ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Temple: ಬಯಲಾಗುತ್ತಿದೆ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ; ಸಿಡಿದೆದ್ದ ಭಕ್ತರು

ರಾಜ್ಯದ ಪವಿತ್ರ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವಿನಾಕಾರಣ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಧರ್ಮಸ್ಥಳದ ಭಕ್ತರು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ವಿರೋಧಪಕ್ಷದ ನಾಯಕರು ಸೇರಿದಂತೆ ಆಡಳಿತ ಪಕ್ಷದ ಲೀಡರ್‌ಗಳು ಕೂಡ ಶ್ರೀಕ್ಷೇತ್ರದ ಪಾವಿತ್ರ್ಯತೆಗೆ ಕಳಂಕ ತರುವ ಕೆಲಸವಾಗುತ್ತಿದೆ ಎಂದು ಘರ್ಜಿಸಿದ್ದಾರೆ. ಸಾಮಾಜಿಕ ಮಾಧ್ಯಮ ಸನ್ನೆಗೆ ಬಲಿಯಾಗಿದ್ದ ಜನರು ಇದೀಗ ಸತ್ಯ, ನಿಷ್ಠೆ, ಧರ್ಮಕ್ಕೆ ಹೆಸರು ವಾಸಿಯಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಬೆನ್ನಿಗೆ ನಿಂತಿದ್ದಾರೆ, ಧರ್ಮರಕ್ಷಣೆ ನಮ್ಮೆಲ್ಲರ ಹೊಣೆ, ಕ್ಷೇತ್ರದೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರುತ್ತಿದ್ದಾರೆ.

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ತನಿಖೆಗೆ ಆಗ್ರಹ

ಶ್ರೀ ಕ್ಷೇತ್ರ ಧರ್ಮಸ್ಥಳ

Profile Sushmitha Jain Aug 15, 2025 6:50 PM

ಬೆಳ್ತಂಗಡಿ: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಧರ್ಮಸ್ಥಳ (Dharmasthala) ಮಂಜುನಾಥೇಶ್ವರ ದೇವಾಲಯದಲ್ಲಿ (Manjunatheshwara Temple) ಕೆಲಸ ಮಾಡಿದ್ದೆ ಎಂದು ಹೇಳಿಕೊಂಡ ಸ್ವಚ್ಛತಾ ಕಾರ್ಮಿಕನೊಬ್ಬ (Sanitation Worker) ಜುಲೈ 3ರಂದು ದಕ್ಷಿಣ ಕನ್ನಡದ ಎಸ್‌ಪಿ ಕಚೇರಿಗೆ ಆರು ಪುಟಗಳ ದೂರು ಸಲ್ಲಿಸಿದ. ಅಂದಿನಿಂದ ಇಂದಿನವರೆಗೆ ದೇವಸ್ಥಾನದ ಮೇಲೆ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. 1995ರಿಂದ 2014ರವರೆಗೆ ಅತ್ಯಾಚಾರದ ಬಳಿಕ ಕೊಲೆ ಮಾಡಲಾದ ಮಹಿಳೆಯರು ಮತ್ತು ಯುವತಿಯರ ನೂರಕ್ಕೂ ಹೆಚ್ಚು ಶವಗಳನ್ನು ಹೂತು ಹಾಕಲು ನನಗೆ ಒತ್ತಾಯ ಮಾಡಿದ್ದರು. ಅವೆಲ್ಲವನ್ನೂ ನಾನು ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿ ಆರೋಪ ಮಾಡಿದ್ದ.

ಈ ಮಧ್ಯೆ ರಾಜ್ಯದ ಪವಿತ್ರ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವಿನಾಕಾರಣ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಧರ್ಮಸ್ಥಳದ ಭಕ್ತರು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ವಿರೋಧಪಕ್ಷದ ನಾಯಕರು ಸೇರಿದಂತೆ ಆಡಳಿತ ಪಕ್ಷದ ಲೀಡರ್‌ಗಳು ಕೂಡ ಶ್ರೀಕ್ಷೇತ್ರದ ಪಾವಿತ್ರ್ಯತೆಗೆ ಕಳಂಕ ತರುವ ಕೆಲಸವಾಗುತ್ತಿದೆ ಎಂದು ಘರ್ಜಿಸಿದ್ದಾರೆ. ಸಾಮಾಜಿಕ ಮಾಧ್ಯಮ ಸನ್ನೆಗೆ ಬಲಿಯಾಗಿದ್ದ ಜನರು ಇದೀಗ ಸತ್ಯ, ನಿಷ್ಠೆ, ಧರ್ಮಕ್ಕೆ ಹೆಸರು ವಾಸಿಯಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಬೆನ್ನಿಗೆ ನಿಂತಿದ್ದಾರೆ, ಧರ್ಮರಕ್ಷಣೆ ನಮ್ಮೆಲ್ಲರ ಹೊಣೆ, ಕ್ಷೇತ್ರದೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರುತ್ತಿದ್ದಾರೆ.

