ಮೈತ್ರಿ ಬಲದೊಂದಿಗೆ ನಮೋಶಿ ಮತಬೇಟೆ : ಶಿಕ್ಷಕರ ಮನಗೆಲ್ಲಲು ಕೈ-ಕಮಲ ಕಸರತ್ತು !
ಕಣದಲ್ಲಿರುವ 13 ಅಭ್ಯರ್ಥಿಗಳ ಪೈಕಿ ಪ್ರಮುಖ ಸ್ಪರ್ಧೆ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರು ಮತ್ತು ಬಿಜೆಪಿಯ ಶಶಿಲ್ ಜಿ.ನಮೋಶಿ ನಡುವೆಯೇ ಸೀಮಿತವಾಗಿದ್ದು, ಶಿಕ್ಷಕರ ಮತಗಳನ್ನು ಸೆಳೆಯಲು ಉಭಯ ಪಕ್ಷಗಳ ತಂಡಗಳು ಏಳು ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿವೆ. ರಾಜಕೀಯ ಚಟುವಟಿಕೆಯ ವೇಗ, ಮೈತ್ರಿ ಪಕ್ಷಗಳ ಒಗ್ಗಟ್ಟು ಹಾಗೂ ಕ್ಷೇತ್ರದಾದ್ಯಂತ ನಡೆಯುತ್ತಿರುವ ಸಂಪರ್ಕ ಅಭಿಯಾನ ಗಮನಿಸಿದರೆ ಸದ್ಯದ ವಾತಾವರಣದಲ್ಲಿ ಬಿಜೆಪಿಗೆ ತುಸು ಮೇಲುಗೈ ಕಾಣಿಸುತ್ತಿದೆ.
-
ದೇವೇಂದ್ರ ಜಾಡಿ ಕಲಬುರಗಿ
ದಸರಾ ಸಂಭ್ರಮದ ನಡುವೆಯೇ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಮುಂದಿಟ್ಟು ಕೊಂಡು ಕ್ಷೇತ್ರ ಉಳಿಸಿಕೊಳ್ಳಲು ಶರಣಪ್ಪ ಮಟ್ಟೂರು ಪ್ರಯತ್ನಿಸುತ್ತಿದ್ದರೆ, ಬಿಜೆಪಿ ಅಭ್ಯರ್ಥಿ ಶಶಿಲ್ ಜಿ.ನಮೋಶಿ ಅವರು ಎನ್‌ಡಿಎ ಮೈತ್ರಿಯ ಸಂಘಟನಾ ಬಲದೊಂದಿಗೆ ಮತ್ತೊಮ್ಮೆ ಪರಿಷತ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದ್ದಾರೆ.
ಕಣದಲ್ಲಿರುವ 13 ಅಭ್ಯರ್ಥಿಗಳ ಪೈಕಿ ಪ್ರಮುಖ ಸ್ಪರ್ಧೆ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರು ಮತ್ತು ಬಿಜೆಪಿಯ ಶಶಿಲ್ ಜಿ.ನಮೋಶಿ ನಡುವೆಯೇ ಸೀಮಿತವಾಗಿದ್ದು, ಶಿಕ್ಷಕರ ಮತಗಳನ್ನು ಸೆಳೆಯಲು ಉಭಯ ಪಕ್ಷಗಳ ತಂಡಗಳು ಏಳು ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿವೆ. ರಾಜಕೀಯ ಚಟುವಟಿಕೆಯ ವೇಗ, ಮೈತ್ರಿ ಪಕ್ಷಗಳ ಒಗ್ಗಟ್ಟು ಹಾಗೂ ಕ್ಷೇತ್ರದಾದ್ಯಂತ ನಡೆಯುತ್ತಿರುವ ಸಂಪರ್ಕ ಅಭಿಯಾನ ಗಮನಿಸಿದರೆ ಸದ್ಯದ ವಾತಾವರಣದಲ್ಲಿ ಬಿಜೆಪಿಗೆ ತುಸು ಮೇಲುಗೈ ಕಾಣಿಸುತ್ತಿದೆ.
ನಮೋಶಿಗೆ ಅನುಭವ, ಮೈತ್ರಿಯ ಬಲ: ಮತ್ತೊಮ್ಮೆ ಪರಿಷತ್ ಪ್ರವೇಶಿಸುವ ಗುರಿಯೊಂದಿಗೆ ಶಶಿಲ್ ನಮೋಶಿ ಅವರು ಹಿಂದಿನ ಅವಧಿಯಲ್ಲಿ ಶಿಕ್ಷಕರ ಪರವಾಗಿ ಪ್ರಸ್ತಾಪಿಸಿದ ವಿಚಾರಗಳನ್ನು ಮುಂದಿ ಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಸರಕಾರದ ಗಮನಕ್ಕೆ ತಂದ ಶಿಕ್ಷಕರ ಸಮಸ್ಯೆಗಳು ಹಾಗೂ ಕೈಗೊಂಡ ಪ ಯತ ಗಳನ್ನು ಮತದಾರರಿಗೆ ವಿವರಿಸುತ್ತಿದ್ದಾರೆ.
ಇದನ್ನೂ ಓದಿ: Kalaburagi News: ಮಕ್ಕಳಾಗದ ವಿಚಾರಕ್ಕೆ ಗಲಾಟೆ; ಹೆಂಡತಿಯ ಕತ್ತು ಹಿಸುಕಿ ಕೊಲೆಗೈದ ಗಂಡ!
ಜೆಡಿಎಸ್ ಮುಖಂಡರ ಸಹಕಾರ ದೊಂದಿಗೆ ಕ್ಷೇತ್ರದಲ್ಲಿ ಸಂಪರ್ಕ ಹೆಚ್ಚಿಸಿರುವ ಬಿಜೆಪಿ, ಸ್ಥಳೀಯ ಮುಖಂಡರು ಹಾಗೂ ಶಿಕ್ಷಕರ ಸಂಘಟನೆಗಳ ಪ್ರಮುಖರ ಮೂಲಕ ಮತದಾರರನ್ನು ತಲುಪುವ ಕಾರ್ಯಕ್ಕೆ ಒತ್ತು ನೀಡಿದೆ. ಅಂತಿಮ ಹಂತದಲ್ಲಿ ವೈಯಕ್ತಿಕ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ನೀಡ ಲಾಗುತ್ತಿದೆ.
ಸರಕಾರದ ಸಾಧನೆ ಕಾಂಗ್ರೆಸ್ ಅಸ್ತ್ರ: ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರು ಸರಕಾರದ ಸಾಧನೆಗಳು, ಶಿಕ್ಷಕರಿಗೆ ದೊರೆತ ಸೌಲಭ್ಯಗಳು ಹಾಗೂ ಮುಂದಿನ ಬೇಡಿಕೆಗಳನ್ನು ಮುಂದಿ ಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ಆಡಳಿತ ಪಕ್ಷದ ಅಭ್ಯರ್ಥಿಯಾ ಗಿರುವುದರಿಂದ ಸರಕಾರದೊಂದಿಗೆ ನೇರ ಸಂಪರ್ಕವನ್ನು ಪ್ರಚಾರದ ಪ್ರಮುಖ ಅಂಶವನ್ನಾಗಿಸಿಕೊಂಡಿದ್ದಾರೆ. ಸಚಿವರು, ಶಾಸಕರು ಹಾಗೂ ಸ್ಥಳೀಯ ಮುಖಂಡರ ಮೂಲಕ ಏಳು ಜಿಲ್ಲೆಗಳಲ್ಲಿ ಪ್ರಚಾರ ಚುರುಕುಗೊಂಡಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಲಾಗುತ್ತಿದೆ. ಸರಕಾರದ ಕಾರ್ಯವೈಖರಿ ಮತದಾರರ ಒಲವು ಗಳಿಸಲು ನೆರವಾಗಲಿದೆ ಎಂಬ ವಿಶ್ವಾಸ ಕಾಂಗ್ರೆಸ್ ಪಾಳಯ ದಲ್ಲಿದೆ.
