ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Former MLA Rajkumar Patil Telkur: ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಹತ್ತು ಪಟ್ಟು ವಸೂಲಿ: ರಾಜಕುಮಾರ ಪಾಟೀಲ್

ನಂದಿನಿ ಹಾಲಿನ ದರವನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮೆಟ್ರೋ ಪ್ರಯಾಣ ದರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ, ಟೋಲ್ ಶುಲ್ಕ, ವಿದ್ಯುತ್ ಬಿಲ್ ಹಾಗೂ ಫಿಕ್ಸೆಡ್‌ ಚಾರ್ಜ್‌ಗಳನ್ನು ಹೆಚ್ಚಿಸಲಾಗಿದೆ. ಆಸ್ಪತ್ರೆ ಶುಲ್ಕ, ಸ್ಟ್ಯಾಂಪ್‌ ಡ್ಯೂಟಿ, ಮಾರ್ಗದರ್ಶಿ ಮೌಲ್ಯ ಹಾಗೂ ಮದ್ಯದ ದರವೂ ಏರಿಕೆಯಾಗಿದೆ

ಹಾಲು, ಬಸ್, ಪೆಟ್ರೋಲ್ ಎಲ್ಲದರಲ್ಲೂ ಬೆಲೆ ಏರಿಕೆ: ತೇಲ್ಕೂರ್

-

Profile
Ashok Nayak Nov 4, 2026 6:01 PM

ಕಲಬುರಗಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಗತ್ಯ ವಸ್ತುಗಳು ಹಾಗೂ ಸಾರ್ವಜನಿಕ ಸೇವೆಗಳ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಬದುಕು ದುಬಾರಿಯಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್(Former MLA Rajkumar Patil Telkur) ಆರೋಪಿಸಿದ್ದಾರೆ.

ನಂದಿನಿ ಹಾಲಿನ ದರವನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮೆಟ್ರೋ ಪ್ರಯಾಣ ದರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ, ಟೋಲ್ ಶುಲ್ಕ, ವಿದ್ಯುತ್ ಬಿಲ್ ಹಾಗೂ ಫಿಕ್ಸೆಡ್‌ ಚಾರ್ಜ್‌ಗಳನ್ನು ಹೆಚ್ಚಿಸಲಾಗಿದೆ. ಆಸ್ಪತ್ರೆ ಶುಲ್ಕ, ಸ್ಟ್ಯಾಂಪ್‌ ಡ್ಯೂಟಿ, ಮಾರ್ಗದರ್ಶಿ ಮೌಲ್ಯ ಹಾಗೂ ಮದ್ಯದ ದರವೂ ಏರಿಕೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಲಿನ ದರ ಹೆಚ್ಚಳದಿಂದ ರೈತರಿಗೆ ಆಗುವ ಲಾಭಕ್ಕಿಂತ ಗ್ರಾಹಕರ ಮೇಲಿನ ಹೊರೆ ಹೆಚ್ಚಾಗಿದೆ. ರೈತನ ಹೆಗಲ ಮೇಲೆ ಬಂದೂಕಿಟ್ಟು ಗ್ರಾಹಕರ ಎದೆಗೆ ಗುಂಡು ಹೊಡೆಯುವ ರೀತಿಯಲ್ಲಿ ಸರ್ಕಾರದ ನೀತಿಗಳಿವೆ ಎಂದು ತೇಲ್ಕೂರ್ ಟೀಕಿಸಿದ್ದಾರೆ.

ಇದನ್ನೂ ಓದಿ: MLA S R Vishwanath: ಪ್ರತಿಫಲಾಪೇಕ್ಷೆಯಿಲ್ಲದ ಸಮಾಜಸೇವೆ ಮಾದರಿಯಾಗಲಿ: ಶಾಸಕ ಎಸ್.ಆರ್. ವಿಶ್ವನಾಥ್

ಗ್ಯಾರಂಟಿ ಯೋಜನೆಗಳ ಮೂಲಕ ಒಂದು ಕೈಯಲ್ಲಿ ಹಣ ನೀಡಿ, ಮತ್ತೊಂದು ಕೈಯಲ್ಲಿ ಬೆಲೆ ಏರಿಕೆ ಮೂಲಕ ಜನರಿಂದ ಹತ್ತು ಪಟ್ಟು ವಸೂಲಿ ಮಾಡಲಾಗುತ್ತಿದೆ. ಬಡವರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಕುಟುಂಬಗಳು ದಿನನಿತ್ಯದ ಖರ್ಚು ನಿಭಾಯಿಸಲು ಪರದಾಡುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಬಸ್ ಪ್ರಯಾಣದ ದರ ಏರಿಕೆ ಬಡವರ ಮೇಲೆ ಹೊರೆ ಹಾಕಿದೆ. ವಿದ್ಯುತ್ ಬಿಲ್ ಜನರಿಗೆ ಆಘಾತ ನೀಡುತ್ತಿದ್ದು, ಆಸ್ಪತ್ರೆಗಳ ದುಬಾರಿ ಶುಲ್ಕದಿಂದ ಸಾಮಾನ್ಯ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಇದು ಜನಪರ ಸರ್ಕಾರವೇ ಅಥವಾ ಕಾಂಗ್ರೆಸ್‌ನ ಗ್ಯಾರಂಟಿ ಆಡಳಿತವೇ ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D K Shivakumar) ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯದ ಆಡಳಿತದ ಹೊಣೆಗಾರಿಕೆ ಅರಿತುಕೊಳ್ಳಬೇಕು. ಪ್ರತಿಯೊಂದು ಸಮಸ್ಯೆಗೂ ಕೇಂದ್ರ ಸರ್ಕಾರವನ್ನು ಹೊಣೆ ಮಾಡುವ ಬದಲು ರಾಜ್ಯದಲ್ಲಿ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಬೇಕು. ಜನರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ಇತ್ತೀಚಿನ ದರ ಏರಿಕೆ ನಿರ್ಧಾರಗಳನ್ನು ಹಿಂಪಡೆಯ ಬೇಕು ಎಂದು ತೇಲ್ಕೂರ್ ಆಗ್ರಹಿಸಿದ್ದಾರೆ.