ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Abhijna Bhat: ಹೊಸ ಮನೆಗೆ ಕಾಲಿಟ್ಟ 'ಆಸೆ' ಧಾರಾವಾಹಿ ಖ್ಯಾತಿಯ ಅಭಿಜ್ಞಾ ಭಟ್

Abhijna Bhat: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಪ್ರತಿಭಾವಂತ ನೃತ್ಯಗಾರ್ತಿ ಅಭಿಜ್ಞಾ ಭಟ್ ಕನಸಿನ ಹೊಸ ಮನೆಗೆ ಕಾಲಿಟ್ಟಿದ್ದಾರೆ. ತಮ್ಮ ಕುಟುಂಬಸ್ಥರು, ಆಪ್ತ ಸ್ನೇಹಿತರು ಹಾಗೂ ಕಿರುತೆರೆ ಸಹೋದ್ಯೋಗಿಗಳ ಸಮ್ಮುಖದಲ್ಲಿ ಅಭಿಜ್ಞಾ ಭಟ್ ಅತ್ಯಂತ ಸಂಭ್ರಮದಿಂದ ಗೃಹಪ್ರವೇಶ ನೆರವೇರಿಸಿದ್ದಾರೆ.ಈ ಅತ್ಯಂತ ಖುಷಿಯ ಕ್ಷಣಗಳನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಹೊಸ ಮನೆಗೆ ಕಾಲಿಟ್ಟ 'ಆಸೆ' ಧಾರಾವಾಹಿ ಖ್ಯಾತಿಯ ಅಭಿಜ್ಞಾ ಭಟ್

ಅಭಿಜ್ಞಾ ಭಟ್ -

Yashaswi Devadiga
Yashaswi Devadiga Nov 18, 2026 10:09 AM

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಪ್ರತಿಭಾವಂತ ನೃತ್ಯಗಾರ್ತಿ ಅಭಿಜ್ಞಾ ಭಟ್ (Abhijna Bhat) ಕನಸಿನ ಹೊಸ ಮನೆಗೆ ಕಾಲಿಟ್ಟಿದ್ದಾರೆ. ತಮ್ಮ ಕುಟುಂಬಸ್ಥರು, ಆಪ್ತ ಸ್ನೇಹಿತರು ಹಾಗೂ ಕಿರುತೆರೆ ಸಹೋದ್ಯೋಗಿಗಳ ಸಮ್ಮುಖದಲ್ಲಿ ಅಭಿಜ್ಞಾ ಭಟ್ ಅತ್ಯಂತ ಸಂಭ್ರಮದಿಂದ ಗೃಹಪ್ರವೇಶ (Housewarming ) ನೆರವೇರಿಸಿದ್ದಾರೆ.ಈ ಅತ್ಯಂತ ಖುಷಿಯ ಕ್ಷಣಗಳನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

‘ರಾಮಾಚಾರಿ’, ‘ಸ್ನೇಹದ ಕಡಲಲ್ಲಿ’ ಸೇರಿದಂತೆ ಅನೇಕ ಧಾರಾವಾಹಿಗಳಿ ಅಭಿನಯಿಸಿದ್ದಾರೆ. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’, ‌ʻಭರ್ಜರಿ ಬ್ಯಾಚುಲರ್ಸ್‌’ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು.

ಗೃಹಪ್ರವೇಶದ ಅಂಗವಾಗಿ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಸತ್ಯನಾರಾಯಣ ಪೂಜೆಯನ್ನುಕೂಡ ನೆರವೇರಿಸಲಾಗಿದೆಹೊಸ ಮನೆಯ ಗೃಹಪ್ರವೇಶದ ಖುಷಿಯನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, "ಅದೃಷ್ಟವ ಹುಡುಕೋಣ" ಎಂದು ಕ್ಯಾಪ್ಷನ್ ಕೊಟ್ಟಿರುವುದನ್ನು ನೀವು ನೋಡಬಹುದು. ಮೂಲತಃ ಉತ್ತಮ ಡ್ಯಾನ್ಸರ್ ಆಗಿರುವ ಇವರು, ಕನ್ನಡದ ಜನಪ್ರಿಯ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಮೂಲಕ ಮೊದಲ ಬಾರಿಗೆ ಕಿರುತೆರೆ ವೀಕ್ಷಕರಿಗೆ ಪರಿಚಿತರಾದರು.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಚಿಗುರುತ್ತಿದೆಯಾ ಹೊಸ ಲವ್ ಸ್ಟೋರಿ? ಯಶಸ್‌ ಕವನ ಕೇಳಿ ಸೌಂದರ್ಯ ಫಿದಾ!

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಚಿಗುರುತ್ತಿದೆಯಾ ಹೊಸ ಲವ್ ಸ್ಟೋರಿ? ಯಶಸ್‌ ಕವನ ಕೇಳಿ ಸೌಂದರ್ಯ ಫಿದಾ!

ಆ ಶೋಕನ್ನಡದ ಪ್ರಮುಖ ಧಾರಾವಾಹಿಗಳಾದ 'ರಾಮಾಚಾರಿ', 'ಸ್ನೇಹದ ಕಡಲಲ್ಲಿ', 'ಗೌರಿಶಂಕರ' ಹಾಗೂ 'ಆಸೆ' ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಅವರು ಕರುನಾಡಿನ ಮನೆಮಗಳಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಸ್ಟಾರ್ ಸುವರ್ಣ ವಾಹಿನಿಯ ‘ಆಸೆ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಧಾರಾವಾಹಿಯಲ್ಲಿ ರೋಹಿಣಿ ಪಾತ್ರವನ್ನು ನಿರ್ವಹಿಸುತ್ತಿರುವ ಅಭಿಜ್ಞಾ ಭಟ್, ಅಮೃತಾ ರಾಮಮೂರ್ತಿ ಅವರ ಬದಲಿಗೆ ಈ ಪಾತ್ರವನ್ನು ಮುಂದುವರಿಸುತ್ತಿದ್ದಾರೆ.