ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli Crime: ವಿದ್ಯುತ್ ಕಂಬದಿಂದ ಬಿದ್ದು ಲೈನ್‌ಮನ್ ಸಾವು

ಬಾಗಲಕೋಟೆ ಜಿಲ್ಲೆ ಗಜೇಂದ್ರಗಡದ ಮುತ್ತು ಉಳ್ಳಪ್ಪ (28) ಮೃತಪಟ್ಟವರು. ತಿಮ್ಮನಹಳ್ಳಿ ಉಪ ವಿಭಾಗದಲ್ಲಿ 8 ವರ್ಷಗಳಿಂದ ಇವರು ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಪತ್ನಿ ಚಿಕ್ಕವಯಸ್ಸಿನ ಮಗಳು ಇದ್ದಾರೆ. ವಿದ್ಯುತ್ ಲೈನ್ ಸಮಸ್ಯೆಯಾಗಿದೆ ಎಂದು ಸ್ಥಳಿಯರು ಶಾಖಾಧಿಕಾರಿಗೆ ವಿಷಯ ತಿಳಿಸಿದ್ದಾರೆ.

ವಿದ್ಯುತ್ ಕಂಬದಿಂದ ಬಿದ್ದು ಲೈನ್‌ಮನ್ ಸಾವು

Ashok Nayak Ashok Nayak Aug 16, 2025 11:15 PM

ಚಿಕ್ಕನಾಯಕನಹಳ್ಳಿ : ಅಜ್ಜಿಗುಡ್ಡೇ ಸಮೀಪ ವಿದ್ಯುತ್ ತಂತಿ ಸರಿಪಡಿಸಲು ಕಂಬವನ್ನೇರಿ ಕೆಲಸ ಮಾಡುತ್ತಿದ್ದಾಗ ಕಂಬದಲ್ಲಿ ಅಳವಡಿಸಿದ್ದ ಕ್ಲಾಂಪ್ ಆಕಸ್ಮಿಕವಾಗಿ ಮುರಿದ ಪರಿಣಾಮ ಕಂಬದಿಂದ ಬಿದ್ದು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಬಾಗಲಕೋಟೆ ಜಿಲ್ಲೆ ಗಜೇಂದ್ರಗಡದ ಮುತ್ತು ಉಳ್ಳಪ್ಪ (28) ಮೃತಪಟ್ಟವರು. ತಿಮ್ಮನಹಳ್ಳಿ ಉಪ ವಿಭಾಗದಲ್ಲಿ 8 ವರ್ಷಗಳಿಂದ ಇವರು ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಪತ್ನಿ ಚಿಕ್ಕವಯಸ್ಸಿನ ಮಗಳು ಇದ್ದಾರೆ. ವಿದ್ಯುತ್ ಲೈನ್ ಸಮಸ್ಯೆಯಾಗಿದೆ ಎಂದು ಸ್ಥಳಿಯರು ಶಾಖಾಧಿಕಾರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: Chikkanayakanahalli News: ಚಿಕ್ಕನಾಯಕನಹಳ್ಳಿಯಲ್ಲಿ ಇನ್ನೂ ಖಾಸಗಿ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದೆ ಅಬಕಾರಿ ಇಲಾಖೆ: ದಂಧೆ ರೂಪ ಪಡೆದ ಬಾಡಿಗೆ ವಹಿವಾಟು?

ಈ ಸಂಬಂಧ ಕಾತ್ರಿಕೆಹಾಲ್ ವ್ಯಾಪ್ತಿಯ ಲೈನ್‌ಮನ್ ಮುತ್ತು ಅವರಿಗೆ ವಿದ್ಯುತ್ ಲೈನ್ ದುರಸ್ತಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಮುತ್ತು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಲೈನ್ ಸರಿಪಡಿಸುವ ವೇಳೆ ಆಕಸ್ಮಿಕವಾಗಿ ಕ್ಲಾಂಪ್ ಮುರಿದು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಸ್ಥಳಿಯರು ತಿಳಿಸಿ ದ್ದಾರೆ.

ತಿಮ್ಮನಹಳ್ಳಿ ಶಾಖಾಧಿಕಾರಿ ರಘು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಮುತ್ತು ಉಳ್ಳಪ್ಪ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಬೆಸ್ಕಾಂ ಇಇ ಸೋಮ ಶೇಖರಗೌಡ, ಎಇಇ ಗವಿರಂಗಪ್ಪ, ಶೆಟ್ಟಿಕೆರೆ ಎಸ್‌ಓ ಇರ್ಫಾನ್, ಸಹಾಯಕ ಗೂಳೂರು ನಾಗರಾಜ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂಬAಧ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.