ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MP Kageri Humanity: ಶಿರಸಿಯ 'ಅಮೇಜಿಂಗ್ ಪೆಟ್ ಪ್ಲಾನೆಟ್' ಕಾರ್ಯಕ್ಕೆ ಸಂಸದ ಕಾಗೇರಿ ಮೆಚ್ಚುಗೆ: ಗಿಳಿಮರಿ ರಕ್ಷಿಸಿ ಮಾನವೀಯತೆ ಮೆರೆದ ಸಂಸದ

ಭಾನುವಾರ ಸಂಸದರು ತಮ್ಮ ಊರಿನಿಂದ ಬರುತ್ತಿದ್ದ ಸಂದರ್ಭದಲ್ಲಿ, ರಸ್ತೆ ಬದಿಯ ಮರದ ಮೇಲಿನಿಂದ ಬಿದ್ದಿದ್ದ ಅಸ್ವಸ್ಥಗೊಂಡ ಪುಟ್ಟ ಗಿಳಿಮರಿಯನ್ನು ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಆ ಗಿಳಿಮರಿಯನ್ನು ಸ್ವತಃ ತಾವೇ ಅಮೇಜಿಂಗ್ ಪೆಟ್ ಪ್ಲಾನೆಟ್ ಸಂಸ್ಥೆಗೆ ತಲುಪಿಸುವ ಮೂಲಕ ಒಂದು ಜೀವವನ್ನು ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ಗಿಳಿಮರಿ ರಕ್ಷಿಸಿ ಮಾನವೀಯತೆ ಮೆರೆದ ಸಂಸದ

-

Profile
Ashok Nayak Mar 29, 2026 1:51 PM

​ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಪ್ರಥಮ ಅನಾಥ ಪ್ರಾಣಿ-ಪಕ್ಷಿಗಳ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವಾದ ಶಿರಸಿಯ "ಅಮೇಜಿಂಗ್ ಪೆಟ್ ಪ್ಲಾನೆಟ್" ನಮ್ಮ ಹೆಮ್ಮೆಯ ಸಂಸ್ಥೆಯಾಗಿದೆ ಎಂದು ಲೋಕಸಭಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ(MP Vishweshwar Hegde Kageri) ಅವರು ಪ್ರಶಂಸಿಸಿದ್ದಾರೆ.

​ಭಾನುವಾರ ಸಂಸದರು ತಮ್ಮ ಊರಿನಿಂದ ಬರುತ್ತಿದ್ದ ಸಂದರ್ಭದಲ್ಲಿ, ರಸ್ತೆ ಬದಿಯ ಮರದ ಮೇಲಿನಿಂದ ಬಿದ್ದಿದ್ದ ಅಸ್ವಸ್ಥಗೊಂಡ ಪುಟ್ಟ ಗಿಳಿಮರಿಯನ್ನು ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಆ ಗಿಳಿಮರಿಯನ್ನು ಸ್ವತಃ ತಾವೇ ಅಮೇಜಿಂಗ್ ಪೆಟ್ ಪ್ಲಾನೆಟ್ ಸಂಸ್ಥೆಗೆ ತಲುಪಿಸುವ ಮೂಲಕ ಒಂದು ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ: Vishweshwar Hegde Kaageri: ರಾಜಕೀಯ ಭೀಷ್ಮನನ್ನು ಕಳೆದುಕೊಂಡಂತಾಗಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

​ಕೇಂದ್ರಕ್ಕೆ ಭೇಟಿ ನೀಡಿದ ಸಂಸದರು, ಅಲ್ಲಿ ಆಶ್ರಯ ಪಡೆದಿರುವ ವಿವಿಧ ಅನಾಥ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಿದರು. ತಮ್ಮ ಬಿಡುವಿಲ್ಲದ ಕಾರ್ಯಕಲಾಪಗಳ ನಡುವೆಯೂ ಅವು ಗಳೊಂದಿಗೆ ಸಮಯ ಕಳೆದ ಕಾಗೇರಿ ಅವರು, "ಅನಾಥ ಪ್ರಾಣಿಗಳಿಗಾಗಿ ನೀವು ಮಾಡು ತ್ತಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂತಹ ಸಂಸ್ಥೆ ಇರುವುದು ನಮ್ಮ ಶಿರಸಿಗೆ ಹೆಮ್ಮೆಯ ವಿಷಯ" ಎಂದು ತಂಡವನ್ನು ಪ್ರೋತ್ಸಾಹಿಸಿದರು.

parrot

​ಸಂಸದರ ಈ ಕಾಳಜಿಗೆ ಶ್ರೀ ಪದ್ಮ ಸೇವಾ ಟ್ರಸ್ಟ್‌ನ ಮುಖ್ಯಸ್ಥೆ ಪೂಜಾ ರಾಜ್ ಹಾಗೂ ಪ್ರಾಣಿ-ಪಕ್ಷಿ ತಜ್ಞ ಡಾ.ರಾಜೇಂದ್ರ ಸಿರ್ಸಿಕರ್ ಅವರು ಅಮೇಜಿಂಗ್ ಪೆಟ್ ಪ್ಲಾನೆಟ್ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸಿದರು.