ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ನಾವು ಭೂಮಿ ಕೊಡುವುದಿಲ್ಲ ಒಂದು ಬಣ: ನಾವು ಕೊಡುತ್ತೇವೆ ಮತ್ತೊಂದು: ಇಬ್ಬಾಗವಾದ ರೈತ ಸಂಘಗಳು

ಕೋಡಿಹಳ್ಳಿ ಚಂದ್ರಶೇಖರ್ ಬಣದ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಂಘಟನೆಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ನೇತೃತ್ವದಲ್ಲಿ ಕಳೆದ 21 ತಿಂಗಳಿಂದ ಯಾವುದೇ ಕಾರಣಕ್ಕೂ ಜಂಗಮಕೋಟೆ ಪ್ರದೇಶದಲ್ಲಿ ಕೈಗಾರಿಕಾ ಸ್ಥಾಪನೆಗೆ ಭೂಮಿ ಕೊಡುವು ದಿಲ್ಲ. ಇದೆಲ್ಲಾ ಫಲವತ್ತಾದ ಕೃಷಿ ಭೂಮಿ, ಚನ್ನರಾಯಪಟ್ಟಣಕ್ಕೆ ಒಂದು ನ್ಯಾಯ, ಶಿಡ್ಲಘಟ್ಟಕ್ಕೆ ಮತ್ತೊಂದು ನ್ಯಾಯವಾ? ಎಂದು ಪಟ್ಟು ಹಿಡಿದಿದೆ.

ಗೋಜಲು ಗೋಜಲಾದ ಶಿಡ್ಲಘಟ್ಟ ಕೈಗಾರಿಕಾ ಪ್ರದೇಶ ಸ್ಥಾಪನೆ

-

Profile
Ashok Nayak Apr 3, 2026 10:08 PM

ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ 2884 ಎಕರೆಯ ಭೂಮಿಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ದಿಗೆ ಮುಂದಾಗಿರುವ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ರೈತಸಂಘಗಳಿಂದ ಸಹಕಾರದ ಬದಲು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವ ಮೂಲಕ ಇಡೀ ಪ್ರಕ್ರಿಯೆ ಗೋಜಲು ಗೋಜಲಾಗಿ ಪರಿಣಮಿಸಿದೆ.

ಕೋಡಿಹಳ್ಳಿ ಚಂದ್ರಶೇಖರ್ ಬಣದ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಂಘಟನೆಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ನೇತೃತ್ವದಲ್ಲಿ ಕಳೆದ 21 ತಿಂಗಳಿಂದ ಯಾವುದೇ ಕಾರಣಕ್ಕೂ ಜಂಗಮಕೋಟೆ ಪ್ರದೇಶದಲ್ಲಿ ಕೈಗಾರಿಕಾ ಸ್ಥಾಪನೆಗೆ ಭೂಮಿ ಕೊಡುವುದಿಲ್ಲ. ಇದೆಲ್ಲಾ ಫಲವತ್ತಾದ ಕೃಷಿ ಭೂಮಿ, ಚನ್ನರಾಯಪಟ್ಟಣಕ್ಕೆ ಒಂದು ನ್ಯಾಯ, ಶಿಡ್ಲಘಟ್ಟಕ್ಕೆ ಮತ್ತೊಂದು ನ್ಯಾಯವಾ? ಎಂದು ಪಟ್ಟು ಹಿಡಿದಿದೆ.

ಇದೇ ಮಾತನ್ನು ಪುನರುಚ್ಚರಿಸುತ್ತಾ ಕಳೆದ 19 ದಿನಗಳಿಂದ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ.ಹಬ್ಬ ಹರಿದಿನಗಳನ್ನು ಅಲ್ಲಿಯೇ ಆಚರಿಸು ತ್ತಾ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: Chinthamani News: ಕೈವಾರದಲ್ಲಿ ಹುಣ್ಣಿಮೆ ಪೂಜೆ ರಥೋತ್ಸವ

