ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tumkur (Sira) news: ಡಾ.ಅಂಬೇಡ್ಕರ್ ಜಯಂತಿ : ಚಿಂತನೆಗಳು ಮತ್ತು ಆಶಯ: ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ವಿಶೇಷ

ಅಂಬೇಡ್ಕರ್ ಅವರ ಜೀವನ ಚಿಂತನೆ ಆಕಾಶದಷ್ಟು ಎತ್ತರ, ಸಮುದ್ರದಷ್ಟು ಆಳ, ಭಾರತದ ಸಾಮಾಜಿಕ, ರಾಜಕೀಯ, ಧಾರ್ಮಿಕ ಜೀವನದ ಮೇಲೆ ಅಂಬೇಡ್ಕರ್ ಅವರ ವ್ಯಕ್ತಿತ್ವ ಚಿಂತನೆಗಳ ಪ್ರಸ್ತುತತೆಯನ್ನು ಇಂದಿಗೂ ನಾವು ಕಾಣಬಹುದು. ಅಂಬೇಡ್ಕರ್ ಅವರ ಜೀವನ ಹೋರಾಟ ಜಗತ್ತಿನ ಇತಿಹಾಸದಲ್ಲಿಯೇ ಒಂದು ಅಪೂರ್ವವಾದ ಚಳುವಳಿ ಇವರ ಪ್ರಭಾವ ಭಾರತೀಯ ಜನ ಜೀವನದಲ್ಲಿ ಶತಮಾನಗಳಿಂದ ಬೇರು ಬಿಟ್ಟಿದ್ದ ವ್ಯವಸ್ಥೆ, ಸಂಪ್ರದಾಯ, ಜಡತ್ವಗಳು, ಕೊಚ್ಚಿ ಹೋಗಿ ಹೊಸತನದ ಹೊಸ ಆವಿಷ್ಕಾರಕ್ಕೆ ಹೊಸ ಆಯಾಮಕ್ಕೆ ದಾರಿ ಮಾಡಿ ಕೊಟ್ಟಿತು

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ವಿಶೇಷ

Profile Ashok Nayak Apr 14, 2025 2:25 PM

ಶಿರಾ: ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ಪ್ರಚಂಡ ಜ್ಞಾನ, ಅಸಮಾನ್ಯ ಪ್ರತಿಭೆ ಹಾಗೂ ಮಹಾ ಸಾಧನೆಗಳನ್ನು ಗುರುತಿಸಿದ ವಿಶ್ವ ಸಂಸ್ಥೆಯು ಏ.13ರಂದು ಡಾ.ಬಿ.ಆರ್ ಅಂಬೇ ಡ್ಕರ್ ಅವರ 125 ನೇ ಜನ್ಮದಿನವನ್ನು ವಿಶ್ವ ಜ್ಞಾನ ಎಂದು ಆಚರಿಸಲಾಯಿತು. ಬಾಬಾ ಸಾಹೇಬ್ ಡಾ. ಬಿ.ಆರ್  ಅಂಬೇಡ್ಕರ್ ಅವರು ಭಾರತದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಮಾನವ ಘನತೆ ಮತ್ತು ಹಕ್ಕುಗಳಿಗಾಗಿ ಸುಮಾರು ನಾಲ್ಕು ದಶಕಗಳ ಕಾಲ ಹೋರಾಡಿದ ಮಹಾನ್ ನಾಯಕ, ಅವರ ಚಿಂತನೆಗಳು ಜಗತ್ತಿನ ಮಾನವ ಕುಲಕ್ಕೆ ಸರ್ವಕಾಲಕ್ಕೂ ಪ್ರಸ್ತುತವಾದಂತಹವು ಗಳಾಗಿವೆ.

ಇಂತಹ ಜಗತ್ತು ಕಂಡ ಮಹಾನ್ ಮಾನವತಾವಾದಿ, ದಾರ್ಶನಿಕ, ವಿಶ್ವ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನವು ಕೇವಲ ಒಂದು ಚರಿತ್ರೆಯಲ್ಲದೆ ಅದೊಂದು ಯುಗದ ಚರಿತ್ರೆ ಯಾಗಿದೆ ಹಾಗೂ ಸ್ಪೂರ್ತಿಯ ಚರಿತ್ರೆಯಾಗಿದೆ.

