ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಈ ಗುಣಗಳನ್ನು ತ್ಯಜಿಸಿದರೆ ಮಾತ್ರ ಯಶಸ್ಸು ನಿಮ್ಮದಾಗುತ್ತದೆ; ವಿದ್ಯಾರ್ಥಿಗಳಿಗೆ ಚಾಣಕ್ಯ ಕಿವಿಮಾತು

Chanakya Niti: ಚಾಣಕ್ಯ ನೀತಿಯ ಪ್ರಕಾರ, ವಿದ್ಯಾರ್ಥಿ ಜೀವನವು ಮಾನವನರ ಅತ್ಯಂತ ಮಹತ್ವದ ಹಂತ. ಈ ಅವಧಿಯಲ್ಲಿಯೇ ಭವಿಷ್ಯದ ಯಶಸ್ಸಿನ ಬುನಾದಿ ರೂಪುಗೊಳ್ಳಲಿದ್ದು, ವೃತ್ತಿ ಬದುಕು ಕೂಡ ನಿಮ್ಮ ವಿದ್ಯೆ ಹಾಗೂ ಬುದ್ದಿವಂತಿಕೆ ಮೇಲೆ ನಿರ್ಧರಿತವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ, ಕೆಲ ಅಭ್ಯಾಸ ಹಾಗೂ ಹವ್ಯಾಸಗಳನ್ನು ಬಿಡಬೇಕಾಗುತ್ತದೆ ಎಂಬ ಸಲಹೆ ಚಾಣಕ್ಯ ನೀತಿಯಲ್ಲಿದೆ.

ವಿದ್ಯಾರ್ಥಿಗಳಿಗೆ ಈ ಗುಣಗಳಿರಬಾರದು ಎನ್ನುತ್ತಾರೆ ಚಾಣಕ್ಯ

ಚಾಣಕ್ಯ -

Profile
Sushmitha Jain Dec 31, 2025 7:00 AM

ಬೆಂಗಳೂರು, ಡಿ. 31: ಆಚಾರ್ಯ ಚಾಣಕ್ಯ (Acharya Chanakya) ಮಾನವ ಜೀವನಕ್ಕೆ ಸಂಬಂಧಿಸಿದ ಅನೇಕ ನೀತಿ ಪಾಠಗಳನ್ನು ತಮ್ಮ ಗ್ರಂಥಗಳಲ್ಲಿ ವಿವರಿಸಿದ್ದಾರೆ. ಯಶಸ್ಸು, ಶಿಕ್ಷಣ, ಸಂಪತ್ತು ಹಾಗೂ ದಾಂಪತ್ಯ ಜೀವನದಂತಹ ವಿಷಯಗಳಿಗೆ ಅವರು ವಿಶೇಷ ಮಹತ್ವ ನೀಡಿದ್ದು, ಜ್ಞಾನವೇ ಜೀವನದ ನಿಜವಾದ ಆಸ್ತಿ ಎಂದು ಹೇಳುತ್ತಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಯಶಸ್ಸು ಪಡೆಯಬೇಕಾದರೆ ಕೆಲವೊಂದು ಅಭ್ಯಾಸಗಳನ್ನು ತ್ಯಜಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಹೌದು ಚಾಣಕ್ಯ ನೀತಿಯ (Chanakya Niti) ಪ್ರಕಾರ, ವಿದ್ಯಾರ್ಥಿ ಜೀವನವು ಮಾನವನ ಅತ್ಯಂತ ಮಹತ್ವದ ಹಂತ. ಹೀಗಾಗಿ ಈ ಹಂತದಲ್ಲಿ ಎಚ್ಚರಿಕೆಯಿಂದ ಇರಬೇಕು.

ಈ ಅವಧಿಯಲ್ಲಿಯೇ ಭವಿಷ್ಯದ ಯಶಸ್ಸಿನ ಬುನಾದಿ ರೂಪುಗೊಳ್ಳಲಿದ್ದು, ವೃತ್ತಿ ಬದುಕು ಕೂಡ ನಿಮ್ಮ ವಿದ್ಯೆ ಹಾಗೂ ಬುದ್ಧಿವಂತಿಕೆ ಮೇಲೆ ನಿರ್ಧಾರವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ, ಕೆಲ ಅಭ್ಯಾಸ ಹಾಗೂ ಹವ್ಯಾಸಗಳನ್ನು ಬಿಡಬೇಕಾಗುತ್ತದೆ ಎಂಬ ಸಲಹೆ ಚಾಣಕ್ಯ ನೀತಿಯಲ್ಲಿದ್ದು, ಆ ಗುಣಗಳು ಯಾವುವು ಎಂಬುದನ್ನು ನೋಡೋಣ.

ಅಶಿಸ್ತು

ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಅತ್ಯಂತ ಮುಖ್ಯ. ಶಿಸ್ತಿನೊಂದಿಗೆ ಜೀವನ ನಡೆಸುವವರು ತಮ್ಮ ಗುರಿಗಳನ್ನು ಸುಲಭವಾಗಿ ತಲುಪುತ್ತಾರೆ ಎಂದು ಚಾಣಕ್ಯ ಹೇಳುತ್ತಾರೆ. ಶಿಸ್ತು ವಿದ್ಯಾರ್ಥಿಗೆ ಸಮಯದ ಮೌಲ್ಯವನ್ನು ತಿಳಿಸಲಿದ್ದು, ಸಮಯವನ್ನು ಗೌರವಿಸುವವನು ತನ್ನ ಕರ್ತವ್ಯಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಯಶಸ್ಸಿನ ದಾರಿಯಲ್ಲಿ ಮುಂದುವರಿಯುತ್ತಾನೆ. ಹೀಗಾಗಿ ಅಶಿಸ್ತು ತ್ಯಜಿಸಬೇಕು.

ಸೋಮಾರಿತನ

ಚಾಣಕ್ಯನ ಅಭಿಪ್ರಾಯದಲ್ಲಿ ಸೋಮಾರಿತನವೇ ವಿದ್ಯಾರ್ಥಿಯ ಅತಿದೊಡ್ಡ ಶತ್ರು. ಇಂದಿನ ಕೆಲಸವನ್ನು ನಾಳೆಗೆ ಮುಂದೂಡುವ ಅಭ್ಯಾಸ ಗುರಿ ಸಾಧನೆಗೆ ಬೇಲಿ ಆಗಲಿದ್ದು, ಸೋಮಾರಿತನದ ಗುಣವು ವಿದ್ಯಾರ್ಥಿಯ ಪ್ರಗತಿಗೆ ಅಡ್ಡಿಯಾಗುತ್ತದೆ.

ತಪ್ಪಿಯೂ ನಿಮ್ಮ ಜೀವನದ ಈ ಗುಟ್ಟುಗಳನ್ನು ಅನ್ಯರ ಬಳಿ ಹೇಳಿಕೊಳ್ಳಬೇಡಿ

ದುರ್ಜನರ ಸಹವಾಸ

ವಿದ್ಯಾರ್ಜನೆಯ ಘಟ್ಟದಲ್ಲಿ ದುರ್ಜನರ ಸಹವಾಸದಿಂದ ದೂರವಿರುವುದು ಅಗತ್ಯವೆಂದು ಚಾಣಕ್ಯ ಹೇಳುತ್ತಾರೆ. ಕೆಟ್ಟ ಜನರ ಗೆಳೆತನದಿಂದ ನಷ್ಟ, ಅವಮಾನ ಮತ್ತು ಅನಗತ್ಯ ತೊಂದರೆಗಳು ಎದುರಾಗುತ್ತವೆ. ಹಾಗಾಗಿ ಚಾಣಕ್ಯ ಆಚಾರ್ಯರು ಸಜ್ಜನರ ಸಹವಾಸ ಮಾಡುವಂತೆ ಸಲಹೆ ನೀಡುತ್ತಾರೆ.

ದುಶ್ಚಟ್ಟಗಳು

ಚಾಣಕ್ಯ ನೀತಿಯ ಪ್ರಕಾರ, ವಿದ್ಯಾರ್ಥಿ ಜೀವನವನ್ನು ಕೆಟ್ಟ ಅಭ್ಯಾಸಗಳಿಂದ ಹಾಳು ಮಾಡಿಕೊಳ್ಳಬಾರದು. ಮಾದಕ ವಸ್ತುಗಳು ಮತ್ತು ದುಶ್ಚಟ್ಟಗಳು ದೇಹ, ಮನಸ್ಸು ಹಾಗೂ ಗೌರವವನ್ನು ನಾಶಪಡಿಸುತ್ತವೆ. ಇಂತಹ ಅಭ್ಯಾಸಗಳು ವಿದ್ಯಾರ್ಥಿಯನ್ನು ಯಶಸ್ಸಿನಿಂದ ದೂರ ಇಡುತ್ತದೆ.

ಇವುಗಳ ಹೊರತಾಗಿ ಚಾಣಕ್ಯನ ಸಲಹೆಯಂತೆ, ವಿದ್ಯಾರ್ಥಿಗಳು ಸೂರ್ಯೋದಯಕ್ಕೂ ಮುನ್ನ ಎದ್ದು, ದಿನಚರಿಯನ್ನು ಪೂರ್ಣಗೊಳಿಸಿ ಅಧ್ಯಯನದಲ್ಲಿ ತೊಡಗಬೇಕು. ಬೆಳಗಿನ ಸಮಯವು ಅಧ್ಯಯನಕ್ಕೆ ಅತ್ಯಂತ ಸೂಕ್ತವಾಗಿದ್ದು, ಈ ಸಮಯದಲ್ಲಿ ಕಲಿತ ವಿಷಯಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ. ಹಾಗೇ ತಂದೆ–ತಾಯಿಯನ್ನು ದೇವರಿಗಿಂತಲೂ ಮಹತ್ವಪೂರ್ಣರೆಂದು ಪರಿಗಣಿಸಲಾಗಿದೆ. ಪಾಲಕರು ಮಗುವಿನ ಮೊದಲ ಗುರುಗಳಾಗಿದ್ದು, ಬದುಕಿನ ಮೌಲ್ಯಗಳನ್ನು ಕಲಿಸುತ್ತಾರೆ. ಆದ್ದರಿಂದ ಹೆತ್ತವರನ್ನು ಯಾವತ್ತೂ ಗೌರವಿಸಬೇಕು. ಇದರೊಂದಿಗೆ ವಿದ್ಯೆ ಕಲಿಸುವ ಗುರುಗಳನ್ನು ಗೌರವದಿಂದ ಕಾಣಬೇಕು. ಎಂದಿಗೂ ಅವರಿಗೆ ಅವಮಾನ ಆಗದಂತೆ ನೋಡಿಕೊಳ್ಳಬೇಕು. ಯಾಕೆಂದರೆ ಈ ಗುಣ ಜೀವನದಲ್ಲಿ ಯಶಸ್ಸನ್ನು ತಡೆಯುತ್ತದೆ ಎಂದು ಚಾಣಕ್ಯ ಎಚ್ಚರಿಸುತ್ತಾನೆ. ಪುಸ್ತಕಗಳ ಜೊತೆಗೆ ಗುರುವಿನ ಮಾರ್ಗದರ್ಶನವೇ ಸರಿಯಾದ ಶಿಕ್ಷಣಕ್ಕೆ ದಾರಿ ತೋರಿಸುತ್ತದೆ. ಆದ್ದರಿಂದ ಸದಾ ಗುರುವನ್ನು ಗೌರವಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು.