ರಾಜಸ್ಥಾನದಲ್ಲಿ ಜನಿಸಿದ ಐರ್ಲೆಂಡ್ ವೇಗಿ ಜೈ ಮೂಂದ್ರ ಯಾರು?
Who is Jai Moondra: ಮೂಂದ್ರ ಐರ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಎರಡನೇ ಭಾರತೀಯ ಮೂಲದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಪಂಜಾಬ್‌ನಲ್ಲಿ ಜನಿಸಿದ ಸಿಮಿ ಸಿಂಗ್, 2017 ರಲ್ಲಿ ಐರ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಅವರು 35 ಏಕದಿನ ಮತ್ತು 53 ಟಿ20 ಪಂದ್ಯಗಳನ್ನು ಆಡಿದ್ದಾರೆ.
Jai Moondra -
ಬೆಲ್‌ಫಾಸ್ಟ್,(ಐರ್ಲೆಂಡ್), ಜೂ.25: ಪ್ರವಾಸಿ ಭಾರತ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯ ಪಂದ್ಯವನ್ನಾಡಲು ಆತಿಥೇಯ ಐರ್ಲೆಂಡ್ ಸಜ್ಜಾಗಿ ನಿಂತಿದೆ. ಶುಕ್ರವಾರ ಇತ್ತಂಡಗಳ ನಡುವಣ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತೀಯ ಮೂಲದ, ರಾಜಸ್ಥಾನದಲ್ಲಿ ಜನಿಸಿದ ಆಲ್‌ರೌಂಡರ್ ಜೈ ಮೂಂದ್ರಾ ಅವರು ಐರ್ಲೆಂಡ್ ಪರ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಪಂಜಾಬ್‌ನ ಸಿಮಿ ಸಿಂಗ್ ನಂತರ ಐರ್ಲೆಂಡ್ ವಿರುದ್ಧ ಆಡುತ್ತಿರುವ ಎರಡನೇ ಏಷ್ಯನ್ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
ಜೈಪುರದಿಂದ 100 ಕಿಲೋಮೀಟರ್ ದೂರದಲ್ಲಿರುವ ಟೋಂಕ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದ ಮೂಂದ್ರ, ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡು ಅಕಾಡೆಮಿಗೆ ಸೇರಿದರು. ಆರಂಭದಲ್ಲಿ ವೇಗದ ಬೌಲರ್ ಆಗಿದ್ದ ಅವರು ಆ ಬಳಿಕ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಎಡಗೈ ಸ್ಪಿನ್ನರ್ ಆಗಿ ರೂಪಾಂತರಗೊಂಡರು.
ಮೂಂದ್ರ ಐರ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಎರಡನೇ ಭಾರತೀಯ ಮೂಲದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಪಂಜಾಬ್‌ನಲ್ಲಿ ಜನಿಸಿದ ಸಿಮಿ ಸಿಂಗ್, 2017 ರಲ್ಲಿ ಐರ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಅವರು 35 ಏಕದಿನ ಮತ್ತು 53 ಟಿ20 ಪಂದ್ಯಗಳನ್ನು ಆಡಿದ್ದಾರೆ.
ನಾಳೆ ಭಾರತ-ಐರ್ಲೆಂಡ್ ಮೊದಲ ಟಿ20; ಪದಾರ್ಪಣೆ ನಿರೀಕ್ಷೆಯಲ್ಲಿ ಸೂರ್ಯವಂಶಿ
2021 ರಲ್ಲಿ, ಅವರು ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಐರ್ಲೆಂಡ್‌ಗೆ ತೆರಳಿದರು. ಆ ನಿರ್ಧಾರ ಅವರ ಜೀವನವನ್ನು ಬದಲಾಯಿಸಿತು. ಅದೇ ಸಮಯದಲ್ಲಿ ತಮ್ಮ ಕ್ರಿಕೆಟ್ ಮಹತ್ವಾಕಾಂಕ್ಷೆಗಳನ್ನು ಮುಂದುವರೆಸಿದರು. ಡಬ್ಲಿನ್‌ನಲ್ಲಿರುವ ಲೀನ್‌ಸ್ಟರ್ ಕ್ರಿಕೆಟ್ ಕ್ಲಬ್‌ಗೆ ಸೇರುವುದು ಅವರಿಗೆ ಪ್ರಮುಖ ಪಾತ್ರ ವಹಿಸಿತು.
ಡಬ್ಲಿನ್‌ನಲ್ಲಿ ನೆಲೆಸಿದ್ದ ಅವರು ಲೀನ್‌ಸ್ಟರ್ ಕ್ರಿಕೆಟ್ ಕ್ಲಬ್‌ಗೆ ಸೇರಿಕೊಂಡರು ಮತ್ತು ಐರ್ಲೆಂಡ್‌ನ ದೇಶೀಯ ಆಟದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. 2023 ರಲ್ಲಿ ದೇಶದ ಅತ್ಯಂತ ಪ್ರತಿಷ್ಠಿತ ಕ್ಲಬ್ ಸ್ಪರ್ಧೆಗಳಲ್ಲಿ ಒಂದಾದ ಐರಿಶ್ ಸೀನಿಯರ್ ಕಪ್ ಗೆದ್ದ ಲೀನ್‌ಸ್ಟರ್ ತಂಡದ ಭಾಗವಾಗಿದ್ದಾಗ ಅವರು ಒಂದು ಪ್ರಮುಖ ಮೈಲಿಗಲ್ಲು ತಲುಪಿದರು.
"ಎಡಗೈ ಬೌಲರ್ ಆಗಿ, ನನ್ನ ಕೋನವೇ ನನ್ನ ಶಕ್ತಿ. ಹೊಸ ಚೆಂಡಿನೊಂದಿಗೆ, ನಾನು ಸ್ವಿಂಗ್ ಬಳಸುವ ಸಾಮರ್ಥ್ಯ ಹೊಂದಿದ್ದೇನೆ. ಅದರಂತೆ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಹೊಡೆತಗಳನ್ನು ಬಾರಿಸಬಲ್ಲೆ" ಎಂದು ಜೈ ಮೂಂದ್ರಾ ಹೇಳಿದರು.