ಶಿರಸಿ: ಮಾರಿಕಾಂಬಾ ಜಾತ್ರಾ ಮಹೋತ್ಸವ: ಕಮತಗಿಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ'ದಿಂದ ನಾಟಕ ಪ್ರದರ್ಶನ
ಕಳೆದ ಬಾರಿ 'ಗಂಡನಿಗೆ ತಕ್ಕ ಹೆಂಡತಿ' ನಾಟಕದ ಮೂಲಕ ಜನಮನ ಗೆದ್ದಿದ್ದ ಈ ಸಂಸ್ಥೆಯು, ಈ ವರ್ಷ ವಿಕಾಸ ಆಶ್ರಮದ ಮೈದಾನದಲ್ಲಿ ನಿರ್ಮಿಸಲಾದ ಸುಸಜ್ಜಿತ ರಂಗಮಂದಿರದಲ್ಲಿ ತನ್ನ ಪ್ರದರ್ಶನಗಳನ್ನು ನೀಡಲಿದೆ ಎಂದು ನಾಟಕ ಸಂಘದ ಮಾಲೀಕ ಪಾಪು ಕಲ್ಲೂರ್ ಹಾಗೂ ವ್ಯವಸ್ಥಾಪಕ ಶರತ್ ತಿಳಿಸಿದರು.
-
ಶಿರಸಿ: ನಗರದ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ, ಕಮತಗಿಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘವು ಈ ಬಾರಿಯೂ ನಾಟಕ ಪ್ರಿಯರನ್ನು ರಂಜಿಸಲು ಸಜ್ಜಾಗಿದೆ.
ಕಳೆದ ಬಾರಿ 'ಗಂಡನಿಗೆ ತಕ್ಕ ಹೆಂಡತಿ' ನಾಟಕದ ಮೂಲಕ ಜನಮನ ಗೆದ್ದಿದ್ದ ಈ ಸಂಸ್ಥೆ ಯು, ಈ ವರ್ಷ ವಿಕಾಸ ಆಶ್ರಮದ ಮೈದಾನದಲ್ಲಿ ನಿರ್ಮಿಸಲಾದ ಸುಸಜ್ಜಿತ ರಂಗ ಮಂದಿರದಲ್ಲಿ ತನ್ನ ಪ್ರದರ್ಶನಗಳನ್ನು ನೀಡಲಿದೆ ಎಂದು ನಾಟಕ ಸಂಘದ ಮಾಲೀಕ ರಾದ ಪಾಪಣ್ಣ ಕಲರ್ಸ್ ಹಾಗೂ ವ್ಯವಸ್ಥಾಪಕರಾದ ಶರತ್ ತಿಳಿಸಿದರು. ಅವರಿಂದು ನಗರದ ನೆಮ್ಮದಿ ಧಾಮದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಾಡಿದ್ದು 24 ರಿಂದ ಪ್ರತಿದಿನ ಪ್ರದರ್ಶನಗಳು ನಡೆಯಲಿವೆ. ಪ್ರತಿದಿನ ಸಂಜೆ 6:30ಕ್ಕೆ ಮೊದಲ ಪ್ರದರ್ಶನ ಹಾಗೂ ರಾತ್ರಿ 2ನೇ ಪ್ರದರ್ಶನ ನಡೆಯಲಿದೆ.
ಇದನ್ನೂ ಓದಿ: T20 World Cup: ಫಾರ್ಮ್‌ಗೆ ಮರಳಲು ಅಭಿಷೇಕ್ ಶರ್ಮಾಗೆ ಸಲಹೆ ನೀಡಿದ ಮೊಹಮ್ಮದ್ ಅಮೀರ್!
ಈ ಬಾರಿಯ ವಿಶೇಷ ಕೊಡುಗೆಯಾಗಿ "ಮಾತಿನ್ಯಾಗ ಮಳ್ಳಿ ಮನಸ್ಸಿನ್ಯಾಗ ಕಳ್ಳಿ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಕರ್ನಾಟಕದಾದ್ಯಂತ ಅತಿ ಕಡಿಮೆ ಅವಧಿ ಯಲ್ಲಿ ಹೆಚ್ಚು ಪ್ರದರ್ಶನ ಕಂಡು ದಾಖಲೆ ಬರೆದಿರುವ ಈ ನಾಟಕವು, ಈಗ ಶಿರಸಿ ಜಾತ್ರೆ ಯಲ್ಲಿ ತನ್ನ ಓಟವನ್ನು ಆರಂಭಿಸಲಿದೆ.
ಈ ನಾಟಕದಲ್ಲಿ ಚಿತ್ರನಟಿ ಕನಕಲಕ್ಷ್ಮಿ, ಹಿರಿಯ ಕಲಾವಿದ ಪಾಪು ಕಲ್ಲೂರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಜೂನಿಯರ್ ರಿಷಬ್ ಶೆಟ್ಟಿ, ಸಂಕೇತ್ ಮಂಗಳೂರು ಹಾಗೂ ಶರತ್ ಕುಂಚೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಗೆಗಡಲಲ್ಲಿ ತೇಲಿಸಲು ರಿಯಾಜ್ ಕರ್ಗಿ, ಮೇಘನಾ ದಾವಣಗೆರೆ ಹಾಗೂ ಮೇಘರಾಜ್ ಜಾಲಿಹಾಳ್ ಅವರ ಹಾಸ್ಯ ನಟನೆ ಇರಲಿದೆ.
ಪಾಪು ಕಲ್ಲೂರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಟಕವು ಅಶ್ಲೀಲ ರಹಿತ ಹಾಸ್ಯ ಹಾಗೂ ಕುಟುಂಬ ಸಮೇತ ನೋಡಬಹುದಾದ ಉತ್ತಮ ಸಾಮಾಜಿಕ ಸಂದೇಶ ವನ್ನು ಒಳಗೊಂಡಿದೆ.
ಸಂಸ್ಥೆಯು ಸುಮಾರು ಎರಡು ತಿಂಗಳುಗಳ ಕಾಲ ಶಿರಸಿಯಲ್ಲಿ ಮೊಕ್ಕಾಂ ಹೂಡಲಿದ್ದು, ಮುಂದಿನ ದಿನಗಳಲ್ಲಿ 'ಧರ್ಮಪತ್ನಿ' ಹಾಗೂ 'ಗ್ರಾಮ ಪಂಚಾಯಿತಿ ಗಂಗವ್ವ ಮತ್ತು ಜನತಾ ಮನೆ ಮಲ್ಲವ್ವ' ಎಂಬ ಹೊಸ ನಾಟಕಗಳನ್ನು ಪ್ರದರ್ಶಿಸಲು ನಿರ್ಧರಿಸಿದೆ.
ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸ ಬೇಕೆಂದರು.