Actor Darshan: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟ ದರ್ಶನ್!
Actor Darshan: ನಟ ದರ್ಶನ್ ಅವರಿಗೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಇದೀಗ ಒಂದು ಗುಡ್ ನ್ಯೂಸ್ ಸಿಕ್ಕಿದೆ. ನಟ ದರ್ಶನ್ ಅವರ ಸಿನಿಮಾ ಇದೀಗ ಒಟಿಟಿ ಹಾಗೂ ಟಿವಿಗೆ ಬರಲು ಸಜ್ಜಾಗಿದೆ. ಬಾಕ್ಸ್ ಆಫೀಸ್‌ನಲ್ಲಿ (Box Office) ಸಿನಿಮಾ ಸಾಧಾರಣ ಯಶಸ್ಸು ದಾಖಲಿಸಿತ್ತು. ಬಿಡುಗಡೆಯಾಗಿ ಆರು ತಿಂಗಳು ಕಳೆದರೂ ಯಾವುದೇ ಒಟಿಟಿ ವೇದಿಕೆ ಅಥವಾ ಟಿವಿ ಚಾನೆಲ್‌ನಲ್ಲಿ (Tv Channel) ಸಿನಿಮಾ ಪ್ರಸಾರವಾಗಿರಲಿಲ್ಲ.
ನಟ ದರ್ಶನ್ -
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy case) ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಇದೀಗ ಒಂದು ಗುಡ್ ನ್ಯೂಸ್ ಸಿಕ್ಕಿದೆ. ನಟ ದರ್ಶನ್ ಅವರ ಸಿನಿಮಾ ಇದೀಗ ಒಟಿಟಿ ಹಾಗೂ ಟಿವಿಗೆ ಬರಲು ಸಜ್ಜಾಗಿದೆ. ಬಾಕ್ಸ್ ಆಫೀಸ್‌ನಲ್ಲಿ (Box Office) ಸಿನಿಮಾ ಸಾಧಾರಣ ಯಶಸ್ಸು ದಾಖಲಿಸಿತ್ತು. ಬಿಡುಗಡೆಯಾಗಿ ಆರು ತಿಂಗಳು ಕಳೆದರೂ ಯಾವುದೇ ಒಟಿಟಿ ವೇದಿಕೆ ಅಥವಾ ಟಿವಿ ಚಾನೆಲ್‌ನಲ್ಲಿ (Tv Channel) ಸಿನಿಮಾ ಪ್ರಸಾರವಾಗಿರಲಿಲ್ಲ.
‘ಡೆವಿಲ್’ ಸಿನಿಮಾದ ಚಿತ್ರೀಕರಣ
2024ರಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿರುವಾಗಲೇ ರೇಣುಕಾ ಸ್ವಾಮಿ ಕೊಲೆ ನಡೆದು ನಟ ದರ್ಶನ್ ಬಂಧನವಾಗಿತ್ತು. ತಕ್ಕಮಟ್ಟಿಗೆ ಯಶಸ್ಸನ್ನೂ ಗಳಿಸಿತ್ತು. ವಿಶೇಷವಾಗಿ 'ಡೆವಿಲ್' ಪಾತ್ರದ ಮ್ಯಾನರಿಸಂ ಮತ್ತು ಡೈಲಾಗ್ ಡೆಲಿವರಿ ಮೆಚ್ಚುಗೆ ಗಳಿಸಿತ್ತು.
ಇದನ್ನೂ ಓದಿ: Cocktail 2 and Ma Inti Bangaram: ಸಮಂತಾ ಮೂವಿ ಗಳಿಸಿದ್ದೆಷ್ಟು? ‘ಕಾಕ್‌ಟೇಲ್ 2’ ಕಲೆಕ್ಷನ್ ಇದು
ಪ್ರಕಾಶ್ ವೀರ್ ನಿರ್ದೇಶನದ ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡರೆ, ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಗಿಲ್ಲಿ ನಟ, ಶೋಭರಾಜ್, ವಿನಯ್ ಗೌಡ, ಚಂದು ಗೌಡ, ರೋಜರ್ ನಾರಾಯಣ್, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದರು. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದರು.
ಜೀ5 ಇದೀಗ ‘ಡೆವಿಲ್’ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕು ಖರೀದಿ ಮಾಡಿದ್ದು, ಸಿನಿಮಾವನ್ನು ಅದ್ಧೂರಿಯಾಗಿ ಒಟಿಟಿಯಲ್ಲಿ ಹಾಗೂ ಟಿವಿಯಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿಕೊಂಡಿದೆ. ಈ ಸಂಬಂಧ ಜೀ5 ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. 'ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ... ಬರ್ತಾ ಇದೀನಿ ಚಿನ್ನ' ಎಂಬ ಸಾಲನ್ನು ಬಳಸುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
2024ರಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿರುವಾಗಲೇ ರೇಣುಕಾ ಸ್ವಾಮಿ ಕೊಲೆ ನಡೆದು ನಟ ದರ್ಶನ್ ಬಂಧನವಾಗಿತ್ತು. ಹಾಗಾಗಿ ಸಿನಿಮಾದ ಚಿತ್ರೀಕರಣ ವಿಳಂಬವಾಗಿತ್ತು.
ಇದನ್ನೂ ಓದಿ: Ram Charan: ಮಗಳ ಮುಖವನ್ನು ಅಂತೂ ರಿವೀಲ್ ಮಾಡಿದ್ರು ರಾಮ್ ಚರಣ್ ದಂಪತಿ
ಬಳಿಕ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದಾಗ ದರ್ಶನ್, ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮತ್ತು ಡಬ್ಬಿಂಗ್ ಮುಗಿಸಿದರು. ಬಳಿಕ ಸುಪ್ರೀಂಕೋರ್ಟ್ನಲ್ಲಿ ದರ್ಶನ್ ಜಾಮೀನು ರದ್ದಾಯಿತು.