ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾಯಿಯ ಸಾವಿನಿಂದ ಕಂಗೆಟ್ಟು ನರ್ಮದಾ ನದಿಗೆ ಧುಮುಕಿದ್ದ ನಟ ಗೋವಿಂದ; ಬದುಕಿನ ಕರಾಳ ಅಧ್ಯಾಯ ಬಿಚ್ಚಿಟ್ಟ ಬಾಲಿವುಡ್ ಹೀರೋ!

ನಟ ಗೋವಿಂದ ತಮ್ಮ ತಾಯಿ ನಿಧನದ ನಂತರ ಅನುಭವಿಸಿದ ಮಾನಸಿಕ ಆಘಾತ ಮತ್ತು ನರ್ಮದಾ ನದಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ್ದ ಕರಾಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ತಾಯಿಯ ಅಗಲಿಕೆ ಸಹಿಸದೇ ನದಿಯ ಆಳಕ್ಕೆ ಇಳಿದಾಗ ಸಾಧು ನೀಡಿದ ಎಚ್ಚರಿಕೆಯಿಂದ ಜ್ಞಾನೋದಯವಾಗಿ ಮರುಹುಟ್ಟು ಪಡೆದಿದ್ದಾಗಿ ಗೋವಿಂದ ಹೇಳಿದ್ದಾರೆ.

ತಾಯಿಯ ಸಾವಿನಿಂದ ನೊಂದು ನರ್ಮದಾ ನದಿಗೆ ಧುಮುಕಿದ್ದ ನಟ ಗೋವಿಂದ!

-

Avinash GR
Avinash GR Aug 10, 2026 7:19 PM

ಬಾಲಿವುಡ್‌ನ ಜನಪ್ರಿಯ ನಟ ಗೋವಿಂದ ಅವರು ತಮ್ಮ ತಾಯಿ ನಿರ್ಮಲಾ ದೇವಿ ಅವರ ನಿಧನದ ನಂತರ ಅನುಭವಿಸಿದ ತೀವ್ರ ಮಾನಸಿಕ ಆಘಾತ ಮತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಬದುಕಿನ ಅತ್ಯಂತ ಕಷ್ಟಕರ ದಿನಗಳ ಬಗ್ಗೆ ಅವರು ಬಹಿರಂಗವಾಗಿ ಮಾತನಾಡಿದ್ದಾರೆ.

ಶಾಸ್ತ್ರೀಯ ಗಾಯಕಿ ಹಾಗೂ ನಟಿಯಾಗಿದ್ದ ಗೋವಿಂದ ಅವರ ತಾಯಿ ನಿರ್ಮಲಾ ದೇವಿ ಅವರು 1996ರ ಜೂನ್ 15 ರಂದು ತಮ್ಮ 69ನೇ ವಯಸ್ಸಿನಲ್ಲಿ ನಿಧನರಾದರು. ತಾಯಿಯನ್ನು ಅತಿಯಾಗಿ ಹಚ್ಚಿಕೊಂಡಿದ್ದ ಗೋವಿಂದ ಅವರಿಗೆ ಈ ಅಗಲಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ತಾಯಿಯನ್ನು ಭೇಟಿಯಾಗಲು ನದಿಗೆ ಇಳಿದಿದ್ದೆ

ತಾಯಿಯ ಅಗಲಿಕೆಯ ನೋವಿನಿಂದ ಎಲ್ಲವೂ ಮುಗಿದುಹೋಯಿತು ಎಂಬ ಭಾವನೆ ಆವರಿಸಿತ್ತು ಎಂದಿರುವ ಗೋವಿಂದ, "ನರ್ಮದಾ ನದಿಯಲ್ಲಿ ಇನ್ನು ಸ್ವಲ್ಪ ಮುಂದೆ ಹೋದರೆ ನನ್ನ ತಾಯಿಯನ್ನು ಮತ್ತೆ ಭೇಟಿಯಾಗಬಹುದು ಎಂದು ಭಾವಿಸಿ ನದಿಯ ಆಳಕ್ಕೆ ನಡೆದುಕೊಂಡು ಹೋದೆ" ಎಂದು ಹೇಳಿದ್ದಾರೆ. "ನೀವು ಆತ್ಮಹತ್ಯೆಗೆ ಯತ್ನಿಸಿದಿರಾ?" ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಒಂದು ರೀತಿಯಲ್ಲಿ ಹೌದು, ನಾನು ತಾಯಿಯನ್ನು ಅಷ್ಟೊಂದು ಹಚ್ಚಿಕೊಂಡಿದ್ದೆ" ಎಂದಿದ್ದಾರೆ. ಆದರೆ, "ಜನರು ಇದನ್ನು ಆತ್ಮಹತ್ಯೆ ಎಂದು ಕರೆಯುತ್ತಾರೆ, ಆದರೆ ಜೀವನ ಎಂದಿಗೂ ಮುಗಿಯುವುದಿಲ್ಲ, ಅದು ಹೊಸ ರೂಪಗಳನ್ನು ಪಡೆಯುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Actor Govinda: ಬಾಲಿವುಡ್‌ನಲ್ಲಿ ಮತ್ತೊಂದು ವಿಚ್ಛೇದನ?; ದಾಂಪತ್ಯ ಜೀವನಕ್ಕೆ ಅಂತ್ಯ ಹಾಡ್ತಾರಾ ಗೋವಿಂದ-ಸುನೀತಾ?

ಪ್ರಜ್ಞೆ ತಂದ ಸಾಧುವಿನ ಮಾತು

ನರ್ಮದಾ ನದಿಯ ನೀರಿನಲ್ಲಿದ್ದಾಗ 'ರಾಮ್ ಕುಂಡಲ್' ಎಂಬ ಸಾಧುವೊಬ್ಬರು ಗೋವಿಂದ ಅವರ ಬಳಿಗೆ ಬಂದು "ಏನಾಯಿತು ಗೋವಿಂದ್?" ಎಂದು ಕೇಳಿದರು. ಆ ಕ್ಷಣದಲ್ಲಿ ಅವರಿಗೆ ಪ್ರಜ್ಞೆ ಮರಳಿ, ತಾವು ಮಾಡುತ್ತಿರುವ ತಪ್ಪಿನ ಅರಿವಾಯಿತಂತೆ! "ಯಾರೋ ನನಗೆ ನಾನು ತಪ್ಪು ಮಾಡುತ್ತಿದ್ದೇನೆ ಎಂದು ಹೇಳಿದರು. ನಾನು ನನ್ನ ಮಕ್ಕಳಿಗಾಗಿ ಬದುಕಬೇಕು ಎಂದು ಆ ಕ್ಷಣದಲ್ಲಿ ಅರ್ಥವಾಯಿತು. ಆ ಸ್ಥಿತಿಯಿಂದ ಹೊರಬರಲು ನನಗೆ 10 ರಿಂದ 15 ದಿನಗಳು ಬೇಕಾಯಿತು" ಎಂದು ಗೋವಿಂದ ನೆನಪು ಮಾಡಿಕೊಂಡಿದ್ಧಾರೆ.

ತಾಯಿಯ ಆಸೆ ಪೂರೈಸಿದ್ದೇ ನಿಜವಾದ ಸಾಧನೆ

ಈ ಘಟನೆಯ ನಂತರ ತಮ್ಮ ವೃತ್ತಿಜೀವನ ಮತ್ತು ಜೀವನವನ್ನು ನೋಡುವ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಯಿತು ಎಂದಿರುವ ನಟ, "ನನ್ನ 21ನೇ ವಯಸ್ಸಿಗೆ ನಾನು ಏನೆಲ್ಲಾ ಸಾಧಿಸಬೇಕೆಂದು ತಾಯಿ ಕನಸು ಕಂಡಿದ್ದರೋ, ಅದನ್ನೆಲ್ಲಾ ಪೂರೈಸಿ ಅವರಿಗೆ ಸೇವೆ ಸಲ್ಲಿಸಲು ಸಾಧ್ಯವಾಗಿದ್ದೇ ನನ್ನ ಜೀವನದ ನಿಜವಾದ ಸಾಧನೆ" ಎಂದು ಹೇಳಿದ್ದಾರೆ.