ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಆಸಿಯಾಗೆ ತಿರುಗಿಸಿ ಹೊಡೆಯಲು ಮುಂದಾದ ಶೆಟ್ಟಿ ಡಾನ್

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ಈ ವಾರ ವಿಶೇಷ ಟಾಸ್ಕ್ ನಡೆಯುತ್ತಿದ್ದು, ಮನೆಯ ವಾತಾವರಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಮೂವರು ಮಹಿಳಾ ಸ್ಪರ್ಧಿಗಳಾದ ಆಸಿಯಾ ಫಿರ್ದೋಸ್, ಸೌಂದರ್ಯ ಶೆಟ್ಟಿ (Soundarya shetty) ಹಾಗೂ ಗಾನವಿ ಯುವರಾಣಿಯರಾಗಿ ಆಯ್ಕೆಯಾಗಿದ್ದಾರೆ. ತಮಗೆ ಆಸಿಯಾ ಹೊಡೆದಿದ್ದಾರೆ ಅಂತ ಸೌಂದರ್ಯ ಶೆಟ್ಟಿ ಆರೋಪ ಮಾಡಿದ್ದಾರೆ. ವಾಪಸ್ ಆಸಿಯಾಗೆ (Asia) ಹೊಡೆಯಲು ಹೋಗಿದ್ದಾರೆ ಸೌಂದರ್ಯ ಶೆಟ್ಟಿ

ಆಸಿಯಾಗೆ ತಿರುಗಿಸಿ ಹೊಡೆಯಲು ಮುಂದಾದ ಶೆಟ್ಟಿ ಡಾನ್

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 18, 2026 6:22 PM

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ಈ ವಾರ ವಿಶೇಷ ಟಾಸ್ಕ್ ನಡೆಯುತ್ತಿದ್ದು, ಮನೆಯ ವಾತಾವರಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಮೂವರು ಮಹಿಳಾ ಸ್ಪರ್ಧಿಗಳಾದ ಆಸಿಯಾ ಫಿರ್ದೋಸ್, ಸೌಂದರ್ಯ ಶೆಟ್ಟಿ (Soundarya shetty) ಹಾಗೂ ಗಾನವಿ ಯುವರಾಣಿಯರಾಗಿ ಆಯ್ಕೆಯಾಗಿದ್ದಾರೆ. ತಮಗೆ ಆಸಿಯಾ ಹೊಡೆದಿದ್ದಾರೆ ಅಂತ ಸೌಂದರ್ಯ ಶೆಟ್ಟಿ ಆರೋಪ ಮಾಡಿದ್ದಾರೆ. ವಾಪಸ್ ಆಸಿಯಾಗೆ (Asia) ಹೊಡೆಯಲು ಹೋಗಿದ್ದಾರೆ ಸೌಂದರ್ಯ ಶೆಟ್ಟಿ

ಆ ಯುವರಾಣಿಯರ ನಡುವಿನ ನಾಮಿನೇಷನ್ ಪ್ರಕ್ರಿಯೆಯಲ್ಲಿ ಆಸಿಯಾ ಫಿರ್ದೋಸ್ ಅವರು ಸೌಂದರ್ಯ ಶೆಟ್ಟಿ ಅವರನ್ನು ಡೇಂಜರ್ ಝೋನ್‌ಗೆ ತಳ್ಳಿದ್ದಾರೆ. ಇದಕ್ಕೆ ಕಾರಣ ನೀಡುವಾಗ ಆಸಿಯಾ, ತಮ್ಮ ಬಗ್ಗೆ ಇತರರೊಂದಿಗೆ ಮಾತನಾಡುವಾಗ ಮಧ್ಯೆ ಬಂದು 'ಇನ್‌ಸೆಕ್ಯೂರ್', 'ಝೀರೋ' ಎಂದೆಲ್ಲಾ ಹೇಳುತ್ತಾರೆ ಎಂದು ಆರೋಪಿಸಿದ್ದಾರೆ. ಆಸಿಯಾ ಅವರ ಮಾತಿಗೆ ಪ್ರತಿಕ್ರಿಯಿಸಿದ ಸೌಂದರ್ಯ ಶೆಟ್ಟಿ, 'ಕ್ವಾಕ್, ಕ್ವಾಕ್' ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಹೊಡೆದು ಸಾಯಿಸ್ತೀನಿ; ಸೌಂದರ್ಯಾ ವಿರುದ್ಧ ರೊಚ್ಚಿಗೆದ್ದ ಗಾನವಿ!

ಆಸಿಯಾ, ''ಆಟವಾಡಿ ಗೆದ್ದಿರೋದಕ್ಕೆ ನಿನಗೆ ನಾನು ಸ್ನೇಕ್ ಆಗಿಬಿಟ್ಟ್ನಾ? ನಿನ್ನನ್ನ ನಾಮಿನೇಟ್ ಮಾಡಿದ್ದಕ್ಕೆ ಸ್ನೇಕ್ ಆಗಿಬಿಟ್ನಾ?'' ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಮತ್ತೆ ತಿರುಗೇಟು ನೀಡಿದ ಸೌಂದರ್ಯ, ''ಎಷ್ಟು ಕೂಗ್ತಿ ನೀನು? ಮೊಸಳೆ ಕಣ್ಣೀರು ಬರೋದು ಬಾಕಿ'' ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಟಾಸ್ಕ್‌ನ ಭಾಗವಾಗಿ ಸಗಣಿ ನೀರು ಸುರಿಯುವ ಸಂದರ್ಭದಲ್ಲಿ ಹಾಗೂ ಕಂಟೇನರ್ ಖಾಲಿ ಮಾಡುವಾಗ ಆಸಿಯಾ ನೀರನ್ನು ಎರಚಿದ ರೀತಿ ಸೌಂದರ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಆಸಿಯಾ ನೀರು ಹಾಕಿದ ರೀತಿ ತನಗೆ ಹೊಡೆದಂತಾಗಿದೆ ಎಂದು ಸೌಂದರ್ಯ ಆಕ್ಷೇಪಿಸಿದ್ದಾರೆ.

ಇದರಿಂದ ಕೋಪಗೊಂಡ ಸೌಂದರ್ಯ, ''ವಾಪಸ್ ಹೊಡೆಯುತ್ತೇನೆ. ನೀನು ಹೊಡೆದೆ'' ಎಂದು ಹೇಳುತ್ತಾ ಕಂಟೇನರ್ ಹಿಡಿದು ಅಬ್ಬರಿಸಿದ್ದಾರೆ. ಅದಕ್ಕೆ ಆಸಿಯಾ, ''ನಾನು ಹೊಡೆದಿಲ್ಲ. ಹಾಕಿದ್ದು ಅಷ್ಟೇ'' ಎಂದು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: Abhijna Bhat: ಹೊಸ ಮನೆಗೆ ಕಾಲಿಟ್ಟ 'ಆಸೆ' ಧಾರಾವಾಹಿ ಖ್ಯಾತಿಯ ಅಭಿಜ್ಞಾ ಭಟ್

ಒಂದೆಡೆ ನಾಮಿನೇಷನ್ ವಿಚಾರವಾಗಿ ಆರಂಭವಾದ ವೈಮನಸ್ಸು, ಮತ್ತೊಂದೆಡೆ ಟಾಸ್ಕ್ ವೇಳೆ ನಡೆದ ಸಗಣಿ ನೀರಿನ ಗಲಾಟೆ ಇಬ್ಬರ ನಡುವಿನ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ. ಆಸಿಯಾ ಮತ್ತು ಸೌಂದರ್ಯ ನಡುವಿನ ಈ ಕಿತ್ತಾಟ ಈಗ ಬಿಗ್ ಬಾಸ್ ಮನೆಯ ಪ್ರಮುಖ ಚರ್ಚೆಯಾಗಿದೆ.