ದಾವಣಗೆರೆ ದಕ್ಷಿಣಾಧಿಪತಿ ಸ್ಥಾನಕ್ಕೆ ಭಾರೀ ಪೈಪೋಟಿ
ಮನೆಯೊಂದು ಮೂರು ಬಾಗಿಲು ಎಂಬಂತಿದ್ದ ಬಿಜೆಪಿ ಸದ್ಯಕ್ಕೆ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಕಾಂಗ್ರೆಸ್‌ನಲ್ಲಿ ಟಿಕೆಟ್ ಕಗ್ಗಂಟು ಬಗೆಹರಿದಂತಿಲ್ಲ. ಪ್ರಸ್ತುತ ಚುನಾವಣೆ ರಾಜಕೀಯ ಮುಖಂಡ ರಿಗೆ ಅಸ್ತಿತ್ವದ ಪ್ರಶ್ನೆಯಾಗಿದ್ದು, ಕಾಂಗ್ರೆಸ್‌ನಲ್ಲಿ ಎಸ್‌ಎಸ್ ಕುಟುಂಬ ಅನುಕಂಪದ ಆಧಾರ, ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಚುನಾವಣೆ ಬಯಸಿದೆ.
-
ಗಣೇಶ್ ಕಮ್ಲಾಪುರ ದಾವಣಗೆರೆ
ಟಿಕೆಟ್‌ಗಾಗಿ ಪಟ್ಟು ಹಿಡಿದ ಬಿಜೆಪಿ-ಕಾಂಗ್ರೆಸ್‌ನ ಹಲವರು
ಅನುಕಂಪ, ಅಭಿವೃದ್ಧಿ ಮಂತ್ರ ಪಠಿಸಲಿದೆಯಾ ಎಸ್‌ಎಸ್ ಕುಟುಂಬ
ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕೊನೆಗೂ ದಿನಾಂಕ ಘೋಷಣೆಯಾಗಿದ್ದು, ಅಭ್ಯರ್ಥಿ ಆಯ್ಕೆ ಕಗ್ಗಂಟು ಎರಡೂ ಪಕ್ಷಗಳಲ್ಲಿ ಮುಂದುವರಿದಿದೆ.
ಮನೆಯೊಂದು ಮೂರು ಬಾಗಿಲು ಎಂಬಂತಿದ್ದ ಬಿಜೆಪಿ ಸದ್ಯಕ್ಕೆ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಕಾಂಗ್ರೆಸ್‌ನಲ್ಲಿ ಟಿಕೆಟ್ ಕಗ್ಗಂಟು ಬಗೆಹರಿದಂತಿಲ್ಲ. ಪ್ರಸ್ತುತ ಚುನಾವಣೆ ರಾಜಕೀಯ ಮುಖಂಡರಿಗೆ ಅಸ್ತಿತ್ವದ ಪ್ರಶ್ನೆಯಾಗಿದ್ದು, ಕಾಂಗ್ರೆಸ್‌ನಲ್ಲಿ ಎಸ್‌ಎಸ್ ಕುಟುಂಬ ಅನುಕಂಪದ ಆಧಾರ, ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಚುನಾವಣೆ ಬಯಸಿದೆ.
ಇದೇ ಪಕ್ಷದ ಮುಸ್ಲಿಂ ಸಮುದಾಯ, ಈ ಭಾಗದಲ್ಲಿ ಗೆಲುನ ನಿರ್ಣಾಯಕರು ಮತ್ತು ಈವರೆಗೆ ನಿಷ್ಠರಾದ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂಬ ಆಗ್ರಹ ಮುಂದಿಟ್ಟುಕೊಂಡು ಟಿಕೆಟ್ ಬಯಸಿದೆ. ಇನ್ನೂ ಬಿಜೆಪಿ ಹಾಗೂ ಜೆಡಿಎಸ್ ಹಿಂದುತ್ವ ನೆಲೆಯಲ್ಲಿ ದಕ್ಷಿಣದಲ್ಲಿ ಅಧಿಪತ್ಯ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಇದನ್ನೂ ಓದಿ: Davanagere news: ಕೋಟಿ ಮೌಲ್ಯದ ಆಸ್ತಿಪಾಸ್ತಿ ತೊರೆದು ಸನ್ಯಾಸ ಸ್ವೀಕರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ
ಮುಸ್ಲಿಂರಿಗೆ ಟಿಕೆಟ್ ಅಂದಿದ್ರು ಎಸ್‌ಎಸ್: ಶಾಸಕರ ನಿಧನದಿಂದ ತೆರವಾದ ಸ್ಥಾನಕ್ಕೆ ಅನುಕಂಪದ ಆಧಾರದಲ್ಲಿ ಅವರ ಮನೆಯ ಯಾರಿಗಾದರೂ ಒಬ್ಬರಿಗೆ ಟಿಕೆಟ್ ಕೊಡ ಬೇಕೆಂಬ ಸಿದ್ಧಾಂತ ಕಾಂಗ್ರೆಸ್ ಈವರೆಗೆ ನಡೆಸಿಕೊಂಡು ಬಂದಿದೆ. ಹೀಗಾಗಿ, ಎಸ್ಎಸ್ ಕುಟುಂಬದಲ್ಲಿಯೇ ಟಿಕೆಟ್‌ಗಾಗಿ ಲಾಬಿ ನಡೆಯುತ್ತಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜು ನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಹಾಗೂ ಎಸ್.ಎಸ್.ಮಲ್ಲಿ ಕಾರ್ಜುನ್ ಸಹೋದರ ಎಸ್.ಎಸ್.ಗಣೇಶ್ ಸಹ ಟಿಕೆಟ್‌ಗಾಗಿ ತೆರೆಮರೆ ಕಸರತ್ತು ನಡೆಸು ತ್ತಿದ್ದಾರೆ.
ಇನ್ನೊಂದೆಡೆ, ದಿ.ಶಾಮನೂರು ಶಿವಶಂಕರಪ್ಪ ಅವರು ಹಿಂದಿನ ಚುನಾವಣೆ ಸಂದರ್ಭ ಮುಂದಿನ ವಿಧಾನಸಭೆ ಚುನಾವಣೆಗೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರಲಾಗುವುದು ಎಂದು ದಿ.ಶಿವಶಂಕರಪ್ಪ ಹೇಳಿದ್ದರೂ ಎಂಬ ಹೇಳಿಕೆಯನ್ನಿಟ್ಟುಕೊಂಡು ಅಲ್ಪಸಂಖ್ಯಾತರು ಸಹ ಕಾಂಗ್ರೆಸ್ ಟಿಕೆಟ್‌ಗಾಗಿ ಒತ್ತಾಯಿಸುತ್ತಿದ್ದು, ಅಬ್ದುಲ್ ಜಬ್ಬಾರ್ ಅವರ ಹೆಸರು ಪ್ರಸ್ತುತ ಮುನ್ನಲೆಯಲ್ಲಿದೆ.
ಇವರ ಪರ ಸಚಿವ ಜಮೀರ್ ಅವರು ಸಹ ಟಿಕೆಟ್ ಲಾಬಿ ನಡೆಸಿದ್ದು, ಎಸ್‌ಎಸ್ ಮಲ್ಲಿಕಾರ್ಜುನ್ ಕೆಂಗಣ್ಣಿಗೆ ಗುರಿಯಾಗಿದೆ. ಜತೆಗೆ, ರಿಯ ಮುಖಂಡ ಸಾದಿಕ್ ಪೈಲ್ವಾನ್, ಯುವ ಕಾಂಗ್ರೆಸ್ ರ‍್ಟಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಖಾಲಿದ್ ಹೆಸರು ಕೇಳಿ ಬರುತ್ತಿವೆ.
ತಣ್ಣಗಾದ ಭಿನ್ನಮತ, ಒಗ್ಗಟ್ಟಿನ ಮಂತ್ರ: ಇನ್ನೂ, ಬಿಜೆಪಿಯಲ್ಲಿ ಅಡಗಿದ್ದ ಭಿನ್ನರಾಗ ತುಸು ಮಟ್ಟಿಗೆ ಶಮನಗೊಂಡಿದ್ದು, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಣ ಇದೀಗ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಟಿಕೆಟ್ ಯಾರಿಗೆ ನೀಡಲಿ ಒಗ್ಗಟ್ಟಿನಿಂದ ಗೆಲ್ಲಿಸಿಕೊಂಡು ಬರುವ ಹೇಳಿಕೆ ನೀಡುತ್ತಿದ್ದಾರೆ.
