ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೈಸೂರಿನಲ್ಲಿ ಘೋರ ಘಟನೆ; ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಬಾಲಕಿ ಸಾವು

Mysuru News: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಜಯಗಿರಿ ಹಾಡಿಯಲ್ಲಿ ಘಟನೆ ನಡೆದಿದೆ. ತಾಯಿ ಸ್ನಾನ ಮಾಡಿಸಲು ಪಾತ್ರೆಯಲ್ಲಿ ಬಿಸಿ ನೀರಿಟ್ಟು, ತಣ್ಣೀರು ತರಲು ಹೋಗಿದ್ದಾರೆ. ಈ ವೇಳೆ ಮಗು ಬಿಸಿ ನೀರಿನ ಪಾತ್ರೆಗೆ ಬಿದ್ದು ಮೃತಪಟ್ಟಿದೆ.

ಮೈಸೂರಿನಲ್ಲಿ ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಬಾಲಕಿ ಸಾವು

ಸಾಂದರ್ಭಿಕ ಚಿತ್ರ -

Prabhakara R
Prabhakara R Dec 20, 2025 7:13 PM

ಮೈಸೂರು, ಡಿ.20: ಜಿಲ್ಲೆಯಲ್ಲಿ ಘೋರ ಘಟನೆ ನಡೆದಿದೆ. ಬಿಸಿನೀರಿನ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ದಾರುಣವಾಗಿ ಮೃತಪಟ್ಟಿರುವ ಘಟನೆ ಮೈಸೂರು (Mysuru News) ಜಿಲ್ಲೆಯ ಹುಣಸೂರು ತಾಲೂಕಿನ ಜಯಗಿರಿ ಹಾಡಿಯಲ್ಲಿ ನಡೆದಿದೆ. ರಮ್ಯಾ ಮತ್ತು ಬಸಪ್ಪ ದಂಪತಿ ಪುತ್ರಿ ವೇದಾ (2) ಮೃತ ಮಗು.

ತಾಯಿ ಸ್ನಾನ ಮಾಡಿಸಲು ಪಾತ್ರೆಯಲ್ಲಿ ಬಿಸಿ ನೀರಿಟ್ಟು, ತಣ್ಣೀರು ತರಲು ಹೋಗಿದ್ದಾರೆ. ಈ ವೇಳೆ ವೇದಾ ಬಿಸಿನೀರಿನ ಪಾತ್ರೆಗೆ ಬಿದ್ದಿದ್ದಾಳೆ. ಬಿಸಿ ನೀರಿಗೆ ಬಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೇ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ. ಮನೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಬಾಲಕನಿಗೆ ಬೈಕ್ ಕೊಟ್ಟಿದ್ದ ವ್ಯಕ್ತಿಗೆ 25,000 ರೂ. ದಂಡ ವಿಧಿಸಿದ ಕೋರ್ಟ್

ಚಿಕ್ಕಮಗಳೂರು: ಮಕ್ಕಳಿಗೆ ವಾಹನ ಕೊಡುವ ಪೋಷಕರು ಎಚ್ಚರ ವಹಿಸಬೇಕಿದೆ. ಇಲ್ಲದಿದ್ದರೆ ಭಾರಿ ದಂಡ ಕಟ್ಟಬೇಕಾಗುತ್ತದೆ. ಹೌದು, ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ಚಾಲನೆ ಮಾಡಲು ನೀಡಿದ್ದ ವ್ಯಕ್ತಿಗೆ ಕೋರ್ಟ್, 25 ಸಾವಿರ ರೂ. ದಂಡ ವಿಧಿಸಿರುವುದು ಚಿಕ್ಕಮಗಳೂರಿನಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆ ಮಾಡಲು ನೀಡಿದ್ದ ವ್ಯಕ್ತಿಯ ವಿರುದ್ಧ 2024 ರಲ್ಲಿ ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಚಿಕ್ಕಮಗಳೂರು ನ್ಯಾಯಾಲಯವು 25,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.