ಅಂಬೇಡ್ಕರ್ ಅವರ ಜೀವನ ಚಿಂತನೆ ಆಕಾಶದಷ್ಟು ಎತ್ತರ, ಸಮುದ್ರದಷ್ಟು ಆಳ, ಭಾರತದ ಸಾಮಾಜಿಕ, ರಾಜಕೀಯ, ಧಾರ್ಮಿಕ ಜೀವನದ ಮೇಲೆ ಅಂಬೇಡ್ಕರ್ ಅವರ ವ್ಯಕ್ತಿತ್ವ ಚಿಂತನೆಗಳ ಪ್ರಸ್ತುತತೆಯನ್ನು ಇಂದಿಗೂ ನಾವು ಕಾಣಬಹುದು. ಅಂಬೇಡ್ಕರ್ ಅವರ ಜೀವನ ಹೋರಾಟ ಜಗತ್ತಿನ ಇತಿಹಾಸದಲ್ಲಿಯೇ ಒಂದು ಅಪೂರ್ವವಾದ ಚಳುವಳಿ ಇವರ ಪ್ರಭಾವ ಭಾರತೀಯ ಜನ ಜೀವನದಲ್ಲಿ ಶತಮಾನಗಳಿಂದ ಬೇರು ಬಿಟ್ಟಿದ್ದ ವ್ಯವಸ್ಥೆ, ಸಂಪ್ರದಾಯ, ಜಡತ್ವಗಳು, ಕೊಚ್ಚಿ ಹೋಗಿ ಹೊಸತನದ ಹೊಸ ಆವಿಷ್ಕಾರಕ್ಕೆ ಹೊಸ ಆಯಾಮಕ್ಕೆ ದಾರಿ ಮಾಡಿ ಕೊಟ್ಟಿತು. 

ಇದನ್ನೂ ಓದಿ: Tumakuru railway station: ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರು ಅಂತಿಮ

ಡಾ.ಅಂಬೇಡ್ಕರ್ ರವರು ರಾಷ್ಟ್ರೀಯವಾದಿ, ಕಾನೂನು ತಜ್ಞ, ರಾಜಕೀಯ ಸೇವಕ, ಕ್ರಿಯಾಶೀಲ, ಸಾಮಾಜಿಕ ಕಾರ್ಯಕರ್ತ, ಶ್ರೇಷ್ಠ ಇತಿಹಾಸಗಾರ, ಮಹಾದಾರ್ಶನಿಕ, ಅಪ್ರತಿಮ ಚಿಂತಕ, ಮಾನವ ಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಮೃದ್ಧ ಬರಹಗಾರ, ಕ್ರಾಂತಿಕಾರಿ, ಅಸಾಮಾನ್ಯ ವಾಕ್ಪಟು, ಅಪ್ರತಿಮ ನಾಯಕ, ಬೌದ್ಧ ಧರ್ಮದ ಪುನರುಜ್ಜೀವಕ, ಭಾರತ ರತ್ನ, ಸಂವಿಧಾನಶಿಲ್ಪಿ, ವಿಶ್ವ ರತ್ನ, ಇವರ ಜನ್ಮ ಜಯಂತಿಯನ್ನು ಪ್ರಪಂಚದಲ್ಲೆಡೆ ಸ್ವಾಭಿಮಾನದ ಸಂಕೇತವಾಗಿ ಆಚರಿಸುತ್ತಾರೆ ಅದರಲ್ಲೂ ಭಾರತದಲ್ಲಿ ದಲಿತರು ಹಿಂದುಳಿದವರು ಶೋಷಿತರು ಹೆಚ್ಚಾಗಿ ತಮ್ಮ ಬಿಡುಗಡೆಯ ನಾಯಕ ಎಂದು ಆರಾಧಿಸುತ್ತಾ ಅವರ ಜಯಂತಿಯನ್ನು ಆಚರಿಸುತ್ತಾರೆ.

