ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup 2026: ಅಭಿಷೇಕ್‌ ಶರ್ಮಾ ವೈಫಲ್ಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಹರ್ಭಜನ್‌ ಸಿಂಗ್‌!

Harbhajan Singh backs Abhishek Sharma: ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರನ್ನು ಸ್ಪಿನ್‌ ದಂತಕತೆ ಹರ್ಭಜನ್‌ ಸಿಂಗ್‌ ಬೆಂಬಲಿಸಿದ್ದಾರೆ. ತಮ್ಮ ವೈಫಲ್ಯದಿಂದ ಅವರು ಎಂದಿಗೂ ಸ್ಥೈರ್ಯ ಕಳೆದುಕೊಳ್ಳುವುದಿಲ್ಲ ಹಾಗೂ ಅವರು ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಲಿದ್ದಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಅಭಿಷೇಕ್‌ ಶರ್ಮಾ ಬಗ್ಗೆ ಹರ್ಭಜನ್‌ ಸಿಂಗ್‌ ದೊಡ್ಡ ಹೇಳಿಕೆ!

ಅಭಿಷೇಕ್‌ ಶರ್ಮಾಗೆ ಹರ್ಭಜನ್‌ ಸಿಂಗ್‌ ವಿಶ್ವಾಸ. -

Profile
Ramesh Kote Feb 16, 2026 7:06 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಹೊರತಾಗಿಯೂ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾಗೆ (Abhishek Sharma) ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ (Harbhajan Singh) ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ವೈಫಲ್ಯದಿಂದ ಮಾನಸಿಕ ಸ್ಥೈರ್ಯಕಳೆದುಕೊಳ್ಳುವುದಿಲ್ಲ ಹಾಗೂ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಲಿದ್ದಾರೆಂದು ಮಾಜಿ ಆಫ್‌ ಸ್ಪಿನ್ನರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಯುವ ಬ್ಯಾಟ್ಸ್‌ಮನ್‌ ತಮ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದು ಭಜ್ಜಿ ಸಲಹೆ ನೀಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ನ್ಯೂಜಿಲೆಂಡ್‌ ವಿರುದ್ದದ ಟಿ20ಐ ಸರಣಿಯಲ್ಲಿ ಅಭಿಷೇಕ್‌ ಶರ್ಮಾ ಮಿಂಚಿದ್ದರು. ಅದೇ ಲಯವನ್ನು ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿಯೂ ಮುಂದುವರಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಆರಂಭಿಕ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಶೂನ್ಯಕ್ಕೆ ಔಟ್‌ ಆಗಿದ್ದರು. ನಂತರ ಅನಾರೋಗ್ಯದ ಕಾರಣ ನಮೀಬಿಯಾ ವಿರುದ್ಧ ಆಡಿರಲಿಲ್ಲ. ನಂತರ ಭಾನುವಾರ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಅವರು ಆಡಿದ್ದ ನಾಲ್ಕು ಎಸೆತಗಳಲ್ಲಿ ಡಕ್‌ಔಟ್‌ ಆಗಿದ್ದರು. ತಮ್ಮ ಅಧಿಕೃತ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಹರ್ಭಜನ್‌ ಸಿಂಗ್‌, ಅಭಿಷೇಕ್‌ ಶರ್ಮಾ ಅನಾರೋಗ್ಯದಿಂದ ಗುಣಮುಖರಾಗಿ ಬಂದಿದ್ದಾರೆ ಹಾಗೂ ಅವರು ಅಗತ್ಯ ಸನ್ನಿವೇಶಗಳಲ್ಲಿ ಕಮ್‌ಬ್ಯಾಕ್‌ ಮಾಡುತ್ತಾರೆಂದು ಹೇಳಿದ್ದಾರೆ.

IND vs PAK: ಇಶಾನ್‌ ಕಿಶನ್‌ ಅಬ್ಬರ, ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತಕ್ಕೆ ಸೂಪರ್‌-8 ಟಿಕೆಟ್‌!

