SIRA News: ಸತ್ಯ ಮಾಪನ ಪರೀಕ್ಷೆ: ಗೋ ಗ್ಯಾಸ್ ಮಾಲೀಕನಿಗೆ ದಂಡ
ಶಿರಾ ನಗರದ ಆರ್ ಎಂ ಸಿ ಬಳಿಯಲ್ಲಿರುವ ಗೋ ಗ್ಯಾಸ್ ಎಲ್ಪಿಜಿ ಬಂಕ್ ನಲ್ಲಿ ಅಳತೆಯಲ್ಲಿ ಮೋಸ ನಡೆಯುತ್ತಿರುವುದರ ಬಗ್ಗೆ ಆಟೋ ಚಾಲಕರಿಂದ ಮಾಹಿತಿ ಪಡೆದ ಯೂತ್ ಕಾಂಗ್ರೆಸ್ ಮುಖಂಡರು ಗಳು ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ದೂರವಾಣಿ ಮೂಲಕ ಸಂಪರ್ಕಿಸಿದರು ಸ್ಥಳಕ್ಕೆ ಆಗಮಿಸಿದ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕ ರವೀಶ್ ಚಂದ್ರ ಪರಿಶೀಲಿಸಿದಾಗ ಬಂಕಿನವರು ಅಳತೆ ಮಾಪನದ ಸೀಲ್ ತೆಗೆದು ಹಾಕಿದ್ದರು

ಕಾನೂನುಮಾಪನ ಶಾಸ್ತ್ರ ಸಹಾಯಕ ನಿಯಂತ್ರಕ ರವೀಶ್ ಚಂದ್ರ, ಯುತ್ ಕಾಂಗ್ರೆಸ ನಗರಾಧ್ಯಕ್ಷ ಅಂಜನ್ ಕುಮಾರ್, ಗ್ರಾಮೀಣ ಅಧ್ಯಕ್ಷ ಹೇಮಂತ್, ಆಟೋ ಚಾಲಕರ ಸಂಘದ ಅಧ್ಯಕ್ಷ ಸಿದ್ದೇಶ್, ಆಟೋ ಚಾಲಕರು ಉಪಸ್ಥಿತರಿದ್ದರು.

ಶಿರಾ: ಶಿರಾ ನಗರದ ಆರ್ ಎಂ ಸಿ ಬಳಿಯಲ್ಲಿರುವ ಗೋ ಗ್ಯಾಸ್ ಎಲ್ಪಿಜಿ ಬಂಕ್ ನಲ್ಲಿ ಅಳತೆಯಲ್ಲಿ ಮೋಸ ನಡೆಯುತ್ತಿರುವುದರ ಬಗ್ಗೆ ಆಟೋ ಚಾಲಕರಿಂದ ಮಾಹಿತಿ ಪಡೆದ ಯೂತ್ ಕಾಂಗ್ರೆಸ್ ಮುಖಂಡರುಗಳು ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ದೂರವಾಣಿ ಮೂಲಕ ಸಂಪರ್ಕಿಸಿದರು ಸ್ಥಳಕ್ಕೆ ಆಗಮಿಸಿದ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕ ರವೀಶ್ ಚಂದ್ರ ಪರಿಶೀಲಿಸಿದಾಗ ಬಂಕಿನವರು ಅಳತೆ ಮಾಪನದ ಸೀಲ್ ತೆಗೆದು ಹಾಕಿದ್ದರು.
ಇದನ್ನೂ ಓದಿ: Tumkur (Sira) news: ಡಾ.ಅಂಬೇಡ್ಕರ್ ಜಯಂತಿ : ಚಿಂತನೆಗಳು ಮತ್ತು ಆಶಯ: ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ವಿಶೇಷ
ಸತ್ಯ ಮಾಪನ ಪರೀಕ್ಷೆ ಮಾಡಿದ ನಂತರ, ಗೋ ಗ್ಯಾಸ್ ಮಾಲೀಕನಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ ರೂಗಳ ದಂಡ ವಿಧಿಸಿರುತ್ತಾರೆ. ಗೋ ಗ್ಯಾಸ್ ಬಂಕ್ ನಲ್ಲಿ ಯಾವುದೇ ಮೂಲಸೌಕರ್ಯಗಳು ಇರುವುದಿಲ್ಲ ಈ ಕೂಡಲೇ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಬಂಕ್ ಅಧಿಕಾರಿಗಳಿಗೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಒಂದು ತಿಂಗಳ ಅವಕಾಶ ದೊಳಗೆ ಮೂಲಭೂತ ಸೌಕರ್ಯ ಒದಗಿಸದಿದ್ದರೆ ಮತ್ತೆ ಪ್ರತಿಪಡಿಸುವು ದಾಗಿ ಎಚ್ಚರಿಸಿದರು.
ಆಟೋ ಚಾಲಕರ ಪ್ರತಿಭಟನೆಗೆ ಸಾಥ್ ನೀಡಿದ ಯೂಥ್ ಕಾಂಗ್ರೆಸ್ ಮುಖಂಡರಿಗೆ ಆಟೋ ಚಾಲಕರ ಸಂಘದ ಅಧ್ಯಕ್ಷ ಸಿದ್ದೇಶ್ ಅಭಿನಂದಿಸಿದ್ದಾರೆ.