ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Haveri News: ಸ್ಪರ್ಶ್ ಆಸ್ಪತ್ರೆ ವೈದ್ಯರಿಂದ ಪ್ರತಿ ತಿಂಗಳ 3ನೇ ಗುರುವಾರ ವಿಶೇಷ ಒಪಿಡಿ ಸೇವೆ

ನಿರಂತರ ತಲೆನೋವು, ಬೆನ್ನುಹುರಿ ಸಮಸ್ಯೆ, ನರಗಳ ಒತ್ತಡ, ದೇಹದ ಅಂಗಾಂಗಗಳಲ್ಲಿ ಮರಗಟ್ಟುವಿಕೆ, ದೈಹಿಕ ದೌರ್ಬಲ್ಯ, ನಡೆಯಲು ತೊಂದರೆ ಹಾಗೂ ಮೆದುಳಿನ ಗಡ್ಡೆ ಸೇರಿದಂತೆ ವಿವಿಧ ನರಸಂಬಂಧಿ ಸಮಸ್ಯೆಗಳಿಗೆ ತಜ್ಞರಿಂದ ತಪಾಸಣೆ ಮತ್ತು ಸೂಕ್ತ ವೈದ್ಯಕೀಯ ಸಲಹೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಹಾವೇರಿಯಲ್ಲೇ ಇನ್ಮುಂದೆ ನ್ಯೂರೋಸರ್ಜರಿ ತಜ್ಞರ ಸಮಾಲೋಚನೆ

-

Profile
Ashok Nayak Nov 24, 2026 12:57 PM

ಹಾವೇರಿ: ಮೆದುಳು, ಬೆನ್ನುಹುರಿ ಹಾಗೂ ನರಮಂಡಲಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಇನ್ಮುಂದೆ ಬೆಂಗಳೂರಿಗೆ ಅಲೆಯಬೇಕಿಲ್ಲ. ಬೆಂಗಳೂರಿನ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯ ನ್ಯೂರೋಸರ್ಜರಿ ತಜ್ಞರಿಂದ ಹಾವೇರಿಯಲ್ಲಿಯೇ ಪ್ರತಿ ತಿಂಗಳು ವಿಶೇಷ ಹೊರ ರೋಗಿ ವಿಭಾಗ (ಒಪಿಡಿ) ಸೇವೆ ಲಭ್ಯವಾಗಲಿದೆ.

ನಗರದ ಶಿವಾಜಿನಗರದಲ್ಲಿರುವ ಪಿ.ಎಂ.ಹೆಗ್ಗೇರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಮೂರನೇ ಗುರುವಾರ ಸ್ಪರ್ಶ್ ಆಸ್ಪತ್ರೆಯ ನ್ಯೂರೋಸರ್ಜನ್ ಡಾ.ಅಭಿನಂದನ್ ಜೆ.ಗಂಗಣ್ಣನವರ್ ಅವರು ರೋಗಿಗಳಿಗೆ ತಪಾಸಣೆ ಹಾಗೂ ವೈದ್ಯಕೀಯ ಸಮಾಲೋಚನೆ ನಡೆಸಲಿದ್ದಾರೆ.

ಪಿ.ಎಂ. ಹೆಗ್ಗೇರಿ ಆಸ್ಪತ್ರೆಯ ನಿರ್ದೇಶಕ ಹಾಗೂ ಕನ್ಸಲ್ಟೆಂಟ್ ಜನರಲ್ ಮತ್ತು ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ.ಪ್ರಮೋದ್ ಹೆಗ್ಗೇರಿ ಅವರ ಸಹಯೋಗದಲ್ಲಿ ಈ ಸೇವೆ ಆರಂಭಿಸಲಾಗಿದೆ.

