ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Indi News: ಮಾನವ ಕುಲದ ಅಮೂಲ್ಯ ಸಂಪತ್ತು ಯೋಗ

ಯೋಗ ಮಾನವ ಕುಲದ ಅಮೂಲ್ಯ ಸಂಪತ್ತು. ಅದು ಆರೋಗ್ಯಕರ ಮತ್ತು ಸಂತೋಷಕರ ಬದುಕಿಗೆ ಮಾರ್ಗದರ್ಶಿ, ಹಳ್ಳಿ ಹಳ್ಳಿಗಳಲ್ಲಿ ಯೋಗದ ಪ್ರಚಾರ ಆಗಬೇಕು. ಅಬಾಲವೃದ್ದಿಯಾಗಿ ಎಲ್ಲರೂ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡರೆ ಆರೋಗ್ಯವಂತ ವ್ಯಕ್ತಿಗಳು ಸದೃಡ ಕುಟುಂಬಗಳು ಹಾಗೂ ಸುಸ್ಥಿರ ಸಮಾಜ ತನ್ನಿಂದ ತಾನೇ ನಿರ್ಮಾಣವಾಗುವದು

ಮಾನವ ಕುಲದ ಅಮೂಲ್ಯ ಸಂಪತ್ತು ಯೋಗ

ಇಂಡಿ ನಗರದ ಹಡಪದ ಅಪ್ಪಣ್ಣ ಪ್ರೌಢಶಾಲೆಯಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗಗುರು ಬಿ.ಎಸ್.ಪಾಟೀಲ ಮಾತನಾಡಿದರು. -

Profile
Ashok Nayak Jun 21, 2026 11:39 PM

ಇಂಡಿ: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಜನರು ಮೊಬೈಲ್ ಫೋನ್ ಕಂಪ್ಯೂಟರ್ ಹಾಗೂ ಯಾಂತ್ರಿಕ ಜೀವನಕ್ಕೆ ಹೆಚ್ಚು ಹೊಂದಿಕೊಳ್ಳುತ್ತಿದ್ದು ದೈಹಿಕ ಚಟುವಟಿಕೆಗಳು ಕಡಿಮೆ ಯಾಗುತ್ತಿವೆ. ಇದರ ಪರಿಣಾಮ ಅನೇಕ ಆರೋಗ್ಯ ಸಮಸ್ಯೆಗಳು ಸಣ್ಣ ವಯಸ್ಸಿನಲ್ಲಿ ಬರುತ್ತಿದ್ದು ಪ್ರತಿಯೊಬ್ಬರ ದಿನನಿತ್ಯ ಸ್ವಲ್ಪ ಸಮಯವನ್ನು ಯೋಗ ಪ್ರಾಣಾಯಾಮ ಮತ್ತು ಧ್ಯಾನಕ್ಕಾಗಿ ಮೀಸಲಿಡುವದು ಅವಶ್ಯಕವಾಗಿದೆ ಎಂದು ಯೋಗ ಗುರು ಬಿ.ಎಸ್.ಪಾಟೀಲ ಗುರುಗಳು ಹೇಳಿದರು.

ನಗರದ ಹಡಪದ ಅಪ್ಪಣ್ಣ ಪ್ರೌಢಶಾಲೆಯಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ (International Yoga Day Celebration)ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಸಿದ್ದು ನಾವಿ ಮಾತನಾಡಿ, ಯೋಗ ಮಾನವ ಕುಲದ ಅಮೂಲ್ಯ ಸಂಪತ್ತು. ಅದು ಆರೋಗ್ಯಕರ ಮತ್ತು ಸಂತೋಷಕರ ಬದುಕಿಗೆ ಮಾರ್ಗದರ್ಶಿ, ಹಳ್ಳಿ ಹಳ್ಳಿಗಳಲ್ಲಿ ಯೋಗದ ಪ್ರಚಾರ ಆಗಬೇಕು.ಅಬಾಲವೃದ್ದಿಯಾಗಿ ಎಲ್ಲರೂ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡರೆ ಆರೋಗ್ಯವಂತ ವ್ಯಕ್ತಿಗಳು ಸದೃಡ ಕುಟುಂಬಗಳು ಹಾಗೂ ಸುಸ್ಥಿರ ಸಮಾಜ ತನ್ನಿಂದ ತಾನೇ ನಿರ್ಮಾಣವಾಗುವದು ಎಂದರು.

ಉಪಾಧ್ಯಕ್ಷ ಶಿವಾನಂದ ನಾವಿ, ಕಾರ್ಯದರ್ಶಿ ಸಿದರಾಯ ಅಪ್ತಾಗಿರಿ, ಸಂತೋಷ ಗವಳಿ, ನಟರಾಜ ಗವಳಿ, ಸಾಯಬಣ್ಣ ನಾವಿ, ಧುಳಪ್ಪ ನಾವಿ, ಅಶೋಕ ಹಡಪದ, ನಾನು ರಾಠೋಡ, ಪಂಡಿತ ಬಿರಾದಾರ, ಮುಖ್ಯ ಗುರುಮಾತೆ ಭವಾನಿಗೌಡ, ಅಂಜಲಿ ಪಾಟೀಲ, ಮುಖ್ಯೋಪಾಧ್ಯಾಯ ಐ.ಎಸ್.ರೂಗಿ ಬಸವರಾಜ ನಾವಿ ಮತ್ತಿತರಿದ್ದರು.

ವಿದ್ಯಾರ್ಥಿಗಳಿಗೆ ಯೋಗ ಕಾರ್ಯಕ್ರಮ ಯೋಗ ಗುರು ಪಾಟೀಲ ಗುರುಗಳು ನಡೆಸಿಕೊಟ್ಟರು.