ಅಂಬೇಡ್ಕರ್ ರವರ ಕುರಿತ ಯಾವುದೇ ಕಾರ್ಯಕ್ರಮ ದಲಿತರ, ಹಿಂದುಳಿದರವರ, ತಳ ಸಮು ದಾಯಗಳ ಸ್ವಾಭಿಮಾನವನ್ನು ಬಡಿದೆಬ್ಬಿಸಿರಬಹುದು ಆದರೆ ಇಂದು ಹಿಂದಿನ ಪರಿಸ್ಥಿತಿ ಇಲ್ಲ ಅಪಾಯದ ಕರೆಗಂಟೆ ಮತ್ತೆ ಮತ್ತೆ ಎಚ್ಚರಿಸುತ್ತದೆ ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡು ಜನಪ್ರಿಯ ಕಾರ್ಯಗಳಿಂದ ಹೊರಬರಬೇಕು ಮತ್ತು ಜನಹಿತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಇದಾಗ ದಿದ್ದರೆ ಈ ದೇಶದ ಬಡವರ, ದಮನಿತರ, ಅಸಹಾಯಕರ, ಮಹಿಳೆಯರ ವಿನಾಶಕ್ಕೆ ಮುನ್ನುಡಿ ಬರೆದಂತಾಗುತ್ತದೆ.

ದೇಶದಲ್ಲಿ ಆಳುವ ವರ್ಗಕ್ಕೆ ಅಂಬೇಡ್ಕರ್ ರವರು ಕಂಡ ಸಮ ಸಮಾಜದ ಪರಿಕಲ್ಪನೆ ಬೇಕಾಗಿಲ್ಲ  ಇದರ ಆದಿಯಾಗಿ ಈ ದೇಶದ ಬಂಡವಾಳಶಾಹಿಗಳು ಅಂಬೇಡ್ಕರ್ ಆಶಯಗಳನ್ನು ಪ್ರಾಯೋಗಿಕ ವಾಗಿ ಮೂಲೆಗುಂಪು ಮಾಡುತ್ತಲೇ ಬಂದಿದ್ದಾರೆ ಬಾಬಾ ಸಾಹೇಬರ ಚಿಂತನೆಗಳನ್ನು ಕುಲುಮೆ ಯಲ್ಲಿ ಬಡಿದು ತಮಗೆ ಬೇಕಾದಂತೆ ಬಗ್ಗಿಸುವ ಬಾಲಿಷ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ.

ಅಂಬೇಡ್ಕರ್ ಅವರನ್ನು ದಲಿತರಿಗೆ ಮಾತ್ರವೇ ಸೀಮಿತಗೊಳಿಸಿ ದಲಿತರನ್ನು ಜೊತೆಗೆ ಇತರೆ ವರ್ಗದ ಜನರನ್ನು ಹಾಗೆ ನಂಬಿಸಲಾಗಿದೆ ಬಹುಶಃ ಇದು ಪಟ್ಟಭದ್ರರ ವ್ಯವಸ್ಥಿತ ಷಡ್ಯಂತ್ರವೂ ಇರಬಹುದು ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಲಿತರಿಗೆ ಮಾತ್ರವೇ ನಾಯಕರಲ್ಲ ಎನ್ನುವುದು ಅಷ್ಟೇ ಸತ್ಯ ಮತ್ತು ಅವರು ಮಹಾ ಮಾನವತಾವಾಗಿಯೂ ಸಮಾಜ ವಿಜ್ಞಾನಿಯು ಜನನಾಯಕರು ಆಗಿದ್ದಾರೆ. ಹೀಗಾಗಿಯೇ, ಕೊಲಂಬಿಯ ವಿಶ್ವವಿದ್ಯಾಲಯ ಅಂಬೇಡ್ಕರ್ ಅವರನ್ನು 'ಪ್ರತಿಭೆಯ ಚಿಲುಮೆ' ಎಂದು ಕರೆದಿದೆ ವಿಶ್ವ ಸಂಸ್ಥೆಯು ಅಂಬೇಡ್ಕರ್ ಅವರ ವಿದ್ವತ್ತನ್ನು ಗುರುತಿಸಿ ವಿಶ್ವ ಜ್ಞಾನ ದಿನಾಚರಣೆ ಎಂದು ಆಚರಿಸಿದೆ ಇದು ಭಾರತೀಯರಾದ ನಾವು ಹೆಮ್ಮೆ ಪಡಬೇಕಾದ ಸಂಗತಿ.

ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಅವರ ಸಂಘಟನೆ ಮತ್ತು ಹೋರಾಟ ಸಾಮಾಜಿಕ ಬದ್ಧತೆ ಆಚಲ ರಾಷ್ಟ್ರೀಯತೆ ಚಿಂತನೆಗಳನ್ನು ವಿದ್ಯಾವಂತರು ಅದರಲ್ಲೂ ಯುವ ಜನತೆ ಹೆಚ್ಚು ಹೆಚ್ಚು ಅರಿತುಕೊಳ್ಳಬೇಕು. ಅಂಬೇಡ್ಕರ್ ಅವರ ಚಳುವಳಿ ಅಂತ್ಯವಿಲ್ಲದ ನಿರಂತರ ಹೋರಾಟ ಇವರು ಜೀವನದ ಒಂದು ಕ್ಷಣವನ್ನು ವ್ಯರ್ಥ ಕಳೆಯದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಬದುಕಿನ ಕೊನೆಯ ಗಳಿಗೆಯವರೆಗೂ ಓದು ಬರಹಗಳಲ್ಲಿ ತೊಡಗಿದ್ದರು. ಜ್ಞಾನ ಸಾಧನೆ ಮಾಡುತ್ತಲೇ ಇದ್ದರು ಬುದ್ದನಂತೆ ಜ್ಞಾನ ಪ್ರಾಪ್ತಿಗೆ ಪರಿತಪಿಸುತ್ತಿದ್ದರು ಅದೇರೀತಿಯಲ್ಲಿ ಇಂದಿನ ಯುವಕರು ಸಹ ಓದು ಬರಹಗಳಲ್ಲಿ ತೊಡಗಿಸಿಕೊಳ್ಳಬೇಕು.

ಡಾ ಅಂಬೇಡ್ಕರರು ತಾವು ಸ್ವತಃ ಮೊದಲು ಭಾರತೀಯರು ಕೊನೆಗೂ ಭಾರತೀಯರೆಂದೆ ಭಾವಿಸು ತ್ತಿದ್ದರು. ಈ ಭಾರತೀಯತ್ವಕ್ಕೆ ಧಾರ್ಮಿಕತೆಯ ಸೋಂಕು ತಾಕದಂತೆ ಅವರು ನೋಡಿಕೊಂಡರು ಅವರ ರೋಮ ರೋಮಗಳಲ್ಲೂ ಪ್ರಜಾಸತ್ತತೆ ಹಾಸುಹೊಕ್ಕಾಗಿ ವ್ಯಾಪಿಸಿದ್ದರಿಂದ ಅವರು ಅನೇಕ ನಿವೇದನೆಗಳನ್ನು ಸ್ವತಃ ಸಿದ್ಧಗೊಳಿಸಿದರು ಅವರು ತಮ್ಮ ಪಕ್ಷದ ಹೆಸರಿನಲ್ಲಿ ಅವುಗಳನ್ನು ಸಾದರ ಪಡಿಸುತ್ತಿದ್ದರು, ವ್ಯಕ್ತಿ ಪೂಜೆ ಪ್ರಜಾಸತ್ತೆಯ ವಿಕೃತಿಯೆಂದು ಅವರು ಹೇಳಿದ್ದರು ಪಾರ್ಲಿಮೆಂಟಲ್ಲಿ ಕೂಡ ಪ್ರಜಾಸತ್ತಾತ್ಮಕ ಸಂಕೇತಗಳ ಉಲ್ಲಂಘನೆಯಾಗದಂತೆ ಅವರು ದಕ್ಷತೆ ವಹಿಸುತ್ತಿದ್ದರು.

