ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranveer Singh: ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್ 2' ಸುನಾಮಿ; ಈವರೆಗೂ ಸೃಷ್ಟಿಯಾದ 9 ಅದ್ಭುತ ದಾಖಲೆಗಳು ಇಲ್ಲಿವೆ ನೋಡಿ

Dhurandhar 2 Box Office Records: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಬಿಡುಗಡೆಯಾದ ಕೇವಲ ಏಳು ದಿನಗಳಲ್ಲಿ ವಿಶ್ವದಾದ್ಯಂತ 1006.50 ಕೋಟಿ ರೂಪಾಯಿ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಮೂಲಕ ಅತಿ ವೇಗವಾಗಿ ಸಾವಿರ ಕೋಟಿ ಕ್ಲಬ್ ಸೇರಿದ ಭಾರತದ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಹಲವು ದಾಖಲೆಗಳನ್ನು ಸೃಷ್ಟಿಸಿದೆ.

Ranveer Singh: ʻಧುರಂಧರ್ 2' ಸೃಷ್ಟಿಸಿದ 9 ಸಾರ್ವತ್ರಿಕ ದಾಖಲೆಗಳು

-

Avinash GR
Avinash GR Mar 26, 2026 7:54 PM

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ನಿರ್ದೇಶದನ ʻಧುರಂಧರ್‌ 2ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಆದಿತ್ಯ ಧರ್‌ ನಿರ್ದೇಶನ ಮಾಡಿರುವ ಈ ಸಿನಿಮಾವು ಈವರೆಗೂ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 1000 ಕೋಟಿ ರೂ. ಗಳಿಕೆ ಮಾಡಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಈ ಪ್ರಮಾಣದ ಗಳಿಕೆ ಮಾಡಿದ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ʻಧುರಂಧರ್‌ 2ʼ ಸಿನಿಮಾ ಪಾತ್ರವಾಗಿದೆ. ಈ ಏಳು ದಿನಗಳ ಕಲೆಕ್ಷನ್‌ನಿಂದಲೇ ʻಧುರಂಧರ್‌ 2ʼ ಸಿನಿಮಾ 9 ಸಾರ್ವತ್ರಿಕ ದಾಖಲೆಗಳನ್ನು ಸೃಷ್ಟಿ ಮಾಡಿದೆ. ಆ ಕುರಿತ ಮಾಹಿತಿ ಇಲ್ಲಿದೆ ಓದಿ.

* 1,000 ಕೋಟಿ ಕ್ಲಬ್‌ಗೆ ಎಂಟ್ರಿ

'ಧುರಂಧರ್ 2' ಸಿನಿಮಾವು ವಿಶ್ವದಾದ್ಯಂತ 1,000 ಕೋಟಿ ರೂ. ಗಳಿಸುವ ಮೂಲಕ ಭಾರತೀಯ ಚಿತ್ರರಂಗದ ಹೊಸ ಇತಿಹಾಸ ಬರೆದಿದೆ. ಈ ಸಾಧನೆ ಮಾಡಿದ ಭಾರತದ ಕೇವಲ ಹತ್ತು ಸಿನಿಮಾಗಳ ಪಟ್ಟಿಗೆ 'ಧುರಂಧರ್ 2' ಕೂಡ ಸೇರಿದೆ.

Dhurandhar 2: 'ಧುರಂಧರ್‌ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ! ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ

* ಅತಿದೊಡ್ಡ ಓಪನಿಂಗ್ ಪಡೆದ ಹಿಂದಿ ಸಿನಿಮಾ

ಭಾರತದಲ್ಲಿ ಬರೋಬ್ಬರಿ 745 ಕೋಟಿ ರೂ. ಗಳನ್ನು ಮೊದಲ ವಾರದಲ್ಲಿ ಗಳಿಸುವ ಮೂಲಕ ಇದು ಬಾಲಿವುಡ್‌ನಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇಷ್ಟು ಕಡಿಮೆ ಸಮಯದಲ್ಲಿ ಈ ಮೊತ್ತ ಕಲೆಹಾಕಿದ ಮೊದಲ ಹಿಂದಿ ಸಿನಿಮಾ ಧುರಂಧರ್‌ 2 ಅನ್ನೋದು ವಿಶೇಷ.

* ಮುಂಗಡ ಬುಕ್ಕಿಂಗ್‌ನಲ್ಲಿಯೂ ದಾಖಲೆ

ಧುರಂಧರ್‌ 2 ಸಿನಿಮಾವು ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು ಮಾಡಿತ್ತು. ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಚೈನ್ಸ್‌ನಲ್ಲಿಯೇ ಬರೋಬ್ಬರಿ 9.25 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗುವ ಮೂಲಕ ಹೊಸ ದಾಖಲೆ ಸೃಷ್ಟಿ ಆಗಿತ್ತು.

