ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MLA Yashwant Rayagouda Patil: ವಿಧಾನಸಭೆಯಲ್ಲಿ ಧ್ವನಿಯಾದ ಗಾಣಗಾಪೂರ ರಸ್ತೆ: ಶಾಸಕ ಯಶವಂತರಾಯಗೌಡ ಪಾಟೀಲ

ಸದರಿ ಯೋಜನೆಯಡಿಯಲ್ಲಿ ಉದ್ದೇಶಿಸಿರುವ ರಸ್ತೆ ಅಭಿವೃದ್ದಿ ಕಾಮಗಾರಿಗಳ ಪ್ರಾಥಮಿಕ ಯೋಜನಾ ವರದಿಗಳನ್ನು ರಾಜ್ಯ ಸರಕಾರದ ಆರ್ಥಿಕ ಇಲಾಖೆಯ ಮೂಲಕ ಭಾರತ ಸರಕಾರದ ಆರ್ಥಿಕ ವ್ಯವಹಾರಗಳ ಮಂತ್ರಾ ಲಯಕ್ಕೆ ಸಲ್ಲಿಸಲಾಗಿದೆ. ಪ್ರಸ್ತಾವನೆ ಅನುಮೋ ದನೆ ನೀಡಿ ಪ್ರಸ್ತಾವನೆಯನ್ನು ದಿನಾಂಕ 24-02-2025ರಂದು ಏಶಿಯನ್ ಡೆವೆಲಪ್‌ʼಮೆಂಟ್ ಬ್ಯಾಂಕ್ ಗೆ ಕಳಿಸಲಾಗಿರುತ್ತದೆ

ವಿಧಾನಸಭೆಯಲ್ಲಿ ಧ್ವನಿಯಾದ ಗಾಣಗಾಪೂರ ರಸ್ತೆ: ಶಾಸಕ ಪಾಟೀಲ

ಶಾಸಕ ಯಶವಂತರಾಯಗೌಡ ಪಾಟೀಲ -

Ashok Nayak
Ashok Nayak Mar 12, 2026 11:57 PM

ಇಂಡಿ: 2025-26ನೇ ಸಾಲಿನ ಆಯುವ್ಯಯ ಕೆಶಿಪ್ ಯೋಜನೆಯಡಿ ವಿಜಯಪೂರ ಜಿಲ್ಲೆಯ ಚಡಚಣದಿಂದ ಕಲಬುರ್ಗಿ ಜಿಲ್ಲೆಯ ಗಾಣಗಾಪೂರದವರೆಗೆ ರಸ್ತೆ ಅಭಿವೃದ್ದಿ ಪಡಿಸುವುದಾಗಿ ಘೋಷಿಸಲಾಗಿದೆಯೇ ? ಎಂದು ಶಾಸಕ ಯಶವಂತರಾಯಗೌಡ ಪಾಟೀಲ( MLA Yashwant Rayagouda Patil) ಪ್ರಶ್ನಿಸಿದರು.

ಇದಕ್ಕೆ ಸಚಿವರು ಕಶಿಪ್ 4 ಯೋಜನೆಯಡಿ ಏಶಿಯನ್ ಡೆವೆಲಪ್‌ʼಮೆಂಟ್ ಬ್ಯಾಂಕ್ ಹಣಕಾಸು ನೆರವಿನೊಂದಿಗೆ ಅಖೈರುಗೊಳಿಸಲಾಗಿರುವ ರಾಜ್ಯ ಹೆದ್ದಾರಿಗಳ ಆದ್ಯತಾ ಪಟ್ಟಿಯಲ್ಲಿ ವಿಜಯಪೂರ ಜಿಲ್ಲೆಯ ಚಡಚಣದಿಂದ ಕಲಬುರ್ಗಿ ಜಿಲ್ಲೆಯ ಗಾಣಗಾಪೂರದ ವರೆಗಿನ ರಾಜ್ಯ ಹೆದ್ದಾರಿಯು ಸೇರ್ಪಡೆಯಾಗಿರುತ್ತದೆ ಎಂದು ಲೋಕೋಪಯೋಗಿ ಸಚಿವ ಜಾರಕೀಹೊಳಿ(Public Works Minister Jarakiholi) ಶಾಸಕರ ಪ್ರಶ್ನೆಗೆ ಉತ್ತರ ನೀಡಿದರು.

ಸದರಿ ಯೋಜನೆ ರೂಪುರೇಷಗಳೇನು? ಸದರಿ ಯೋಜನೆಯ ಪ್ರಕ್ರೀಯ ಪ್ರಸ್ತಾವ ಸರಕಾದ ಮುಂದಿದೆಯೇ? ಅತ್ಯಂತ ವಿಳಂಭಗತಿಯಲ್ಲಿ ಸಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ? ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸಚಿವರಿಗೆ ಪ್ರಶ್ನಿಸಿದರು.

