ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aryan Khan: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ ಚಿತ್ರದ ಪ್ರಿವ್ಯೂ ಗ್ರ್ಯಾಂಡ್‌ ರಿಲೀಸ್!

Aryan Khan's Bads of Bollywood: ದಿ ಬ್ಯಾಡ್ಸ್‌ ಆಫ್‌ ಬಾಲಿವುಡ್‌ ಹೆಸರಿನ ವೆಬ್ ಸರಣಿಗೆ ಆರ್ಯನ್ ಖಾನ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದು ಈಗಾಗಲೇ ಈ ನೆಟ್‌ಫ್ಲಿಕ್ಸ್‌ ಸರಣಿಯ ಮೊದಲ ಟೀಸರ್‌ ಕೂಡ ರಿಲೀಸ್‌ ಆಗಿದೆ. ಆಗಸ್ಟ್ 20ರಂದು ನೆಟ್ ಫ್ಲಿಕ್ಸ್ ನಲ್ಲಿ ಪ್ರಿವ್ಯೂ ರಿಲೀಸ್ ಮಾಡಲಾಗಿದೆ. ಇದೀಗ ಚಿತ್ರದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ.

ಆರ್ಯನ್ ಖಾನ್ ನಿರ್ದೇಶನದ ಚಿತ್ರದ  ಪ್ರಿವ್ಯೂ ಔಟ್‌

Aryan Khan

Profile Pushpa Kumari Aug 21, 2025 4:23 PM

ನವದೆಹಲಿ: ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅವರು ಸಿನಿಮಾ ರಂಗದಲ್ಲಿ ಅನೇಕ ಹಿಟ್ ಸಿನಿಮಾ ನೀಡಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ‌. ದೇವದಾಸ್, ಓಂ ಶಾಂತಿ ಓಂ, ಕುಚ್ ಕುಚ್ ಹೋತಾ ಹೈ, ಚೆನೈ ಎಕ್ಸ್ ಪ್ರೆಸ್ ಸೇರಿದಂತೆ ಸಾಕಷ್ಟು ಪ್ರಸಿದ್ಧ ಸಿನಿಮಾದಲ್ಲಿ ಇವರು ಅದ್ಭುತ ವಾಗಿ ನಟಿಸಿ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಇದೀಗ ಇವರ ಪುತ್ರ ಆರ್ಯನ್ ಖಾನ್ (Aryan Khan) ಅವರು ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದು ಶಾರುಖ್ ಅಭಿಮಾನಿಗಳಿಗೆ ಈ ವಿಚಾರ ಸಂತಸ ತರಿಸಿದೆ. ನಟನೆಯ ಹೊರತಾಗಿ ನಿರ್ದೇಶನ ಕ್ಷೇತ್ರವನ್ನು ಆರ್ಯನ್ ಖಾನ್ ಅವರು ಆಯ್ಕೆ ಮಾಡಿ ದ್ದಾರೆ. ದಿ ಬ್ಯಾಡ್ಸ್‌ ಆಫ್‌ ಬಾಲಿವುಡ್‌ ಹೆಸರಿನ ವೆಬ್ ಸರಣಿಗೆ ಆರ್ಯನ್ ಖಾನ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದು, ಈಗಾಗಲೇ ಈ ನೆಟ್‌ಫ್ಲಿಕ್ಸ್‌ ಸರಣಿಯ ಮೊದಲ ಟೀಸರ್‌ ಕೂಡ ರಿಲೀಸ್‌ ಆಗಿದೆ. ಆಗಸ್ಟ್ 20ರಂದು ನೆಟ್ ಫ್ಲಿಕ್ಸ್ ನಲ್ಲಿ ಪ್ರಿವ್ಯೂ ರಿಲೀಸ್ ಮಾಡಲಾಗಿದೆ. ಇದರಲ್ಲಿ ಲಕ್ಷ್ಯ, ಬಾಬಿ ಡಿಯೋಲ್, ಮೋನಾಸಿಂಗ್, ನಟಿ ಸಹೇರ್ ಬಂಬಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂಬುದು ತಿಳಿದು ಬಂದಿದೆ.

