World Nutrition Day: ವಿಶ್ವ ಪೌಷ್ಠಿಕಾಂಶ ದಿನ ಆಚರಣೆ: ಅಕ್ಷಯ ಪಾತ್ರಾ ಸಹಯೋಗದೊಂದಿಗೆ 10 ದಶಲಕ್ಷಕ್ಕೂ ಹೆಚ್ಚು ಮಧ್ಯಾಹ್ನದ ಬಿಸಿಯೂಟ ಪೂರೈಸಿದ 'ಎಂಟಿಆರ್'
ಆಗಸ್ಟ್ 2014 ರಲ್ಲಿ ಈ ಸಹಯೋಗದ ಪ್ರಾರಂಭದಿಂದಲೂ, 'ಎಂಟಿಆರ್' ಕರ್ನಾಟಕದಾದ್ಯಂತ 'ಪಿಎಂ ಪೋಷಣ್' (ಮಧ್ಯಾಹ್ನದ ಬಿಸಿಯೂಟ) ಕಾರ್ಯಕ್ರಮವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಸುಮಾರು 60,000 ಮಕ್ಕಳಜೀವನದ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಈ ಉಪಕ್ರಮವು ಮೈಸೂರು, ಹುಬ್ಬಳ್ಳಿ, ಬೆಂಗಳೂರು ಮತ್ತು ಬಳ್ಳಾರಿ ಸೇರಿದಂತೆ ನಾಲ್ಕು ಪ್ರಮುಖ ನಗರಗಳ 1,000ಕ್ಕೂ ಹೆಚ್ಚು ಶಾಲೆಗಳಲ್ಲಿ ವ್ಯಾಪಿಸಿದ್ದು, ಇಲ್ಲಿಯವರೆಗೆ 10 ದಶಲಕ್ಷಕ್ಕೂ ಹೆಚ್ಚು ಊಟಗಳನ್ನು ಪೂರೈಸಲಾಗಿದೆ


ಬೆಂಗಳೂರು: 'ಎಂಟಿಆರ್ ಫುಡ್ಸ್' ಸಂಸ್ಥೆಯು 'ಅಕ್ಷಯ ಪಾತ್ರಾ ಫೌಂಡೇಶನ್' ಸಹಯೋಗ ದೊಂದಿಗೆ ಮಕ್ಕಳಿಗೆ 10 ದಶಲಕ್ಷಕ್ಕೂ ಹೆಚ್ಚು ಪೌಷ್ಟಿಕ ಊಟ ಪೂರಿಸಿರುವುದಾಗಿ ಹೆಮ್ಮೆಯಿಂದ ಘೋಷಿಸಿದೆ. 'ಎಂಟಿಆರ್'ನ 100 ವರ್ಷಗಳ ಪ್ರಯಾಣದ ಪರಂಪರೆಯನ್ನು ನಿರ್ಮಿಸುವ ಈ ಮೈಲುಗಲ್ಲು ಇದಾಗಿದ್ದು, ಇದು ಹಸಿವನ್ನು ನೀಗಿಸುವ, ಶಿಕ್ಷಣವನ್ನು ಬೆಂಬಲಿಸುವ ಮತ್ತು ಯುವ ಜನತೆಯ ಭವಿಷ್ಯವನ್ನು ಪೋಷಿಸುವ 'ಎಂಟಿಆರ್'ನ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ಭಾರತದಾದ್ಯಂತ ಸಮುದಾಯಗಳಲ್ಲಿ ಶಾಶ್ವತ ಬದಲಾವಣೆಯನ್ನು ಸೃಷ್ಟಿಸಲು ಒಟ್ಟಾಗಿ ಕೆಲಸ ಮಾಡುವ ನಿಟ್ಟಿನಲ್ಲಿ 'ಎಂಟಿಆರ್' ಮತ್ತು 'ಅಕ್ಷಯ ಪಾತ್ರಾ ಫೌಂಡೇಶನ್' ನಡುವಿನ ಒಂದು ದಶಕಕ್ಕೂ ಹೆಚ್ಚಿನ ಪರಿಣಾಮಕಾರಿ ಸಹಯೋಗವನ್ನು ಸೂಚಿಸುತ್ತದೆ.
