ರಾಗಿ ಖರೀದಿ ಕೇಂದ್ರವಿರುವ ವರದಳ್ಳಿ ಗ್ರಾಮಸ್ಥರಿಗೆ ಇನ್ನೂ ಸಿಕ್ಕಿಲ್ಲ ರಸ್ತೆ ಭಾಗ್ಯ
ಇತ್ತೀಚಿಗೆ ಸುರಿದ ಮಳೆಯಿಂದಾಗಿ ಈ ರಸ್ತೆ ಕೆಸರುಗದ್ದೆಯಂತಾಗಿದ್ದು ವಾಹನ ಸಂಚಾರ ದುಸ್ತರ ವಾಗಿದೆ. ಈ ಸಂಬಂಧ ಗ್ರಾಮಸ್ಥರು ತಾಲೂಕ ಆಡಳಿತ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ. ನೂತನ ಜಿಲ್ಲಾಧಿಕಾರಿಗಳಾದರೂ ಇತ್ತ ಗಮನ ಹರಿಸಿ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸ ಬೇಕೆಂಬುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ
-
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಮುಖ್ಯರಸ್ತೆಯಿಂದ ವರದಹಳ್ಳಿಯಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮದ ಪ್ರಧಾನ ಮಣ್ಣಿನ ರಸ್ತೆ ಹಾಳಾಗಿರುವುದೇ ಅಲ್ಲದೆ, ಹಳ್ಳ ದಿಣ್ಣೆಗಳಿಂದ ಕೂಡಿದೆ. ಮಳೆ ಬಂತೆಂದರೆ ಸಾಕು ಕೆಸರಿನಲ್ಲಿಯೇ ರೈತರು ವಿದ್ಯಾರ್ಥಿ ಗಳು ಮತ್ತು ಗ್ರಾಮಸ್ಥರು ಸಂಚರಿಸಬೇಕಾದ ದುಸ್ಥಿತಿ ಎದುರಾಗಿದ್ದು ನಿತ್ಯವೂ ಈ ರಸ್ತೆ ಯಲ್ಲಿ ಸಂಚರಿಸುವ ಸಾರ್ವಜನಿಕರು ಹಿಡಿಶಾಪ ಹಾಕುತ್ತಾ ಸಾಗುವಂತಾಗಿದೆ.
ಹೌದು. ಇತ್ತೀಚಿಗೆ ಸುರಿದ ಮಳೆಯಿಂದಾಗಿ ಈ ರಸ್ತೆ ಕೆಸರುಗದ್ದೆಯಂತಾಗಿದ್ದು ವಾಹನ ಸಂಚಾರ ದುಸ್ತರವಾಗಿದೆ. ಈ ಸಂಬಂಧ ಗ್ರಾಮಸ್ಥರು ತಾಲೂಕ ಆಡಳಿತ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ. ನೂತನ ಜಿಲ್ಲಾಧಿ ಕಾರಿಗಳಾದರೂ ಇತ್ತ ಗಮನಹರಿಸಿ ಗ್ರಾಮಸ್ಥರ ಬೇಡಿಕೆ ಈಡೇರಿಸಬೇಕೆಂಬುದು ಪ್ರಜ್ಞಾ ವಂತ ನಾಗರೀಕರ ಆಗ್ರಹವಾಗಿದೆ.
ಇದನ್ನೂ ಓದಿ: Chinthamani News: ಮಿತಿಮೀರಿದ ಅಕ್ರಮ ಕಸಾಯಿ ಖಾನೆಗಳ ದಂಧೆ: ಪವಿತ್ರ ಕ್ಷೇತ್ರಗಳ ಬಳಿಯೇ ಗೋಮಾಂಸ ಮಾರಾಟ
ಕ್ಷೇತ್ರದ ಮೂಲಭೂತ ಸೌಕರ್ಯಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಹೇಳುವ ಶಾಸಕರು ಇತ್ತ ಗಮನಹರಿಸಿದರೆ ಗ್ರಾಮಸ್ಥರ ಸಂಕಷ್ಟ ನಿವಾರಣೆಯಾಗಲಿದೆ.
ಗ್ರಾಮೀಣ ಪ್ರದೇಶಗಳಿಗೆ ಬೇಕಾದ ಮೂಲಸೌಕರ್ಯಗಳಿಗೆ ಆದ್ಯತೆ ನೀಡಬೇಕಾದ ಜನಪ್ರತಿ ನಿಧಿಗಳ ಬದ್ಧತೆ ಗೆದ್ದನಂತರ ಮರೆಯುವುದು ಸಹಜ. ಚುನಾವಣೆ ಪೂರ್ವದಲ್ಲಿ ಹೇಳಿರುವ ಘೋಷಣೆಗಳು ಕೇವಲ ಘೋಷಣೆಗಳಾಗಿಯೇ ಉಳಿಯದೆ ಕಾರ್ಯರೂಪಕ್ಕೆ ಬಂದಾಗ ಮಾತ್ರ ಹೇಳಿದ ಮಾತಿಗೆ ಬೆಲೆ ಇರಲಿದೆ.
ವರದಹಳ್ಳಿಯಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಹೋಗಿ ಬರಲು ಉತ್ತಮ ರಸ್ತೆ ಇಲ್ಲದಿರು ವುದು ಈ ಭಾಗದ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿದೆ.
ಈ ಬಗ್ಗೆ ಗ್ರಾಮದ ಯುವಕರು ಪತ್ರಿಕೆಯೊಂದಿಗೆ ಮಾತನಾಡಿ, ಬೇಸರ ವ್ಯಕ್ತಪಡಿಸಿ ರಸ್ತೆ ಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ರಾಗಿ ಕೇಂದ್ರಕ್ಕೆ ಬರುವ ವಾಹನಗಳನ್ನು ತಡೆಯುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಇನ್ನಾದರೂ ಸರಿ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಆಗಿರುವ ಸಮಸ್ಯೆ ಪರಿಹರಿಸಿದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗಲಿದೆ ಇಲ್ಲದಿದ್ದಲ್ಲಿ ರೈತರ ಹಿಡಿಶಾಪಕ್ಕೆ ಗುರಿ ಯಾಗುವುದನ್ನು ತಪ್ಪಿಸಿಕೊಳ್ಳುವ ಭಾಗವಾಗಿ ಈ ರಸ್ತೆಯನ್ನು ಸರಿಪಡಿಸುವರೋ ಇಲ್ಲವೋ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.