ಇದನ್ನೂ ಓದಿ: Haveri University hostel: ಹಾವೇರಿ ವಿವಿ ಹಾಸ್ಟೆಲ್‌ನಲ್ಲಿ ಅಪರಿಚಿತನ ಅನುಚಿತ ವರ್ತನೆ!: ಧರಣಿ, ಸ್ಥಳಕ್ಕೆ ಬಿಸಿಎಂ ತಾಲೂಕು ಅಧಿಕಾರಿ, ಪೊಲೀಸರ ಭೇಟಿ

ನಿರಂತರ ತಲೆನೋವು, ಬೆನ್ನುಹುರಿ ಸಮಸ್ಯೆ, ನರಗಳ ಒತ್ತಡ, ದೇಹದ ಅಂಗಾಂಗಗಳಲ್ಲಿ ಮರಗಟ್ಟು ವಿಕೆ, ದೈಹಿಕ ದೌರ್ಬಲ್ಯ, ನಡೆಯಲು ತೊಂದರೆ ಹಾಗೂ ಮೆದುಳಿನ ಗಡ್ಡೆ ಸೇರಿದಂತೆ ವಿವಿಧ ನರಸಂಬಂಧಿ ಸಮಸ್ಯೆಗಳಿಗೆ ತಜ್ಞರಿಂದ ತಪಾಸಣೆ ಮತ್ತು ಸೂಕ್ತ ವೈದ್ಯಕೀಯ ಸಲಹೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಆರಂಭಿಕ ತಪಾಸಣೆ ಮುಖ್ಯ: ನರಮಂಡಲ ಮತ್ತು ಬೆನ್ನುಹುರಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ನಿರ್ಲಕ್ಷ್ಯ ಮಾಡಿದರೆ ದೈನಂದಿನ ಚಟುವಟಿಕೆ ಹಾಗೂ ಜೀವನಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹಾವೇರಿಯಲ್ಲಿನ ಮಾಸಿಕ ಸಮಾಲೋಚನೆಯಿಂದ ರೋಗಿಗಳಿಗೆ ತಜ್ಞರ ಸಲಹೆ, ಅಗತ್ಯ ವೈದ್ಯಕೀಯ ಪರೀಕ್ಷೆ ಹಾಗೂ ಮುಂದಿನ ಚಿಕಿತ್ಸೆಯ ಕುರಿತು ಮಾರ್ಗದರ್ಶನ ದೊರೆಯಲಿದೆ ಎಂದು ಡಾ.ಅಭಿನಂದನ್ ಜೆ. ಗಂಗಣ್ಣನವರ್ ತಿಳಿಸಿದ್ದಾರೆ.

ಸ್ಪರ್ಶ್ ಆಸ್ಪತ್ರೆಯು ಮೆದುಳು ಮತ್ತು ಬೆನ್ನುಹುರಿ ಶಸ್ತ್ರಚಿಕಿತ್ಸೆ, ಸ್ಟ್ರೋಕ್ ನಿರ್ವಹಣೆ, ಅಪಸ್ಮಾರ, ನರಸಂಬಂಧಿ ಕಾಯಿಲೆಗಳು ಹಾಗೂ ನ್ಯೂರೋ ಪುನರ್ವಸತಿ ಸೇರಿದಂತೆ ವಿವಿಧ ವಿಶೇಷ ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿದೆ.

ಪಿ.ಎಂ. ಹೆಗ್ಗೇರಿ ಆಸ್ಪತ್ರೆಯ ಮೂಲಕ ಮಹಾನಗರಗಳಲ್ಲಿರುವ ತಜ್ಞ ವೈದ್ಯಕೀಯ ಸೇವೆಯನ್ನು ಹಾವೇರಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ತಲುಪಿಸುವ ಉದ್ದೇಶದಿಂದ ಈ ಸಹಯೋಗ ಆರಂಭಿಸಲಾಗಿದೆ.

ನ್ಯೂರೋಸರ್ಜರಿ ತಜ್ಞರ ಸಮಾಲೋಚನೆ ಪಡೆಯಲು ಆಸಕ್ತರು ಪ್ರತಿ ತಿಂಗಳ ಮೂರನೇ ಗುರುವಾರ ಹಾವೇರಿಯ ಪಿ.ಎಂ. ಹೆಗ್ಗೇರಿ ಆಸ್ಪತ್ರೆಗೆ ಭೇಟಿ ನೀಡಬಹುದು.