Women's T20 World Cup: ಮಾರಿಝಾನ್ ಕಾಪ್ ಆಲ್‌ರೌಂಡರ್ ಆಟಕ್ಕೆ ಮಣಿದ ಭಾರತ ವನಿತೆಯರು!
ಮಾರಿಝಾನ್ ಕಾಪ್ ಅವರ ಆಲ್‌ರೌಂಡರ್ ಆಟದ ಬಲದಿಂದ ದಕ್ಷಿಣ ಆಫ್ರಿಕಾ ತಂಡ, 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಮೊದಲ ಸೋಲುಣಿಸಿದೆ. ಆರು ವಿಕೆಟ್‌ಗಳಿಂದ ಸೋತರೂ ಹರ್ಮನ್‌ಪ್ರೀತ್ ಕೌರ್ ಪಡೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.
ಭಾರತಕ್ಕೆ ಸೋಲುಣಿಸಿದ ಮಾರಿಝಾನ್ ಕಾಪ್. -
ಮ್ಯಾಂಚೆಸ್ಟರ್: ಶ್ರೀ ಚರಣಿ ಸ್ಪಿನ್ ಮೋಡಿಯ ಹೊರತಾಗಿಯೂ ಭಾರತ ತಂಡ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup 2026) ಮೊದಲ ಸೋಲು ಅನುಭವಿಸಿದೆ. ಆದರೆ, ಮಾರಿಝಾನ್ ಕಾಪ್ (MariZanne Kapp) ಅವರ ಆಲ್‌ರೌಂಡರ್ ಆಟದ ಬಲದಿಂದ ದಕ್ಷಿಣ ಆಫ್ರಿಕಾ ತಂಡ, ತನ್ನ ಮೂರನೇ ಪಂದ್ಯದಲ್ಲಿ ಭಾರತದ ಎದುರು 6 ವಿಕೆಟ್‌ಗಳ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಗೆಲುವು ಪಡೆದರೂ ಹರಿಣ ಪಡೆ ಟೂರ್ನಿಯ ಎ ಗುಂಪಿನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಇನ್ನು ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಹೊರತಾಗಿಯೂ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿಯೇ ಉಳಿದಿದೆ.
ಭಾನುವಾರ ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 159 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಶ್ರೀ ಚರಣಿ (24 ಕ್ಕೆ 3) ಆರಂಭಿಕ ಆಘಾತ ನೀಡಿದ್ದರು. ಆದರೂ ಮಾರಿಝಾನ್ ಕಾಪ್(81* ರನ್) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಹರಿಣ ಪಡೆ 19.1 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 161 ರನ್ ಗಳಿಸಿ ಗೆದ್ದು ಬೀಗಿತು. ಭಾರತ ತಂಡ ಹೆಚ್ಚುವರಿಯಾಗಿ 15 ರಿಂದ 20 ರನ್‌ಗಳನ್ನು ಗಳಿಸಿದ್ದರೆ, ಫಲಿತಾಂಶದಲ್ಲಿ ವ್ಯತ್ಯಾಸ ಕಾಣಿಸುತ್ತಿತ್ತು. ಆದರೆ, ಬ್ಯಾಟಿಂಗ್‌ನಲ್ಲಿ ಶಫಾಲಿ ವರ್ಮಾ (31 ರನ್) ಹಾಗೂ ದೀಪ್ತಿ ಶರ್ಮಾ (29 ರನ್) ಅವರು ಬಿಟ್ಟರೆ ಇನ್ನುಳಿದವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.
Women's T20 World Cup: 200ನೇ ಟಿ20ಐ ಪಂದ್ಯದ ಮೂಲಕ ವಿಶ್ವ ದಾಖಲೆ ಬರೆದ ಹರ್ಮನ್‌ಪ್ರೀತ್ ಕೌರ್!
ಮಾರಿಝಾನ್ ಕಾಪ್ ಆಲ್‌ರೌಂಡರ್ ಆಟ
ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾರಿಝಾನ್ ಕಾಪ್. ಇರು ಪ್ರಥಮ ಇನಿಂಗ್ಸ್‌ನಲ್ಲಿಯೂ ಬೌಲಿಂಗ್‌ನಲ್ಲಿ ಮಿಂಚಿದ್ದರು. ಅವರು ತಾವು ಬೌಲ್ ಮಾಡಿದ ನಾಲ್ಕು ಓವರ್‌ಗಳಲ್ಲಿ 27 ರನ್ ನೀಡಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಭಾರತ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ನೆರವು ನೀಡಿದ್ದರು. ನಂತರ ತಮ್ಮ ತಂಡದ ಚೇಸಿಂಗ್‌ನಲ್ಲಿಯೂ ಮಾರಿಝಾನ್ ಕಾಪ್ ಬ್ಯಾಟಿಂಗ್‌ನಲ್ಲಿ ಮಹತ್ವದ ಕೊಡುಗೆಯನ್ನು ನೀಡಿದರು. ತಂಡದ ಮೊತ್ತ 25 ಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
South Africa dig deep to secure a hard-fought win over India to make things interesting in Group A 👏
— ICC (@ICC) June 21, 2026
#T20WorldCup pic.twitter.com/ORiYnTYblt
ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮಾರಿಝಾನ್ ಕಾಪ್, ಕೊನೆಯವರೆಗೂ ಬ್ಯಾಟ್ ಮಾಡಿದರು. ಅವರು ಆಡಿದ 45 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 81 ರನ್ ಗಳಿಸಿದರು. ಅಲ್ಲದೆ 40 ರನ್ ಗಳಿಸಿದ ತಸ್ಮಿನ್ ಬ್ರಿಟ್ಸ್ ಅವರ ಜೊತೆಗೆ 97 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ತಮ್ಮ ತಂಡದ ಗೆಲುವಿನಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
An innings for the ages and a fine bowling spell against India from South Africa's Marizanne Kapp wins her the @aramco POTM 🏅 pic.twitter.com/TxhBAr9RLr
— ICC (@ICC) June 21, 2026
ಬಹುಬೇಗ ಎರಡು ವಿಕೆಟ್ ಕಿತ್ತರೂ ಭಾರತೀಯ ಬೌಲರ್‌ಗಳು ಮಾರಿಝಾನ್ ಹಾಗೂ ಬ್ರಿಟ್ಸ್ ಜೋಡಿಯನ್ನು ಬೇರ್ಪಡಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. 17ನೇ ಓವರ್‌ನ ಮೊದಲನೇ ಎಸೆತದಲ್ಲಿ ಶಫಾಲಿ ವರ್ಮಾ, ತಸ್ಮಿನ್ ಬ್ರಿಟ್ಸ್ ಅವರನ್ನು ಹಾಗೂ 18ನೇ ಓವರ್‌ನಲ್ಲಿ ನಡಿನ್ ಡಿ ಕ್ಲರ್ಕ್ ಅವರನ್ನು ಔಟ್ ಮಾಡಿದರು. ಆದರೆ, ಹರಿಣ ಪಡೆ ಆಗಲೇ ಗೆಲುವಿನ ಸನಿಹಕ್ಕೆ ಬಂದಿತ್ತು.
ಭಾರತ ಬ್ಯಾಟಿಂಗ್ ವೈಫಲ್ಯ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಭಾರತ ತಂಡದ ದೊಡ್ಡ ಮೊತ್ತ ಕಲೆ ಹಾಕುವ ಯೋಜನೆಯನ್ನು ಹರಿಣ ಪಡೆಯ ಬೌಲರ್‌ಗಳು ಭಗ್ನಗೊಳಿಸಿದರು. ಕೀ ಬ್ಯಾಟರ್‌ಗಳಾದ ಸ್ಮೃತಿ ಮಂಧಾನಾ (17), ಯಾಸ್ತಿಕಾ ಭಾಟಿಯಾ (15), ಜೆಮಿಮಾ ರೊಡ್ರಿಗಸ್ (12), ಹರ್ಮನ್‌ಪ್ರೀತ್ ಕೌರ್ (24) ಹಾಗೂ ರಿಚಾ ಘೋಷ್ (15) ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
Innings Break!#TeamIndia finish with a competitive 1️⃣5️⃣8️⃣ on the board!
— BCCI Women (@BCCIWomen) June 21, 2026
Over to the bowlers now to defend this.
Scorecard ▶️ https://t.co/cIrb7Ekn0x#T20WorldCup | #WomenInBlue | #SAvIND pic.twitter.com/oIfsKjVcOK
ಆದರೆ, ಸ್ವಲ್ಪ ಹೊತ್ತು ಸ್ಪೋಟಕ ಬ್ಯಾಟ್ ಮಾಡಿದ ಶಫಾಲಿ ವರ್ಮಾ 31 ರನ್ ಗಳಿಸಿ ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರ ಜೊತೆಗೆ ದೀಪ್ತಿ ಶರ್ಮಾ 29 ರನ್ ಗಳಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಿಗೆ 7ವಿಕೆಟ್‌ಗಳ ನಷ್ಟಕ್ಕೆ 158 ರನ್‌ಗಳನ್ನು ಕಲೆ ಹಾಕಿತ್ತು. ದಕ್ಷಿಣ ಆಫ್ರಿಕಾ ಪರ ಮಾರಿಝಾನ್ ಕಾಪ್ ಹಾಗೂ ಶಬ್ನಮ್ ಇಸ್ಮಾಯಿಲ್ ತಲಾ ಎರಡು ವಿಕೆಟ್ ಪಡೆದರು.