Shah Rukh Khan: ಜಾಹೀರಾತಿನಲ್ಲಿ ಅಭಿನಯಕ್ಕಾಗಿ ಪ್ರಶಂಸೆ ಪಡೆದ 4 ವರ್ಷದ ಬಾಲಕ; ಈ ನಟನೇ ಆತನಿಗೆ ಸ್ಫೂರ್ತಿ
Shah Rukh Khan: ದೆಹಲಿಯ 4 ವರ್ಷದ ಬಾಲನಟ ಅವ್ಯಾನ್ ಸಪ್ರಾ , ಹೊಸ ಡೆಟ್ಟಾಲ್ ಜಾಹೀರಾತಿನಲ್ಲಿನ ಅಭಿನಯಕ್ಕಾಗಿ ಪ್ರಶಂಸೆ ಪಡೆಯುತ್ತಿದ್ದಾರೆ. ಭಾವನಾತ್ಮಕ ಕ್ಷಣಗಳಲ್ಲಿ ತನ್ನ ಅಭಿನಯದಿಂದ ಅನೇಕರನ್ನು ರಂಜಿಸಿದ ಪುಟ್ಟ ಹುಡುಗ ಶಾರುಖ್ ಖಾನ್ ಅವರಿಂದ ನಟನೆಯನ್ನು ಕಲಿತಿದ್ದಾನೆ ಎಂದು ಅವನ ಪೋಷಕರು ಹೇಳುತ್ತಾರೆ. ಈ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಬಾಲ ನಟ ಅವ್ಯಾನ್ ಸಪ್ರಾ -
ದೆಹಲಿಯ 4 ವರ್ಷದ ಬಾಲನಟ ಅವ್ಯಾನ್ ಸಪ್ರಾ (Avyaan Sapra), ಹೊಸ ಡೆಟ್ಟಾಲ್ (Dettol) ಜಾಹೀರಾತಿನಲ್ಲಿನ ಅಭಿನಯಕ್ಕಾಗಿ ಪ್ರಶಂಸೆ ಪಡೆಯುತ್ತಿದ್ದಾರೆ. ಭಾವನಾತ್ಮಕ ಕ್ಷಣಗಳಲ್ಲಿ ತನ್ನ ಅಭಿನಯದಿಂದ ಅನೇಕರನ್ನು ರಂಜಿಸಿದ ಪುಟ್ಟ ಹುಡುಗ ಶಾರುಖ್ ಖಾನ್ (Shah Rukh Khan) ಅವರಿಂದ ನಟನೆಯನ್ನು ಕಲಿತಿದ್ದಾನೆ ಎಂದು ಅವನ ಪೋಷಕರು ಹೇಳುತ್ತಾರೆ. ಈ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಶಾರುಖ್ ಖಾನ್ ನಿಂದ ನಟನೆ ಕಲಿತ 4 ವರ್ಷದ ಮಗು!
ಇತ್ತೀಚೆಗೆ ಬಿಡುಗಡೆಯಾದ ಡೆಟಾಲ್ ಜಾಹೀರಾತಿನಲ್ಲಿ ಮದುವೆಯ ಸಮಯದಲ್ಲಿ ನಡೆದ ಗದ್ದಲದಲ್ಲಿ ಒಬ್ಬ ಪುಟ್ಟ ಹುಡುಗ ಕೆಳಗೆ ಬಿದ್ದು ಬಿಡುತ್ತಾನೆ. ಮನೆಯಲ್ಲಿರುವ ಇತರ ಹಿರಿಯರ ಮುಂದೆ ನನಗೆ ಪೆಟ್ಟಾಗಿಲ್ಲ ಎಂದು ಎಂದು ಭರವಸೆ ನೀಡುತ್ತಿದ್ದರೂ, ತನ್ನ ತಾಯಿ ಬಳಿ ಓಡಿ ಹೋಗಿ ಕಣ್ಣೀರು ಹಾಕುತ್ತಾನೆ. ತಾಯಿ ಡೆಟಾಲ್‌ನಿಂದ ಮಗನ ಗಾಯವನ್ನು ಸ್ವಚ್ಛಗೊಳಿಸಿ ಮುದ್ದು ಮಾಡಿ ಸಮಾಧಾನ ಮಾಡುತ್ತಾಳೆ.
ಇದನ್ನೂ ಓದಿ: Ramayana Rama glimpse : ‘ರಾಮಾಯಣ’ ಟೀಸರ್ ರಿಲೀಸ್‌ಗೂ ಮುನ್ನ ಆಲಿಯಾ ಭಟ್ ಹೇಳಿದ್ದೇನು? ವಿಡಿಯೋ ವೈರಲ್
ಆ ಹೃದಯಸ್ಪರ್ಶಿ ಜಾಹೀರಾತಿನಲ್ಲಿ ಅವ್ಯಾನ್ ಅವರ ಅಭಿನಯದಿಂದ ಅನೇಕರು ಭಾವುಕರಾದರು. ರಿಧಿಮಾ ಪಂಡಿತ್ ಅವರಂತಹ ನಟಿಯರು ಸಹ "ತುಂಬಾ ಚೆನ್ನಾಗಿದೆ" ಎಂದು ಬರೆದರೆ, ಕರಿಷ್ಮಾ ತನ್ನಾ "ತುಂಬಾ ಚೆನ್ನಾಗಿದೆ. ನನ್ನ ಕಣ್ಣಲ್ಲಿ ನೀರು ಬಂತು" ಎಂದು ಕಾಮೆಂಟ್ ಮಾಡಿದ್ದಾರೆ. ಈ ವೇಳೆ ಪೋಷಕರು ಮಗ ಶಾರುಖ್ ಅವರನ್ನು ನೋಡಿ ನಟನೆ ಕಲಿತಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ತಮಾಷೆಯ ಕ್ಷಣಗಳನ್ನು ಒಳಗೊಂಡಿರುವ ಮತ್ತೊಂದು ರೀಲ್‌ನಲ್ಲಿ, " ಶಾರುಖ್ ಅವರನ್ನು ತಲುಪುವವರೆಗೆ ಟ್ಯಾಗ್ ಮಾಡಿ" ಎಂದು ಶೀರ್ಷಿಕೆ ಬರೆಯಲಾಗಿದೆ.
ಶಾರುಖ್ ಟ್ಯಾಗ್ ಮಾಡಿದ ನೆಟ್ಟಿಗರು
ರೀಲ್‌ನ ಕಾಮೆಂಟ್‌ಗಳಲ್ಲಿ ಹಲವಾರು ಅಭಿಮಾನಿಗಳು ಶಾರುಖ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಅನೇಕರು ಅವರ ಮ್ಯಾನೇಜರ್ ಪೂಜಾ ದದ್ಲಾನಿ; ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್; ಅವರ ಪತ್ನಿ ಗೌರಿ ಖಾನ್; ಮತ್ತು ಅವರ ಮಕ್ಕಳಾದ ಸುಹಾನಾ ಮತ್ತು ಆರ್ಯನ್ ಖಾನ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಶಾರುಖ್ ಕೊನೆಯದಾಗಿ 2023 ರಲ್ಲಿ ಬಿಡುಗಡೆಯಾದ ಪಠಾಣ್, ಜವಾನ್ ಮತ್ತು ಡಂಕಿ ಚಿತ್ರಗಳಲ್ಲಿ ನಟಿಸಿದ್ದರು ಮತ್ತು ಸಲ್ಮಾನ್ ಖಾನ್ ಅವರ ಟೈಗರ್ 3 ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: Raja Shivaji teaser: ‘ರಾಜಾ ಶಿವಾಜಿ’ ಪಾತ್ರದಲ್ಲಿ ರಿತೇಶ್ ದೇಶ್‌ಮುಖ್; ಸಲ್ಮಾನ್ ಖಾನ್ ಅತಿಥಿ ಪಾತ್ರ?
ಅವರು ಈಗ ತಮ್ಮ ಮಗಳು ಸುಹಾನಾ ಅವರೊಂದಿಗೆ ಸಿದ್ಧಾರ್ಥ್ ಆನಂದ್ ಅವರ ಕಿಂಗ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ . ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್ ಮತ್ತು ಇತರರು ಸೇರಿದಂತೆ ಹಲವಾರು ನಟರು ಇದರಲ್ಲಿ ನಟಿಸಿದ್ದಾರೆ.