ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಜಂಗಮಕೋಟೆ ಕೈಗಾರಿಕಾ ಪ್ರದೇಶಕ್ಕೆ ಕಂಠಕವಾದ ಸಂಘಟನೆಗಳ ಜಟಾಪಟಿ

ಜಂಗಮಕೋಟೆ ಹೋಬಳಿಯಲ್ಲಿ ತಲೆಯೆತ್ತಲಿರುವ ಡೀಪ್‌ಟೆಕ್ ಕೈಗಾರಿಕಾ ವಲಯಕ್ಕೆ ಭೂಮಿ ಬಿಟ್ಟುಕೊಡುವಲ್ಲಿ ಮುಂದುವರೆದಿರುವ ರೈತಸಂಘಟನೆಗಳ ಜಟಾಪಟಿ ಸದ್ಯ ಮುಗುಯುವ ಲಕ್ಷಣ ಕಾಣುತ್ತಿಲ್ಲ.ರೈತ ಸಂಘಟನೆಗಳ ಪರ ವಿರೋಧದ ಪ್ರಬಲ ಅಲೆಗೆ ಸಿಕ್ಕು ತಾಲೂಕಿನ ಪ್ರಥಮ ಕೈಗಾರಿಕಾ ವಲಯ ನಿರ್ಮಾಣವು ಇಲ್ಲಿಂದ ಕೈತಪ್ಪಿದರೂ ಅಚ್ಚರಿಪಡು ವಂತಿಲ್ಲ ಎಂಬ ಸನ್ನಿವೇಶ ನಿರ್ಮಾಣ ವಾಗಿದೆ.

ಶಿಡ್ಲಘಟ್ಟ ತಾಲೂಕಿಗೆ ಕೈತಪ್ಪಲಿದೆಯೇ ಪ್ರಥಮ ಕೈಗಾರಿಕಾ ಪ್ರದೇಶದ ಅವಕಾಶ

ರೈತರೊಂದಿಗೆ ಸಚಿವರ ಮಾತು...

Profile Ashok Nayak May 9, 2025 4:28 PM

ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ : ಜಂಗಮಕೋಟೆ ಹೋಬಳಿಯಲ್ಲಿ ತಲೆಯೆತ್ತಲಿರುವ ಡೀಪ್‌ಟೆಕ್ ಕೈಗಾರಿಕಾ ವಲಯಕ್ಕೆ ಭೂಮಿ ಬಿಟ್ಟುಕೊಡುವಲ್ಲಿ ಮುಂದುವರೆದಿರುವ ರೈತಸಂಘಟನೆಗಳ ಜಟಾಪಟಿ ಸದ್ಯ ಮುಗುಯುವ ಲಕ್ಷಣ ಕಾಣುತ್ತಿಲ್ಲ.ರೈತ ಸಂಘಟನೆಗಳ ಪರ ವಿರೋಧದ ಪ್ರಬಲ ಅಲೆಗೆ ಸಿಕ್ಕು ತಾಲೂಕಿನ ಪ್ರಥಮ ಕೈಗಾರಿಕಾ ವಲಯ ನಿರ್ಮಾಣವು ಇಲ್ಲಿಂದ ಕೈತಪ್ಪಿದರೂ ಅಚ್ಚರಿಪಡು ವಂತಿಲ್ಲ ಎಂಬ ಸನ್ನಿವೇಶ ನಿರ್ಮಾಣವಾಗಿದೆ.

ಪ್ರಥಮ ಕೈಗಾರಿಕಾ ವಲಯವೆಂವ ಹಿರಿಮೆ!!!
ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಒಂದೇ ಒಂದು ಕೈಗಾರಿಕಾ ವಲಯವಿಲ್ಲದಿರುವುದು ಪದವೀ ಧರರು ಮತ್ತು ನಿರುದ್ಯೋಗಿಗಳ ಪಾಲಿಗೆ ದೊಡ್ಡ ಕೊರತೆಯೆಂದರೆ ತಪ್ಪಿಲ್ಲ.ಪರಿಣಾಮ ಇಲ್ಲಿಂದ ಹೊಸಕೋಟೆ,ನರಸಾಪುರ, ಬೆಂಗಳೂರು, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶಗಳಿಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪದವೀಧರರು ಉದ್ಯೋಗ ಅರಸಿ ಹೋಗಿಬರುತ್ತಿರುವುದು ಗುಟ್ಟಾದ ಸಂಗತಿಯಾಗಿಲ್ಲ.ಇದನ್ನೆಲ್ಲ ಮನಗಂಡರೆ ಶಿಡ್ಲಘಟ್ಟ ತಾಲೂಕು ಜಂಗಮಕೋಟೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಡೀಪ್‌ಟೆಕ್ ಕೈಗಾರಿಕಾ ವಲಯ ನಿರುದ್ಯೋಗಿಗಳ ಪಾಲಿಗೆ ಸಂಜೀವಿನಿ ಯಂತೆ ಕಂಡಿತ್ತು. ಏಕೆಂದರೆ ಟಾಟಾ ಸಮೂಹದ ಡೀಪ್‌ಟೆಕ್ ಪಾರ್ಕ್ ಶೀಘ್ರಗತಿಯಲ್ಲಿ ನಿರ್ಮಾಣ ವಾಗಿ ಸಾವಿರಾರು ಮಂದಿಗೆ ಉದ್ಯೋಗ ಕೊಡುತ್ತದೆ ಎಂಬ ಸದಾಶಯದ ಮಾತುಗಳು ಬಲವಾಗಿ ಕೇಳಿಬರುತ್ತಿರುವ ಜತೆಗೆ ಹೊಸಕೋಟೆ ತಾಲೂಕಿನ ಪಿಲ್ಲಗುಂಪೆ ಕೈಗಾರಿಕಾ ವಲಯಕ್ಕೆ ಸರಿಸಾಟಿ ಯಾಗಿ ನಿಲ್ಲಬಲ್ಲ ಎಲ್ಲಾ ಅವಕಾಶಗಳು ಜಂಗಮಕೋಟೆ ಪ್ರದೇಶಕ್ಕೆ ಇದೆ. ಅಂದು ಕೊಂಡಂತೆ ಇಲ್ಲಿ ಕೈಗಾರಿಕೆ ಸ್ಥಾಪನೆ ಆದರೆ ತಾಲೂಕಿನ ಪ್ರಥಮ ಕೈಗಾರಿಕಾ ಪ್ರದೇಶ ಎಂಬ ಹಿರಿಮೆಗೆ ಪಾತ್ರವಾಗುವು ದರಲ್ಲಿ ಯಾವ ಅನುಮಾನಗಳೂ ಇಲ್ಲ.

ಇದನ್ನೂ ಓದಿ: Chikkaballapur News: ವಾಸವಿ ಅಮ್ಮನವರ ಜಯಂತೋತ್ಸವದ ಅಂಗವಾಗಿ ಬ್ರೆಡ್, ಬಿಸ್ಕೆಟ್ ಹಾಗೂ ಓ ಆರ್ ಎಸ್ ವಿತರಣೆ

ವಿರೋಧಕ್ಕೆ ಕಾರಣವೇನು?
ಜಂಗಮಕೋಟೆ ಪ್ರದೇಶವು ಸಂಪೂರ್ಣವಾಗಿ ಕೃಷಿಗೆ ಯೋಗ್ಯವಾದ ಭೂಪ್ರದೇಶವಾಗಿದೆ.ಇಲ್ಲಿನ ಸಾವಿರಾರು ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಸಹಿತ ತೋಟಗಾರಿಕೆ ಬೆಳೆಗಳಿವೆ.ಫಲವತಾದ ಭೂಪ್ರದೇಶ ಹೊಂದಿರುವುದರಿAದ ಇಲ್ಲಿ ಕೈಗಾರಿಕೆ ನಿರ್ಮಾಣ ಬೇಡ ಎನ್ನುವುದು ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತಸಂಘದ ಮುಖಂಡರವಾದ. ಇದಕ್ಕೆ ದನಿಗೂಡಿಸಿರುವ ಬಿಜೆಪಿ ಮುಖಂಡರು, ಕೆಲ ಪ್ರಭಾವಿ ರೈತ,ದಲಿತ ಸಂಘಟನೆಗಳ ನಾಯಕರು ಕಳೆದ ಒಂದು ವರ್ಷದಿಂದ ವಿರೋಧಿಸುತ್ತಲೇ ಬಂದಿದ್ದಾರೆ.ವಿರೋಧದ ಭಾಗವಾಗಿ ಕೋಡಿಹಳ್ಳಿ ಬಣದ ರೈತಸಂಘ, ಬಿಜೆಪಿ, ದಲಿತ ಸಂಘಟನೆಗಳ ಮತ್ತು ಕೆಐಎಡಿಬಿ ವಿರೋಧಿ ಹೋರಾಟ ಸಮಿತಿ ಸಹಯೋಗದಲ್ಲಿ ಮೇ.೫ರಂದು ಶಿಡ್ಲಘಟ್ಟ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಸರಕಾರದ ನಡೆಯ ವಿರುದ್ದ ತೀವ್ರ ಅಸಮಾಧಾನ ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಲ್ಲೇ ಕೈಗಾರಿಕೆ ಸ್ಥಾಪನೆ ಆಗಬೇಕು!!!
ಇದೇ ದಿನ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಜಂಗಮಕೋಟೆ ಹೋಬಳಿ ಕೆಐಎಡಿಬಿ 13ಹಳ್ಳಿಗಳ  ರೈತಪರವಾದ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಲ್ಲದೆ,ಜಂಗಮಕೋಟೆ ಭಾಗದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕೈಗಾರಿಕಾವಲಯ ನಿರ್ಮಾಣ ಸಂಕಲ್ಪದಿAದ ಸರಕಾರ ಹಿಂದೆ ಸರಿಯಬಾರದು, ಕೃಷಿಭೂಮಿ ಯನ್ನು ಹೊರತುಪಡಿಸಿ ಕೈಗಾರಿಕೆ ಸ್ಥಾಪನೆ ಮಾಡುವುದಾದರೆ ಭೂಮಿಕೊಡಲು ರೈತರು ಸಿದ್ಧರಿದ್ದಾರೆ.ಭೂಮಿಕೊಡಲು ಮುಂದೆ ಬಂದವರ ಹೆಸರು ಮಾತ್ರ ಬಹಿರಂಗಪಡಿಸದೆ ಸರಕಾರ ತಮ್ಮ ಕೆಲಸ ಮಾಡಲಿ ಎಂದು ಮನವಿ ಮಾಡಿರುವುದು ಮತ್ತೊಂದು ವಿಶೇಷವಾಗಿದೆ.

ಸರಕಾರ ವಾದವೇನು??
ಜಂಗಮಕೋಟೆ ಹೋಬಳಿಯು ದೇವನಹಳ್ಳಿ ಬಳಿಯ ಅಂತರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಧಾನ ಸಂಪರ್ಕಜಾಲವನ್ನು ಹೊಂದಿದೆ.ಇಲ್ಲಿ ಕೈಗಾರಿಕಾವಲಯ ನಿರ್ಮಾಣ ವಾದರೆ ರೈತರ ಭೂಮಿಗೆ ಒಳ್ಳೆಯ ಬೆಲೆ ಬರಲಿದೆ.ಸರಕಾರಿ ಬೆಲೆಗಿಂತ ಮೂರುಪಟ್ಟು ಹೆಚ್ಚಿನ ಬೆಲೆಗೆ ಭೂಮಿ ಖರೀದಿ ನಡೆಯಲಿದೆ.ಭೂಮಿಯಲ್ಲಿರುವ ಮರ, ಮನೆ, ಕೊಳವೆಬಾವಿ ಇದ್ದಲ್ಲಿ ಅದಕ್ಕೂ ಹಣ ನೀಡಲಾಗುವುದು.ಕೊಡುವ ಹಣ ಒಂದೇ ಕಂತಿನಲ್ಲಿ ಖಾತೆದಾರರ ಹೆಸರಿಗೆ ಹಣಪಾವತಿ ಮಾಡಲಾಗುವುದು.ಈ ಹಣಕ್ಕೆ ಜಿಎಸ್ಟಿ ವಿನಾಯಿತಿ ನೀಡಲಾಗುವುದು. ಹಣ ಬೇಡ ವೆಂದರೆ ಭೂಮಿ ಕೊಡುತ್ತೇವೆ.ರೈತರು ಪರ್ಯಾಯವಾಗಿ ಭೂಮಿಕೊಂಡಲ್ಲಿ ನೋಂದಣಿಯನ್ನು ಉಚಿತವಾಗಿ ಮಾಡಿಕೊಡಲಾಗುವುದು.ಭೂಮಿಕೊಡುವ ರೈತರ ಮನೆಗೆ ಒಂದು ಉದ್ಯೋಗ,ಅದೂ ಕೂಡ ಕೈಗಾರಿಕೆ ಬಯಸುವ ವಿದ್ಯಾರ್ಹತೆಯಿದ್ದಲ್ಲಿ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಲಾಗುವುದು. ಯಾವುದೇ ಕಾರಣಕ್ಕೂ ಬಲವಂತದಿAದ ಭೂಮಿ ಪಡೆಯುವುದಿಲ್ಲ ಎಂದು ಹೇಳುತ್ತಿದೆ.

ಕೈಗಾರಿಕೆ ಪರವಾಗಿರುವ ರೈತರೇ ಹೆಚ್ಚು ಸಚಿವ!!!!
ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆ ಸ್ಥಾಪನೆ ವಿಚಾರವಾಗಿ ಏ.೨೫ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್,ಶಾಸಕ ಬಿ.ಎನ್.ರವಿಕುಮಾರ್, ಕೆಐಎಡಿಬಿ ಆಯುಕ್ತರು,ವಿಶೇಷ ಭೂಸ್ವಾಧೀನ ಅಧಿಕಾರಿ,ಜಿಲ್ಲಾ ಪಂಚಾಯಿತಿ ಸಿಇಒ, ಉಪವಿಭಾಗಾಧಿಕಾರಿ,ತಹಶೀಲ್ದಾರ್ ಸಮ್ಮುಖದಲ್ಲಿ ರೈತರ ಅಭಿಪ್ರಾಯ ಸಂಗ್ರಹಣೆ ಸಭೆ ನಡೆದಿದ್ದು. ೧೦೮೮ ಒಟ್ಟು ಖಾತೆದಾರರ ಪೈಕಿ,೪೩೭ ಮಂದಿ ಭೂಮಿಕೊಡಲ್ಲ ಎಂದು ಕೆಂಪು ಚೀಟಿ, ೩೬೫ ಮಂದಿ ಭೂಮಿಕೊಡುವವರು ಬಿಳಿಚೀಟಿ ನೀಡಿದ್ದರು.ಈಪೈಕಿ ೨೮೦ ನಮಗೆ ಯಾವುದೇ ವಿರೋಧವಿಲ್ಲ ಎಂದು ಗೈರು ಹಾಜರಾಗಿದ್ದರು.ಹೀಗಾಗಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡುತ್ತೇವೆ ಎಂದವರ ಶೇಕಡವಾರು ೬೦ರಷ್ಟು ಮಂದಿ.ಕೊಡಲ್ಲ ಎಂದವರದ್ದು ಶೇ ೪೦ಪರ್ಸೆಂಟ್ ಮಾತ್ರ. ಹೀಗಾಗಿ ಸಚಿವರು ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ಪರವೇ ಹೆಚ್ಚಿನ ರೈತರು ಇದ್ದಾರೆ ಎಂದ ತಿಳಿಸಿದ್ದನ್ನು ಸ್ಮರಿಸಬಹುದು.

ಕೈಗಾರಿಕೆ ಸ್ಥಾಪನೆ ಶತಸ್ಸಿದ್ದ??

ಕೆಐಎಡಿಬಿ ನಿಯಮಾವಳಿಯಂತೆ ಎಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಸರಕಾರ ನಿರ್ಧಾರ ಮಾಡುತ್ತದೆಯೋ ಅಲ್ಲಿ ಶೇ ೧೦ರಷ್ಟು ಮಂದಿ ರೈತರು ಭೂಮಿ ಕೊಡಲು ಮುಂದೆ ಬಂದರೆ ಸಾಕು ಕೈಗಾರಿಕಾ ಪ್ರದೇಶಾಭಿವೃದ್ಧಿಪಡಿಸಲು ಅವಕಾಶ ಇದೆ. ಸುಪ್ರಿಂಕೋರ್ಟ್  ಹೇಳುವಂತೆ ಸರಕಾರ ರೈತರಿಗೆ ಉಚಿತವಾಗಿ ಭೂಮಿಕೊಡುತ್ತದೆ.ಅದೇ ಭೂಮಿಯನ್ನು ಸಾರ್ವಜನಿಕರ ಉಪಯೋಗ ಅಥವಾ ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಸಂದರ್ಭ ಬಂದಲ್ಲಿ ರೈತರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಭೂಮಿ ವಶೊಡಿಸಿಕೊಳ್ಳಬಹುದು ಎಂದು ಹೇಳುತ್ತದೆ. ಇದರಂತೆ ಸರಕಾರ ಜಂಗಮಕೋಟೆ ಭಾಗದಲ್ಲಿಯೇ ಕೈಗಾರಿಕೆ ಸ್ಥಾಪನೆ ಮಾಡಲು ಎಲ್ಲಾ ಅವಕಾಶಗಳಿದ್ದರೂ ರೈತರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಅಭಿಪ್ರಾಯ ಸಂಗ್ರಹಣೆ ಮಾಡಲು ಮುಂದಾಗಿ ಪಾರದರ್ಶಕತೆ ಮೆರೆದಿತ್ತು. ಇದನ್ನು ಜಂಗಮಕೋಟೆ ಹೋಬಳಿ ಕೆಐಎಡಿಬಿ ೧೩ ಹಳ್ಳಿಗಳ ಹೋರಾಟ ಸಮಿತಿ ಸ್ವಾಗತಿಸುತ್ತದೆ. ಈ ಸಂಬಂಧ ಸರಕಾರ ಮತ್ತು  ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು ಸರಕಾರವು ಸಹ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ಹೀಗಾಗಿ ಇಲ್ಲಿ ಕೈಗಾರಿಕೆ ಸ್ಥಾಪನೆ ಆಗುವುದು ಶತಸ್ಸಿದ್ದ ಎನ್ನುವುದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಪ್ರತೀಶ್ ಅವರ ಮಾತಾಗಿದೆ.
*
ಜಿಲ್ಲೆಯ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಶಿಡ್ಲಘಟ್ಟ ತಾಲೂಕಿನಲ್ಲಿ ಒಂದೂ ಕೂಡ ಕೈಗಾರಿಕಾ ಪ್ರದೇಶವಿಲ್ಲ.ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಕಾಳಜಿಯ ಕಾರಣಕ್ಕಾಗಿ ಜಂಗಮಕೋಟೆ ಭಾಗದಲ್ಲಿ ಕೈಗಾರಿಕೆ ಬರುತ್ತಿರುವುದು ನಮ್ಮ ಸುದೈವ. ಜಿಲ್ಲೆಯಲ್ಲಿ ಅತಿಹೆಚ್ಚು ಲೇಔಟ್‌ಗಳನ್ನು ಹೊಂದಿರುವ ಹೋಬಳಿಯಾಗಿ ಗುರುತಿಸಿಕೊಂಡಿರುವ ಜಂಗಮಕೋಟೆಯಲ್ಲಿ ಕೆಐಎಡಿಬಿ ಕೈಗಾರಿಕೆ ಸ್ಥಾಪನೆ ಸಂಬAಧ ಅಧಿಸೂಚನೆ ಹೊರಡಿಸಿರುವ ೨೮೨೩ ಎಕರೆ ಪೈಕಿ ೧೩೦೦ ಎಕರೆ ಸರಕಾರಿ ಭೂಮಿಯಿದೆ. ೧೪೦ ಎಕರೆ ಲೇಔಟ್‌ಗಾಗಿ ಭೂಪರಿವರ್ತನೆ ಆಗಿರುವ ಭೂಮಿಯಿದೆ.ರೈತರ ಬಳಿಯಿರುವುದು ಕೇವಲ ೮೯೩ ಎಕರೆ ಮಾತ್ರ. ವಸ್ತುಸ್ಥಿತಿ ಹೀಗಿದ್ದರೂ  ರಿಯಲ್ ಎಸ್ಟೇಟ್ ಮಾಫಿಯಾದ ಪ್ರೇರಣೆಗೆ ಒಳಗಾಗಿ ಕೆಲವರು ಉದ್ದೇಶಪೂರ್ವಕವಾಗಿ  ಪ್ರತಿಭಟನೆ ಮಾಡುತ್ತಿರುವುದು ವಿಪರ್ಯಾಸ.ಇಲ್ಲಿ ಕೈಗಾರಿಕೆ ಸ್ಥಾಪನೆ ಆದಲ್ಲಿ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತು ನಮ್ಮ ಮನೆಯ ಹೆಣ್ಣು ಗಂಡು ಮಕ್ಕಳಿಗೆ ಅವರಿದ್ದಲ್ಲಿಯೇ ಉದ್ಯೋಗ ದೊರೆಯಲಿದೆ ಎನುವುದು ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ರಾಜ್ಯ ಉಪಾಧ್ಯಕ್ಷರು ಎಸ್.ಎ.ನಾಗೇಶ್‌ಗೌಡ ಅವರ ಖಚಿತ ಅಭಿಪ್ರಾಯವಾಗಿದೆ.
*
ಜಂಗಮಕೋಟೆ ಹೋಬಳಿಯ ೧೩ ಹಳ್ಳಿಗಳ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಸರಕಾರದ ಉದ್ಧೇಶಿತ ಡೀಪ್‌ಟೆಕ್ ಕೈಗಾರಿಕಾ ವಲಯ ಸಾವಿರಾರು ಮಂದಿಗೆ ಉದ್ಯೋಗ ಒದಗಿಸುವ ಜತೆಗೆ ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯವೃದ್ದಿಗೆ ಅವಕಾಶ ಮಾಡಿಕೊಡುವ ಕಾರಣ ಬಹುಸಂಖ್ಯಾತವರ್ಗ ಕೈಗಾರಿಕೆ ಸ್ಥಾಪನೆ ಪರವಾಗಿದ್ದಾರೆ. ಶೇ ೪೦ರಷ್ಟು ಮಂದಿ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಾಸ್ತವವೆಂದರೆ ಕೆಲವರಿಗೆ ರಿಯಲ್ ಎಸ್ಟೇಟ್‌ಗೆ ಭೂಮಿ ಕೊಟ್ಟರೆ ವಿರೋಧವಿಲ್ಲ.ಸಾರ್ವಜನಿಕರ ಅನುಕೂಲಕ್ಕಾಗಿ ಕೈಗಾರಿಕೆ ಸ್ಥಾಪನೆ ಮಾಡಲು ಸರಕಾರ ಮುಂದೆ ಬಂದರೆ ವಿರೋಧ ಮಾಡುತ್ತಿರುವುದು ವಿಚಿತ್ರವಾಗಿ ಕಾಣುತ್ತಿದೆ.ಇಲ್ಲಿ ಕೈಗಾರಿಕೆ ಸ್ಥಾಪನೆ ಆದಲ್ಲಿ ಜಿಲ್ಲೆಯ ಅತ್ಯಂತ ಯಶಸ್ವೀ ಕೈಗಾರಿಕಾವಲಯವೆಂಬ ಕೀರ್ತಿಗೆ ಭಾಜನವಾಗುವುದಲ್ಲಿ ಯಾವ ಸಂಶಯವೂ ಇಲ್ಲ ಎನ್ನುವುದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಮಾತಾಗಿದೆ.

ಏನೇ ಮಳೆ ನಿಂತರೂ ಮಳೆಯ ಹನಿ ನಿಲ್ಲಲಿಲ್ಲ ಎಂಬAತೆ ರೈತ ಸಂಘಟನೆಗಳ ಪರ ವಿರೋಧದ ಪ್ರಬಲ ಅಲೆಗೆ ಸಿಕ್ಕು ಗೊಂದಲಕ್ಕೆ ಕಾರಣವಾಗಿರುವ ಜಂಗಮಕೋಟೆ ಕೈಗಾರಿಕಾ ವಲಯ ನಿರ್ಮಾಣ ಪ್ರಸ್ತಾಪ ಯಶಸ್ವಿಯಾಗಿ ದಡ ಸೇರುವುದೋ ಇಲ್ಲ, ಪಾತಾಳ ಮುಟ್ಟುವುದೋ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ.ಇವೆಲ್ಲಾ ಗೊಂದಲಗಳಿಗೆ ಕಾಲವೇ ಉತ್ತರ ನೀಡಬೇಕು. ಇಲ್ಲವೇ ಸರಕಾರವೇ ಸ್ಪಷ್ಟತೆ ಕೊಡಬೇಕಿದೆ.