ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖರೀದಿಗೆ ಚೀಟಿ ಕೊಡುವಂತಿಲ್ಲ: ಜಿಲ್ಲಾಧಿಕಾರಿ ಜಿ.ಪ್ರಭು

ನಾಯಿ ಕಡಿತ, ಹಾವು ಕಡಿತ ಸೇರಿದಂತೆ ಆರೋಗ್ಯ ಸೇವೆಗಳಿಗೆ ಅಗತ್ಯವಾಗಿ ಬೇಕಿರುವ ಎಲ್ಲಾ ಔಷಧಿಗಳ ಪೂರೈಕೆಯು ಸಾಕಷ್ಟು ಜಿಲ್ಲೆಯಲ್ಲಿ ಲಭ್ಯವಿದೆ. ಸರ್ಕಾರದಿಂದ ಉಚಿತವಾಗಿ ಸಿಗಬೇಕಿ ರುವ ಆರೋಗ್ಯ ತಪಾಸಣೆ, ಚಿಕಿತ್ಸೆ, ಔಷಧಿ ವಿತರಣೆಯ ಎಲ್ಲ ಆರೋಗ್ಯ ಸೇವೆಗಳು ಉಚಿತವಾಗಿ ಜನರಿಗೆ ದೊರಕಬೇಕು. ಗೌರಿಬಿದನೂರು ತಾಯಿ ಮಕ್ಕಳ ಆಸ್ಪತ್ರೆಗೆ ತಿಂಗಳಿಗೆ ಸರಾಸರಿ 15000 ಹೊರ ರೋಗಿಗಳು ಮತ್ತು 500 ಒಳರೋಗಿಗಳು ದಾಖಲಾಗಿ ಆರೋಗ್ಯ ಸೇವೆ ಪಡೆಯುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖರೀದಿಗೆ ಚೀಟಿ ಕೊಡುವಂತಿಲ್ಲ

ಸರ್ಕಾರಿ ಆಸ್ಪತ್ರೆಗಳಿಗೆ ಆರೋಗ್ಯ ಸೇವೆ ಪಡೆಯಲು ಬರುವ ಒಳರೋಗಿಗಳು ಅಥವಾ ಹೊರರೋಗಿಗಳಿಗೆ ಔಷಧಿಗಳನ್ನು ಹೊರಗಡೆ ಖರೀದಿಸಿಕೊಂಡು ಬರಲುಸ ಸರ್ಕಾರಿ ವೈದ್ಯಾಧಿಕಾರಿಗಳು ಚೀಟಿ ಕೊಡಬಾರದು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ಜಿಲ್ಲಾಧಿಕಾರಿ ಜಿ.ಪ್ರಭು ಸೂಚಿಸಿದರು. -

Profile
Ashok Nayak Apr 22, 2026 9:37 PM

ಚಿಕ್ಕಬಳ್ಳಾಪುರ : ಸರ್ಕಾರಿ ಆಸ್ಪತ್ರೆಗಳಿಗೆ ಆರೋಗ್ಯ ಸೇೆವೆ ಪಡೆಯಲು ಬರುವ ಒಳರೋಗಿಗಳು ಅಥವಾ ಹೊರರೋಗಿಗಳಿಗೆ ಔಷಧಿಗಳನ್ನು ಹೊರಗಡೆ ಖರೀದಿಸಿಕೊಂಡು ಬರಲುಸ ಸರ್ಕಾರಿ ವೈದ್ಯಾಧಿಕಾರಿಗಳು ಚೀಟಿ ಕೊಡಬಾರದು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ಜಿಲ್ಲಾಧಿಕಾರಿ ಜಿ.ಪ್ರಭು ಸೂಚಿಸಿದರು.

ಗೌರಿಬಿದನೂರು ತಾಲ್ಲೂಕಿನ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಆರೋಗ್ಯ ಸೇವೆಗಳನ್ನು ಪರಿಶೀಲಿಸಿ ಮಾತನಾಡಿದರು.

ನಾಯಿ ಕಡಿತ, ಹಾವು ಕಡಿತ ಸೇರಿದಂತೆ ಆರೋಗ್ಯ ಸೇವೆಗಳಿಗೆ ಅಗತ್ಯವಾಗಿ ಬೇಕಿರುವ ಎಲ್ಲಾ ಔಷಧಿಗಳ ಪೂರೈಕೆಯು ಸಾಕಷ್ಟು ಜಿಲ್ಲೆಯಲ್ಲಿ ಲಭ್ಯವಿದೆ. ಸರ್ಕಾರದಿಂದ ಉಚಿತವಾಗಿ ಸಿಗಬೇಕಿ ರುವ ಆರೋಗ್ಯ ತಪಾಸಣೆ, ಚಿಕಿತ್ಸೆ, ಔಷಧಿ ವಿತರಣೆಯ ಎಲ್ಲ ಆರೋಗ್ಯ ಸೇವೆಗಳು ಉಚಿತವಾಗಿ ಜನರಿಗೆ ದೊರಕಬೇಕು. ಗೌರಿಬಿದನೂರು ತಾಯಿ ಮಕ್ಕಳ ಆಸ್ಪತ್ರೆಗೆ ತಿಂಗಳಿಗೆ ಸರಾಸರಿ 15000 ಹೊರ ರೋಗಿಗಳು ಮತ್ತು 500 ಒಳರೋಗಿಗಳು ದಾಖಲಾಗಿ ಆರೋಗ್ಯ ಸೇವೆ ಪಡೆಯುತ್ತಿದ್ದಾರೆ. ಅವರೆಲ್ಲ ರಿಗೂ ಕೂಡ ಸರ್ಕಾರದಿಂದ ಉಚಿತವಾಗಿ ಸಿಗಬೇಕಾಗಿರುವ ಎಲ್ಲ ಆರೋಗ್ಯ ಸೇವೆಗಳು ನ್ಯಾಯೋ ಚಿತವಾಗಿ ಹಾಗೂ ಕಾಲೋಚಿತವಾಗಿ ನೀಡಲು ನಿಗಾ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Chikkaballapur News: ಗುರುತಿನ ಚೀಟಿಯಿರುವ ಶಾಲಾ ಮಕ್ಕಳಿಗೆ 10 ದಿನಗಳ ವಿಶೇಷ ರಿಯಾಯಿತಿ ಘೋಷಣೆ

ಆರೋಗ್ಯ ಅಭಿಯಾನ

ಪ್ರತಿ ಮನೆ ಮನೆಗೆ ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ 30 ವರ್ಷ ಮೇಲ್ಪಟ್ಟವರಿಗೆ 10 ಕಾಯಿಲೆ ಗಳಿಗೆ ತಪಾಸಣೆ ಮತ್ತು ಪರೀಕ್ಷೆಯನ್ನು ಮಾಡಲು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಸೇವಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯಲ್ಲಿರುವ ಭ್ರೂಣ ಪರೀಕ್ಷಾ ಕೇಂದ್ರಗಳು (ಸ್ಕ್ಯಾನಿಂಗ್ ಸೆಂಟರ್ಸ್) ಕಾನೂನು ರೀತ್ಯ ನಡೆಯಬೇಕು. ಭ್ರೂಣ ಲಿಂಗ ಪತ್ತೆ ಮಾಡುವಂತಹ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಣ್ಗಾವಲು ಇಡಲಾಗಿದೆ. ಖಾಸಗಿ ಅಥವಾ ಸರ್ಕಾರಿ ಭ್ರೂಣ ಪರೀಕ್ಷಾ ಕೇಂದ್ರಗಳು ಆರೋಗ್ಯ ಇಲಾಖೆಯು ನೀಡಿರುವ ಮಾರ್ಗಸೂಚಿ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಪರವಾನಗಿ ಇಲ್ಲದೆ ಯಾವುದೇ ಕೇಂದ್ರಗಳು ನಡೆಯಬಾರದು ಎಂದು ಸೂಚನೆಗಳು ನೀಡಿದರು.

7 ಕೋಟಿಯಲ್ಲಿ ಒಖI

ಜಿಲ್ಲಾ ಆಸ್ಪತ್ರೆಗೆ ಬೇಕಿರುವ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ಖರೀದಿಸಲು ಈಗಾಗಲೇ ಆರ್ಡರ್ ನೀಡಲಾಗಿದೆ. ಕಿಡ್ನಿ, ಮೆದುಳು, ಹೃದಯ, ಬೆನ್ನು ಮೂಳೆಗೆ ಸಂಬAಧಿಸಿದ ಕಾಯಿಲೆಗಳಿಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆಗಳನ್ನು ಜಿಲ್ಲಾ ಕೇಂದ್ರದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಉಚಿತವಾಗಿ ನೀಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ಸೇರಿದಂತೆ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.