ರಾಹುಲ್ ದ್ರಾವಿಡ್ ಜತೆ ಎಲೈಟ್ ಪಟ್ಟಿ ಸೇರಿದ ದೇವದತ್ ಪಡಿಕ್ಕಲ್
Devdutt Padikkal: ನಾಲ್ಕನೇ ದಿನ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದ ರಿಷಭ್ ಪಂತ್, ತಮ್ಮ ನೈಜ ಶೈಲಿಯಲ್ಲಿ ಬ್ಯಾಟ್ ಬೀಸಿದರು. ಅವರು ಆಡಿದ 69 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 66 ರನ್‌ಗಳನ್ನು ಬಾರಿಸಿದರು. ಆ ಮೂಲಕ ಭರ್ಜರಿ ಫಾರ್ಮ್‌ಗೆ ಮರಳುವ ಭರವಸೆಯನ್ನು ಮೂಡಿಸಿದ್ದಾರೆ.
Devdutt Padikkal -
ಗಾಲೆ, ಆ.19: ಶ್ರೀಲಂಕಾ ವಿರುದ್ಧ ಗಾಲೆ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಮಿಂಚಿದ್ದ ದೇವದತ್ತ ಪಡಿಕ್ಕಲ್ ದ್ವಿತೀಯ ಇನಿಂಗ್ಸ್‌ನಲ್ಲಿ 44 ರನ್ ಬಾರಿಸಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಸಂಜಯ್ ಮಂಜ್ರೇಕರ್ ಮತ್ತು ರಾಹುಲ್ ದ್ರಾವಿಡ್ ನಂತರ ತವರಿನಿಂದ ಹೊರಗೆ ಟೆಸ್ಟ್ ಪಂದ್ಯದಲ್ಲಿ 200 ರನ್ ಗಳಿಸಿದ ಭಾರತದ ಮೂರನೇ ನಂಬರ್ 3 ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕನ್ನಡಿಗರಾದ ರಾಹುಲ್-ಪಡಿಕ್ಕಲ್ ಲಂಕಾ ನೆಲದ ಟೆಸ್ಟ್ನಲ್ಲಿ ಎರಡೂ ಇನಿಂಗ್ಸ್ಗಳಲ್ಲಿ 50 ಪ್ಲಸ್ ರನ್ ಜತೆಯಾಟವಾಡಿದ 4ನೇ ಭಾರತೀಯ ಜೋಡಿ ಎನಿಸಿದರು.
2ನೇ ಇನಿಂಗ್ಸ್ನ 11ನೇ ಓವರ್ನಲ್ಲಿ ರಾಹುಲ್ ವಿರುದ್ಧ ಬೌಲರ್ ಪ್ರಭಾತ್ ಜಯಸೂರ್ಯ ಎಲ್ಬಿ ಮನವಿ ಸಲ್ಲಿಸಿದಾಗ ಅಂಪೈರ್ ಅದನ್ನು ಪುರಸ್ಕರಿಸಿದರು. ಆಗ ಪೆವಿಲಿಯನ್ನತ್ತ ಹೆಜ್ಜೆ ಹಾಕುತ್ತಿದ್ದ ರಾಹುಲ್ರನ್ನು ತಡೆದು ಪಡಿಕ್ಕಲ್, ಡಿಆರ್ಎಸ್ಗೆ ಮೊರೆ ಹೋಗುವಂತೆ ಸೂಚಿಸಿದರು. ಇದರಂತೆ ರಾಹುಲ್ ಡಿಆರ್ಎಸ್ ಮನವಿ ಸಲ್ಲಿಸಿದಾಗ, ಬಾಲ್ ಟ್ರ್ಯಾಕರ್ನಲ್ಲಿ ಚೆಂಡು ವಿಕೆಟ್ನಿಂದ ಹೊರಹೋಗುತ್ತಿದ್ದುದು ಸ್ಪಷ್ಟವಾಗಿದ್ದರಿಂದ ತೃತೀಯ ಅಂಪೈರ್ ನಾಟೌಟ್ ನೀಡಿದರು. ಆಗ ರಾಹುಲ್, ಪಡಿಕ್ಕಲ್ರನ್ನು ಅಪ್ಪಿಕೊಂಡು ಧನ್ಯವಾದ ಹೇಳುವ ಮೂಲಕ ಸಂಭ್ರಮಿಸಿದರು.
IND vs SL: ನಾಲ್ಕನೇ ದಿನವೂ ಪ್ರಾಬಲ್ಯ ಸಾಧಿಸಿದ ಭಾರತ, ಗೆಲುವಿನ ಸನಿಹದಲ್ಲಿ ಶುಭಮನ್ ಗಿಲ್ ಪಡೆ!
ನಾಲ್ಕನೇ ದಿನ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದ ರಿಷಭ್ ಪಂತ್, ತಮ್ಮ ನೈಜ ಶೈಲಿಯಲ್ಲಿ ಬ್ಯಾಟ್ ಬೀಸಿದರು. ಅವರು ಆಡಿದ 69 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 66 ರನ್‌ಗಳನ್ನು ಬಾರಿಸಿದರು. ಆ ಮೂಲಕ ಭರ್ಜರಿ ಫಾರ್ಮ್‌ಗೆ ಮರಳುವ ಭರವಸೆಯನ್ನು ಮೂಡಿಸಿದ್ದಾರೆ.
ಶ್ರೀಲಂಕಾ ತಂಡ, ನಾಲ್ಕನೇ ದಿನದಾಟದ ಅಂತ್ಯಕ್ಕೆ 34 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 84 ರನ್‌ಗಳನ್ನು ಕಲೆ ಹಾಕಿದೆ ಹಾಗೂ ಸೋಲಿನ ಭೀತಿಗೆ ಒಳಗಾಗಿದೆ. ಭಾರತ ತಂಡ ಈ ಪಂದ್ಯವನ್ನು ಗೆಲ್ಲಲು ಕೊನೆಯ ದಿನವಾದ ಬುಧವಾರ ಆರು ವಿಕೆಟ್‌ಗಳನ್ನು ಪಡೆಯಬೇಕಾದ ಅಗತ್ಯವಿದೆ. ಐದನೇ ದಿನ ಮೊದಲನೇ ಸೆಷನ್‌ನಲ್ಲಿ ಪಿಚ್ ಬ್ಯಾಟಿಂಗ್‌ಗೆ ಕಠಿಣವಾಗಲಿದ್ದು, ಭಾರತೀಯ ಬೌಲರ್‌ಗಳು ಪರಿಣಾಮಕಾರಿಯಾಗಿ ಬೌಲ್ ಮಾಡಿದರೆ ಭಾರತ ತಂಡ ಬಹುಬೇಗ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆಯಲಿದೆ.