ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Health Sector: ವೈದ್ಯಕೀಯ ಶಿಕ್ಷಣ ಮತ್ತು ಫಾರ್ಮಸಿ ಶಿಕ್ಷಣದ ಸಮನ್ವಯದಿಂದ ಆರೋಗ್ಯ ಕ್ಷೇತ್ರ ಉನ್ನತಿಯತ್ತ ಸಾಗುತ್ತಿದೆ : ಡಾ. ಕೋಡಿರಂಗಪ್ಪ

ಭಾರತದಲ್ಲಿ ರಾಷ್ಟ್ರೀಯ ಫಾರ್ಮಸಿ ಶಿಕ್ಷಣಕ್ಕೆ ಒಂದು ಸ್ಪಷ್ಟ ಚೌಕಟ್ಟು ರೂಪರೇಷೆಗಳನ್ನು ಕಟ್ಟಿಕೊಟ್ಟಿರುವ ಫಾರ್ಮಸಿ ವಿಜ್ಞಾನ ಶಿಕ್ಷಣದ ಪಿತಾಮಹರೆನಿಸಿರುವ ಪ್ರೊ. ಮಹಾದೇವ ಲಾಲ್ ಶರ್ಸ್ ರವರು ಔಷದ ವಿಜ್ಞಾನ ಮತ್ತು ಫಾರ್ಮಸಿ ಕ್ಷೇತ್ರದ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ  ಫಾರ್ಮಸಿ ಶಿಕ್ಷಣವು ಕಲಿಕಾರ್ಥಿಗಳಲ್ಲಿ ಗುಣಾತ್ಮಕವಾಗಿ ಹಲವು ಬದಲಾವಣೆ ಗಳನ್ನು ಹಾಗೂ ಕಲಿಕೆಯನ್ನು ಅಪೇಕ್ಷಿಸುತ್ತದೆ.

ವೈದ್ಯಕೀಯ, ಫಾರ್ಮಸಿ ಶಿಕ್ಷಣದ ಸಮನ್ವಯ, ಆರೋಗ್ಯ ಕ್ಷೇತ್ರ ಉನ್ನತಿಯತ್ತ

-

Ashok Nayak
Ashok Nayak Mar 9, 2026 11:26 PM

ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಮತ್ತು ವೈದ್ಯರ ವೃತ್ತಿಯನ್ನು ಸಫಲಗೊಳಿಸಲು ಫಾರ್ಮಸಿ ಶಿಕ್ಷಣ, ಔಷಧಿ ವಿಜ್ಞಾನಗಳು ಹಾಗೂ ಔಷಧಿ ತಯಾರಕರ ಸಮನ್ವಯತೆಯಿಂದ ದೇಶದ ಆರೋಗ್ಯ ಕ್ಷೇತ್ರ ಉನ್ನತಿಯತ್ತ ಸಾಗುತ್ತಿದೆಯೆಂದು ಶಾಂತಾ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಕೋಡಿರಂಗಪ್ಪ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಔಷಧಿ ವಿಜ್ಞಾನ ಶಿಕ್ಷಣ ದಿನ ಉದ್ಘಾಟಿಸಿ ಪ್ರಸ್ತುತ ನಮ್ಮ ದೇಶ ಹಾಗೂ ಇಡೀ ಜಗತ್ತಿನಲ್ಲಿ ಆರೋಗ್ಯ ಕ್ಷೇತ್ರವು ಅತ್ಯಂತ ವ್ಯಾಪಕವಾಗಿ ಬೆಳೆಯುತ್ತಿದೆ. ಕೋವಿಡ್ ನಂತರ ಔಷದ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯು ಕೂಡ ವಿಸ್ತಾರವಾಗಿ ಬೆಳೆಯು ತ್ತಿದೆ. ಇವುಗಳ ಫಲ ಆರೋಗ್ಯ ಕ್ಷೇತ್ರದ ಪಲಾನುಭವಿಗಳಿಗೆ ಕ್ರಮಬದ್ಧವಾಗಿ ಲಭಿಸಲು ವೈದ್ಯರು, ಅರೆವೈದ್ಯರು ಶುಶ್ರುಷಕರು ಮತ್ತು ಔಷಧಿಗಾರರ ನಡುವಿನ ತಾತ್ವಿಕ ಹಾಗೂ ಅನ್ವಯಿಕ ಸಹಕಾರ ಅತ್ಯಂತ ಅಗತ್ಯವೆನಿಸಿದೆ.

ಎರಡು ಕ್ಷೇತ್ರಗಳ ವೃತ್ತಿಪರರು ಒಂದಾಗಿ ಕಾರ್ಯನಿರ್ವಹಿಸಬೇಕಾಗಿದೆ .ವಿವಿಧ ರೀತಿಯ ಕಾಯಿಲೆಗಳು, ಅನಾರೋಗ್ಯ ಸ್ಥಿತಿಯ ನಿವಾರಣೆಗೆ ನಿರ್ದಿಷ್ಟ ಔಷಧಿಗಳ ಪ್ರಾಮುಖ್ಯತೆ, ಔಷಧಿಗಳನ್ನು ನಿರ್ಧರಿಸಿರುವ ಕ್ರಮ ಬಳಕೆ, ಅನು ಪಾಲನೆಗಳ ಬಗ್ಗೆ ಅಗತ್ಯ ಕ್ರಮಗಳು, ಎಚ್ಚರಿಕೆಗಳು, ಔಷಧಿಗಳ ಪರಿಣಾಮ ಹಾಗೂ ಅಡ್ಡ ಪರಿಣಾಮಗಳು ಮುಂತಾದವುಗಳ ಬಗ್ಗೆ ಸಮನ್ವಯ ಹಾಗೂ ವೈಜ್ಞಾನಿಕ ಪ್ರಕ್ರಿಯೆಯನ್ನುರೂಪಿಸುವ ಕಾರ್ಯ ಅತ್ಯಂತ ಜಾಣ್ಮೆ ಹಾಗೂ ಕಾಳಜಿಯಿಂದ ಸಾಗಬೇಕು .ಹೀಗಾಗಿ ಫಾರ್ಮಸಿ ಕ್ಷೇತ್ರಕ್ಕೆ ಸಿದ್ದರಾಗುವ ನಾಳಿನ ವೃತ್ತಿಪರರು ವೈದ್ಯಕೀಯ ಆರೋಗ್ಯ ಕ್ಷೇತ್ರ ಹಾಗೂ ಔಷಧಿ ವಿಜ್ಞಾನವನ್ನು ಸವಿಸ್ತಾರವಾಗಿ ಅರ್ಥ ಮಾಡಿಕೊಂಡು ಸಂವೇದನೆ ಹಾಗೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ: Chikkaballapur News: ಭಾನುವಾರ ಬಂದ್ ಕರೆ ಸಮಂಜಸವಲ್ಲ, ವ್ಯಾಪಾರಕ್ಕೆ ತೊಂದರೆ, ಬೇರೆ ದಿನದಲ್ಲಿ ಬಂದ್‌ ಮಾಡಿ: ಮಂಜುನಾಥ್ ಆಗ್ರಹ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಂತ ಫಾರ್ಮಸಿ ಕಾಲೇಜಿನ ಪ್ರಾಂಶು ಪಾಲ ಡಾ. ಗೋಪಿನಾಥ್ ರವರು ಫಾರ್ಮಸಿ ಕ್ಷೇತ್ರದ ವೃತ್ತಿದಾರರಾಗುವ ಅಭ್ಯರ್ಥಿಗಳು ಫಾರ್ಮಸಿ ಶಿಕ್ಷಣದ ತಾತ್ವಿಕ ಹಿನ್ನೆಲೆ ಸಂಶೋಧನೆ ಔಷಧಿಗಳ ಪರಿಚಯ ಉತ್ಪಾದನಾ ಪ್ರಕ್ರಿಯೆ ಬಳಕೆಯ ಬಗೆಗಿನ ಪ್ರಾಯೋಗಿಕ ಕ್ರಮಗಳನ್ನು ಅರಿಯಬೇಕೆಂದು ಅಭಿಪ್ರಾಯ ಪಟ್ಟರು.

ಭಾರತದಲ್ಲಿ ರಾಷ್ಟ್ರೀಯ ಫಾರ್ಮಸಿ ಶಿಕ್ಷಣಕ್ಕೆ ಒಂದು ಸ್ಪಷ್ಟ ಚೌಕಟ್ಟು ರೂಪರೇಷೆಗಳನ್ನು ಕಟ್ಟಿಕೊಟ್ಟಿರುವ ಫಾರ್ಮಸಿ ವಿಜ್ಞಾನ ಶಿಕ್ಷಣದ ಪಿತಾಮಹರೆನಿಸಿರುವ ಪ್ರೊ. ಮಹಾದೇವ ಲಾಲ್ ಶರ್ಸ್ ರವರು ಔಷದ ವಿಜ್ಞಾನ ಮತ್ತು ಫಾರ್ಮಸಿ ಕ್ಷೇತ್ರದ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ  ಫಾರ್ಮಸಿ ಶಿಕ್ಷಣವು ಕಲಿಕಾರ್ಥಿಗಳಲ್ಲಿ ಗುಣಾತ್ಮಕವಾಗಿ ಹಲವು ಬದಲಾವಣೆ ಗಳನ್ನು ಹಾಗೂ ಕಲಿಕೆಯನ್ನು ಅಪೇಕ್ಷಿಸುತ್ತದೆ. ಅವುಗಳೆಂದರೆ ಶಿಸ್ತು , ಸಂಯಮ,ರಕ್ಷಣೆ, ಉತ್ತರದಾಯಿತ್ವ, ವಿಮರ್ಶಾತ್ಮಕ ಚಿಂತನೆ, ಪರಿಣಾಮಕಾರಿ ಸಂವಹನ ಸಾಮರ್ಥ್ಯ, ಸಮಯ ಪಾಲನೆ, ಸಕಾರಾತ್ಮಕ ಚಿಂತನೆ, ತೀರ್ಮಾನ ಕೈಗೊಳ್ಳುವಿ,ಕೆ ಮುಂತಾದ ಗುಣಗಳು ಹಾಗೂ ಸಾಮರ್ಥ್ಯಗಳು ಒಬ್ಬ ಫಾರ್ಮಸಿ ವೃತ್ತಿಪರನಲ್ಲಿ ಅಗತ್ಯವಾಗಿ ಇರಬೇಕೆಂದು ಪ್ರೊ. ಮಹದೇವಲಾಲ್ ಶರ್ಟ್ ರವರ ಚಿಂತನೆ ಹಾಗೂ ನಿರೀಕ್ಷೆಗಳನ್ನು ಉದಾರಣೆಗಳ ಸಹಿತ ವಿವರಿಸಿ ಈ ವೃತ್ತಿಗೆ ಜ್ಞಾನದ ಜೊತೆಗೆ ಕೌಶಲ ಮತ್ತು ಕಾಳಜಿ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸುಭಾಷಿಣಿ , ಡಾ. ಪ್ರವೀಣ್, ಡಾ. ಶ್ರೀಧರ್, ಅಜಯ್, ಬಿಂದು, ಐರಿನ್ ,ಬೃಂದಾ ರೇಷ್ಮಾ, ಬಾನು, ಸುನಿಲ್ ಕುಮಾರ್ ನೀಲ ಮಹಾದೇವ್ ಸುರೇಂದ್ರನಾಥ್, ಹಾಗೂ ಸಂದೇಶ್ ಫಾರ್ಮಸಿ ಕೋರ್ಸಿನ ನಾಲ್ಕು ವರ್ಷಗಳ ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು.