ಪ್ರವಾಸಿಗರಿಗೆ ಗುಡ್‌ನ್ಯೂಸ್: ಪ್ರಕೃತಿಪ್ರಿಯರ ಸ್ವರ್ಗ ಮೇಘಾಲಯಕ್ಕೆ ಅಡಿಗಾಸ್ ಯಾತ್ರಾ ಟೂರ್
Adigas Yatra: ಕನ್ನಡಿಗರ ನೆಚ್ಚಿನ ಅಡಿಗಾಸ್ ಯಾತ್ರಾ ಇದೀಗ ಪ್ರಕೃತಿಪ್ರಿಯರ ನೆಚ್ಚಿನ ಮೇಘಾಲಯಕ್ಕೆ ಪ್ರವಾಸ ಹಮ್ಮಿಕೊಂಡಿದೆ. ಅಡಿಗಾಸ್ ಯಾತ್ರಾದ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತದೆ. ಹೆಚ್ಚಿನ ಮಾಹಿತಿಗೆ ಅಡಿಗಾಸ್ ಯಾತ್ರಾವನ್ನು ಸಂಪರ್ಕಿಸಿ: ಫೋನ್ ನಂಬರ್: 080-26616678/ 7022259008/ 9449478944.
ಸಾಂದರ್ಭಿಕ ಚಿತ್ರ -
ಶಿಲ್ಲಾಂಗ್: ಮೇಘಾಲಯವು ಭಾರತದ ಈಶಾನ್ಯ ಭಾಗದಲ್ಲಿರುವ ಅದ್ಭುತ ರಾಜ್ಯವಾಗಿದ್ದು, ಇದು ʼಮೋಡಗಳ ನಾಡುʼ ಎಂದೇ ಪ್ರಸಿದ್ಧ. ಪ್ರಕೃತಿ ಪ್ರಿಯರಿಗೆ ಇದು ಸ್ವರ್ಗದಂತಿದೆ. ರಾಜಧಾನಿ ಶಿಲ್ಲಾಂಗ್ ಸುಂದರ ಗಿರಿಧಾಮ. ಈ ಪಟ್ಟಣದ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳು ಬ್ರಿಟಿಷರಿಗೆ ಸ್ಕಾಟ್‌ಲ್ಯಾಂಡ್ ಅನ್ನು ನೆನಪಿಸುತ್ತಿದ್ದವು. ಆದ್ದರಿಂದ, ಅವರು ಇದನ್ನು ʼಪೂರ್ವದ ಸ್ಕಾಟ್‌ಲ್ಯಾಂಡ್ʼ (Scotland of the East) ಎಂದು ಕರೆಯುತ್ತಿದ್ದರು.ಇಲ್ಲಿನ ಉಮಿಯಂ ಸರೋವರ, ವಾರ್ಡ್ಸ್ ಲೇಕ್, ಎಲಿಫೆಂಟ್ ಫಾಲ್ಸ್ ಮತ್ತು ಶಿಲ್ಲಾಂಗ್ ಪೀಕ್ ಜನಪ್ರಿಯ. ಅಲ್ಲಿ ನೀವು ಇಡೀ ಪಟ್ಟಣದ ವಿಹಂಗಮ ದೃಶ್ಯವನ್ನು ನೋಡಬಹುದು. ಸ್ಫಟಿಕ ಸದೃಶ ಸ್ವಚ್ಛ ಮತ್ತು ಮನೋಹರಸರೋವರಗಳು, ಜಲಪಾತಗಳು ಪ್ರವಾಸಿಗರ ಕಣ್ಮನ ತಣಿಸುತ್ತವೆ.
ಜಗತ್ತಿನಲ್ಲೇ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಒಂದಾಗಿರುವ ಚಿರಾಪುಂಜಿ ಕೂಡ ಇಲ್ಲಿದೆ. ಇಲ್ಲಿನ ಸೆವೆನ್ ಸಿಸ್ಟರ್ಸ್ ಫಾಲ್ಸ್ ಎಂಬ ಏಳು ಜಲಪಾತಗಳ ಸಮೂಹ ಅದ್ಭುತ ಅನುಭವ ನೀಡುತ್ತದೆ. ಇಲ್ಲಿನ ನಿಸರ್ಗದತ್ತ ಗುಹೆಗಳೂ ವಿಸ್ಮಯಕಾರಿ. ಮೇಘಾಲಯದ ಗ್ರಾಮೀಣ ಪ್ರದೇಶಗಳು ಸ್ವಚ್ಛತೆಗೆ ಹೆಸರುವಾಸಿ.

