Actor Darshan: ದರ್ಶನ್‌ಗೆ ಕೊಂಚ ನಿರಾಳ; ಇನ್ನೋರ್ವ ಆರೋಪಿಗೆ ದಂಡ
Actor Darshan: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ, ಅವರ ಕುಟುಂಬಸ್ಥರು ಒಳಗೆ ಬಂದು ಭೇಟಿಯಾಗಲು ಸೆಷನ್ಸ್ ಕೋರ್ಟ್ ಅನುಮತಿ ನೀಡಿದೆ. ಭೇಟಿಗೆ ಅವಕಾಶ ನೀಡುವಂತೆ ಕೋರಿ ದರ್ಶನ್ ಅವರು ಮಾಡಿಕೊಂಡಿರುವ ಮನವಿಯನ್ನು ಸೆಷನ್ಸ್ ಕೋರ್ಟ್ ಮಾನ್ಯ ಮಾಡಿದೆ. ಈ ಮೂಲಕ ಜೈಲಿನ ಒಳ ಸಂದರ್ಶನಕ್ಕೆ ನ್ಯಾಯಾಧೀಶರು ಒಪ್ಪಿಗೆ ಸೂಚಿಸಿದ್ದು, ಇನ್ನು ಅವರ ಕುಟುಂಬಸ್ಥರು ನಟನನ್ನು ಜೈಲಿನ ಒಳಗೆ ಭೇಟಿ ಮಾಡಬಹುದಾಗಿದೆ. ಕಳೆದ ವಿಚಾರಣೆ ವೇಳೆ, ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಪವನ್ (ಎ3) ಪರ ವಕೀಲರು, ಪ್ರಕರಣದ ತನಿಖಾಧಿಕಾರಿಗಳ ವಿರುದ್ಧವೇ ಆರೋಪ ಮಾಡಿದ್ದರು ಪವನ್ ಪರ ವಕೀಲರ ಅರ್ಜಿ ಕುರಿತು ಆದೇಶ ನೀಡಿರುವ ನ್ಯಾಯಲಯವು, ಪವನ್ ಪರ ವಕೀಲರಿಗೆ ದಂಡ ವಿಧಿಸಿದೆ.
ನಟ ದರ್ಶನ್ -
ರೇಣುಕಾಸ್ವಾಮಿ (Renukaswamy Case) ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ (Darshan), ಅವರ ಕುಟುಂಬಸ್ಥರು ಒಳಗೆ ಬಂದು ಭೇಟಿಯಾಗಲು ಸೆಷನ್ಸ್ ಕೋರ್ಟ್ ಅನುಮತಿ ನೀಡಿದೆ. ಭೇಟಿಗೆ ಅವಕಾಶ ನೀಡುವಂತೆ ಕೋರಿ ದರ್ಶನ್ ಅವರು ಮಾಡಿಕೊಂಡಿರುವ ಮನವಿಯನ್ನು ಸೆಷನ್ಸ್ ಕೋರ್ಟ್ ಮಾನ್ಯ ಮಾಡಿದೆ. ಈ ಮೂಲಕ ಜೈಲಿನ ಒಳ ಸಂದರ್ಶನಕ್ಕೆ (Interview) ನ್ಯಾಯಾಧೀಶರು ಒಪ್ಪಿಗೆ ಸೂಚಿಸಿದ್ದು, ಇನ್ನು ಅವರ ಕುಟುಂಬಸ್ಥರು ನಟನನ್ನು ಜೈಲಿನ ಒಳಗೆ ಭೇಟಿ ಮಾಡಬಹುದಾಗಿದೆ. ಕಳೆದ ವಿಚಾರಣೆ ವೇಳೆ, ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಪವನ್ (Pawan) (ಎ3) ಪರ ವಕೀಲರು, ಪ್ರಕರಣದ ತನಿಖಾಧಿಕಾರಿಗಳ ವಿರುದ್ಧವೇ ಆರೋಪ ಮಾಡಿದ್ದರು ಪವನ್ ಪರ ವಕೀಲರ ಅರ್ಜಿ ಕುರಿತು ಆದೇಶ ನೀಡಿರುವ ನ್ಯಾಯಲಯವು, ಪವನ್ ಪರ ವಕೀಲರಿಗೆ ದಂಡ ವಿಧಿಸಿದೆ.
ಇದನ್ನೂ ಓದಿ: Khushbu Sundar: ತ್ರಿಶಾ ಅತ್ಯಂತ ಸೌಮ್ಯ ಸ್ವಭಾವದವರು; ನಟಿಯ ಬೆಂಬಲಕ್ಕೆ ನಿಂತ ಖುಷ್ಬೂ ಸುಂದರ್
ದರ್ಶನ್ ಸ್ವಲ್ಪ ನಿರಾಳ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದರ್ಶನ್‌ಗೆ ಜೈಲಿನ ಒಳಸಂದರ್ಶನಕ್ಕೆ 57ನೇ ಸೆಷನ್ಸ್ ಕೋರ್ಟ್ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ನ್ಯಾಯಾಲಯವು ಜೈಲು ಸೂಪರಿಂಟೆಂಡೆಂಟ್‌ಗೆ ನೀಡಿದೆ.
ಕುಟುಂಬ ಸದಸ್ಯರ ಭೇಟಿ ಕೋರಿ ಕನ್ನಡ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನ ಕೋರ್ಟ್ ಪುರಸ್ಕರಿಸಿದೆ. ದರ್ಶನ್ ಪರವಾಗಿ ಕೋರ್ಟ್ ಆದೇಶ ನೀಡಿದೆ.
ಜೈಲಿನ ಕೈಪಿಡಿಗೆ ಅನುಗುಣವಾಗಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಒಳ ಸಂದರ್ಶನಕ್ಕೆ ಅವಕಾಶ ನೀಡಿ ಜೈಲಿನ ಸೂಪರಿಂಟೆಂಡೆಂಟ್‌ಗೆ ಅಧಿಕಾರ ನೀಡಿ ಕೋರ್ಟ್ ಆದೇಶಿಸಿದೆ. ಜೈಲಿನ ಸೂಪರಿಂಟೆಂಡೆಂಟ್ ಒಪ್ಪಿಗೆ ನೀಡಿದರೆ, ಒಳಸಂದರ್ಶನಕ್ಕೆ ಅವಕಾಶ ಇದೆ, ಒಂದು ವೇಳೆ ಒಪ್ಪದಿದ್ದರೆ ಅವಕಾಶ ಇಲ್ಲ ಎಂದು ಆದೇಶದಲ್ಲಿ ಕೋರ್ಟ್ ಉಲ್ಲೇಖಿಸಿದೆ.
ದಂಡ ವಿಧಿಸಿದ ಕೋರ್ಟ್
ಕಳೆದ ವಿಚಾರಣೆ ವೇಳೆ, ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಪವನ್ (Pawan) (ಎ3) ಪರ ವಕೀಲರು, ಪ್ರಕರಣದ ತನಿಖಾಧಿಕಾರಿಗಳ ವಿರುದ್ಧವೇ ಆರೋಪ ಮಾಡಿದ್ದರು ಪವನ್ ಪರ ವಕೀಲರ ಅರ್ಜಿ ಕುರಿತು ಆದೇಶ ನೀಡಿರುವ ನ್ಯಾಯಲಯವು, ಪವನ್ ಪರ ವಕೀಲರಿಗೆ ದಂಡ ವಿಧಿಸಿದೆ. 5 ಸಾವಿರ ರೂಪಾಯಿ ದಂಡ ಸಹ ವಿಧಿಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳ ಮೊಬೈಲ್ ವಶಕ್ಕೆ ಪಡೆಯುವಾಗ ಪೊಲೀಸರಿಂದ ಕರ್ತವ್ಯ ಲೋಪ ಆರೋಪ ಕೇಳಿಬಂದಿತ್ತು. ಆರೋಪಿಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆಯುವಾಗ ಪೊಲೀಸರು ಫೋಟೋ ತೆಗೆದಿದ್ದರು.
ಇದನ್ನೂ ಓದಿ: Amruthadhaare Serial: ಜೇಡಿ ವಿರುದ್ಧ ಮೊದಲ ಬಾರಿಗೆ ಧ್ವನಿಗೂಡಿಸಿದ್ದಾಳೆ ಶಕುಂತಲಾ! ಕಿಡಿ ಕಾರಿದ ಪಾರ್ಥ
ತನಿಖಾಧಿಕಾರಿಗಳಲ್ಲಿ ಒಬ್ಬರಾದ ಎಸಿಪಿ ಚಂದನ್ ಅವರನ್ನ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸಬೇಕು ಎಂದು ಆರೋಪಿ ಪವನ್ ಪರ ವಕೀಲರು ವಾದಿಸಿದ್ದರು. ಇದೀಗ ಪವನ್ ಪರ ವಕೀಲರ ಅರ್ಜಿ ಕುರಿತು ನ್ಯಾಯಾಲಯ ಆದೇಶ ನೀಡಿದೆ. ಅರ್ಜಿಯನ್ನ ನ್ಯಾಯಾಲಯ ವಜಾ ಮಾಡಿದೆ. ಈ ಹಣವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಲು ಸೂಚನೆ ನೀಡಿದೆ.