ಅಪಪ್ರಚಾರದ ಅಸ್ತ್ರವಾದ ಸೋಶಿಯಲ್ ಮೀಡಿಯಾ

ಹೌದು, ಅನಾಮಿಕ ವ್ಯಕ್ತಿ ಕೊಟ್ಟ ದೂರಿನ ಆಧಾರದ ಮೇಲೆ ಸರ್ಕಾರ ಎಸ್ಐಟಿ ರಚಿಸಿದ್ದು, ತನಿಖೆ ನಡೆಯುತ್ತಿದೆ. ಆದರೆ ತನಿಖಾ ವರದಿ ಬರುವ ಮುನ್ನವೇ ಧರ್ಮಸ್ಥಳದ ಬಗ್ಗೆ ಜಾಲತಾಣದಲ್ಲಿ ಕೆಲವರು ಅಪಪ್ರಚಾರ ಮಾಡಲು ಶುರು ಮಾಡಿದ್ದರು. ಸೋಶಿಯಲ್ ಮೀಡಿಯಾವನ್ನು ಅಸ್ತ್ರವಾಗಿ ಬಳಸಿಕೊಂಡ ಕೆಲ ಯುಟ್ಯೂಬರ್‌ಗಳು, ಇನ್‌ಫ್ಲ್ಯುನ್ಸರ್‌ ಮತ್ತು ಕೆಲವು ಮಾಧ್ಯಮಗಳು ಈ ಆರೋಪಗಳನ್ನು ತಮ್ಮ ಊಹೆಗೆ ತಕ್ಕಂತೆ ವಿಶ್ಲೇಷಿಸಿ ಜನರ ದಿಕ್ಕು ತಪ್ಪಿಸುವಂತಹ ಕೆಲಸ ಮಾಡಿದ್ದರು. ಗಾಳಿಗಿಂತ ವೇಗವಾಗಿ ಧರ್ಮಸ್ಥಳದ ಮೇಲೆ ಪುಂಖಾನುಪುಂಖವಾಗಿ ಮಾಡಿದ ಆರೋಪಗಳು ಎಲ್ಲೆಡೆ ಹರಡಿತು. ಪಾದಯಾತ್ರೆ - ಹೋರಾಟ ಎಂಬ ಹೆಸರಿನಲ್ಲಿ ನಿರಂತರವಾಗಿ ಕ್ಷೇತ್ರವನ್ನು ಟಾರ್ಗೆಟ್ ಮಾಡುವ ಕೆಲಸವಾಯಿತು. ಕಾಣದ ಕೈಗಳು ಸಾಮಾಜಿಕ ಜಾಲತಾಣಗಲ್ಲಿ ಫೇಕ್ ಕ್ಯಾಂಪೇನ್ ಮಾಡಲು ಶುರು ಮಾಡಿದ್ದರು. ಇದಕ್ಕೆ ಕಂತೆ ಕಂತೆ ಸುಳ್ಳುಗಳನ್ನೊಳಗೊಂಡ ಸ್ಕ್ರಿಪ್ಟ್ ರೆಡಿ ಮಾಡಿ ಎಐ ವಿಡಿಯೋ ಮಾಡುವ ಮೂಲಕ ಟೆಕ್ನಾಲಾಜಿಯ ದುರುಪಯೋಗವೂ ಆಯಿತು.

ಸುಳ್ಳುಗಳ ಗದ್ದಲದಲ್ಲಿ ಮರೆಯಾದ ಸತ್ಯಾಂಶ

ಸೌಜನ್ಯ ಪ್ರಕರಣದಲ್ಲಿ ಕ್ಷೇತ್ರದ ವಿರುದ್ಧ ಕೇಳಿ ಬರುತ್ತಿರುವ ಅಪವಾದ ಸುಳ್ಳು ಎಂದು ನ್ಯಾಯಾಲದಲ್ಲಿ ಸಾಬೀತಾಗಿದೆ. ಆರೋಪ ಕೇಳಿ ಬಂದವರೆಲ್ಲರೂ ನಾರ್ಕೋ ಪರೀಕ್ಷೆ ಸೇರಿದಂತೆ ಇತರೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹರಡಲಾದ ಸುಳ್ಳುಗಳ ಗದ್ದಲದಲ್ಲಿ ಎಷ್ಟೋ ಸತ್ಯಾಂಶಗಳು ಮರೆಯಾಗಿವೆ. 8 ಶತಮಾನಗಳ ಇತಿಹಾಸದ ಜತೆ ದಶಕಗಳ ದಾನಧರ್ಮ ಮತ್ತು ಧರ್ಮಗಳ ನಡುವಿನ ಸೌಹಾರ್ದತೆಯ ದೀಪಸ್ತಂಭವಾಗಿ ಧರ್ಮಸ್ಥಳ ಕ್ಷೇತ್ರ ಮಾಡುತ್ತಿರುವ ಎಷ್ಟೋ ಸತ್ಕಾರ್ಯಗಳು ಕಾಣದಾಗಿದೆ. ಆರೋಪಗಳು ಸಾಬೀತಾಗದಿದ್ದರೂ, ಕೆಲವು ಗುಂಪುಗಳು ಮತ್ತು ಮಾಧ್ಯಮಗಳ ಆಯ್ದ ಕೆಲ ವ್ಯಕ್ತಿಗಳು ಧರ್ಮಸ್ಥಳದ ವಿರುದ್ಧ ಜನರಲ್ಲಿ ಅಪನಂಬಿಕೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ

ಧರ್ಮಸ್ಥಳ ವಿಚಾರದಲ್ಲಿ ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಯಿತು. ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ಹಿನ್ನೆಲೆಯನ್ನು ಕೆದಕಿ, ಸುಳ್ಳು ಮಾಹಿತಿಗಳನ್ನು ಹರಡುತ್ತಿರುವವರ ಬೆನ್ನತ್ತಿದ್ದ ಕನ್ನಡ ಮಾಧ್ಯಮದ ಪ್ರತಿಷ್ಠಿತ ಸುದ್ದಿ ವಾಹಿನಿಯೊಂದು ಕ್ಷೇತ್ರದ ವಿರುದ್ಧ ಉದ್ದೇಶ ಪೂರ್ವಕವಾಗಿ ಹುನ್ನಾರ ನಡೆಸುತ್ತಿರುವವರ ಬಂಡವಾಳವನ್ನು ಬಯಲು ಮಾಡಿತು. ನಿರಾಧಾರವಾಗಿ ಕ್ಷೇತ್ರದ ವಿರುದ್ಧ ​ ಆರೋಪ ಮಾಡುತ್ತಿರುವವರು ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ ಸಾಕ್ಷ್ಯಾಧಾರಗಳನ್ನು ಜನರ ಮುಂದಿಟ್ಟು ಸತ್ಯಾಂಶವನ್ನು ತಿಳಿಸುವ ಪ್ರಯತ್ನ ಮಾಡಿತು.

ಇತ್ತ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಮುಂದೆ ಬಂದ ಮುಸುಕುಧಾರಿಯೂ ಯಾವುದೋ ದುರುದ್ದೇಶದಿಂದ ಬಂದವನ್ನೇ ಎಂಬ ಮಾತುಗಳು ಕೇಳಿಬಂದವು. 17 ಗುಂಡಿಗಳು ಅಗೆದರೂ ಯಾವುದೋ ಕಳೇಬರ ಸಿಗದೇ ಹಿನ್ನಲೆ ಜನರಿಗೂ ಕ್ಷೇತ್ರದ ಹಿಂದೆ ಯಾವುದೋ ಪಿತೂರಿ ನಡೆಯುತ್ತಿದೆ ಎಂಬುದು ಅರ್ಥವಾಗ ತೊಡಗಿತು.

ಅಲ್ಲದೇ ಅಪಪ್ರಚಾರ ಮಾಡುತ್ತಿರುವವರ ಹಿನ್ನೆಲೆ, ಸುಳ್ಳು ಆರೋಪ ಮಾಡಲು ಅವರಿಗೆ ಪ್ರಚೋದನೆ ನೀಡುತ್ತಿರುವವರು, ಈ ತಂಡಕ್ಕೆ ಬರುತ್ತಿರುವ ಹಣಕಾಸಿನ ನೆರವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ಈ ಸುದ್ದಿಯನ್ನೂ ಓದಿ: Dharmasthala Case: ಧರ್ಮಸ್ಥಳ ವಿರುದ್ಧ ಅಪಪ್ರಚಾರ: ರಾಜ್ಯಾದ್ಯಂತ ಸಿಡಿದೆದ್ದ ಭಕ್ತರು, ಪ್ರತಿಭಟನೆ, ಬಿಜೆಪಿಯಿಂದ ಯಾತ್ರೆಗೆ ಚಿಂತನೆ

ಜತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವಿನಾಕಾರಣ ಅಪಪ್ರಚಾರ ನಡೆಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಕಿಡಿಗೇಡಿಗಳು ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿ ಅಪಪ್ರಚಾರ ಮಾಡುತ್ತಿದ್ದು ಧಾರ್ಮಿಕ ನಂಬಿಕೆ, ಸಾಮಾಜಿಕ ಸಾಮರಸ್ಯ ಹಾಗು ಶಾಂತಿ ಕೆಡಿಸುತ್ತಿದ್ದಾರೆ. ಇಂಥವರ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒಕ್ಕೊರಲ ಧ್ವನಿಯ ಕೂಗು ಕೇಳಿ ಬರುತ್ತಿದೆ.

ಜನರ ಒಗ್ಗಟ್ಟಿನ ಧ್ವನಿ

SIT ತನಿಖೆ ಸಂಶಯಾಸ್ಪದವಾಗಿ ಕಂಡುಬಂದಾಗ ಚಿಕ್ಕಮಗಳೂರು, ಕೊಪ್ಪಳ, ಯಾದಗಿರಿ, ಮೈಸೂರು, ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಭಕ್ತರು, ಸಮುದಾಯ ನಾಯಕರು ಮತ್ತು ಅಲ್ಪಸಂಖ್ಯಾತ ಸಮುದಾಯದವರು ಧರ್ಮಸ್ಥಳದ ಬೆಂಬಲಕ್ಕೆ ರ‍್ಯಾಲಿಗಳನ್ನು ನಡೆಸಿದ್ದಾರೆ. ಈ ರ‍್ಯಾಲಿಗಳು ಕೇವಲ ಫಲಕಗಳನ್ನಲ್ಲ, ಶತ ಶತಮಾನಗಳಿಂದ ಹಿಂದೂ ಧರ್ಮವನ್ನು ಪೋಷಿಸಿ, ಬೆಳೆಸಿಕೊಂಡು ಬರುತ್ತಿರುವ, ಅನ್ನದಾನ, ವಿದ್ಯಾ ದಾನ, ಅಭಯ ದಾನ, ಔಷಧ ದಾನ ಹೀಗೆ ಚತುರ್ದಾನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಕ್ಷೇತ್ರದ ಧಕ್ಕೆಯನ್ನು ಇಂತಹ ಪೊಳ್ಳು ಆರೋಪಗಳಿಂದ ಹಾಳು ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಿವೆ.

ಸದ್ಯ ಈ ಬೆಳವಣಿಗೆಯಿಂದ ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿಗಳು, ರಾಜಕೀಯವಾಗಿ ದುರುದ್ದೇಶವನ್ನು ಇಟ್ಟಿಕೊಂಡಿರುವ ಕೆಲ ಗುಂಪುಗಳು ಮತ್ತು ಆಯ್ದ ಕೆಲ ವರದಿಗಾರಿಕೆಯಿಂದ ಹೇಗೆಲ್ಲ ಸತ್ಯವನ್ನು ಮರೆಮಾಚುವ ಪ್ರಯತ್ನಗಳು ನಡೆಯುತ್ತವೆ ಎಂಬುದನ್ನು ತೋರಿಸಿ ಕೊಟ್ಟಿದೆ. ಶತಮಾನಗಳ ಇತಿಹಾಸ ಹೊಂದಿರುವ ಈ ಪವಿತ್ರ ಸಂಸ್ಥೆಗೆ, ಇಂತಹ ಆರೋಪಗಳಿಂದ ತನ್ನ ಹೆಸರಿಗೆ ಅಂಟಿರುವ ಕಳಂಕವನ್ನು ತೊಡೆದು ಹಾಕುವುದು ಮಾತ್ರವಲ್ಲ ಸುಳ್ಳುಗಳಿಂದ ಎಂದಿದಗೂ ಸತ್ಯವನ್ನು ಮೀರಿಸಲಾಗದು ಎಂಬ ತತ್ವವನ್ನು ಜನರಿಗೆ ತಿಳಿಸುವ ಕಾರ್ಯವಾಗಬೇಕಿದೆ.