ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gubbi News: ಪ್ರಸ್ತುತ ದಿನಮಾನದಲ್ಲಿ ದೈಹಿಕ ಆರೋಗ್ಯ ಮುಖ್ಯ: ಜಿ.ಪ್ರಸನ್ನಕುಮಾರ್

ಕ್ರೀಡಾ ಜಗತ್ತಿನಲ್ಲಿ ಬೆಳೆದ ಸಾವಿರಾರು ಮಂದಿ ಬದುಕು ಕಂಡುಕೊಂಡಿದ್ದಾರೆ. ನಗರ ಪ್ರದೇಶದಲ್ಲಿ ಮಕ್ಕಳನ್ನು ಕೈಹಿಡಿದು ನಡೆಸುವ ದೃಶ್ಯ ನೋಡುತ್ತೇವೆ. ಶಾಲೆ ಅಷ್ಟೇ ನೋಡುವ ಮಕ್ಕಳು ಇನ್ನಿತರ ಚಟುವಟಿಕೆ ಬಗ್ಗೆ ತೊಡಗದೆ ಚಿಕ್ಕ ವಯಸ್ಸಿನಲ್ಲೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಆಟದಲ್ಲಿ ತೊಡಗಿಸಬೇಕು. ಮೈದಾನದಲ್ಲಿ ಬೆವರು ಹರಿಸಿ ಆಟ ಆಡಿದ್ದಲ್ಲಿ ದೈಹಿಕ ಆರೋಗ್ಯ ಪ್ರಾಪ್ತಿಯಾಗುತ್ತದೆ. ನಂತರ ಮಾನಸಿಕ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ

ಪ್ರಸ್ತುತ ದಿನಮಾನದಲ್ಲಿ ದೈಹಿಕ ಆರೋಗ್ಯ ಮುಖ್ಯ: ಜಿ.ಪ್ರಸನ್ನಕುಮಾರ್

-

Profile
Ashok Nayak May 17, 2026 10:02 PM

ಗುಬ್ಬಿ: ಒತ್ತಡದ ಜೀವನದ ಮಧ್ಯೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಕ್ರೀಡೆ ಉತ್ತಮ ಮಾರ್ಗವಾಗಿದೆ. ಪ್ರಸ್ತುತ ದಿನಮಾನದಲ್ಲಿ ಆರೋಗ್ಯದತ್ತ ಎಲ್ಲರೂ ಗಮನಹರಿಸಬೇಕು ಎಂದು ಜಿ.ಎಚ್.ಗುರು ಧರ್ಮಾರ್ಥ ಟ್ರಸ್ಟ್ ಅಧ್ಯಕ್ಷ ಜಿ.ಪ್ರಸನ್ನಕುಮಾರ್ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀ ಚನ್ನಬಸವೇಶ್ವರ ಯುವಕ ಸಂಘ ಆಯೋಜಿಸಿದ್ದ ಬೇಸಿಗೆ ಉಚಿತ ತರಬೇತಿ ಶಿಬಿರ-2026 ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಮಕ್ಕಳಲ್ಲಿ ದೈಹಿಕ ಸಾಮರ್ಥ್ಯ ಹೆಚ್ಚಿಸುವ ಕೆಲಸ ಈ ಕ್ರೀಡಾ ಸಂಘ ನಿರಂತರ ನಡೆಸಿದೆ. ಶಂಕರ್ ಕುಮಾರ್ ನಿಜವಾದ ಕ್ರೀಡಾ ಪ್ರೋತ್ಸಾಹಕರು ಎಂದರು.

ಕ್ರೀಡಾ ಜಗತ್ತಿನಲ್ಲಿ ಬೆಳೆದ ಸಾವಿರಾರು ಮಂದಿ ಬದುಕು ಕಂಡುಕೊಂಡಿದ್ದಾರೆ. ನಗರ ಪ್ರದೇಶದಲ್ಲಿ ಮಕ್ಕಳನ್ನು ಕೈಹಿಡಿದು ನಡೆಸುವ ದೃಶ್ಯ ನೋಡುತ್ತೇವೆ. ಶಾಲೆ ಅಷ್ಟೇ ನೋಡುವ ಮಕ್ಕಳು ಇನ್ನಿತರ ಚಟುವಟಿಕೆ ಬಗ್ಗೆ ತೊಡಗದೆ ಚಿಕ್ಕ ವಯಸ್ಸಿನಲ್ಲೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಆಟದಲ್ಲಿ ತೊಡಗಿಸಬೇಕು. ಮೈದಾನದಲ್ಲಿ ಬೆವರು ಹರಿಸಿ ಆಟ ಆಡಿದ್ದಲ್ಲಿ ದೈಹಿಕ ಆರೋಗ್ಯ ಪ್ರಾಪ್ತಿಯಾಗುತ್ತದೆ. ನಂತರ ಮಾನಸಿಕ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ ಎಂದರು.

ಇದನ್ನೂ ಓದಿ: Gubbi News: ತ್ವರಿತವಾಗಿ ಜನರಿಗೆ ಜಾಗೃತಿ ಮೂಡಿಸಲು ಸುಲಭ ಸಂವಹನ ಸಾಧನ ಡಿಜಿಟಲ್‌ ಮಾಧ್ಯಮ

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪವನ್ ಮಾತನಾಡಿ ಗ್ರಾಮೀಣ ಆಟಗಳಾದ ಖೊಖೋ, ಕಬಡ್ಡಿ ಶ್ರಮದಾಯಕ ಕ್ರೀಡೆ ಎನಿಸಿದೆ. ಈ ಆಟಗಳು ಹಳ್ಳಿಗಾಡಿನ ಮಕ್ಕಳಲ್ಲಿ ಮಾತ್ರ ಮೈಗೂಡಿವೆ. ನಗರ ಪ್ರದೇಶದಲ್ಲಿ ಮಕ್ಕಳಿಗೆ ಕೇವಲ ಅಂಕಗಳಿಕೆಗೆ ಮಾತ್ರ ಪ್ರಾಧಾನ್ಯತೆ ನೀಡುತ್ತಾರೆ. ದೈಹಿಕ ಕಸರತ್ತು ಎಂಬುದು ಏಕಾಗ್ರತೆ ಸಾಧಿಸಲು ಸಹ ಮಾರ್ಗಸೂಚಿಯಾಗಿದೆ. ಶಾಲೆಯಲ್ಲಿ ಇರುವ ಕ್ರೀಡೆಯ ಸಮಯವನ್ನು ಪಾಠ ಕಲಿಸಲು ಬಳಸುವುದು ಸೂಕ್ತವಲ್ಲ ಎಂದರು.

ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಜಿ.ಎಸ್.ವಿಶ್ವನಾಥ್ ಮಾತನಾಡಿ ಕ್ರೀಡಾ ಚಟು ವಟಿಕೆಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕೆಲಸ ಪೋಷಕರು ಮಾಡಬೇಕು. ಕ್ರೀಡಾ ಪಂದ್ಯಾವಳಿ ನಡೆಸುವುದು ಸುಲಭದ ಮಾತಲ್ಲ. ಚನ್ನಬಸವೇಶ್ವರ ಯುವಕ ಸಂಘ ಕಳೆದ 50 ವರ್ಷದಿಂದ ಕ್ರೀಡಾ ಚಟುವಟಿಕೆ ನಿರಂತರ ನಡೆಸಿದೆ. ಅಂತರರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಕ್ರೀಡಾಪಟುಗಳನ್ನು ನೂರಾರು ಸಂಖ್ಯೆಯಲ್ಲಿ ಹುಟ್ಟು ಹಾಕಿದ ಈ ಸಂಘ ಬೇಸಿಗೆ ಶಿಬಿರವನ್ನು ಉಚಿತವಾಗಿ ನಡೆಸಿದೆ ಎಂದರು.

ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಸಿ.ಜಿ.ಶಂಕರ್ ಕುಮಾರ್ ಮಾತನಾಡಿ ಬೇಸಿಗೆ ಶಿಬಿರ ಪ್ರತಿ ವರ್ಷ ಆಯೋಜಿಸಿ ನೂರಾರು ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸುತ್ತಿದ್ದೇವೆ. ಈ ಬಾರಿ 90 ಮಕ್ಕಳು ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಶಿಬಿರದ ಅಭಿನಂದನಾ ಪ್ರಶಸ್ತಿಪತ್ರ, ಸಮವಸ್ತ್ರ ಹಾಗೂ ಪದಕ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ಗುಬ್ಬಿ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ಡಿ.ಯಲ್ಲಪ್ಪ, ಪತಂಜಲಿ ಯೋಗ ಸಮಿತಿಯ ಬಸವರಾಜು, ಕ್ರೀಡಾ ಪ್ರೋತ್ಸಾಹಕರಾದ ಶ್ರೀನಿವಾಸ್, ಪಾಂಡುರಂಗಯ್ಯ, ನಂದನಾ, ವಸೀಂ, ಗಿರೀಶ್, ವಿನೋದ್, ಸಂಪತ್, ಪ್ರವೀಣ್ ಮಯ್ಯ, ಮಲ್ಲಿಕಾರ್ಜುನ್, ಸುಹೆಲ್, ಆಂಜಿನಪ್ಪ, ವಿನಾಯಕ ಇನ್ನಿತರರು ಇದ್ದರು.