ಈ ಒಂದು ನೆಟ್ ಫ್ಲಿಕ್ಸ್ ಸರಣಿಯಲ್ಲಿ ಸಲ್ಮಾನ್‌ ಖಾನ್‌, ಕರಣ್‌ ಜೋಹರ್‌, ರಣವೀರ್‌ ಸಿಂಗ್‌ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕೂಡ ಇತ್ತೀಚೆಗಷ್ಟೇ ವೈರಲ್ ಆಗುತ್ತಿದೆ. ಈ ಮೂಲಕ ಆರ್ಯನ್‌ ಖಾನ್‌ ಮೊದಲ ಪ್ರಯತ್ನದಲ್ಲೇ ದೊಡ್ಡ ಸ್ಟಾರ್ ನಟರಿಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿದೆ ಎಂದೇ ಹೇಳಬಹುದು. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿದ ಈ ಸರಣಿಯ ಪ್ರಿವ್ಯೂ ಕಾರ್ಯಕ್ರಮವು ಮುಂಬೈನಲ್ಲಿ ನಡೆದಿದೆ. ಅದನ್ನು ನೆಟ್ ಫ್ಲಿಕ್ಸ್ ನಲ್ಲಿ ಅಪ್ಲೋಡ್ ಕೂಡ ಮಾಡಲಾಗಿದೆ.

ಈ ಸರಣಿಯಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ ಜೊತೆಗೆ ದೊಡ್ಡ ಟೆಕ್ನಿಕಲ್ ಟೀಂ ಕೂಡ ಕೆಲಸ ಮಾಡಿದೆ. ಬಿಲಾಲ್ ಸಿದ್ದಿಕಿ ಮತ್ತು ಮಾನವ್ ಚೌಹಾಣ್ ಅವರು ಈ ಸರಣಿಗೆ ಸಹ-ರಚನೆಕಾರರಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ಉದ್ಯಮವು ಅನೇಕರ ಕನಸಾಗಿದೆ. ಆದರೆ ಪ್ರತಿ ಕನಸೂ ಇಲ್ಲಿ ನನಸಾ ಗೋದಿಲ್ಲ. ಎಲ್ಲರೂ ನಾಯಕರಾಗೋದಿಲ್ಲ ಎಂಬುದನ್ನ ಶಾರುಖ್ ಖಾನ್‌ ಉಲ್ಲೇಖ ಮಾಡುತ್ತಾರೆ. ಅದಾದ ಮೇಲೆ ಬೇರೆಬೇರೆ ಪಾತ್ರಗಳ ಆಗಮನ ಆಗುವ ದೃಶ್ಯಗಳನ್ನು ಈ ಸರಣಿಯ ಪ್ರಿವ್ಯೂವ್ ನಲ್ಲಿ ಕಾಣಬಹುದು.

ಇದನ್ನು ಓದಿ: Dad Movie: ಚಾಮುಂಡಿ ಬೆಟ್ಟದ ನಂದಿ ದೇವಸ್ಥಾನದಲ್ಲಿ ಶಿವರಾಜ್‍ಕುಮಾರ್ ನಟನೆಯ ʼಡ್ಯಾಡ್‍ʼ ಚಿತ್ರಕ್ಕೆ ಚಾಲನೆ

ಈ ಪ್ರಿವ್ಯೂಕಾರ್ಯಕ್ರಮಕ್ಕಾಗಿ ಅನೇಕ ಗಣ್ಯರು ಮುಂಬೈಯಿಗೆ ಆಗಮಿನಿಸಿದ್ದಾರೆ. ಬಾಬಿ ಡಿಯೋಲ್, ಲಕ್ಷ್ಯ, ಸಹೇರ್ ಬಂಬಾ, ಮನೋಜ್ ಪಹ್ವಾ, ಮೋನಾ ಸಿಂಗ್, ಮನೀಶ್ ಚೌಧರಿ, ರಾಘವ್ ಜುಯಾಲ್, ಅನ್ಯಾ ಸಿಂಗ್, ಮತ್ತು ವಿಜಯಂತ್ ಕೊಹ್ಲಿ, ರಜತ್ ಬೇಡಿ ಮತ್ತು ಗೌತಮಿ ಕಪೂರ್ ಸೇರಿದ್ದಂತೆ ಅನೇಕ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ದಿ ಬ್ಯಾಡ್ಸ್‌ ಆಫ್‌ ಬಾಲಿವುಡ್‌ ಸರಣಿಯು ಇದೇ ಸೆಪ್ಟೆಂಬರ್‌ 18ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಗೌರಿ ಖಾನ್‌ ಈ ಸರಣಿಯ ನಿರ್ಮಾಪಕಿಯಾಗಿದ್ದು ನಟ ಶಾರುಖ್ ಖನ್ ಪುತ್ರ ಆರ್ಯನ್‌ ಖಾನ್‌ ಅವರ ಮೊದಲ ನಿರ್ದೇಶನದ ವೆಬ್ ಸರಣಿ ಇದಾಗಲಿದೆ. ಬಹುದೊಡ್ಡ ತಾರಾಗಣ ಇರುವ ಈ ಸರಣಿಯೂ ರಿಲೀಸ್ ಗೂ ಮೊದಲೆ ಬಹಳ ಕ್ಯೂರಿಯಾಸಿಟಿ ಮೂಡಿಸಿದೆ.