ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Boy drowns: ದನಗಳಿಗೆ ನೀರು ಕುಡಿಸಲು ಹೋದ ಬಾಲಕ ನೀರುಪಾಲು..!!

ದನಗಳಿಗೆ ನೀರು ಕುಡಿಸಲು ಹೋಗಿದ್ದ ಬಾಲಕನೊಬ್ಬ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನ ಬಿದರೆ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಬಿದರೆ ಗ್ರಾಮದ ಮಂಜೇಂದ್ರ ಎಂಬುವರ ಮಗ ಯಶವಂತ(14)ಎಂದು ಗುರುತಿಸಲಾಗಿದೆ. ಶಾಲೆಗೆ ರಜೆ ಇದ್ದಿದ್ದರಿಂದ ದನಗಳನ್ನು ಮೇಯಿಸಿ ನಂತರ ನೀರು ಕುಡಿಸಲು ಕೆರೆಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರು ಪಾಲಾಗಿರುವ ಘಟನೆ ನಡೆದಿದೆ. ಕೆರೆಯ ಬಳಿ ಇಡೀ ಬಿದರೆ ಗ್ರಾಮವೇ ನೆರೆದಿತ್ತು.

ದನಗಳಿಗೆ ನೀರು ಕುಡಿಸಲು ಹೋದ ಬಾಲಕ ನೀರುಪಾಲು..!!

-

Profile
Ashok Nayak Oct 10, 2026 10:35 PM

ಗುಬ್ಬಿ: ದನಗಳಿಗೆ ನೀರು ಕುಡಿಸಲು ಹೋಗಿದ್ದ ಬಾಲಕನೊಬ್ಬ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನ ಬಿದರೆ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಬಿದರೆ ಗ್ರಾಮದ ಮಂಜೇಂದ್ರ ಎಂಬುವರ ಮಗ ಯಶವಂತ(14)ಎಂದು ಗುರುತಿಸಲಾಗಿದೆ.

ಶಾಲೆಗೆ ರಜೆ ಇದ್ದಿದ್ದರಿಂದ ದನಗಳನ್ನು ಮೇಯಿಸಿ ನಂತರ ನೀರು ಕುಡಿಸಲು ಕೆರೆಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರು ಪಾಲಾಗಿರುವ ಘಟನೆ ನಡೆದಿದೆ. ಕೆರೆಯ ಬಳಿ ಇಡೀ ಬಿದರೆ ಗ್ರಾಮವೇ ನೆರೆದಿತ್ತು.

ಇದನ್ನೂ ಓದಿ: Gubbi News: ವಿಜೃಂಭಣೆಯಿಂದ ಜರುಗಿದ ಸಿಡಿಲು ಬಸವಣ್ಣ ಪರೇವು ಜಾತ್ರೆ

ಮಾಹಿತಿ ತಿಳಿಯುತ್ತಿದ್ದಂತೆ ಚೇಳೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅಗ್ನಿಶಾಮಕ ದಳದ ನೆರವಿನಿಂದ ಬಾಲಕನ ಮೃತದೇಹವನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಳ್ಳಲಾಯಿತು.