ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಿಸ್‌ ಬ್ಯೂಟಿಯನ್ನು ಇನ್ಮೇಲೆ ಡಾ. ಶ್ರೀಲೀಲಾ ಅಂತ ಕರೀಬೇಕು! MBBS ಡಿಗ್ರಿ ಪಡೆದ ನಟಿ, ಘಟಿಕೋತ್ಸವದ ವಿಡಿಯೋ ವೈರಲ್!‌

ಶ್ರೀಲೀಲಾ ಈಗ ಎಂಬಿಬಿಎಸ್‌ ಪದವಿ ಪಡೆದುಕೊಂಡಿರುವ ಸುದ್ದಿ ಸಂಚಲನ ಮೂಡಿಸಿದೆ. 'ಕಿಸ್' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದ ಶ್ರೀಲೀಲಾ, ತಮ್ಮ ಬಿಡುವಿಲ್ಲದ ಶೂಟಿಂಗ್ ಶೆಡ್ಯೂಲ್ ನಡುವೆಯೂ ವೈದ್ಯಕೀಯ ವ್ಯಾಸಂಗವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸುವ ಮೂಲಕ 'ಡಾಕ್ಟರ್ ಶ್ರೀಲೀಲಾ' ಆಗಿ ಹೊರಹೊಮ್ಮಿದ್ದಾರೆ.

ಕಿಸ್ ಬ್ಯೂಟಿ ಈಗ 'ಡಾಕ್ಟರ್' ಶ್ರೀಲೀಲಾ; ಘಟಿಕೋತ್ಸವದ ವಿಡಿಯೋ ವೈರಲ್!

-

Avinash GR
Avinash GR Feb 11, 2026 6:18 PM

ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಇದೀಗ ಟಾಲಿವುಡ್‌, ಕಾಲಿವುಡ್‌ ಮತ್ತು ಬಾಲಿವುಡ್‌ನಲ್ಲೂ ಮಿಂಚುತ್ತಿರುವ ನಟ ಶ್ರೀಲೀಲಾ ಹೊಸದೊಂದು ಸಾಧನೆ ಮಾಡಿದ್ದಾರೆ. ಹೌದು, ವೈದ್ಯಕೀಯ ವಿಭಾಗದಲ್ಲಿ ಪದವಿ ಓದುತ್ತದ್ದ ಶ್ರೀಲೀಲಾ, ನಟನೆ ಜೊತೆ ಜೊತೆಗೆ ಇದೀಗ ಎಂಬಿಬಿಎಸ್‌ ಡಿಗ್ರಿಯನ್ನು ಕಂಪ್ಲೀಟ್‌ ಮಾಡಿದ್ದಾರೆ. ಘಟಿಕೋತ್ಸವದ ಗೌನ್ ಮತ್ತು ಟೋಪಿ ಧರಿಸಿ ವೈದ್ಯಕೀಯ ಪದವಿ ಸ್ವೀಕರಿಸುತ್ತಿರುವ ಶ್ರೀಲೀಲಾ ಅವರ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಮತ್ತು ಅಭಿಮಾನಿಗಳ ಗಮನ ಸೆಳೆದಿದೆ.

ಎಂಬಿಬಿಎಸ್‌ ಅಂದ್ರೆ ಸಾಮಾನ್ಯವಲ್ಲ

ಎಂಬಿಬಿಎಸ್‌ ಓದುವುದು ಸಾಮಾನ್ಯ ಸಂಗತಿಯಲ್ಲ. ಕಠಿಣವಾದ ಶ್ರಮವನ್ನು ಬೇಡುವ ವೈದ್ಯಕೀಯ ವ್ಯಾಸಂಗವನ್ನು, ತಮ್ಮ ಬ್ಯುಸಿ ಶೂಟಿಂಗ್ ಶೆಡ್ಯೂಲ್‌ಗಳ ನಡುವೆಯೂ ಕಂಪ್ಲೀಟ್‌ ಮಾಡಿದ್ದಾರೆ ಶ್ರೀಲೀಲಾ. ಹೀಗೆ ಎರಡನ್ನೂ ಒಟ್ಟಿಗೆ ನಿಭಾಯಿಸಿರುವುದು ಈ ತಲೆಮಾರಿನ ನಟಿಯರಲ್ಲಿ ಅಪರೂಪದ ಸಂಗತಿಯಾಗಿದೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್ ಮತ್ತು ಪ್ರಚಾರ ಕಾರ್ಯಗಳ ಸವಾಲುಗಳ ನಡುವೆಯೂ, ಶಿಸ್ತು ಮತ್ತು ಏಕಾಗ್ರತೆಯಿಂದ ಓದನ್ನು ಮುಗಿಸಿ ಶ್ರೀಲೀಲಾ, ಈಗ ಡಾಕ್ಟರ್ ಶ್ರೀಲೀಲಾ ಆಗಿ ಹೊರಹೊಮ್ಮಿದ್ದಾರೆ.

Sreeleela: ಧನುಷ್‌ ʼಡಿ55ʼಗೆ ಜೋಡಿಯಾದ ಶ್ರೀಲೀಲಾ; ಕನ್ನಡತಿಗೆ ಬಂಪರ್ ಆಫರ್

ಅಮ್ಮನಂತೆಯೇ ವೈದ್ಯೆಯಾದ ಶ್ರೀಲೀಲಾ

ಓದು ಮತ್ತು ನಟನೆ ಎರಡಕ್ಕೂ ಅವರು ನೀಡಿರುವ ಸಮಾನ ಆದ್ಯತೆ, ಸಮಯ ನಿರ್ವಹಣೆ ನಿಜಕ್ಕೂ ಮೆಚ್ಚುವಂತಹದ್ದು. ಅಂದಹಾಗೆ, ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಕೂಡ ಬೆಂಗಳೂರಿನಲ್ಲಿ ಖ್ಯಾತ ಸ್ತ್ರೀರೋಗ ತಜ್ಞರಾಗಿದ್ದಾರೆ. ಮಗಳಿಗೆ ಭರತನಾಟ್ಯ ಮತ್ತು ಸಿನಿಮಾದಲ್ಲಿ ಆಸಕ್ತಿ ಮೂಡಿಸುವಲ್ಲಿ ಹಾಗೂ ಎಂಬಿಬಿಎಸ್ ಓದುವಲ್ಲಿ ತಾಯಿಯ ಪ್ರೋತ್ಸಾಹವೇ ಮುಖ್ಯ ಕಾರಣ ಎಂದು ಶ್ರೀಲೀಲಾ ಹಲವು ಬಾರಿ ಹೇಳಿಕೊಂಡಿದ್ದಾರೆ.

Parasakthi Twitter Review: ಶಿವಕಾರ್ತಿಕೇಯನ್-ಶ್ರೀಲೀಲಾ ಚಿತ್ರ ನೋಡಿ ಪ್ರೇಕ್ಷಕರು ಏನಂದ್ರು? ವಿಲನ್ ಪಾತ್ರದಲ್ಲಿ ʻಜಯಂʼ ರವಿ ಮಿಂಚಿದ್ರಾ?

ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ನಟಿ

ಶ್ರೀಲೀಲಾ ಅವರ ಈ ಸಾಧನೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಮತ್ತು ತೆಲುಗು ಸಿನಿಮಾಗಳ ಮೂಲಕ ವೃತ್ತಿಜೀವನ ಆರಂಭಿಸಿದ ಶ್ರೀಲೀಲಾ, ಅತಿ ಕಡಿಮೆ ಅವಧಿಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು. ಭಾಷೆಯ ಹಂಗಿಲ್ಲದೆ ಪ್ರೇಕ್ಷಕರನ್ನು ಸೆಳೆಯುವ ಅವರ ಸಾಮರ್ಥ್ಯವೇ ಅವರ ಜನಪ್ರಿಯತೆ ಹೆಚ್ಚಲು ಕಾರಣವಾಗಿದ್ದು, ಇದೀಗ ಅವರ ಬಾಲಿವುಡ್ ಪ್ರವೇಶದ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ.

ಶ್ರೀಲೀಲಾ ಪದವಿ ಸ್ವೀಕರಿಸುತ್ತಿರುವ ವಿಡಿಯೋ ವೈರಲ್

ಇನ್ನು, ಸಿನಿಮಾ ವಿಚಾರಕ್ಕೆ ಬರುವುದಾದರೆ, ಅನುರಾಗ್ ಬಸು ನಿರ್ದೇಶನದ ಮ್ಯೂಸಿಕಲ್ ಲವ್ ಸ್ಟೋರಿಯಲ್ಲಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ, ರಾಜಕುಮಾರ್ ಪೆರಿಯಸಾಮಿ ನಿರ್ದೇಶನದ, ತಮಿಳು ನಟ ಧನುಷ್ ಅವರ ಮುಂದಿನ ಸಿನಿಮಾದಲ್ಲೂ ಶ್ರೀಲೀಲಾ ನಟಿಸಲಿದ್ದಾರೆ. ಈಚೆಗಷ್ಟೇ ಪರಾಶಕ್ತಿ ಚಿತ್ರದಲ್ಲಿ ಶ್ರೀಲೀಲಾ ನಟಿಸಿದ್ದರು. ಆ ಸಿನಿಮಾ ಹೇಳಿಕೊಳ್ಳುವಂತಹ ಲಾಭವನ್ನು ಮಾಡಲಿಲ್ಲ.