ಅಭಿಷೇಕ್‌ ಶರ್ಮಾಗೆ ಹರ್ಭಜನ್‌ ಸಿಂಗ್‌ ಬೆಂಬಲ

"ಅಭಿಷೇಕ್‌ ಶರ್ಮಾ ಅತ್ಯಂತ ಶಕ್ತಿಯುತ ಆಟಗಾರ ಹಾಗೂ ಅವರು ಎಂದಿಗೂ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಅವರು ಕಳೆದ ಎರಡು ತಿಂಗಳುಗಳ ಹಿಂದೆ ಅವರು ಎಲ್ಲರ ಗಮನವನ್ನು ಸೆಳೆದಿದ್ದರು. ಇದೀಗ ಅವರು ಅದೇ ರೀತಿ ಬ್ಯಾಟ್‌ ಮಾಡಲಿದ್ದಾರೆ. ಅವರು ತಮ್ಮ ಮೇಲೆ ನಂಬಿಕೆಯನ್ನು ಇಡಬೇಕು. ಎರಡು ಪಂದ್ಯಗಳಿಂದ ಅವರು ಏನಾದರೂ ಕಲಿಯಬೇಕು ಮತ್ತು ಕಮ್‌ಬ್ಯಾಕ್‌ ಮಾಡಬೇಕು," ಎಂದು ಹರ್ಭಜನ್‌ ಸಿಂಗ್‌ ತಿಳಿಸಿದ್ದಾರೆ.

"ನಾವು ನಿಮ್ಮ ಜೊತೆ ಇದ್ದೇವೆ, ತಂಡ ನಿಮ್ಮ ಜೊತೆ ಇದೆ, ಟೀಮ್‌ ಮ್ಯಾನೇಜ್‌ಮೆಂಟ್‌ ನಿಮ್ಮ ಜೊತೆ ಇದೆ ಹಾಗೂ ಇಡೀ ದೇಶವೇ ನಿಮ್ಮ ಜೊತೆ ಇದೆ. ಅಭಿಷೇಕ್‌ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಟೀಮ್‌ ಇಂಡಿಯಾಗೆ ಅಗತ್ಯ ಸನ್ನಿವೇಶಗಳಲ್ಲಿ ಅವರು ಖಚಿತವಾಗಿಯೂ ಉತ್ತಮ ಪ್ರದರ್ಶನವನ್ನು ತೋರುತ್ತಾರೆ, ಎಂದು ಸ್ಪಿನ್‌ ದಿಗ್ಗಜ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

IND vs PAK: 18 ಓವರ್‌ ಬೌಲ್‌ ಮಾಡಿದ ಸ್ಪಿನ್ನರ್ಸ್‌, ಅಪರೂಪದ ದಾಖಲೆ ಬರೆದ ಪಾಕಿಸ್ತಾನ!

ಪಾಕಿಸ್ತಾನ ವಿರುದ್ಧ ಭಾರತ 61 ರನ್‌ಗಳ ಜಯ

ಭಾನುವಾರ ಕೊಲಂಬೊದ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಪಂಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ಇಶಾನ್‌ ಕಿಶನ್‌ ಸ್ಪೋಟಕ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 175 ರನ್‌ಗಳನ್ನು ಕಲೆ ಹಾಕಿತ್ತು. ಇಶಾನ್‌ 40 ಎಸೆತಗಳಲ್ಲಿ 77 ರನ್‌ಗಳನ್ನು ಬಾರಿಸಿದ್ದರು. ಬಳಿಕ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಜಸ್‌ಪ್ರೀತ್‌ ಬುಮ್ರಾ ಸೇರಿದಂತೆ ಭಾರತ ತಂಡದ ಬೌಲರ್‌ಗಳ ಪರಿಣಾಮಕಾರಿ ದಾಳಿಗೆ ಪಾಕಿಸ್ತಾನ ಕೇವಲ 114 ರನ್‌ಗಳಿಗೆ ಆಲ್‌ಔಟ್‌ ಆಯಿತು. ಈ ಗೆಲುವಿನ ಮೂಲಕ ಭಾರತ ತಂಡ ಸೂಪರ್‌-8 ಕ್ಕೆ ಅರ್ಹತೆ ಪಡೆಯಿತು.