ಆಗಸ್ಟ್ 2014 ರಲ್ಲಿ ಈ ಸಹಯೋಗದ ಪ್ರಾರಂಭದಿಂದಲೂ, 'ಎಂಟಿಆರ್' ಕರ್ನಾಟಕದಾದ್ಯಂತ 'ಪಿಎಂ ಪೋಷಣ್' (ಮಧ್ಯಾಹ್ನದ ಬಿಸಿಯೂಟ) ಕಾರ್ಯಕ್ರಮವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಸುಮಾರು 60,000 ಮಕ್ಕಳಜೀವನದ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಈ ಉಪಕ್ರಮವು ಮೈಸೂರು, ಹುಬ್ಬಳ್ಳಿ, ಬೆಂಗಳೂರು ಮತ್ತು ಬಳ್ಳಾರಿ ಸೇರಿದಂತೆ ನಾಲ್ಕು ಪ್ರಮುಖ ನಗರಗಳ 1,000ಕ್ಕೂ ಹೆಚ್ಚು ಶಾಲೆಗಳಲ್ಲಿ ವ್ಯಾಪಿಸಿದ್ದು, ಇಲ್ಲಿಯವರೆಗೆ 10 ದಶಲಕ್ಷಕ್ಕೂ ಹೆಚ್ಚು ಊಟಗಳನ್ನು ಪೂರೈಸಲಾಗಿದೆ.
ಇದನ್ನೂ ಓದಿ: IPL 2025: ಮುಂಬೈ ಅಲ್ಲ! ಈ 2 ತಂಡಗಳು ಫೈನಲ್ ಆಡುವುದು ಪಕ್ಕಾ ಎಂದ ರಾಬಿನ್ ಉತ್ತಪ್ಪ!
ಸಹಯೋಗದ ಪ್ರಯತ್ನಗಳಿಂದ ಶಾಶ್ವತ ಸಾಮಾಜಿಕ ಪರಿಣಾಮವನ್ನು ಹೇಗೆ ಸೃಷ್ಟಿಸಬಹುದು ಹಾಗೂ ದೀರ್ಘಕಾಲೀನ ಸಮುದಾಯ ಅಭಿವೃದ್ಧಿಗೆ ಅಡಿಪಾಯಗಳನ್ನು ನಿರ್ಮಿಸುವಾಗ ತಕ್ಷಣದ ಅಗತ್ಯಗಳನ್ನು ಹೇಗೆ ಪರಿಹರಿಸಬಹುದು ಎಂಬುದಕ್ಕೆ 'ಎಂಟಿಆರ್' ಮತ್ತು 'ಅಕ್ಷಯ ಪಾತ್ರಾ ಫೌಂಡೇಶನ್' ನಡುವಿನ ಸಹಭಾಗಿತ್ವವು ಉದಾಹರಣೆಯಾಗಿದೆ. 'ಅಕ್ಷಯ ಪಾತ್ರಾ ಫೌಂಡೇಶನ್' ಮೂಲಕ 'ಪಿಎಂ ಪೋಷಣ್' ಕಾರ್ಯಕ್ರಮಕ್ಕೆ ಎಂಟಿಆರ್ ಬೆಂಬಲವು ಸಂಸ್ಥೆಯ 'ಸಿಎಸ್ಆರ್' ಪ್ರಯಾಣದ ಪ್ರಮುಖ ಭಾಗವಾಗಿ ಮುಂದುವರೆದಿದೆ - ಇದು ಭವಿಷ್ಯವನ್ನು ಪೋಷಿಸುತ್ತದೆ, ಕನಸುಗಳನ್ನು ಬೆಂಬಲಿಸುತ್ತದೆ ಮತ್ತು ಆಹಾರದ ಶಕ್ತಿಯ ಮೂಲಕ ಆರೋಗ್ಯಕರ ಜೀವನವನ್ನು ರೂಪಿಸುವ ಕಂಪನಿಯ ಧ್ಯೇಯವನ್ನು ಪುನರುಚ್ಚರಿಸುತ್ತದೆ.

ಈ ಮೈಲುಗಲ್ಲು ಸಾಧನೆ ಬಗ್ಗೆ ಮಾತನಾಡಿದ 'ಎಂಟಿಆರ್' ಸಿಇಒ ಸುನಯ್ ಭಾಸಿನ್ ಅವರು, "ಪ್ರತಿ ಮಗುವು ಬೆಳೆಯಲು, ಕಲಿಯಲು ಮತ್ತು ಅಭಿವೃದ್ಧಿ ಹೊಂದಲು ಅವಕಾಶಕ್ಕೆ ಅರ್ಹವಾಗಿದೆ - ಮತ್ತು ಆ ಪ್ರಯಾಣವು ಪೌಷ್ಟಿಕ ಆಹಾರದೊಂದಿಗೆ ಪ್ರಾರಂಭವಾಗುತ್ತದೆ ಎಂದು 'ಎಂಟಿಆರ್'ನಲ್ಲಿ ನಾವು ನಂಬುತ್ತೇವೆ. 'ಅಕ್ಷಯ ಪಾತ್ರಾ ಫೌಂಡೇಶನ್' ಜೊತೆಗಿನ ನಮ್ಮ ಪಾಲುದಾರಿಕೆಯು ನಮಗೆ ಅತ್ಯಂತ ಅರ್ಥಪೂರ್ಣವಾಗಿದೆ. ಏಕೆಂದರೆ ಇದು ಅಗತ್ಯವಿರುವ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಸಣ್ಣ ಪಾತ್ರವನ್ನು ವಹಿಸಲು ನಮಗೆ ಅನುವು ಮಾಡಿಕೊಡುತ್ತದೆ. 10 ದಶಲಕ್ಷಕ್ಕೂ ಹೆಚ್ಚು ಊಟದ ಗಡಿಯನ್ನು ತಲುಪುವುದು ಕೇವಲ ಒಂದು ಮೈಲಿಗಲ್ಲು ಮಾತ್ರವಲ್ಲ; ಇದು ಕಾಳಜಿ, ಸಹಾನುಭೂತಿ ಮತ್ತು ಸಮುದಾಯಕ್ಕೆ ನಮ್ಮ ನಿರಂತರ ಬದ್ಧತೆಯ ಪ್ರತಿಬಿಂಬವಾಗಿದೆ. ಈ ಪ್ರಯಾಣವನ್ನು ಮುಂದುವರಿಸಲು ಮತ್ತು ಮುಂಬರುವ ವರ್ಷಗಳಲ್ಲಿ ನಮ್ಮ ಪ್ರಭಾವವನ್ನು ವಿಸ್ತರಿಸಲು ನಾವು ಇದರಿಂದ ಸ್ಫೂರ್ತಿ ಪಡೆದಿದ್ದೇವೆ," ಎಂದು ಹೇಳಿದರು.
'ಅಕ್ಷಯ ಪಾತ್ರಾ ಫೌಂಡೇಶನ್'ನ ಸಿಇಒ ಶ್ರೀಧರ್ ವೆಂಕಟ್ರವರು ಮಾತನಾಡಿ, "ವಿಶ್ವ ಪೌಷ್ಟಿಕಾಂಶ ದಿನದಂದು 'ಓರ್ಕ್ಲಾ ಇಂಡಿಯಾ ಪ್ರೈವೇಟ್ ಲಿಮಿಟೆಡ್' (ಎಂಟಿಆರ್ ಫುಡ್ಸ್) ಜೊತೆಗೆ ಅರ್ಥಪೂರ್ಣ ಪಾಲುದಾರಿಕೆಯ ದಶಕವನ್ನು ನಾವು ಆಚರಿಸುತ್ತಿದ್ದೇವೆ. ಈ ಸಮಯದಲ್ಲಿ, ಉದ್ದೇಶ ಮತ್ತು ಪ್ರಗತಿಯ ತಳಹದಿಯ ಮೇಲೆ ಸಾಗಿಬಂದ ಪರಸ್ಪರ ಹಂಚಿಕೆಯ ಪ್ರಯಾಣದ ಬಗ್ಗೆ ನಾವು ಕೃತಜ್ಞತೆ ವ್ಯಕ್ತಪಡಿಸುತೇವೆ. ಕಳೆದ 10 ವರ್ಷಗಳಲ್ಲಿ, 'ಎಂಟಿಆರ್' ಅವರ ದೃಢವಾದ ಬೆಂಬಲವು ಕರ್ನಾಟಕದಾದ್ಯಂತ ಸುಮಾರು 60,000 ಮಕ್ಕಳಿಗೆ 10 ದಶಲಕ್ಷಕ್ಕೂ ಹೆಚ್ಚು ಪೌಷ್ಟಿಕ ಆಹಾರವನ್ನು ಪೂರೈಸಲು ಸಹಾಯ ಮಾಡಿದೆ.
ಕಾರ್ಪೊರೇಟ್ ಉದ್ದೇಶ ಮತ್ತು ಸಾಮಾಜಿಕ ಜವಾಬ್ದಾರಿಯು ಮಕ್ಕಳನ್ನು ಮಾತ್ರವಲ್ಲ, ನಮ್ಮ ರಾಷ್ಟ್ರದ ಉಜ್ವಲ ಭವಿಷ್ಯವನ್ನು ಪೋಷಿಸಲು ಹೇಗೆ ಒಗ್ಗೂಡಬಹುದು ಎಂಬುದಕ್ಕೆ ಈ ಸಹಯೋ ಗವು ಒಂದು ಉಜ್ವಲ ಉದಾಹರಣೆಯಾಗಿ ನಿಂತಿದೆ. ಪೌಷ್ಠಿಕಾಂಶ ಮತ್ತು ಶಿಕ್ಷಣವನ್ನು ಸಕ್ರಿಯ ಗೊಳಿಸುವ 'ಎಂಟಿಆರ್'ನ ಬದ್ಧತೆಯನ್ನು ನಾವು ತುಂಬಾ ಗೌರವಿಸುತ್ತೇವೆ ಮತ್ತು ಮುಂಬರುವ ವರ್ಷಗಳಲ್ಲಿ ಈ ಪರಿಣಾಮಕಾರಿ ಸಹಯೋಗವನ್ನು ಮುಂದುವರಿಸಲು ಉತ್ಸುಕರಾಗಿದ್ದೇವೆ,'' ಎಂದು ಹೇಳಿದರು.