ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಫಾಲಿ ಅರ್ಧಶತಕ; ಬಾಂಗ್ಲಾ ಮಣಿಸಿದ ಭಾರತದ ಸೆಮಿ ಆಸೆ ಜೀವಂತ

India Women vs Bangladesh Women: ಭಾರತ ಈ ಪಂದ್ಯದಲ್ಲಿ ತನ್ನ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿತು. ರಾಧಾ ಯಾದವ್‌ ಮತ್ತು ರೇಣುಕಾ ಸಿಂಗ್‌ ಅವರಿಗೆ ಅವಕಾಶ ನೀಡಿತು. ಇವರಿಗಾಗಿ ಅರುಂಧತಿ ರೆಡ್ಡಿ ಮತ್ತು ಪೂನಂ ರಾವತ್‌ ಜಾಗ ಬಿಡಬೇಕಾಯಿತು.

ಶಫಾಲಿ ಅರ್ಧಶತಕ; ಬಾಂಗ್ಲಾ ಮಣಿಸಿದ ಭಾರತದ ಸೆಮಿ ಆಸೆ ಜೀವಂತ

Shafali Verma -

Abhilash BC
Abhilash BC Jun 25, 2026 10:17 PM

ಮ್ಯಾಂಚೆಸ್ಟರ್, ಜೂ.25: ಬಾಂಗ್ಲಾದೇಶ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 5 ವಿಕೆಟ್‌ ಅಂತರದ ಗೆಲುವು ಸಾಧಿಸಿ ಭಾರತ ತಂಡ, ಮಹಿಳಾ ಟಿ20 ವಿಶ್ವಕಪ್‌ ಸೆಮಿ ಆಸೆಯನ್ನು ಜೀವಂತವಿರಿಸಿದೆ. ಇದು ಭಾರತಕ್ಕೆ ಒಲಿದ ಮೂರನೇ ಗೆಲುವು. ಭಾನುವಾರ ನಡೆಯುವ ಅಂತಿಮ ಲೀಗ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಇದು ಭಾರತದ ಪಾಲಿಗೆ ನಿರ್ಣಾಯಕ ಪಂದ್ಯವಾಗಲಿದೆ.

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ, ಬ್ಯಾಟಿಂಗ್‌ ಆಯ್ದುಕೊಂಡಿತು. ಆದರೆ ಆಯ್ಕೆಗೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. 8 ವಿಕೆಟ್‌ಗೆ 136 ರನ್‌ ಗಳಿಸಲಷ್ಟೇ ಶಕ್ತವಾಯಿತು. ಭಾರತ ಪರ ಸ್ಪಿನ್‌ ಕೈಚಳಕ ತೋರಿದ ರಾಧಾ ಯಾದವ್‌(28ಕ್ಕೆ3) ಮತ್ತು ಶ್ರೀ ಚರಣಿ (21ಕ್ಕೆ2) ಬಾಂಗ್ಲಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ 16.5 ಓವರ್‌ಗಳಲ್ಲಿ 5 ವಿಕೆಟ್‌ಗೆ 139 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಚೇಸಿಂಗ್‌ ವೇಳೆ ಭಾರತ ಸ್ಮೃತಿ ಮಂಧಾನ(8) ಅವರ ವಿಕೆಟ್‌ ಬೇಗನೆ ಕಳೆದುಕೊಂಡರೂ ಮತೋರ್ವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಬಿರುಸಿನ ಬ್ಯಾಟಿಂಗ್‌ ನಡೆಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. 34 ಎಸೆತಗಳಿಂದ 53 ರನ್‌ ಬಾರಿಸಿದರು. ಕಳೆದ ಎರಡು ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್‌ ನಡೆಸಿ ಟೀಕೆಗೆ ಗುರಿಯಾಗಿದ್ದ ಯಾಸ್ತಿಕಾ ಭಾಟಿಯಾ ಈ ಪಂದ್ಯದಲ್ಲಿ 23 ರನ್‌ ಬಾರಿಸಿದರು. ಉತ್ತಮ ಸ್ಥಿತಿಯಲ್ಲಿದ್ದ ತಂಡ ಅಂತಿಮ ಹಂತದಲ್ಲಿ ಸತತ ವಿಕೆಟ್‌ ಕಳೆದುಕೊಂಡು ಒಂದು ಹಂತದಲ್ಲಿ ಆತಂಕ ಸೃಷ್ಟಿಸಿತು. ಆದರೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌(13) ಮತ್ತು ದೀಪ್ತಿ ಶರ್ಮಾ(5) ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ರಾಜಸ್ಥಾನದಲ್ಲಿ ಜನಿಸಿದ ಐರ್ಲೆಂಡ್ ವೇಗಿ ಜೈ ಮೂಂದ್ರ ಯಾರು?

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ಪರ ಜುಯಿರಿಯಾ ಫರ್ಡೌಸ್(33) ಮತ್ತು ನಾಯಕಿ ನಿಗರ್‌ ಸುಲ್ತಾನ(32) ರನ್‌ ಗಳಿಸಿ ತಂಡಕ್ಕೆ ನೆರವಾದರು. ಶೋಭಾನ ಮೋಸ್ಟರಿ(22) ಸಣ್ಣ ಕೊಡುಗೆ ನೀಡಿದರು. ಈ ಮೂವರನ್ನು ಹೊರತುಪಡಿಸಿ ಉಳಿದವರು ನಿರೀಕ್ಷಿತ ಬ್ಯಾಟಿಂಗ್‌ ನಡೆಸುವಲ್ಲಿ ವಿಫಲರಾದರು.

ಭಾರತ ಈ ಪಂದ್ಯದಲ್ಲಿ ತನ್ನ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿತು. ರಾಧಾ ಯಾದವ್‌ ಮತ್ತು ರೇಣುಕಾ ಸಿಂಗ್‌ ಅವರಿಗೆ ಅವಕಾಶ ನೀಡಿತು. ಇವರಿಗಾಗಿ ಅರುಂಧತಿ ರೆಡ್ಡಿ ಮತ್ತು ಪೂನಂ ರಾವತ್‌ ಜಾಗ ಬಿಡಬೇಕಾಯಿತು.