ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್‌ʼಗೆ ಆಗ್ರಹ‌: ಅಯೂಬ್ ಬಾಗವಾನ.

ಶಾಸಕ ಕೇವಲ ಅಭಿವೃದ್ದಿ ಮೂಲ ಮಂತ್ರವಾಗಿಸದೆ ಸರ್ವಜನಾಂಗವನ್ನು ಶಾಂತಿ, ಪ್ರೀತಿ, ವಿಶ್ವಾಸದಿಂದ ಗೌರವಿಸುವ ಜಾತ್ಯಾತೀತ ನಾಯಕರ ಇಂಡಿ ನಗರದಲ್ಲಿ ಲಿಂಬೆ ಅಭಿವೃದ್ದಿ ಮಂಡಳಿ, ಕೃಷಿ ವಿಜ್ಞಾನ ಕೇಂದ್ರ, ಜಿಟಿಟಿಸಿ ಕಾಲೇಜು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ನಿಲಯಗಳು, ಅನೇಕ ದಶಕಗಳಿಂದ ಪಾಳು ಬಿದ್ದ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ 16 ಸಾವಿರ ರೈತರ ಆಸ್ತಿಯನ್ನಾಗಿ ಮಾಡಿದ್ದಾರೆ.

ಪಾಟೀಲರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್‌ʼಗೆ ಆಗ್ರಹ‌

ಅಯೂಬ ಬಾಗವಾನ -

Ashok Nayak
Ashok Nayak Mar 13, 2026 12:29 AM

ಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲ(MLA Yashwant Rayagouda Patil) ಹೃದಯವಂತ ರಾಜಕಾರಣಿ ಇಡೀ ಇಂಡಿ ಮತಕ್ಷೇತ್ರ ಹಿಂದೆಂದು ಅಭಿವೃದ್ದಿ ಕಾಣದೆ ಇಂಡಿ ನಗರ ಶಾಸಕ ಪಾಟೀಲರು ಸುವರ್ಣಾಕ್ಷರಗಳಿಂದ ಬರೆಯುವಂತೆ ಕೆಲಸ ಕಾರ್ಯ ಮಾಡಿ “ನಭೂತೋ ನಭವಿಷ್ಯೆಂತಿ ’’ಎನ್ನುವಂತೆ ಇತಿಹಾಸ ಸೃಷ್ಠಿಸಿದ್ದಾರೆ.

ಶಾಸಕ ಕೇವಲ ಅಭಿವೃದ್ದಿ ಮೂಲ ಮಂತ್ರವಾಗಿಸದೆ ಸರ್ವಜನಾಂಗವನ್ನು ಶಾಂತಿ, ಪ್ರೀತಿ, ವಿಶ್ವಾಸದಿಂದ ಗೌರವಿಸುವ ಜ್ಯಾತ್ಯಾತೀತ ನಾಯಕರ ಇಂಡಿ ನಗರದಲ್ಲಿ ಲಿಂಬೆ ಅಭಿವೃದ್ದಿ ಮಂಡಳಿ, ಕೃಷಿ ವಿಜ್ಞಾನ ಕೇಂದ್ರ, ಜಿಟಿಟಿಸಿ ಕಾಲೇಜು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ನಿಲಯಗಳು, ಅನೇಕ ದಶಕಗಳಿಂದ ಪಾಳು ಬಿದ್ದ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ 16 ಸಾವಿರ ರೈತರ ಆಸ್ತಿಯನ್ನಾಗಿ ಮಾಡಿದ್ದಾರೆ.

ಇದನ್ನೂ ಓದಿ: Indi News: ಇಂಡಿಯಲ್ಲಿ ವಿರಾಟ ಹಿಂದು ಶೋಭಾಯಾತ್ರೆ

ಸರ್ವಜನಾಂಗಕ್ಕೆ ಜಾತಿ, ಧರ್ಮ ಎನ್ನದೆ ಎಲ್ಲರಿಗೂ ಸ್ಥಳೀಯ ಆಡಳಿತದಲ್ಲಿ ಅಧಿಕಾರ ನೀಡಿ ಗೌರವಿಸಿದ್ದಾರೆ. ಇಂದು ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾಗಿ ಭೀಮಣ್ಣಾ ಕೌಲಗಿಯವರಿಗೆ, ಗ್ಯಾರಂಟಿ ಜಿಲ್ಲಾ ಅಧ್ಯಕ್ಷರಾಗಿ ಇಲಿಯಾಸ ಬೋರಾಮಣಿ ಯವರಿಗೆ ಹಾಗೂ ತಾಲೂಕಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಪ್ರಶಾಂತ ಕಾಳೆಯವರಿಗೆ ಮತ್ತು ಇಂಡಿ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವಕೀಲರಾದ ಅಜಿತಕುಮಾರ ಧನಶೆಟ್ಟಿ ಮತ್ತು ಸದಸ್ಯರುಗಳಾಗಿ ಚನ್ನಪ್ಪ. ಬೋಡಿ, ರವೀಂದ್ರ ನಿಗಡಿ, ದತ್ತಾತ್ರೇಯ ಜೋಶಿಯವರನ್ನು ಅಧಿಕಾರ ನೀಡಿ ಗೌರವಿಸಿರುವುದು ಶಾಸಕರ ದೂರದೃಷ್ಠಿಯೇ ಕಾರಣ.

ಇಂಡಿ ಜಿಲ್ಲಾ ಮಾಡುವ ಕನಸು ಕಂಡ ಶಾಸಕರು ಹಿಡಿದ ಕೆಲಸ ಬಿಡುವುದಿಲ್ಲ . ಇಂಡಿ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಿರುವುದು ಶಾಸಕರ ಪರಿಶ್ರಮ. ಸ್ವಾತಂತ್ರ್ಯ ಸಿಕ್ಕು 70 ದಶಕಗಳು ಕಳೆದರೂ ಈ ಇಂಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗದೆ ಇರುವುದು ಸಾಕಷ್ಟು ಈ ಭಾಗದ ಜನರಲ್ಲಿ ಆತಂಕ ಎಡೆ ಮಾಡಿದೆ. ಶಾಸಕ ಪಾಟೀಲರು ಇಂಡಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಭಾವುಟ ಸದಾ ವಿರಾಜಿಸುವಂತೆ ಮಾಡಿದ್ದಾರೆ.

ತಾಲೂಕು ನನ್ನದು ಇಡೀ ಮತಕ್ಷೇತ್ರದ ಜನರು ನನ್ನ ಕುಟುಂಬದ ಸದಸ್ಯರು ಎಂಬ ಭಾವ ಅವರಲ್ಲಿದೆ ಅವರು ಇಂದಿಗೂ ಎಂದೆಂದಿಗೂ ಮತಕ್ಷೇತ್ರದ ಜನರು ಕೈ ಬಿಡುವುದಿಲ್ಲ, ಅವರಿಗೆ ಮತಕ್ಷೇತ್ರದ ಜನರು ಸಚಿವರನ್ನಾಗಿ ನೋಡುವ ಭಾಗ್ಯ ಇರುವದರಿಂದ್ದ ನಾಡಿನ ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ ಸಚಿವ ಸ್ಥಾನ ನೀಡಿ ಗೌರವಿಸಬೇಕು.

ಸರ್ವಜನರ ಹೃದಯ ಗೆದ್ದ ರಾಜಕೀಯ ಸಂತನಿಗೆ ಸಚಿವ ಸ್ಥಾನ ನೀಡಿ ಗೌರವಿಸಬೇಕು ಎಂದು ಮಾಜಿ ಪುರಸಭೆ ಸದಸ್ಯ ಹಾಗೂ ಕಾಂಗ್ರೆಸ್ ಯುವ ಮುಖಂಡ ಅಯೂಬ ಬಾಗವಾನ ಆಗ್ರಹಿಸಿದ್ದಾರೆ.