* ವೇಗವಾಗಿ ಸಾವಿರ ಕೋಟಿ ಕ್ಲಬ್ ಸೇರಿದ ʻಧುರಂಧರ್‌ 2ʼ

'ಪುಷ್ಪ 2' ನಂತರ ಅತ್ಯಂತ ವೇಗವಾಗಿ ಸಾವಿರ ಕೋಟಿ ರೂ. ಕ್ಲಬ್‌ ಸೇರಿದ ಎರಡನೇ ಸಿನಿಮಾ ಇದಾಗಿದೆ. ಕೇವಲ ಏಳು ದಿನಗಳಲ್ಲಿ 1,006.50 ಕೋಟಿ ರೂ. ಗಳಿಸುವ ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದೆ ಧುರಂಧರ್‌ 2 ಸಿನಿಮಾ.

* ವಿದೇಶಿ ಮಾರುಕಟ್ಟೆಯಲ್ಲೂ ಹೊಸ ದಾಖಲೆ

ವಿದೇಶದಲ್ಲಿಯೂ ಧುರಂಧರ್‌ 2 ಸಿನಿಮಾವು ದಾಖಲೆ ಕಲೆಕ್ಷನ್‌ ಮಾಡಿದೆ. ಮೊದಲ ವಾರದಲ್ಲೇ 260 ಕೋಟಿ ರೂ. ಗಳಿಸುವ ಮೂಲಕ ವಿದೇಶದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಧುರಂಧರ್‌ 2 ಪಾತ್ರವಾಗಿದೆ.

* ಹಿಂದಿ ಸಿನಿಮಾವೊಂದರ ಮೊದಲ ದಿನದ ಅತೀ ಹೆಚ್ಚು ಗಳಿಕೆ

ಮೊದಲ ದಿನ ಕೇವಲ ಹಿಂದಿ ಭಾಷೆಯಲ್ಲೇ ಈ ಚಿತ್ರವು 99.10 ಕೋಟಿ ರೂ. ಗಳಿಸಿದೆ. ಈ ಮೂಲಕ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' (70.30 ಕೋಟಿ ರೂ.) ದಾಖಲೆಯನ್ನು ಅಳಿಸಿಹಾಕಿ, ಸಾರ್ವಕಾಲಿಕ ದಾಖಲೆಯನ್ನು ಧುರಂಧರ್‌ 2 ಬರೆದಿದೆ.

Dhurandhar 2 Twitter Review: ಮಾಸ್ಟರ್ ಪೀಸ್​​ ಪಕ್ಕಾ! ಯಶಸ್ಸು ಖಚಿತ; ಧುರಂಧರ್‌ 2 ಸಿನಿಮಾ ನೋಡಿದವರು ಏನಂದ್ರು?

* ಮೊದಲ ದಿನದಿಂದಲೇ ದಾಖಲೆ ಆರಂಭ

ಮೊದಲ ಗುರುವಾರವೇ 102.55 ಕೋಟಿ ರೂ. ಗಳಿಸುವ ಮೂಲಕ ಎಲ್ಲರ ಅಂದಾಜನ್ನು ಸುಳ್ಳು ಮಾಡಿದ್ದ ಧುರಂಧರ್‌ 2 ಮಾರ್ಚ್ 18ರ ಪೇಯ್ಡ್ ಪ್ರಿವ್ಯೂಗಳನ್ನೂ ಸೇರಿಸಿ, ಮೊದಲ ದಿನದ ಒಟ್ಟು ಭಾರತದಲ್ಲಿನ ಒಟ್ಟು ಗಳಿಕೆ 145.55 ಕೋಟಿ ರೂ. ತಲುಪಿತ್ತು.

ಧುರಂಧರ್‌ 2 ಸಿನಿಮಾ ವಿಮರ್ಶೆ



* ಪೇಯ್ಡ್ ಪ್ರಿವ್ಯೂನಲ್ಲಿ ದೊಡ್ಡ ದಾಖಲೆ

ಬಿಡುಗಡೆಗೂ ಮುನ್ನವೇ ಧುರಂಧರ್‌ 2 ಸಿನಿಮಾ ಇತಿಹಾಸ ಸೃಷ್ಟಿಸಿತ್ತು. ಪೇಯ್ಡ್ ಪ್ರಿವ್ಯೂಗಳಿಂದಲೇ 43 ಕೋಟಿ ರೂ. ಗಳಿಸುವ ಮೂಲಕ, ಪವನ್ ಕಲ್ಯಾಣ್ ಅವರ ಓಜಿ (25 ಕೋಟಿ ರೂ.) ಚಿತ್ರದ ದಾಖಲೆಯನ್ನು ಬ್ರೇಕ್‌ ಮಾಡಿತ್ತು.

* ರಣವೀರ್‌ಗೆ ದೊಡ್ಡ ತಿರುವು

ಧುರಂಧರ್‌ ಸಿನಿಮಾದ ಮೊದಲ ಭಾಗದ 27-28 ಕೋಟಿ ರೂ. ಗಳಿಕೆಗೆ ಹೋಲಿಸಿದರೆ, 'ಧುರಂಧರ್ 2' ಮೊದಲ ದಿನವೇ ಅದಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು ಹಣ ಗಳಿಸಿದೆ. ಇದು ರಣವೀರ್ ಸಿಂಗ್ ಮತ್ತು ಆದಿತ್ಯ ಧರ್ ಅವರ ಕೆರಿಯರ್‌ನಲ್ಲೇ ಅತಿದೊಡ್ಡ ಓಪನಿಂಗ್ ಆಗಿದೆ.