ರಾಜ್ಯದ ಮೌಲಿನ್ನಾಂಗ್ (Mawlynnong Village) ಗ್ರಾಮವು ಏಷ್ಯಾದಲ್ಲೇ ಅತ್ಯಂತ ಸ್ವಚ್ಛವಾದ ಗ್ರಾಮವೆಂದು ಗುರುತಿಸಲ್ಪಟ್ಟಿದೆ ಹಾಗೂ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ. ಇಲ್ಲಿನ ಪರಿಸರ ಸ್ನೇಹಿ ಜೀವನಶೈಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಉಮ್ಗೊಟ್ ನದಿಯ ನೀರು ಎಷ್ಟು ಸ್ಪಷ್ಟವಾಗಿರುತ್ತದೆ ಎಂದರೆ, ದೋಣಿಯಲ್ಲಿ ಕುಳಿತಾಗ ನದಿಯ ತಳವು ಕನ್ನಡಿಯಂತೆ ಕಾಣುತ್ತದೆ! ಮರಗಳ ಬೇರುಗಳನ್ನು ಬಳಸಿ ನಿರ್ಮಿಸಲಾದ ಲಿವಿಂಗ್ ರೂಟ್ ಬ್ರಿಡ್ಜ್‌ಗಳು ಅಥವಾ ನೈಸರ್ಗಿಕ ಸೇತುವೆಗಳು ಮೇಘಾಲಯದ ವಿಶೇಷ ಆಕರ್ಷಣೆ. ವಿಶೇಷವಾಗಿ ನೋಂಗ್ರಿಯಾಟ್ ಸೇತುವೆ ಹೆಚ್ಚು ಜನಪ್ರಿಯ.
ಕನ್ನಡದವರಿಂದ ಕನ್ನಡದವರಿಗಾಗಿಯೇ ಇರುವ ಪ್ರಯಾಣ ಸಂಸ್ಥೆ ಅಡಿಗಾಸ್ ಯಾತ್ರಾ: ಕೆ. ನಾಗರಾಜ್ ಅಡಿಗ
ಮೇಘಾಲಯದ ಲೈಟ್ಲುಮ್ ಕ್ಯಾನಿಯನ್ಸ್ ಪರ್ವತಗಳ ಸುಂದರ ನೋಟವನ್ನು ಪ್ರವಾಸಿಗರು ಆಸ್ವಾದಿಸಬಹುದು. ಸೊಗಸಾದ ಕಣಿವೆಗಳನ್ನು ನೋಡಲು ಇದು ಸೂಕ್ತವಾದ ಸ್ಥಳ. ಮಳೆಗಾಲದಲ್ಲಿ (ಜೂನ್ - ಸೆಪ್ಟೆಂಬರ್) ಮೇಘಾಲಯವು ಹಸಿರಿನಿಂದ ಕಂಗೊಳಿಸುತ್ತದೆ. ಜಲಪಾತಗಳು, ಮೋಡಗಳ ನಿಸರ್ಗ ಸೌಂದರ್ಯವನ್ನು ಆನಂದಿಸಬಹುದು.

ಈ ಬಾರಿ ಅಡಿಗಾಸ್ ಯಾತ್ರಾ ಮೇಘಾಲಯಕ್ಕೆ ವಿಶೇಷ ಪ್ರವಾಸ ಆಯೋಜಿಸುತ್ತಿದೆ. ಅಡಿಗಾಸ್ ಯಾತ್ರಾದ ವಿಶೇಷತೆ ಏನೆಂದರೆ, ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುವುದು. 4 ಸ್ಟಾರ್ ಹೋಟೆಲ್‌ಗಳಲ್ಲಿ ಅತ್ಯುತ್ತಮ ಊಟೋಪಚಾರ, ಭಾರತೀಯ - ಅಂತಾರಾಷ್ಟ್ರೀಯ ಭೋಜನ, ಎಂಟ್ರಿ ಟಿಕೆಟ್, ಸ್ಥಳೀಯ ಪರ್ಮಿಟ್, ಟ್ಯಾಕ್ಸ್, ಕಾಂಪ್ಲಿಮೆಂಟರಿ ಬ್ರೇಕ್ ಫಾಸ್ಟ್, ವಿಮೆ, ವೀಸಾ ವ್ಯವಸ್ಥೆ ಸೇರಿದಂತೆ ಸಮಗ್ರ ಅನುಕೂಲಗಳನ್ನು ಒದಗಿಸುತ್ತಾರೆ. ಹೀಗಾಗಿ ನೆಮ್ಮದಿಯ ಪ್ರವಾಸದ ಅದ್ಭುತ ಅನುಭವ ನಿಮ್ಮದಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಕೂಡಲೇ ಅಡಿಗಾಸ್ ಯಾತ್ರಾವನ್ನು ಸಂಪರ್ಕಿಸಿ: 080-26616678/ 7022259008/ 9449478944. website: www.adigasyatra.com