ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

3ನೇ ಮದುವೆಯಾದ ನಟ ಆಮಿರ್‌ ಖಾನ್‌ ಬಳಿ ಇರುವ ಆಸ್ತಿ ಎಷ್ಟು? ವಧು ಗೌರಿ ಸ್ಪ್ರ್ಯಾಟ್‌ ಯಾವೆಲ್ಲಾ ಆಸ್ತಿಗೆ ಒಡತಿ?

ಬಾಲಿವುಡ್ ನಟ ಆಮಿರ್ ಖಾನ್ ಹಾಗೂ ಗೌರಿ ಸ್ಪ್ರಾಟ್‌ ಜುಲೈ 5 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಮಿರ್ ಅವರಿಗೆ ಇದು ಮೂರನೇ ಮದುವೆಯಾಗಿದ್ದು, ಸದ್ಯ ಈ ಜೋಡಿಯ ಆಸ್ತಿ ಮೌಲ್ಯದ ಚರ್ಚೆ ತೀವ್ರಗೊಂಡಿದೆ. ಆಮಿರ್ ಖಾನ್ ಹಾಗೂ ಬೆಂಗಳೂರಿನ ಉದ್ಯಮಿ ಗೌರಿ ಅವರ ಸಂಪೂರ್ಣ‌ ಆಸ್ತಿ ವಿವರ ಇಲ್ಲಿದೆ.

ಸಾವಿರ ಕೋಟಿ ಒಡೆಯ ಆಮಿರ್ ಖಾನ್ 3ನೇ ಪತ್ನಿ ಗೌರಿ ಬಳಿ ಇರುವ ಆಸ್ತಿ ಎಷ್ಟು?‌

-

Avinash GR
Avinash GR Jul 5, 2026 6:52 PM

ಬಾಲಿವುಡ್‌ನ ʻಮಿಸ್ಟರ್ ಪರ್ಫೆಕ್ಷನಿಸ್ಟ್ʼ ಆಮಿರ್ ಖಾನ್ ಹಾಗೂ ಗೌರಿ ಸ್ಪ್ರಾಟ್‌ ಜುಲೈ 5ರಂದು ಮದುವೆಯಾಗಿದ್ದಾರೆ. ಇದು ಆಮಿರ್‌ ಖಾನ್‌ ಅವರಿಗೆ ಮೂರನೇ ಮದುವೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಈ ನವಜೋಡಿಯ ಆಸ್ತಿ ಮೌಲ್ಯದ ಕುರಿತೂ ದೊಡ್ಡ ಮಟ್ಟದ ಚರ್ಚೆ ಶುರುವಾಗಿದ್ದು, ಇವರಿಬ್ಬರ ವೈಯಕ್ತಿಕ ಸಂಪತ್ತಿನ ವಿವರ ಇಲ್ಲಿದೆ.

ಆಮಿರ್‌ ಖಾನ್‌ ಅವರ ಒಟ್ಟು ಆಸ್ತಿ ಎಷ್ಟು?

1973ರಲ್ಲಿ ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿದ ಆಮಿರ್ ಖಾನ್, 'ಕಯಾಮತ್ ಸೇ ಕಯಾಮತ್ ತಕ್', 'ಲಗಾನ್', 'ದಂಗಲ್' ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ನಟನೆ ಮಾತ್ರವಲ್ಲದೆ 1999ರಲ್ಲಿ 'ಅಮಿರ್‌ ಖಾನ್ ಪ್ರೊಡಕ್ಷನ್ಸ್' ಸ್ಥಾಪಿಸುವ ಮೂಲಕ ಉದ್ಯಮಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಸದ್ಯ ವರದಿಗಳ ಪ್ರಕಾರ, ಆಮಿರ್ ಖಾನ್ ಅವರ ಅಂದಾಜು ಒಟ್ಟು ಆಸ್ತಿ ಮೌಲ್ಯ 1,862 ಕೋಟಿ ರೂಪಾಯಿಗಳು.

ರಿಯಲ್ ಎಸ್ಟೇಟ್ ಆಸ್ತಿಗಳು

ಮುಂಬೈನ ಹಿಲ್ ವ್ಯೂ, ಬೆಲ್ಲಾ ವಿಸ್ಟಾ, ಮರೀನಾ ಅಪಾರ್ಟ್‌ಮೆಂಟ್ಸ್, ವಿರ್ಗೋ ಕೋ-ಆಪರೇಟಿವ್ ಹೌಸಿಂಗ್ ಹಾಗೂ ವಿಲ್ನೋಮೋನಾ ಅಪಾರ್ಟ್‌ಮೆಂಟ್ಸ್‌ನಲ್ಲಿ ಹಲವಾರು ಮನೆ ಮತ್ತು ಯೂನಿಟ್‌ಗಳನ್ನು ಹೊಂದಿದ್ದಾರೆ. ಬಾಂದ್ರಾದಲ್ಲಿ ಸಮುದ್ರಕ್ಕೆ ಮುಖ ಮಾಡಿರುವ 5,000 ಚದರ ಅಡಿಯ ಐಷಾರಾಮಿ ಡುಪ್ಲೆಕ್ಸ್ ಮನೆ ಹೊಂದಿದ್ದು, ಇದರ ಮೌಲ್ಯ ಸುಮಾರು 60 ಕೋಟಿ ರೂಪಾಯಿ. ಪಂಚಗನಿಯಲ್ಲಿ ಎರಡು ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಬೃಹತ್ ಫಾರ್ಮ್‌ಹೌಸ್ ಹೊಂದಿದ್ದು, ಇದರ ಬೆಲೆ ಸುಮಾರು 7 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಮೆರಿಕದ ಅತ್ಯಂತ ಪ್ರತಿಷ್ಠಿತ ಸೆಲೆಬ್ರಿಟಿ ಸಮುದಾಯವಿರುವ ಬೆವರ್ಲಿ ಹಿಲ್ಸ್‌ನಲ್ಲಿ ಆಮಿರ್ 75 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ನಿವಾಸವನ್ನು ಹೊಂದಿದ್ದಾರೆ.

ಮೂರನೇ ಬಾರಿಗೆ ದಾಂಪತ್ಯ ಬದುಕಿಗೆ ಕಾಲಿಟ್ಟ ಆಮಿರ್‌ ಖಾನ್; ಉದ್ಯಮಿ ಗೌರಿ ಸ್ಪ್ರಾಟ್ ಜೊತೆ ಸರಳವಾಗಿ ನಡೆದ ಕಲ್ಯಾಣ, ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು?

ದುಬಾರಿ ಕಾರುಗಳ ಕಲೆಕ್ಷನ್

ಆಮಿರ್ ಖಾನ್ ಅವರ ಗ್ಯಾರೇಜ್‌ನಲ್ಲಿ ವಿಶ್ವದ ಅತ್ಯಂತ ಐಷಾರಾಮಿ ಕಾರುಗಳಿವೆ. ಅದರಲ್ಲಿ 10 ಕೋಟಿಗೂ ಹೆಚ್ಚು ಮೌಲ್ಯದ ಮರ್ಸಿಡಿಸ್-ಬೆಂಜ್ ಎಸ್‌600 (Mercedes-Benz S600) ಮತ್ತು ರೋಲ್ಸ್-ರಾಯ್ಸ್ ಘೋಸ್ಟ್ (Rolls-Royce Ghost) ಪ್ರಮುಖವಾಗಿವೆ. ಇವುಗಳ ಜೊತೆಗೆ ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್, ಬಿಎಂಡಬ್ಲ್ಯೂ 6 ಸೀರೀಸ್, ಟೊಯೋಟಾ ವೆಲ್‌ಫೈರ್ ಕಾರುಗಳನ್ನೂ ಅವರು ಬಳಸುತ್ತಾರೆ.