ಇದನ್ನೂ ಓದಿ: Indi News: ಇಂಡಿಯಲ್ಲಿ ವಿರಾಟ ಹಿಂದು ಶೋಭಾಯಾತ್ರೆ

ಇದಕ್ಕೆ ಸಚಿವರು ಉತ್ತರ ನೀಡಿ ಸದರಿ ಯೋಜನೆಯಡಿಯಲ್ಲಿ ಉದ್ದೇಶಿಸಿರುವ ರಸ್ತೆ ಅಭಿವೃದ್ದಿ ಕಾಮಗಾರಿಗಳ ಪ್ರಾಥಮಿಕ ಯೋಜನಾ ವರದಿಗಳನ್ನು ರಾಜ್ಯ ಸರಕಾರದ ಆರ್ಥಿಕ ಇಲಾಖೆಯ ಮೂಲಕ ಭಾರತ ಸರಕಾರದ ಆರ್ಥಿಕ ವ್ಯವಹಾರಗಳ ಮಂತ್ರಾ ಲಯಕ್ಕೆ ಸಲ್ಲಿಸಲಾಗಿದೆ. ಪ್ರಸ್ತಾವನೆ ಅನುಮೋದನೆ ನೀಡಿ ಪ್ರಸ್ತಾವನೆಯನ್ನು ದಿನಾಂಕ 24-02-2025ರಂದು ಏಶಿಯನ್ ಡೆವೆಲಪ್‌ʼಮೆಂಟ್ ಬ್ಯಾಂಕ್ ಗೆ ಕಳಿಸಲಾಗಿರುತ್ತದೆ.

ಪ್ರಸ್ತುತ ಪ್ರಸ್ತಾವನೆಗೆ ಏಶಿಯನ್ ಡೆವೆಲಪ್‌ʼಮೆಂಟ್ ಬ್ಯಾಂಕ್ ವತಿಯಿಂದ ಅಂತಿಮ ಅನುಮೋದನೆ ನಿರೀಕ್ಷಿಸಿದೆ. ಏಷೀಯನ್ ಡೆವೆಲಪ್‌ʼಮೆಂಟ್ ಬ್ಯಾಂಕ್ ವತಿಯಿಂದ ವಿವಿಧ ಹಂತಗಳಲ್ಲಿ ತಿರುವಳಿಗಳು ಅವಶ್ಯಕತೆ ಇರುವದರಿಂದ್ದ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲು ವಿಳಂಬವಾಗಿರುತ್ತದೆ. ಪ್ರಸ್ತುತ ಕಾಮಗಾರಿಗೆ ವಿಸೃತ ಯೋಜನಾ ವರದಿಯನ್ನು ತಯಾರಿಸಲು ಸಮಾಲೋಚಕರನ್ನು ನೇಮಿಸಲಾಗಿದ್ದು ವಿಸೃತ ಯೋಜನಾ ವರದಿ ತಯಾರಿಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಉತ್ತರಿಸಿದರು.

ಇದಕ್ಕೆ ಶಾಸಕ ಪಾಟೀಲರು ಯಾವಾಗ ಟೆಂಡರ್ ಕರೆಯಾಗುವುದು ಹಾಗೂ ಯಾವ ಕಾಲ ಮಿತಿಯೋಳಗೆ ಸದರಿ ರಸ್ತೆ ಸಂಪೂರ್ಣಗಳೀಸಲಾಗುವುದು ವಿವರಣೆ ನೀಡಿ ? ಎಂದಾಗ ಸಚಿವ ಸತೀಶ ಜಾರಕಿಹೊಳಿ ಸಭೆಯಲ್ಲಿ ಮಾತನಾಡಿ ಏಶಿಯನ್ ಡೆವೆಲಪ್‌ʼಮೆಂಟ್ ಬ್ಯಾಂಕ್ ವತಿಯಿಂದ ಅಂತಿಮ ಅನುಮೂದನೆ ದೋರೆತ ನಂತರ ಸಚಿವ ಸಂಪುಟ ಅನುಮೋದನೆ ಪಡೆದು ಅಗತ್ಯ ಅನುಧಾನ ಹಂಚಿಕೆ ಮಾಡಿ ಟೆಂಡರ್ ಅಹ್ವಾನಿಸಿ ಕಾಮಗಾರಿ ಪ್ರಾರಂಭಿಸಲು ಕ್ರಮ ವಹಿಸಲಾಗುವುದು ಸಚಿವರು ವಿಧಾನಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಪ್ರಶ್ನೆಗೆ ಉತ್ತರ ನೀಡಿದರು.