Shidlaghatta News: ಯುವಕರು ಕ್ರೀಡೆಯನ್ನು ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ ಸಾಧನೆಯ ದಾರಿಯಾಗಿಯೂ ಪರಿಗಣಿಸಬೇಕು: ಸಿ.ಎಂ. ಬೈರೇಗೌಡ
ಯುವಕರು ಕ್ರೀಡೆಯನ್ನು ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ ಸಾಧನೆಯ ದಾರಿಯಾಗಿ ಯೂ ಪರಿಗಣಿಸಬೇಕು. ಉತ್ತಮ ಅಭ್ಯಾಸ ಮತ್ತು ಶ್ರಮದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶಗಳು ಲಭ್ಯವಾಗುತ್ತವೆ ಎಂದು ಮಾನವ ಹಕ್ಕುಗಳ ಕಮಿಟಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸಿ.ಎಂ. ಬೈರೇಗೌಡ ಹೇಳಿದರು.
ಉತ್ತಮ ಅಭ್ಯಾಸ ಮತ್ತು ಶ್ರಮದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶಗಳು ಲಭ್ಯವಾಗುತ್ತವೆ ಎಂದು ಮಾನವ ಹಕ್ಕುಗಳ ಕಮಿಟಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸಿ.ಎಂ. ಬೈರೇಗೌಡ ಹೇಳಿದರು. -
ಶಿಡ್ಲಘಟ್ಟ: ಯುವಕರು ಕ್ರೀಡೆಯನ್ನು ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ ಸಾಧನೆ ಯ ದಾರಿಯಾಗಿಯೂ ಪರಿಗಣಿಸಬೇಕು. ಉತ್ತಮ ಅಭ್ಯಾಸ ಮತ್ತು ಶ್ರಮದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶಗಳು ಲಭ್ಯವಾಗುತ್ತವೆ ಎಂದು ಮಾನವ ಹಕ್ಕುಗಳ ಕಮಿಟಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸಿ.ಎಂ. ಬೈರೇಗೌಡ ಹೇಳಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಯುವಕರ ಸಂಘ ಹಾಗೂ ಕೆಜಿಕೆ ಬಾಯ್ಸ್ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Shidlaghatta News: ಕನಸಾಗಿಯೇ ಉಳಿದ ಸೀಕಲ್ ರಾಮಚಂದ್ರಗೌಡರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಭರವಸೆ
ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಯುವಕ ರಲ್ಲಿ ಆತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ಕ್ರೀಡಾ ಸಂಸ್ಕೃತಿಗೂ ಉತ್ತೇಜನ ಸಿಗುತ್ತದೆ. ಕ್ರೀಡೆ ಯುವಕರನ್ನು ಒಗ್ಗೂಡಿಸುವ ಶಕ್ತಿಯಾಗಿದ್ದು, ಶಿಸ್ತು ಮತ್ತು ಪರಿಶ್ರಮದಿಂದ ಹೆಚ್ಚಿನ ಸಾಧನೆ ಮಾಡಲು ಸಾಧ್ಯವೆಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಗುರಿ ಹೊಂದಿದ್ದು, ಪ್ರಥಮ ಬಹುಮಾನವಾಗಿ ಕಾರು ಹಾಗೂ ದ್ವಿತೀಯ ಬಹುಮಾನವಾಗಿ ಬೈಕ್ ನೀಡುವ ಯೋಜನೆ ಇದೆ ಎಂದು ಹೇಳಿದರು.
ಕುಂದಲಗುರ್ಕಿ ಗ್ರಾಮದ ಯುವಕರ ಸಂಘ ಹಾಗೂ ಕೆಜಿಕೆ ಬಾಯ್ಸ್ ವತಿಯಿಂದ ಆಯೋ ಜಿಸಿದ್ದ ಈ ಪಂದ್ಯಾವಳಿಯಲ್ಲಿ ಗ್ರಾಮೀಣ ಭಾಗದ 16ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಕ್ರೀಡಾಸ್ಪೂರ್ತಿಯನ್ನು ಮೆರೆದವು. ಕಾರ್ಯಕ್ರಮಕ್ಕೆ ಗ್ರಾಮಸ್ಥರು, ಯುವಕರು ಹಾಗೂ ಕ್ರೀಡಾಭಿಮಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ನಟರಾಜಪ್ಪ, ಸಂತೋಷ್ ಹಾಗೂ ಕ್ರಿಕೆಟ್ ತಂಡ ದ ಮುಖ್ಯ ರೂವಾರಿಗಳಾದ ನವೀನ್, ಗಜೇಂದ್ರ, ಅನಿಲ್, ಆನಂದ್, ನರೇಂದ್ರ, ಶಶಾಂಕ್, ಸುನಿಲ್, ಕೃಷ್ಣಮೂರ್ತಿ, ಮಂಜು, ಚಂದ್ರ, ಮಧು, ಶೇಖರ್, ಮನೋಹರ್, ಸುಭಾಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.