ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Script Craft: ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತ ಪ್ರಭಾಸ್‌; ನಿರ್ದೇಶಕರಿಗೆ, ಕಥೆಗಾರರಿಗೆ ಇಲ್ಲಿದೆ ಸಖತ್‌ ಚಾನ್ಸ್!‌

The Script Craft Launch: ಪ್ಯಾನ್‌ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಕೇವಲ ಸಿನಿಮಾಗಳಲ್ಲಷ್ಟೇ ಅಲ್ಲದೆ, ಹೊಸ ಪ್ರತಿಭೆಗಳನ್ನು ಬೆಳೆಸುವಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅವರು ಇಂದು ಘೋಷಿಸಿರುವ 'ದಿ ಸ್ಕ್ರಿಪ್ಟ್ ಕ್ರಾಫ್ಟ್' ಅಭಿಯಾನವು ಪ್ರಪಂಚದಾದ್ಯಂತ ಇರುವ ಕಿರುಚಿತ್ರ ನಿರ್ದೇಶಕರು ಮತ್ತು ಕಥೆಗಾರರಿಗೆ ಸಿನಿಮಾ ರಂಗಕ್ಕೆ ನೇರ ಪ್ರವೇಶ ಒದಗಿಸುವ ಗುರಿಯನ್ನು ಹೊಂದಿದೆ.

ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತ ʻಬಾಹುಬಲಿʼ ನಟ ಪ್ರಭಾಸ್‌

-

Avinash GR
Avinash GR Dec 20, 2025 9:02 PM

ಬಾಹುಬಲಿ, ಸಲಾರ್ ಮತ್ತು ಕಲ್ಕಿ 2898 AD ಸಿನಿಮಾಗಳ ಮೂಲಕ ಬ್ಲಾಕ್‌ಬಸ್ಟರ್ ಚಿತ್ರಗಳ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್, ಈಗ ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತಿದ್ದಾರೆ. ಪ್ರತಿಭಾವಂತ ಕಥೆಗಾರರನ್ನು ಗುರುತಿಸಿ ಅವರಿಗೆ ಜಾಗತಿಕ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಭಾಸ್ 'ದಿ ಸ್ಕ್ರಿಪ್ಟ್ ಕ್ರಾಫ್ಟ್ ಇಂಟರ್ನ್ಯಾಷನಲ್ ಶಾರ್ಟ್ ಫಿಲ್ಮ್ ಫೆಸ್ಟಿವಲ್' (The Script Craft International Short Film Festival) ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ.

ಈ ಕ್ರಾಂತಿಕಾರಿ ವೇದಿಕೆಯು ಪ್ರಪಂಚದಾದ್ಯಂತ ಇರುವ ಉದಯೋನ್ಮುಖ ನಿರ್ದೇಶಕರು ಮತ್ತು ಕಥೆಗಾರರಿಗೆ ಸಿನಿಮಾ ರಂಗಕ್ಕೆ ನೇರ ಪ್ರವೇಶ ಒದಗಿಸುವ ಗುರಿಯನ್ನು ಹೊಂದಿದೆ. ಈ ವೇದಿಕೆಯ ಪ್ರಮುಖಾಂಶಗಳು ಹೀಗಿವೆ. ಈ ಸ್ಪರ್ಧೆಯಲ್ಲಿ ವಿಶ್ವದ ಯಾವುದೇ ಮೂಲೆಯ ಕಥೆಗಾರರು ಭಾಗವಹಿಸಬಹುದು. 2 ನಿಮಿಷಕ್ಕಿಂತ ಹೆಚ್ಚಿನ ಅವಧಿಯ ಯಾವುದೇ ಶೈಲಿಯ (Genre) ಕಿರುಚಿತ್ರಗಳನ್ನು ಇಲ್ಲಿ ಸಲ್ಲಿಸಬಹುದು. ಈ ಉತ್ಸವದಲ್ಲಿ ವಿಜೇತರನ್ನು ಕೇವಲ ತೀರ್ಪುಗಾರರಲ್ಲದೆ, ಪ್ರೇಕ್ಷಕರ ಮತಗಳು, ಲೈಕ್‌ಗಳು ಮತ್ತು ರೇಟಿಂಗ್‌ಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

Spirit Movie: ಪ್ರಭಾಸ್ ‘ಸ್ಪಿರಿಟ್‌’ ಸಿನಿಮಾದಲ್ಲಿ ರಣಬೀರ್ ಕಪೂರ್? ಪಾತ್ರ ಏನು?

ನಿಮ್ಮ ವೃತ್ತಿಜೀವನಕ್ಕೆ ಇದು ಏಣಿ ಆಗಬಲ್ಲದು

ಹೌದು, ಸಲ್ಲಿಕೆಯಾದ ಪ್ರತಿಯೊಂದು ಚಿತ್ರವೂ ದೊಡ್ಡ ನಿರ್ಮಾಣ ಸಂಸ್ಥೆಗಳ ಗಮನಕ್ಕೆ ಬರಲಿದ್ದು, ಹೊಸ ಪ್ರತಿಭೆಗಳನ್ನು ಹುಡುಕುತ್ತಿರುವ ಪ್ರೊಡಕ್ಷನ್ ಹೌಸ್‌ಗಳಿಗೆ ಇದು ಉತ್ತಮ ವೇದಿಕೆಯಾಗಲಿದೆ. ಖ್ಯಾತ ನಿರ್ದೇಶಕರಾದ ಸಂದೀಪ್ ರೆಡ್ಡಿ ವಂಗಾ, ನಾಗ್ ಅಶ್ವಿನ್ ಮತ್ತು ಹನು ರಾಘವಪುಡಿ ಅವರಂತಹ ಸ್ಟಾರ್‌ ನಿರ್ದೇಶಕರ ಬೆಂಬಲ ಕೂಡ ಇದೆ. "ಕಿರುಚಿತ್ರ ನಿರ್ಮಾಣವು ಸಿನಿಮಾ ಕಲಿಯುವ ಅತ್ಯಂತ ಪ್ರಮುಖ ಹಂತ. ನಿಮ್ಮ ಕನಸನ್ನು ನನಸಾಗಿಸಲು ಇದು ಸರಿಯಾದ ಸಮಯ" ಎಂದು ಸಂದೀಪ್ ರೆಡ್ಡಿ ವಂಗಾ ಅವರು ಹೇಳಿದ್ದಾರೆ. ಮಹಾನಟಿ, ಕಲ್ಕಿ ಖ್ಯಾತಿ ನಿರ್ದೇಶಕ ನಾಗ್ ಅಶ್ವಿನ್, ತಾವು ಕೂಡ ಕಿರುಚಿತ್ರಗಳ ಮೂಲಕವೇ ಹೊಸ ಪ್ರತಿಭೆಗಳನ್ನು ಗುರುತಿಸಿರುವುದಾಗಿ ತಿಳಿಸಿದ್ದಾರೆ.‌

The Raja Saab: 'ಪ್ಯಾನ್‌ ಇಂಡಿಯಾ ಸ್ಟಾರ್‌' ಪ್ರಭಾಸ್‌ಗಾಗಿ ರೆಬೆಲ್‌ ಸಾಂಗ್‌ ಹಾಡಿದ 'ಕನ್ನಡಿಗ' ಸಂಜಿತ್ ಹೆಗ್ಡೆ; ಹಾಡು ಕೇಳಿದ್ಮೇಲೆ ‌'ಡಾರ್ಲಿಂಗ್‌' ಫ್ಯಾನ್ಸ್‌ ಥ್ರಿಲ್

ಕ್ವಿಕ್ ಟಿವಿ (Quick TV) ಜೊತೆಗೆ ವಿಶೇಷ ಒಪ್ಪಂದ

ಈ ಉತ್ಸವದ ವಿಶೇಷತೆಯೆಂದರೆ 'ಕ್ವಿಕ್ ಟಿವಿ' ಜೊತೆಗಿನ ಸಹಯೋಗ. ಇದರ ಮೂಲಕ 15 ಅತ್ಯುತ್ತಮ ನಿರ್ದೇಶಕರನ್ನು ಆಯ್ಕೆ ಮಾಡಿ, ಅವರಿಗೆ ಪೂರ್ಣ ಪ್ರಮಾಣದ 90 ನಿಮಿಷಗಳ ಚಿತ್ರಕಥೆಯನ್ನು ನೀಡಿ, ಸಂಪೂರ್ಣ ನಿರ್ಮಾಣ ವೆಚ್ಚವನ್ನು ಭರಿಸಿ, ಜಾಗತಿಕ ಮಟ್ಟದಲ್ಲಿ ಅವರ ಚಿತ್ರವನ್ನು ಬಿಡುಗಡೆ ಮಾಡಲು ನೆರವು ನೀಡಲಾಗುತ್ತದೆ. ಥಾಲ್ಲಾ ವೈಷ್ಣವ್ ಮತ್ತು ಪ್ರಮೋದ್ ಉಪ್ಪಲಪಾಟಿ ಅವರಿಂದ ಸ್ಥಾಪಿಸಲ್ಪಟ್ಟ 'ದಿ ಸ್ಕ್ರಿಪ್ಟ್ ಕ್ರಾಫ್ಟ್' ಈಗ ನೋಂದಣಿಗೆ ಮುಕ್ತವಾಗಿದೆ. ಆಸಕ್ತರು TheScriptCraft.com ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

ಸದ್ಯ 'ದಿ ರಾಜಾ ಸಾಬ್', 'ಫೌಜಿ', 'ಸ್ಪಿರಿಟ್' ಮತ್ತು 'ಕಲ್ಕಿ 2ʼ, ʻಸಲಾರ್ 2' ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ರಭಾಸ್, ಅದರ ನಡುವೆಯೇ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ.