್ಮಾನ ವಾಗುತ್ತೊ ನೋಡೋಣ? ಎಂದ ಅವರು ಈ ರೀತಿ ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡುವುದು ತಪ್ಪು.ಅನ್ನಕೊಡುವ ರೈತರೇ ಹೀಗೆ ಉಪವಾಸದ ಮೂಲಕ ಪ್ರತಿಭಟನೆ ನಡೆಸುವುದು ತಪ್ಪು ಎಂದರು. ಇದೇ ವೇಳೆ ಉಪವಾಸ ನಿರತ ರೈತರು ಜಿಲ್ಲಾಧಿಕಾರಿಗಳು ನೀಡಿದ ನಂದಿನಿ ಹಾಲನ್ನು ಸೇವಿಸಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.

ಈ ವೇಳೆ. ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಚಿಂತಾಮಣಿ ತಾಲೂಕು ಅಧ್ಯಕ್ಷ ಕದಿರೇಗೌಡ, ಈಧರೆ ಪ್ರಕಾಶ್, ಸುಬ್ರಮಣಿ, ಚೆನ್ನಕೃಷ್ಣಪ್ಪ, ರಾಮಾಂಜಿನಪ್ಪ, ರಮೇಶ್, ಕೃಷ್ಣಪ್ಪ ಮತ್ತಿತರರು ಇದ್ದರು.