ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ramayana sets: ‘ರಾಮಾಯಣ’ ಸೆಟ್‌ನಲ್ಲಿ ಮಗಳು ರಾಹಾ ಜೊತೆ ರಣಬೀರ್ ಕಪೂರ್ ಮುದ್ದಾದ ಕ್ಷಣಗಳು

Ramayana sets:ಬಹುನಿರೀಕ್ಷಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ (Ramayana Movie) ಸಿನಿಮಾ ಕೊನೆಗೂ ಬಿಡುಗಡೆಯಾಗಿದೆ. ಕಳೆದ ಮೂರು ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಈ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಗುರುವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ (Good Response) ವ್ಯಕ್ತವಾಗುತ್ತಿದೆ.

‘ರಾಮಾಯಣ’ ಸೆಟ್‌ನಲ್ಲಿ ಮಗಳು ರಾಹಾ ಜೊತೆ ರಣಬೀರ್  ಮುದ್ದಾದ ಕ್ಷಣಗಳು

ರಾಮಾಯಣ ಸಿನಿಮಾ -

Yashaswi Devadiga
Yashaswi Devadiga Nov 5, 2026 8:53 PM

ಬಹುನಿರೀಕ್ಷಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ (Ramayana Movie) ಸಿನಿಮಾ ಕೊನೆಗೂ ಬಿಡುಗಡೆಯಾಗಿದೆ. ಕಳೆದ ಮೂರು ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಈ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಗುರುವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ (Good Response) ವ್ಯಕ್ತವಾಗುತ್ತಿದೆ.

ಇದೀಗ ನಟಿ ಆಲಿಯಾ ಭಟ್ ಅವರು ಸಿನಿಮಾದ ಚಿತ್ರೀಕರಣದ ಸಮಯದ ಕೆಲವು ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗಳು ರಾಹಾಳನ್ನು ಸಿನಿಮಾ ಸೆಟ್‌ಗೆ ಕರೆದುಕೊಂಡು ಹೋಗಿದ್ದ ಆಲಿಯಾ, ಅಲ್ಲಿನ ಕೆಲವು ಮುದ್ದಾದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆ ಸಮಯದಲ್ಲಿ ರಣಬೀರ್ ಕಪೂರ್ ಅವರು ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೂ ಮಗಳಿಗಾಗಿ ಸಮಯ ಮೀಸಲಿಟ್ಟ ಅವರು, ರಾಹಾಳ ಜೊತೆ ಸಮಯ ಕಳೆದಿದ್ದಾರೆ. ಈ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಇದನ್ನೂ ಓದಿ: Athulya arrested: ಖ್ಯಾತ ನಟಿ ಅತುಲ್ಯ ಅರೆಸ್ಟ್; ಏನಿದು ಪ್ರಕರಣ?

ಈ ಫೋಟೋಗಳನ್ನು ಹಂಚಿಕೊಂಡ ಆಲಿಯಾ, "ಈ ಸಿನಿಮಾಕ್ಕಾಗಿ ನೀನು ನಿನ್ನ ಎಲ್ಲ ಶ್ರಮವನ್ನು ಹಾಕಿದ್ದೀಯ. ಆದರೂ ಅವಳಿಗಾಗಿ ಸಮಯ ಮತ್ತು ಪ್ರೀತಿಯನ್ನು ಉಳಿಸಿಕೊಂಡಿದ್ದೀಯ. ರಣಬೀರ್, ನಿನ್ನ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಈ ಅದ್ಭುತ ಸಿನಿಮಾಗಾಗಿ ಹೃದಯಪೂರ್ವಕವಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಕೆಲವು ಕಥೆಗಳು ನಮ್ಮೆಲ್ಲರಿಗಿಂತ ದೊಡ್ಡವು. ರಾಮಾಯಣ ಕೂಡ ಅಂತಹ ಒಂದು ಕಥೆ" ಎಂದು ಬರೆದುಕೊಂಡಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಸುಮಾರು 4,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಈ ಬಜೆಟ್‌ನಲ್ಲಿ ಎರಡನೇ ಭಾಗದ ವೆಚ್ಚವೂ ಸೇರಿದೆ.

ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ, ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಉತ್ತಮ ವಿಮರ್ಶೆಗಳು ವ್ಯಕ್ತವಾಗುತ್ತಿವೆ. ಹಿಂದೂಸ್ತಾನ್ ಟೈಮ್ಸ್ ವಿಮರ್ಶೆಯ ಪ್ರಕಾರ, ಸಿನಿಮಾದಲ್ಲಿ ಬಳಸಿರುವ ಅದ್ಭುತ ದೃಶ್ಯ ಪರಿಣಾಮಗಳು ಮತ್ತು ತಂತ್ರಜ್ಞಾನ ಗಮನ ಸೆಳೆಯುತ್ತವೆ. ವಿಶೇಷವಾಗಿ ರಾವಣ ಕುಬೇರನ ಲಂಕೆಯನ್ನು ವಶಪಡಿಸಿಕೊಂಡ ಘಟನೆ, ರಾವಣನ ಶಿವಭಕ್ತಿ ಹಾಗೂ ಕೈಕೇಯಿಗೆ ತನ್ನ ತಪ್ಪಿನ ಅರಿವಾಗುವ ದೃಶ್ಯಗಳನ್ನು ಉತ್ತಮವಾಗಿ ತೋರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: Bigg Boss Kannada 13: ಕ್ಯಾಪ್ಟನ್ಸಿ ಓಟಕ್ಕೆ ಅಡ್ಡಗಾಲು; ಧನುಷ್‌-ಗಾನವಿ ನಡುವೆ ಮಾರಾಮಾರಿ!

ಒಟ್ಟಿನಲ್ಲಿ, ಭಾರತೀಯರು ರಾಮಾಯಣದ ಕಥೆಯನ್ನು ಹೇಗೆ ನೆನಪಿಟ್ಟುಕೊಂಡಿದ್ದಾರೋ ಅದೇ ರೀತಿಯಲ್ಲಿ ಕಥೆಯನ್ನು ತೆರೆಮೇಲೆ ತರುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.