ಗೌರಿ ಸ್ಪ್ರ್ಯಾಟ್ ಯಾರು? ಅವರ ಆಸ್ತಿ ವಿವರ ಇಲ್ಲಿದೆ

47 ವರ್ಷದ ಗೌರಿ ಸ್ಪ್ರ್ಯಾಟ್ ಅವರು ಭಾರತೀಯ, ಬ್ರಿಟಿಷ್, ಐರಿಶ್ ಮತ್ತು ತಮಿಳು ಬೇರುಗಳನ್ನು ಹೊಂದಿರುವ ಬಹುಸಂಸ್ಕೃತಿಯ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ತಮಿಳು-ಬ್ರಿಟಿಷ್ ಹಿನ್ನೆಲೆಯವರಾದರೆ, ತಾಯಿ ಪಂಜಾಬಿ-ಐರಿಶ್ ಸಮುದಾಯಕ್ಕೆ ಸೇರಿದವರು. ಊಟಿಯ 'ದಿ ಬ್ಲೂ ಮೌಂಟೇನ್ ಸ್ಕೂಲ್'ನಲ್ಲಿ ಆರಂಭಿಕ ಶಿಕ್ಷಣ ಮುಗಿಸಿದ ಗೌರಿ, ನಂತರ ಲಂಡನ್‌ನಲ್ಲಿ ಫ್ಯಾಶನ್ ಡಿಸೈನಿಂಗ್ ಮತ್ತು ಫೋಟೋಗ್ರಫಿ ಉನ್ನತ ಶಿಕ್ಷಣ ಪಡೆದರು.

ರೀನಾ.. ಕಿರಣ್.. ಈಗ ಬೆಂಗಳೂರಿನ ಗೌರಿ: ಮೂವರು ಮಕ್ಕಳ ಸಮ್ಮುಖದಲ್ಲಿ 3ನೇ ಮದುವೆಯಾದ ನಟ ಆಮಿರ್ ಖಾನ್

ಉದ್ಯಮ ಮತ್ತು ನೆಟ್‌ವರ್ತ್

ಗೌರಿ ಅವರು ಆರಂಭದಲ್ಲಿ ಗಾರ್ಮೆಂಟ್ ಡಿಸೈನಿಂಗ್ ಮತ್ತು ಬೆಂಗಳೂರಿನಲ್ಲಿ ಫ್ಯಾಬ್ರಿಕ್ ಸೋರ್ಸಿಂಗ್‌ನಲ್ಲಿ ಕೆಲಸ ಮಾಡಿದ್ದರು. ನಂತರ ತಮ್ಮ ಸಹೋದರಿ ಶೌನಾ ಅವರೊಂದಿಗೆ ಬೆಂಗಳೂರಿನ ಮಗ್ರಾತ್ ರಸ್ತೆಯಲ್ಲಿ 'ಸ್ಪ್ರ್ಯಾಟ್ ಹೇರ್ ಸ್ಟುಡಿಯೋ' ನಡೆಸುತ್ತಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ಈ ಸಲೂನ್ ಅನ್ನು ಪ್ರಸಿದ್ಧ ಬ್ರ್ಯಾಂಡ್ 'ಬಿಬ್ಲಂಟ್' (BBlunt) ಸಂಸ್ಥೆಗೆ ಮಾರಾಟ ಮಾಡಿ, ಅದರಲ್ಲಿ ಸಹ-ಮಾಲೀಕರು ಹಾಗೂ ಮ್ಯಾನೇಜರ್ ಆಗಿ ಸೇರಿಕೊಂಡರು. ಸಲೂನ್ ಉದ್ಯಮದಲ್ಲಿ ಯಶಸ್ಸು ಕಂಡಿರುವ ಗೌರಿ ಅವರ ವೈಯಕ್ತಿಕ ಒಟ್ಟು ಆಸ್ತಿ ಮೌಲ್ಯ 24 ರಿಂದ 40 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಪವನ್ ಪಾರ್ಕ್‌ವೆಸ್ಟ್‌ನಲ್ಲಿ ಗೌರಿ ಸ್ವಂತ ಫ್ಲಾಟ್‌ ಹೊಂದಿದ್ದಾರೆ. ಇದೇ ವಿಳಾಸದಲ್ಲಿ ಅವರ ಒಡೆತನದ 'ಬಿಯಾಂಡ್ ದಿ ಕ್ರೌಡ್ ವೆಂಚರ್ಸ್ ಎಲ್‌ಎಲ್‌ಪಿ' ಸಂಸ್ಥೆಯ ಪ್ರಧಾನ ಕಛೇರಿಯೂ ನೋಂದಾಯಿಸಲ್ಪಟ್ಟಿದೆ. ಒಟ್ಟಾರೆಯಾಗಿ, ಈ ನವಜೋಡಿಯು ಸಿನಿಮಾ ಹಾಗೂ ಉದ್ಯಮ ರಂಗದಲ್ಲಿ ತಮ್ಮದೇ ಆದ ಬೃಹತ್ ಸಂಪತ್ತನ್ನು ಹೊಂದಿದೆ.