ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನಂಗೆ ನಯನತಾರಾ ಬೇಕು, ಮದುವೆ ಮಾಡಿಸ್ತಾರಾʼ; ಎಐಎಡಿಎಂಕೆ ಸಂಸದನ ಕೀಳುಮಟ್ಟದ ಹೇಳಿಕೆ, ನೆಟ್ಟಿಗರಿಂದ ತೀವ್ರ ತರಾಟೆ!

ಮಹಿಳಾ ಸುರಕ್ಷತೆಗಾಗಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ AIADMK ಪಕ್ಷದ ಸಂಸದ ಸಿ ವಿ ಷಣ್ಮುಗಂ, ಸಿಎಂ ಸ್ಟಾಲಿನ್ ಅವರನ್ನು ಟೀಕಿಸುವ ಭರದಲ್ಲಿ ನಟಿ ನಯನತಾರಾ ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ಇಂತಹ ಅಸಭ್ಯ ಮಾತುಗಳಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು, ಸಂಸದನ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

ʻನಂಗೆ ನಯನತಾರಾ ಬೇಕು..ʼ; ನಾಲಿಗೆ ಹರಿಬಿಟ್ಟ AIADMK ಸಂಸದ ಸಿ ವಿ ಷಣ್ಮುಗಂ

-

Avinash GR
Avinash GR Mar 17, 2026 5:53 PM

ರಾಜಕೀಯ ನಾಯಕರು ತಮಿಳು ಕಲಾವಿದರ ಮೇಲಿನ ಟಾರ್ಗೆಟ್‌ ಅನ್ನು ಮುಂದುವರಿಸಿದ್ದಾರೆ. ಇದೀಗ ತಮಿಳುನಾಡಿನ AIADMK ಪಕ್ಷದ ಸಂಸದ ಸಿ ವಿ ಷಣ್ಮುಗಂ, ಮಹಿಳಾ ಸುರಕ್ಷತೆಯ ಕುರಿತಾದ ಪ್ರತಿಭಟನೆಯಲ್ಲಿಯೇ ನಟಿ ನಯನತಾರಾ ಅವರ ಬಗ್ಗೆ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಸ್ಟಾಲಿನ್‌ರನ್ನು ಟೀಕಿಸಲು ನಯನತಾರಾ ಹೆಸರು ಬಳಕೆ!

ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರ ಕಾಲೆಳೆಯುವ ಉದ್ದೇಶದಿಂದ ಹೇಳಿಕೆ ನೀಡಿದ ಎಐಎಡಿಎಂಕೆ ಸಂಸದ ಸಿ ವಿ ಷಣ್ಮುಗಂ, "ನನ್ನ ಕನಸು ನಯನತಾರಾ ಅವರನ್ನು ಮದುವೆಯಾಗುವುದು ಆಗಿದ್ದರೆ, ಸರ್ಕಾರ ಅದನ್ನು ಈಡೇರಿಸುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಸಿಎಂ ಸ್ಟಾಲಿನ್ ಅವರು, "ತಮಿಳುನಾಡಿನ ಜನರು ತಮ್ಮ ಕನಸುಗಳನ್ನು ಹಂಚಿಕೊಳ್ಳಬೇಕು. ಅದನ್ನು ಈಡೇರಿಸಲು ಸರ್ಕಾರ ಶ್ರಮಿಸಲಿದೆ" ಎಂದು ಹೇಳಿದ್ದರು. ಸ್ಟಾಲಿನ್ ಅವರ ಈ ಹೇಳಿಕೆಯನ್ನು ಟೀಕಿಸಲು ನಟಿ ನಯನತಾರಾ ಅವರ ಹೆಸರನ್ನ ಬಳಸಿ, ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ-ನಿರ್ದೇಶಕ ವಿಘ್ನೇಶ್​

"ಅಬ್ದುಲ್ ಕಲಾಂ ನಮಗೆ ಕನಸು ಕಾಣಲು ಹೇಳಿದರು. ಸ್ಟಾಲಿನ್ ಕೂಡ ನಮ್ಮ ಕನಸುಗಳನ್ನು ಹಂಚಿಕೊಳ್ಳಲು ಹೇಳಿದ್ದಾರೆ. ಒಂದು ವೇಳೆ, ನಾನು ನಯನತಾರಾ ಬೇಕೆಂದು ಕೇಳಿದರೆ, ಸ್ಟಾಲಿನ್ ನನ್ನ ಕನಸನ್ನು ಈಡೇರಿಸುತ್ತಾರೆಯೇ? ಯಾರಾದರೂ ತಮಗೆ ನಯನತಾರಾ ಜೊತೆ ಮದುವೆ ಮಾಡಿಸಿಕೊಡಿ ಎಂದು ಕೇಳಿದರೆ, ಅವರು ಆ ಕನಸನ್ನು ನನಸು ಮಾಡ್ತಾರಾ" ಎಂದು ಅವರು ಕಿಡಿಗೇಡಿತನದ ಪ್ರಶ್ನೆಯನ್ನು ಬಹಿರಂಗವಾಗಿ ಕೇಳಿದ್ದಾರೆ.

ವಿಪರ್ಯಾಸ ಎಂದರೆ, ಮಹಿಳೆಯರ ಘನತೆ ಮತ್ತು ಸುರಕ್ಷತೆಗಾಗಿ ಎಐಎಡಿಎಂಕೆ ಪಕ್ಷ ನಡೆಸುತ್ತಿದ್ದ ಪ್ರತಿಭಟನೆಯಲ್ಲೇ ಇಂತಹ ಕೀಳುಮಟ್ಟದ ಹೇಳಿಕೆ ಬಂದಿರುವುದು ವಿವಾದದ ತೀವ್ರತೆಯನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲಿ ಸಂಸದರ ಪಕ್ಕದಲ್ಲೇ ನಿಂತಿದ್ದ ಪಕ್ಷದ ಇತರ ಮುಖಂಡರು ಸಹ ಈ ಹೇಳಿಕೆಯನ್ನು ಕೇಳಿ ನಗುತ್ತಾ ಪ್ರತಿಕ್ರಿಯಿಸಿದ್ದಾರೆ.

ಗೆಲುವಿಗಾಗಿ ಮತ್ತೆ ಸೌತ್‌ ಇಂಡಿಯನ್‌ ಡೈರೆಕ್ಟರ್‌ ಹಿಂದೆ ಬಿದ್ದ ಸಲ್ಮಾನ್‌ ಖಾನ್;‌ ನಾಯಕಿಯಾಗಿ ನಯನತಾರಾ ಫಿಕ್ಸ್!‌

ಸೋಶಿಯಲ್‌ ಮೀಡಿಯಾದಲ್ಲಿ ತೀವ್ರ ಟೀಕೆ

"ಇವರು ಮಹಿಳಾ ರಕ್ಷಣೆಗಾಗಿ ಹೋರಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ ವೇದಿಕೆಯ ಮೇಲೆ ಮಹಿಳೆಯ ಬಗ್ಗೆ ಇಷ್ಟು ಅಸಹ್ಯವಾಗಿ ಮಾತನಾಡುವುದು ಅವರ ಗುಣವನ್ನು ತೋರಿಸುತ್ತದೆ", "ಇವರು ಜೇಬಿನಲ್ಲಿ ತಮ್ಮ ನಾಯಕಿ ಜೆ ಜಯಲಲಿತಾ ಫೋಟೋಗಳನ್ನು ಇಟ್ಟುಕೊಳ್ಳುತ್ತಾರೆ, ಆದರೆ ಅವರ ಮಾತುಗಳು ಇಂತಹ ವಿಕೃತಿಗಳಿಂದ ಕೂಡಿರುತ್ತದೆ"- ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸಂಸದನ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಬೇಕು, ಎಐಎಡಿಎಂಕೆ ಪಕ್ಷವು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.