ಹೋರಾಟಕ್ಕೆ ಸೊಪ್ಪು ಹಾಕದ ಸರಕಾರವು ಕೆಐಎಡಿಬಿಗೆ ಭೂಮಿ ಪಡೆಯಲು ಮುಂದಾ ಗಿದ್ದು ಭೂಮಿ ಕಳೆದುಕೊಳ್ಳುವ ರೈತರಿಗೆ ನೋಟೀಸ್ ನೀಡಿ ನಿಮ್ಮ ಭೂಮಿಗೆ ಸಂಬಂಧಿ ಸಿದ ಬೆಲೆ ನಿಗದಿ ಮಾಡಬೇಕಿದೆ. ನೋಟೀಸ್‌ನಲ್ಲಿ ನಮೂದು ಮಾಡಿರುವ ದಿನಾಂಕದಂದು ಖುದ್ಧಾಗಿ ಬನ್ನಿ ಎಂದು ತಿಳಿಸಿದೆ.

ಇದರಿಂದ ಕೆರಳಿದ ಈ ಸಂಘಟನೆಯ ರೈತರು ಮುಖಂಡರು ನೋಟೀಸಿಗೆ ಬೆಂಕಿ ಹಚ್ಚಿ ಸುಡುವ ಮೂಲಕ ಸರಕಾರಕ್ಕೆ ಎಚ್ಚರಿಕೆ ರವಾನೆ ಮಾಡಿದ್ದಾರೆ.ಈ ವೇಳೆ ಮಾತನಾಡಿರುವ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಯಾವುದೇ ಕಾರಣಕ್ಕೂ ನಮ್ಮ ಭೂಮಿ ನಿಮಗೆ ಕೊಡುವುದಿಲ್ಲ. ಸರಕಾರ ಹಠಮಾರಿ ಧೋರಣೆ ಬಿಡಬೇಕು. ಬಲವಂತದಿಂದ ಭೂಮಿ ಪಡೆಯಲು ಮುಂದಾದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಜಂಗಮಕೋಟೆ ಹೋಬಳಿ ಕೆಐಎಡಿಬಿ 13 ಹಳ್ಳಿಗಳ ರೈತಪರ ಹೋರಾಟ ಸಮಿತಿಗೆ ಬೆಂಬಲ ಸೂಚಿಸಿ ಕೆ.ಟಿ.ಗಂಗಾಧರ್ ಮೂಲಬಣದ ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ನಾವು ಭೂಮಿ ಕೊಡಲು ಸಿದ್ಧ ಎಂದು ಸರಕಾರ ರೈತರ ಪರ ನಿಲ್ಲಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದೆ.

3cbpm7y

ಈ ಬಣದ ವಾದ ರೈತರಿಂದ ಪಡೆಯುವ ಭೂಮಿಗೆ ಉತ್ತಮ ಬೆಲೆ ನೀಡಬೇಕು. ಭೂಮಿ ನೀಡಿದ ಕುಟುಂಬದ ಸದಸ್ಯರೊಬ್ಬರಿಗೆ ಖಾಯಂ ಉದ್ಯೋಗ ನೀಡಬೇಕು. ರೈತ ಭೂ ಪರಿಹಾರ ಬೇಡ ಎಂದರೆ ಪರ್ಯಾಯ ಭೂಮಿ ನೀಡಬೇಕು. ಈ ವಿಚಾರದಲ್ಲಿ ಸರಕಾರ ರೈತೊಟ್ಟಿಗೆ ನಿಲ್ಲಬೇಕು ಎಂಬ ಒತ್ತಾಯವನ್ನಿಟ್ಟು 13ನೇ ದಿನದ ಹೋರಾಟ ಮಾಡುತ್ತಿದೆ.

ಇದಕ್ಕೆ ಪೂರಕವಾಗಿ 13 ಹಳ್ಳಿಗಳ ರೈತರಿಗೆ ಧರನಿಗದಿಪಡಿಸಲು ಸರಕಾರ ನೋಟೀಸ್ ಜಾರಿ ಮಾಡಿದೆ. ಏ.6ರಂದು ಕೊಲುಮೆ ಹೊಸೂರು, ಸಂಜೀವಪುರ, ಅರಿಕೆರೆ, 8 ರಂದು ನಡಿಪಿ ನಾಯಕನಹಳ್ಳಿ ಭಾಗ 1 ಭಾಗ-2, 9ರಂದು  ದೇವಗಾನಹಳ್ಳಿ, ಗೊಲ್ಲಹಳ್ಳಿ, ಹೊಸಪೇಟೆ, ಚೊಕ್ಕಂಡಹಳ್ಳಿ, 10ರಂದು ಎದ್ದುಲತಿಪ್ಪೇನಹಳ್ಳಿ ತಾದೂರು ಯಣಂಗೂರು ತೊಟ್ಲಗಾನ ಹಳ್ಳಿ ಗ್ರಾಮಗಳ ರೈತರ ಭೂಮಿಗೆ ಧರ ನಿಗದಿಪಡಿಸಲು ನೋಟೀಸ್ ನೀಡಿದೆ.

ಸರಕಾರದ ಈ ಆದೇಶವನ್ನು ಭಕ್ತರಹಳ್ಳಿ ಪ್ರತೀಶ್ ಮತ್ತು ಅವರ ಬಣ ಸ್ವಾಗತಿಸಿ ನೋಟೀಸಿಗೆ ಪೂಜೆ ಸಲ್ಲಿಸಿ ಸಿಹಿ ಹಂಚಿದ್ದಾರೆ.ಸರಕಾರ ಧರಣಿ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವವರೆಗೆ ಮುಂದುವರೆಯಲಿದೆ ಎನ್ನುತ್ತಾರೆ.

ಹೀಗೆ ಜಿಲ್ಲಾಡಳಿತ ಭವನದ ಎದುರು ಎರಡೆರಡು ಸಂಘಟನೆಗಳು ಟೆಂಟುಗಳನ್ನು ಹಾಕಿ ಕೊಂಡು ಏಟಿಗೆ ಎದಿರೇಟು ಎಂಬAತೆ ಹೋರಾಟವನ್ನು ಮುಂದುವರೆಸುತ್ತಾ, ಸರಕಾರಕ್ಕೆ ಬಗಲಮುಳ್ಳಾಗಿ ಕಾಡುತ್ತಿವೆ.ಇವೆಲ್ಲದರ ನಡುವೆಯೂ ಸರಕಾರ ಭೂಮಿ ಪಡೆಯುವ ಕಸರತ್ತರತ್ತು ಮುಂದುವರೆಸಿದ್ದು ಈ ಬೆಳವಣಿಗೆಗಳು ಮುಂದೆ ಯಾವಸ್ವರೂಪ ಪಡೆಯು ತ್ತವೆಯೋ ಕಾದು ನೋಡಬೇಕಿದೆ.

ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2332 ಎಕರೆ ಭೂಮಿಯನ್ನು ಕೆಐಎಡಿಬಿ ತನ್ನ ವಶಕ್ಕೆ ಪಡೆದು ಕೈಗಾರಿಕಾ ಪ್ರದೇಶ ಅಭಿವೃದ್ದಿಗೆ ಮುಂದಾಗಿರುವ ಬೆನ್ನಲ್ಲೇ ಈ ಭಾಗದ ರೈತಸಂಘಟನೆಗಳಲ್ಲಿ ಒಡಕು ಉಂಟಾಗಿ ಒಂದು ಬಣ ಭೂಮಿ ಕೊಡುತ್ತೇವೆ ಎಂದು ಪ್ರತಿಭಟನೆಗೆ ಕುಳಿತು 13 ದಿನವಾಗಿದ್ದು, ನಮ್ಮ ಭೂಮಿ ನಮ್ಮ ಹಕ್ಕು ಎಂದು ಮತ್ತೊಂದು ಬಣ 19 ದಿನಗಳಿಂದ ಅನಿರ್ದಿಷ್ಟ ಹೋರಾಟ ಮಾಡುತ್ತಿದೆ.