ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ತಪ್ಪಿಯೂ ಪರ್ಸ್‌ನಲ್ಲಿ ಹಣದ ಜೊತೆ ಈ ವಸ್ತು ಇಟ್ಟುಕೊಳ್ಳಬೇಡಿ! ದಾರಿದ್ರ್ಯ ಕಾಡಬಹುದು

ಲಕ್ಷ್ಮಿ ದೇವಿಯ ಅನುಗ್ರಹ ಸದಾ ನಮ್ಮ ಮೇಲೆ ಇರಬೇಕೆಂದರೆ, ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲವು ವಿಷಯಗಳಿಗೆ ವಿಶೇಷ ಗಮನ ನೀಡಬೇಕು. ಹಲವರ ಜೀವನದಲ್ಲಿ ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯದ ಪರಿಸ್ಥಿತಿ ಎದುರಾಗುತ್ತದೆ. ಇದಕ್ಕೆ ಕಾರಣ ಏನು ಎಂದು ಅವಲೋಕಿಸಿದಾಗ ದೊಡ್ಡ ತಪ್ಪುಗಳೇನೂ ಕಾಣುವುದಿಲ್ಲ. ನಮ್ಮ ದಿನನಿತ್ಯದ ಸಣ್ಣಪುಟ್ಟ ತಪ್ಪುಗಳೇ ಕಾರಣವಾಗಿರುತ್ತವೆ. ಹಾಗಾದ್ರೆ ಹಣಕ್ಕೆ ಸಂಬಂಧಪಟ್ಟ ಯಾವ ತಪ್ಪುಗಳನ್ನು ಮಾಡಿದ್ರೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ? ದುಡ್ಡಿನ ನಿರ್ವಹಣೆ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ದುಡ್ಡು ಎಣಿಸುವಾಗ ಈ ತಪ್ಪು ಮಾಡಬೇಡಿ

ಸಾಂದರ್ಭಿಕ ಚಿತ್ರ -

Profile
Sushmitha Jain Dec 31, 2025 8:01 AM

ಬೆಂಗಳೂರು: ಸಂಪತ್ತಿನ ಪ್ರತೀಕವಾಗಿರುವ ಲಕ್ಷ್ಮಿ ದೇವಿಯ (Lakshmi Devi) ಆಶೀರ್ವಾದ (Blessings) ದೊರೆತ ವ್ಯಕ್ತಿಯ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ತಾಯಿ ಲಕ್ಷ್ಮಿ ವಾಸಿಸುವ ಮನೆಯಲ್ಲಿ ಎಂದಿಗೂ ದಾರಿದ್ರ್ಯ ಕಾಡುವುದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರಗಳು(Astro Tips) ಹೇಳುತ್ತವೆ. ಆದರೆ ಕೆಲವೊಮ್ಮೆ ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳಿಂದ ಲಕ್ಷ್ಮಿ ದೇವಿಯ ಕೃಪೆ ದೊರೆಯದೇ, ಎಷ್ಟೇ ಪರಿಶ್ರಮ ಪಟ್ಟರೂ ಜೀವನದಲ್ಲಿ ಸಂಕಷ್ಟಗಳು ಒಂದರ ಮೇಲೊಂದರಂತೆ ಎದುರಾಗುತ್ತವೆ. ಅದರಲ್ಲೂ ಆತನ ಟೈಮ್ ಸರಿ ಇಲ್ಲದಿದ್ದರೆ ವ್ಯಕ್ತಿಗೆ ತಾನು ಮಾಡಿದ ತಪ್ಪುಗಳು ಯಾವುವು ಎಂಬುದು ಕೂಡ ಅರ್ಥವಾಗುವುದಿಲ್ಲ.

ಹಾಗಾಗಿ ಲಕ್ಷ್ಮಿ ದೇವಿಯ ಅನುಗ್ರಹ ಸದಾ ನಮ್ಮ ಮೇಲೆ ಇರಬೇಕೆಂದರೆ, ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲವು ವಿಷಯಗಳಿಗೆ ವಿಶೇಷ ಗಮನ ನೀಡಬೇಕು. ಹಲವರ ಜೀವನದಲ್ಲಿ ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯದ ಪರಿಸ್ಥಿತಿ ಎದುರಾಗುತ್ತದೆ. ಇದಕ್ಕೆ ಕಾರಣ ಎಂದು ಅವಲೋಕಿಸಿದಾಗ ದೊಡ್ಡ ದೊಡ್ಡ ತಪ್ಪುಗಳು ಏನು ಕಾಣುವುದಿಲ್ಲ, ಹೊರತಾಗಿ ನಮ್ಮ ದಿನನಿತ್ಯದ ಸಣ್ಣಪುಟ್ಟ ತಪ್ಪುಗಳೇ ಕಾರಣವಾಗಿರುತ್ತವೆ.

ಹಾಗಾದ್ರೆ ಹಣಕ್ಕೆ ಸಂಬಂಧಪಟ್ಟ ಯಾವ ತಪ್ಪುಗಳನ್ನು ಮಾಡಿದ್ರೆ ಲಕ್ಷ್ಮೀ ದೇವಿ ಕೊಪ್ಪಗೊಳ್ಳುತ್ತಾಳೆ..? ದುಡ್ಡಿನ ನಿರ್ವಹಣೆ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ..? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..

ಹಣ ಲೆಕ್ಕ ಮಾಡುವಾಗ ಈ ತಪ್ಪು ಮಾಡಬೇಡಿ

ಹೌದು ಹಣವನ್ನು ಬಳಸುವಾಗ ಅಥವಾ ಎಣಿಸುವಾಗ ಮಾಡುವ ಕೆಲವು ಅಜಾಗರೂಕತೆಗಳು ಕೂಡ ಲಕ್ಷ್ಮಿ ದೇವಿಯ ಅಸಮಾಧಾನಕ್ಕೆ ಕಾರಣವಾಗಬಹುದು.
ಹಲವಾರು ನೋಟುಗಳನ್ನು ಎಣಿಸುವಾಗ ಬೆರಳಿಗೆ ಉಗುಳನ್ನು ಹಚ್ಚಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರ ಪ್ರಕಾರ, ಇದು ತಪ್ಪಾದ ಕ್ರಮವಾಗಿದ್ದು, ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಅವಮಾನವಾಗುತ್ತದೆ ಎಂದು ಹೇಳಲಾಗುತ್ತದೆ. ಅಗತ್ಯವಿದ್ದರೆ, ಉಗುಳಿನ ಬದಲು ಸ್ವಲ್ಪ ನೀರನ್ನು ಬಳಸುವುದು ಉತ್ತಮ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಹಣವು ಅನೇಕ ಕೈಗಳಿಂದ ಹರಿದಾಡುವುದರಿಂದ, ಅದರಲ್ಲಿ ಸೋಂಕುಗಳು ಇರುವ ಸಾಧ್ಯತೆ ಹೆಚ್ಚಿರುತ್ತದೆ. ಉಗುಳನ್ನು ಬಳಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

Astro Tips: ಮಂಗಳವಾರ ಸಂಕಟಮೋಚನ ಹನುಮಂತನ ಈ ಮಂತ್ರಗಳನ್ನ ಪಠಿಸಿದ್ರೆ ಶನಿ ದೋಷ ನಿವಾರಣೆಯಾಗುತ್ತದೆ

ನಿಮ್ಮ ಪರ್ಸ್‌ನಲ್ಲಿ ದುಡ್ಡಿನ ಜೊತೆ ಈ ವಸ್ತು ಹಿಡಬೇಡಿ

ಇನ್ನೊಂದು ಸಾಮಾನ್ಯ ಅಭ್ಯಾಸವೆಂದರೆ ಪರ್ಸ್‌ನಲ್ಲಿ ಆಹಾರ ಪದಾರ್ಥಗಳನ್ನು ಇಡುವುದು. ಆದರೆ ಪರ್ಸ್‌ನಲ್ಲಿ ಹಣದ ಜೊತೆಗೆ ಆಹಾರ ವಸ್ತುಗಳನ್ನು ಇಡಬಾರದು ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಸಂಪತ್ತಿಗೆ ಅಶುಭ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಣವನ್ನು ಇಡುವ ಪರ್ಸ್ ಅನ್ನು ಸದಾ ಸ್ವಚ್ಛವಾಗಿ ಇಟ್ಟುಕೊಂಡು, ಆಹಾರ ಪದಾರ್ಥಗಳಿಗೆ ಪ್ರತ್ಯೇಕ ಚೀಲವನ್ನು ಬಳಸುವುದು ಉತ್ತಮ.

ಹಾಸಿಗೆ ಬಳಿ ಹಣ ಇಡುವುದು ಅಶುಭ

ಕೆಲವರು ಹಣವನ್ನು ತಲೆಯ ಕೆಳಗೆ ಅಥವಾ ಹಾಸಿಗೆಯ ಪಕ್ಕದಲ್ಲಿ ಇಡುವ ಅಭ್ಯಾಸ ಹೊಂದಿರುತ್ತಾರೆ. ನಂಬಿಕೆಗಳ ಪ್ರಕಾರ, ಇದು ಲಕ್ಷ್ಮಿ ದೇವಿಗೆ ಅಗೌರವ ತೋರಿಸಿದಂತೆ ಆಗುತ್ತದೆ. ಹಣವನ್ನು ಯಾವಾಗಲೂ ಸುರಕ್ಷಿತ ಮತ್ತು ಸ್ವಚ್ಛವಾದ ಸ್ಥಳದಲ್ಲಿ, ಉದಾಹರಣೆಗೆ ಬೀರು ಅಥವಾ ಲಾಕರ್‌ನಲ್ಲಿ ಇಡುವುದು ಉತ್ತಮ. ಇಚ್ಛೆಯಿದ್ದರೆ, ಹಣದ ಜೊತೆಗೆ ಗೋಮತಿ ಚಕ್ರವನ್ನು ಇಡುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಒಳ್ಳೆಯ ಫಲ ದೊರೆಯುತ್ತದೆ ಎಂಬ ನಂಬಿಕೆಯೂ ಇದೆ.


ದುಡ್ಡನ್ನು ನೀಡುವಾಗ ಈ ಕ್ರಮ ಅನುಸರಿಸಿ

ಹಾಗೆಯೇ, ಬಡವರಿಗೆ ಅಥವಾ ಯಾರಿಗಾದರೂ ಹಣವನ್ನು ನೀಡುವಾಗ, ಅದನ್ನು ಎಸೆಯುವ ರೀತಿಯಲ್ಲಿ ನೀಡಬಾರದು. ಹಣವನ್ನು ಗೌರವದಿಂದ ನೀಡುವುದು ಬಹಳ ಮುಖ್ಯ. ಏಕೆಂದರೆ ಹಣದೊಂದಿಗೆ ಲಕ್ಷ್ಮಿ ದೇವಿಯೂ ಸಂಬಂಧ ಹೊಂದಿದ್ದಾಳೆ ಎಂಬ ನಂಬಿಕೆ ಇದೆ. ಆದ್ದರಿಂದ ದಾನ ಮಾಡುವಾಗಲೂ ಗೌರವ ಮತ್ತು ವಿನಯವನ್ನು ಕಾಪಾಡಿಕೊಳ್ಳಬೇಕು.