ಶಿಕ್ಷಕರ ತೀರ್ಪಿಗೆ ಕ್ಷಣಗಣನೆ: ಈ ಕ್ಷೇತ್ರದ ಫಲಿತಾಂಶದಲ್ಲಿ ಅಭ್ಯರ್ಥಿಗಳ ವೈಯಕ್ತಿಕ ಸಂಪರ್ಕ, ಶಿಕ್ಷಕರ ಸಂಘಟನೆಗಳ ನಿಲುವು ಹಾಗೂ ಸ್ಥಳೀಯ ಸಮಸ್ಯೆಗಳ ಅರಿವು ಪ್ರಮುಖವಾಗುವ ಸಾಧ್ಯತೆ ಇದೆ. ಸಾಮಾನ್ಯ ರಾಜಕೀಯ ಲೆಕ್ಕಾಚಾರಕ್ಕಿಂತ ಶಿಕ್ಷಕರ ನಿರ್ದಿಷ್ಟ ಬೇಡಿಕೆಗಳು ಮತ್ತು ಅಭ್ಯರ್ಥಿಗಳ ಮೇಲಿನ ವಿಶ್ವಾಸವೇ ಮತದಾನದ ದಿಕ್ಕು ನಿರ್ಧರಿಸಬಹುದು. ಅ.23ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅ.27ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಮತ ಎಣಿಕೆ ನಡೆಯಲಿದೆ. ಅಂತಿಮ ಹಂತದ ಪ್ರಚಾರದಲ್ಲಿ ಅಭ್ಯರ್ಥಿಗಳ ವೈಯಕ್ತಿಕ ಸಂಪರ್ಕವೇ ನಿರ್ಣಾಯಕವಾಗುವ ಸಾಧ್ಯತೆ ಇದೆ
144 ಮತಗಟ್ಟೆಗಳಲ್ಲಿ ಮತದಾನ
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 144 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾವಾರು ಕಲಬುರಗಿ 40, ಬೀದರ್ 33, ಕೊಪ್ಪಳ 20, ವಿಜಯನಗರ 18, ರಾಯಚೂರು 16, ಬಳ್ಳಾರಿ 9 ಹಾಗೂ ಯಾದಗಿರಿಯಲ್ಲಿ 8 ಮತಗಟ್ಟೆಗಳಿವೆ. ಅ.23ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅ.27ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಮತ ಎಣಿಕೆ ನಡೆಯಲಿದೆ.
34,784 ಶಿಕ್ಷಕರೇ ನಿರ್ಣಾಯಕ
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 34,784 ಮತದಾರರು ಇದ್ದು, 20,040 ಪುರುಷರು ಹಾಗೂ 14,244 ಮಹಿಳೆಯರು ಇದ್ದಾರೆ. ಜಿಲ್ಲಾವಾರು ಕಲಬುರಗಿ 10,652, ಬೀದರ್ 7,038, ರಾಯಚೂರು 5,402, ಬಳ್ಳಾರಿ 3,393, ವಿಜಯನಗರ 3,326, ಕೊಪ್ಪಳ 2,718 ಹಾಗೂ ಯಾದಗಿರಿ 2,259 ಮತದಾರ ರನ್ನು ಹೊಂದಿವೆ. ಒಟ್ಟು ಮತದಾರರ ಪೈಕಿ ಕಲಬುರಗಿ ಮತ್ತು ಬೀದರ್‌ನ ಪಾಲು ಗಮನಾರ್ಹ ವಾಗಿದೆ.