ಬಾಬಾ ಸಾಹೇಬರಿಗೆ ಯಾವುದೇ ಸ್ಥಾನಮಾನ ಅಥವಾ ಸಂಪತ್ತಿನ ಮೋಹವೆಂದು ಭಾದಿಸಲಿಲ್ಲ ಭಾರತದೊಳಗಿನ ಸರ್ವೋಚ್ಚ ಹುದ್ದೆಗಳು ತಾವಾಗಿಯೇ ಅವರನ್ನು ಹರಿಸುತ್ತಾ ಬಂದವು ಹೈಕೋರ್ಟ್ ನ್ಯಾಯಾಧೀಶ ಹುದ್ದೆ ಅವರಿಗೆ ಸಿಗುವುದಿತ್ತು ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ಕೂಡ ಅವರ ಹೆಸರು ಚರ್ಚೆಯಲ್ಲಿ ಬಂದಿತ್ತು ಆದರೆ ಅವರು ಈ ಯಾವ ಸ್ಥಾನಗಳ ಬೆನ್ನು ಹತ್ತಲಿಲ್ಲ ಯಾವ ಹುದ್ದೆಗಳು ತಾವಾಗಿಯೇ ಅವರ ಬಳಿ ಬಂದವೋ ಅವುಗಳನ್ನು ಅವರು ತಮ್ಮ ಕಾಲ ಬಳಿಯೇ ಇಟ್ಟರು ಪ್ರಸಂಗ ಬಂದಾಗ ಅವುಗಳನ್ನು ಮುನ್ನಡೆಸಿದರು. ಈ ರೀತಿಯ ತ್ಯಾಗ ಮನೋಭಾವ ಇಂದಿನ ರಾಜಕೀಯ ಹಾಗೂ ಸೈದಾಂತಿಕ ನಾಯಕರಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು. ಜಾತಿ ಎನ್ನುವ ಕಲ್ಪನೆ ಪೂರ್ತಿಯಾಗಿ ಅಳಿಯದ ಹೊರತು ಅಂಬೇಡ್ಕರ್ ರವರನ್ನು ನೋಡುವ ಪರಿಕಲ್ಪನೆ ಬದಲಾಗದು ಆದರೆ ಅದನ್ನು ಬದಲಿಸುವ ಶಕ್ತಿ ಇಂದಿನ ಯುವಕರಲ್ಲಿದೆ ಮತ್ತು ಅಂಬೇ ಡ್ಕರ್ ಅವರ ಸೈದ್ಧಾಂತಿಕ ಮಾರ್ಗ ಅನುಸರಿಸುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅವಲಂಬಿತ ವಾಗಿದೆ.

ನಿಮ್ನ ವರ್ಗದವರಲ್ಲಿ ಮಾನವೀಯ ಘನತೆ ಭಾವವನ್ನು ಸ್ವಾಭಿಮಾನವನ್ನು ಕುದುರಿಸುವುದು ಅಂಬೇಡ್ಕರರ ಜೀವನ ಧ್ಯೇಯವಾಗಿತ್ತು ಯಾರು ಬೇಕಾದರೂ ತುಳಿಯಬಹುದಾದ ಮಣ್ಣಿನ ಮುದ್ದೆಗಳನ್ನು ಮನುಷ್ಯರನ್ನಾಗಿಸಬೇಕಾಗಿತ್ತು ಹಾಗೆಂದೇ ಅವರು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಸ್ವಂತದ ಬುದ್ಧಿಯನ್ನು ಉಪಯೋಗಿಸಿಕೊಳ್ಳಬೇಕು ವಿದ್ಯಾರ್ಥಿ ಜೀವನದ ಪರಿಶ್ರಮದಲ್ಲಿ ಸಾಮಾಜಿಕ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು ಎಂದು ಯುವಕರಿಗೆ ಉಪದೇಶವನ್ನು ಹೇಳು ತ್ತಿದ್ದರು. 