ಆದರೂ, ತಮ್ಮ ನೆಚ್ಚಿನ ಅಭ್ಯರ್ಥಿಗೇ ಟಿಕೆಟ್ ತರಬೇಕೆಂಬ ತೆರೆಮರೆಯ ಕಸರತ್ತು ಮಾತ್ರ ನಿಂತಿಲ್ಲ. ಈ ನಡುವೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸ್ವಾಭಿ ಮಾನಿ ಬಳಗದ ಜಿ.ಬಿ.ನಯ್‌ಕುಮಾರ್ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಆತಂಕ ಗೊಂಡ ಜಿಲ್ಲಾ ಬಿಜೆಪಿ ನಾಯಕರು ತಮ್ಮತಮ್ಮೊಳಗೆ ಸಂಧಾನಸೂತ್ರ ಅನುಸರಿಸಿಕೊಂಡು ಒಮ್ಮತದ ಅಭ್ಯರ್ಥಿ ಆಯ್ಕೆಗೆ ಮುಂದಾಗಿದ್ದಾರೆ.
ಏ.9ಕ್ಕೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಮಾ.16ರಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಮೇ.4ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದ್ದು, ದಕ್ಷಿಣಾ ಧಿಪತಿ ಯಾರಾಗಲಿದ್ದಾರೆ ಕಾದುನೋಡಬೇಕಿದೆ.
ಬಿಜೆಪಿಗೆ ಅನುಕೂಲಕರ ಸ್ಥಿತಿ?
ಪ್ರಸ್ತುತ ಮುಸ್ಲಿಂ ಸಮುದಾಯದವರೇ ನಿರ್ಣಾಯಕರಾಗಿರುವ ದಾವಣಗೆರೆ ದಕ್ಷಿಣದಲ್ಲಿ ಎಸ್ಎಸ್ ಕುಟುಂಬಕ್ಕೆ ಟಿಕೆಟ್ ನೀಡಿದ್ದೇ ಆದರೆ ಮುಸ್ಲಿಂಮರು ಸಿಡಿದೇಳುವ ಸಾಧ್ಯತೆ ಇದೆ. ಅಥವಾ ಒಂದುವೇಳೆ ಅಲ್ಪಿಸಂಖ್ಯಾತರಿಗೆ ಟಿಕೆಟ್ ದಕ್ಕಿದ್ದಲ್ಲಿ ಇತರೆ ಸಮುದಾಯಗಳ ಮತಗಳು ಬಿಜೆಪಿಯತ್ತ ವಾಲುವ ಸಾಧ್ಯತೆ ಇರುವುದರಿಂದ ಈ ಬಾರಿ ಬಿಜೆಪಿಗೆ ಅನುಕೂಲ ಕರ ವಾತಾವರಣವಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಯಾವ ಪಕ್ಷದಿಂದ ಯಾರೂ ಆಕಾಂಕ್ಷಿ?
ಬಿಜೆಪಿಂದ ಕಳೆದ ಬಾರಿ ಶಾಮನೂರು ವಿರುದ್ಧ ಸ್ಪರ್ಧಿಸಿ ಸೋತಿದ್ದ ಬಿ.ಜಿ.ಅಜಯ ಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಟಿ.ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ದೇವರಮನಿ ಶಿವಕುಮಾರ್ ಇತರರು. ಕಾಂಗ್ರೆಸ್‌ನಿಂದ ಎಸ್‌ಎಸ್‌ಎಂ ಪುತ್ರ ಸಮರ್ಥ್, ಸಹೋದರ ಎಸ್.ಎಸ್. ಗಣೇಶ್, ಅಬ್ದುಲ್ ಜಬ್ಬಾರ್, ಸಾದಿಕ್ ಪೈಲ್ವಾನ್, ಸೈಯದ್ ಖಾಲಿದ್ ಇತರರು.
![]()
ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಸಣ್ಣಪುಟ್ಟ ಭಿನ್ನಾಬಿಪ್ರಾಯಗಳಿದ್ದವು. ಆದರೆ, ಅವನ್ನೆ ಲ್ಲಾ ಮರೆತು ಪಕ್ಷ ವರಿಷ್ಠರು ಸೂಚಿಸುವ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುತ್ತೇವೆ. ಈ ಬಾರಿ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಬಾವುಟ ಹಾರಿಸುವುದು ಶತಸಿದ್ಧ. ಅದಕ್ಕಾಗಿ ಈಗಾಗಲೇ ಬೂತ್ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ.
-ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
![]()
ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯಗಳಿಂದ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಪುನಃ ಅಧಿಪತ್ಯ ಸಾಧಿಸುತ್ತದೆ. ಟಿಕೆಟ್ ಚಾರದಲ್ಲಿ ಒಂದಿಷ್ಟು ಗೊಂದಲದ್ದರೂ ಅವೆಲ್ಲವನ್ನೂ ಸರಿಪಡಿಸಿಕೊಂಡು ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸಿಕೊಂಡು ಬರುತ್ತೇವೆ.
-ಎಚ್.ಬಿ. ಮಂಜಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