ಗುರಿಯೊಂದನ್ನು ಇರಿಸಿಕೊಳ್ಳದವ ದಾರಿಗೆಡುತ್ತಾನೆ ಹಿರಿಯ ಗುರಿಯನ್ನು ಇರಿಸಿಕೊಂಡು ಅದಕ್ಕಾಗಿ ನಿಷ್ಠೆಯಿಂದ ದುಡಿದವ ತನ್ನ ಹಿತವನಲ್ಲದೆ ತನ್ನ ಸಮಾಜದ ಹಿತವನ್ನು ಸಾಧಿಸಬಲ್ಲವನಾಗುತ್ತಾನೆ ಎಂಬುದನ್ನು ಬಾಬಾ ಸಾಹೇಬರು ತಮ್ಮ ಬದುಕಿನ ಮೂಲಕವೇ ನಮ್ಮೆಲ್ಲರಿಗೂ ತೋರಿಸಿಕೊಟ್ಟಿ ದ್ದಾರೆ.

ಕೊನೆಯದಾಗಿ ಅವರು ಬೌದ್ಧ ಧರ್ಮದಲ್ಲಿ ತಮ್ಮ ಪರಿಕಲ್ಪನೆಯ ಧರ್ಮದ ಸರ್ವ ಲಕ್ಷಣಗಳನ್ನು ಕಾಣುತ್ತಾರೆ, ಅಸ್ಪೃಶ್ಯರು ಒಂದಾನೊಂದು ಕಾಲದಲ್ಲಿ ಬೌದ್ಧರಾಗಿದ್ದರೆಂಬ ಪ್ರಜಾ ಸತ್ತಾತ್ಮಕ ವಾದದ್ದೆಂಬ ಪ್ರೇಮ ಕರುಣೆಗಳು ಅವರ ಜೀವಾಳವೆಂಬ ಅದರ ಸ್ವೀಕಾರದಿಂದ ಅಸ್ಪೃಶ್ಯರು ವಿಶ್ವ ಭ್ರಾತೃತ್ವದ ಕಡೆಗೆ ವಾಲುತ್ತಾರೆಂಬ ಕಾರಣಗಳು ಅವರ ಮುತಾಂತರ ನಿರ್ಧಾರಕ್ಕೆ ಕಾರಣ ವಾಯಿತು, ಅವರು ಹಾಕಿಕೊಟ್ಟ ಮಾರ್ಗವನ್ನು ಅನುಸರಿಸುವುದು ಸಮ ಸಮಾಜದ ಪರಿಕಲ್ಪನೆ ಹೊತ್ತ ಎಲ್ಲಾರಿಗೂ ಅತ್ಯಗತ್ಯ.

ಈ ಲೇಖನದ ಉದ್ದೇಶ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯಿಂದ ಸಾವಿರಾರು ಕನ್ನಡಿಗರು ಮತ್ತೆ ಮತ್ತೆ ಪ್ರೇರಣೆ ಪಡೆಯಲಿ ಹಾಗೂ ಈ ಜಗತ್ತೇ ನಿಬ್ಬೆರಗಾಗುವಷ್ಟು ಕೆಲಸ ಮಾಡಿದ ದುರ್ಬಲರ ಬಾಳಿಗೆ ದಿಕ್ಸೂಚಿಯಾದ ಅಂಬೇಡ್ಕರ್ ರವರ ಆಶಯವನ್ನು ಹೊತ್ತು ಮಂದಗತಿಯಿಂದ ನಡೆಯದೆ ತೀವ್ರಗತೆಯಲ್ಲಿ ನಡೆದು ಸಾಧನೆಯ ಪಥವನ್ನು ಮುಟ್ಟಬೇಕು ಎಂಬುದೇ ಈ ಲೇಖನದ ಉದ್ದೇಶವಾಗಿದೆ ಕಾರಣ ಡಾ. ಅಂಬೇಡ್ಕರ್ ಅವರ ಜೀವನ ಚರಿತ್ರೆ ಭಾರತದ ಇತಿಹಾಸದಲ್ಲೇ ಒಂದು ಮೈಲಿಗಲ್ಲು.